MAP

2025.01.10 NIA men choir Redemption Way usa prison 2025.01.10 NIA men choir Redemption Way usa prison 

ಜೂಬಿಲಿ: ಕೈದಿಗಳ ಜೂಬಿಲಿ ಹಬ್ಬ ಭರವಸೆಯ ಸ್ಪಷ್ಟ ಚಿಹ್ನೆಗಳು

ಅಮೇರಿಕದ ಪ್ರಮುಖ ಕಥೋಲಿಕ ಮರಣದಂಡನೆ ವಿರೋಧಿ ವಕಾಲತ್ತು ಸಂಘಟನೆಯಾದ ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್, ಮರಣದಂಡನೆ ಶಿಕ್ಷೆಗೆ ಗುರಿಯಾದ ನಂತರ ಕೈದಿಯೊಬ್ಬ ಬರೆದ ವಿಶಿಷ್ಟವಾದ ಸ್ತುತಿಸ್ತೋತ್ರಗಳ "ವಿಮೋಚನೆಯ ಮಾರ್ಗ (ರಿಡೆಂಪ್ಶನ್ ವೇ)" ಗೀತೆಯೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ.

ಕ್ರಿಸಾನ್ನೆ ವೈಲನ್‌ಕೋರ್ಟ್ ಮರ್ಫಿ, ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್

ಡಿಸೆಂಬರ್ 2023ರಲ್ಲಿ, ಓಹಿಯೋದ ಚಿಲ್ಲಿಕೋಥೆ ಕರೆಕ್ಷನಲ್ ಇನ್‌ಸ್ಟಿಟ್ಯೂಷನ್‌ನ ಉಪ ಮೇಲ್ವಿಚಾರಕ, ಕ್ರಿಸ್‌ಮಸ್‌ ಸಮಯದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ಪುರುಷರಿಗಾಗಿ ಹಾಡಲು ಜೈಲಿನ ಪುರುಷರ ಗಾನವೃಂದವನ್ನು ಕೇಳಿಕೊಂಡರು. ಮರಣದಂಡನೆ ಶಿಕ್ಷೆಯ ಅನುಭವದಿಂದ ಪ್ರೇರಿತರಾಗಿ, ಸೆರೆವಾಸದಲ್ಲಿರುವ ಗಾನವೃಂದದ ಸದಸ್ಯರೊಬ್ಬರು "ವಿಮೋಚನೆಯ ಮಾರ್ಗ/ರಿಡೆಂಪ್ಶನ್ ವೇ" ಎಂಬ ಶೀರ್ಷಿಕೆಯ ಸ್ತುತಿಸ್ತೋತ್ರಗಳ ಗೀತೆಯನ್ನು ಬರೆದರು. 2024ರಲ್ಲಿ, NIA ಪುರುಷರ ಗಾನವೃಂದವು ಜೈಲಿನ ಸಂಗೀತ ಕಚೇರಿಯ ಸಮಯದಲ್ಲಿ ಹಾಡನ್ನು ಪ್ರದರ್ಶಿಸಿ ರೆಕಾರ್ಡ್ ಮಾಡಿತು.

ಕ್ಯಾಥೋಲಿಕ್ ಮೊಬಿಲೈಸಿಂಗ್ ನೆಟ್‌ವರ್ಕ್ (CMN) ಜನವರಿ 3ರಂದು 2025ರ ಜೂಬಿಲಿ ವರ್ಷದ ನಮ್ಮ ಮೊದಲ ಮಾಸಿಕ ಪ್ರಾರ್ಥನಾ ಜಾಗರಣೆ ಸಂದರ್ಭದಲ್ಲಿ ಕೋರಲ್ ಸಂಗೀತ ರೆಕಾರ್ಡಿಂಗ್‌ನ ಸಾರ್ವಜನಿಕ ಪ್ರಥಮ ಪ್ರದರ್ಶನವನ್ನು ಪ್ರಸ್ತುತಪಡಿಸಿತು. ಈ ಹೃದಯಸ್ಪರ್ಶಿ ಸಂಗೀತವನ್ನು ನಮ್ಮ ನಿಷ್ಠಾವಂತ ಪ್ರಾರ್ಥನಾ ಯೋಧರು ಮತ್ತು ಸಾವಿನ ವ್ಯವಸ್ಥೆಗಳನ್ನು ಕೆಡವಲು ಪ್ರಯತ್ನಿಸುವ ಪ್ರತಿಪಾದಕರು ಮತ್ತು ಜೀವನ ಸಂಸ್ಕೃತಿಯನ್ನು ನಿರ್ಮಿಸಲು ಪ್ರಯತ್ನಿಸುವವರೊಂದಿಗೆ ಹಂಚಿಕೊಳ್ಳುವುದು ಒಂದು ಸುಯೋಗದ ಕ್ಷಣವಾಗಿತ್ತು.

"ಪ್ರತಿಯೊಬ್ಬ ಮನುಷ್ಯನಿಗೂ ಘನತೆ ಇದೆ, ಪ್ರತಿಯೊಬ್ಬ ಮನುಷ್ಯನಿಗೂ ಆತ್ಮವಿದೆ, ನಾವು ನಿಮ್ಮನ್ನು ನೋಡುತ್ತೇವೆ, ನಾವು ನಿಮ್ಮನ್ನು ಕೇಳುತ್ತೇವೆ" ಎಂಬ ತನ್ನ ಮಾತುಗಳ ಮೂಲಕ ಸಂಯೋಜಕ ಬ್ರಿಯಾನ್ ಹುಡಾಕ್ ರವರು ಮರಣದಂಡನೆ ಶಿಕ್ಷೆ ಅನುಭವದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿಯ ಮಾನವ ಘನತೆಗೆ ಗೌರವವನ್ನು ವ್ಯಕ್ತಪಡಿಸುತ್ತಾರೆ. ಮರಣದಂಡನೆಯನ್ನು "ವಿಮೋಚನಾ ಮಾರ್ಗ" ಎಂದು ಮರುನಾಮಕರಣ ಮಾಡುವುದು ಅವರ ಸ್ವಂತ ಆಧ್ಯಾತ್ಮಿಕ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ.

ಈ ವಾರ, ಅವರು ತಮ್ಮ ಗಾನವೃಂದದ ನಿರ್ದೇಶಕರು CMN ಜೊತೆ ಹಂಚಿಕೊಂಡ ಪತ್ರದಲ್ಲಿ-ಸಂಗೀತದ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಅವರ ಮಾತುಗಳು ತುಂಬಾ ಆಳವಾಗಿ ಹೃದಯವನ್ನು ಸ್ಪರ್ಶಿಸುವ ಮತ್ತು ಆತ್ಮೋನ್ನತಿ ನೀಡುವಂತಹ ಮಾತುಗಳಾಗಿದ್ದವು ಎಂದು ನಾನು ಕಂಡುಕೊಂಡೆ - ಖಂಡಿತವಾಗಿಯೂ "ಭರವಸೆ ನಿರಾಸೆಗೊಳಿಸುವುದಿಲ್ಲ" ಎಂಬ ಉತ್ಸಾಹದಲ್ಲಿ - ನಾನು ಅವುಗಳನ್ನು ಯಾವುದೇ ಅಡೆತಡೆಯಿಲ್ಲದೆ ಹೇಳುತ್ತೇನೆ.

ಅವರ ಗಾನವೃಂದದ ನಿರ್ದೇಶಕಿ ಡಾ. ಕ್ಯಾಥರೀನ್ ರೋಮಾರವರು, ಈ ಭರವಸೆಯಿಂದ ತುಂಬಿದ ಕಥೆಯನ್ನು ಪೂರ್ಣಗೊಳಿಸಲು ಹೆಚ್ಚುವರಿ ದೃಷ್ಟಿಕೋನವನ್ನು ಅನುಸರಿಸುತ್ತಾರೆ.

"ವಿಮೋಚನೆಯ ಮಾರ್ಗ"ದ ಬರವಣಿಗೆಯ ಕುರಿತು ಸೆರೆವಾಸದಲ್ಲಿರುವ ಸಂಯೋಜಕ ಬ್ರಿಯಾನ್ ಹುಡಾಕ್ ರವರ ಚಿಂತನೆಗಳ ಆಯ್ದ ಭಾಗ.

ನಮ್ಮ ಸರ್ಕಾರ ಯಾವುದೇ ಜೀವವನ್ನು ನಾಶಮಾಡಬಹುದು ಎಂದು ಯೋಚಿಸುವುದು ನನಗೆ ದುಃಖಕರವಾಗಿದೆ. ಪ್ರತಿಯೊಬ್ಬ ಪುರುಷ (ಮತ್ತು ಮಹಿಳೆ) ಒಬ್ಬ ಆತ್ಮವನ್ನು ಹೊಂದಿರುತ್ತಾನೆ. ನಾನು ಯಾರನ್ನಾದರೂ ನೋಡಿದಾಗ, ನಾನು ಅವರ/ಅವಳ ಮೌಲ್ಯವನ್ನು ಅವರ ಕೆಟ್ಟ ಕ್ಷಣದ ಮೇಲೆ ಆಧರಿತವಾಗಿಲ್ಲ. ಪ್ರತಿಯೊಬ್ಬರೂ ತಮ್ಮ ಕೆಟ್ಟ ಆಲೋಚನೆ, ಕ್ರಿಯೆ ಅಥವಾ ಪಾಪವನ್ನು ಸಾರ್ವಜನಿಕವಾಗಿ ಹೇಳಬೇಕಾದ ಜಗತ್ತನ್ನು ಕಲ್ಪಿಸಿಕೊಳ್ಳಿ. ಹಾಗೇನಾದರೂ ಅಂತಹ ಪ್ರಪಂಚವಿದಿದ್ದರೆ ಯಾರೂ ಸುರಕ್ಷಿತವಾಗಿರುವುದಿಲ್ಲ ಅಥವಾ ಪ್ರೀತಿಸಲ್ಪಡುವುದಿಲ್ಲ ಎಂಬಷ್ಟು ನಂಬಲಾಗದ ಅಪನಂಬಿಕೆ, ಭಯ ಮತ್ತು ಕೋಪ ಎಲ್ಲರಲ್ಲೂ ಇದ್ದೇ ಇರುತ್ತದೆ.

ಮರಣದಂಡನೆ ಶಿಕ್ಷೆಯಲ್ಲಿ ಜೀವಿಸುತ್ತಿರುವವರು ನಾನು ಮತ್ತು ದೇವರು, ಅವರನ್ನು ಪ್ರೀತಿಸುತ್ತೇವೆ ಎಂದು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಪ್ರೀತಿಸಲ್ಪಟ್ಟಿಲ್ಲ ಭಾವನೆಯ ಕೊರತೆಯು ಒಂಟಿತನ, ಸ್ವ-ದ್ವೇಷ ಮತ್ತು ಹತಾಶೆಗೆ ಕಾರಣವಾಗುತ್ತದೆ. ಆತ್ಮದ ವಿರುದ್ಧದ ಈ ಅಪರಾಧಗಳು ಸಮಾಜದ ವಿರುದ್ಧದ ಅಪರಾಧಗಳಿಗೆ ಬಹಳ ಹಿಂದೆಯೇ ಸಂಭವಿಸುತ್ತವೆ.

ಈ ಹಾಡು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪುರುಷರು ಮತ್ತು ಮಹಿಳೆಯರ ಬಗ್ಗೆ ಮಾತ್ರವಲ್ಲ, ನಮ್ಮೆಲ್ಲರ ಬಗ್ಗೆ. ಈ ಧರೆಯ ಮೇಲೆ ದೈಹಿಕ ಸಾವು ಅನಿವಾರ್ಯ. ನಾವೆಲ್ಲರೂ ಪ್ರೀತಿಯನ್ನು ಬಯಸುತ್ತೇವೆ ಮತ್ತು ಅದಕ್ಕೆ ಅರ್ಹರಲ್ಲವೇ? ನಾವೆಲ್ಲರೂ 'ಬೆಳಕಿನೆಡೆಗೆ ಹೆಜ್ಜೆ ಹಾಕಲು' ಅರ್ಹರಲ್ಲವೇ? ನಮಗಾಗಿ ಹೋರಾಡುವುದನ್ನು ಯಾರು ತಾನೇ ಬಯಸುವುದಿಲ್ಲ? ದೇವರ ಕೃಪೆಯಿಂದ ನಿಜವಾಗಿಯೂ ಇತರರನ್ನು ಪ್ರೀತಿಸಲು ಕಲಿತ ಜನರು ಮಾತ್ರವಲ್ಲ, ದೇವರು ನಿಜವಾಗಿಯೂ ಎಲ್ಲ ಜನರನ್ನು ಪ್ರೀತಿಸುತ್ತಾನೆ ಎಂಬುದು ಮಹತ್ವದ ಸುದ್ದಿಯಾಗಿದೆ.

ರಾಜ್ಯದ ಕೈಯಿಂದ ಮರಣದಂಡನೆ ಶಿಕ್ಷೆಗೊಳಗಾದ ಪುರುಷರಿಗೆ, ಸಂತೋಷವು ಸಿಗುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯವಾದುದು. ಪ್ರತಿಯೊಂದು ಜೀವಕ್ಕೂ ಒಂದು ಉದ್ದೇಶವಿದೆ. ಪ್ರತಿಯೊಂದು ಆತ್ಮಕ್ಕೂ ಸ್ವರ್ಗದಲ್ಲಿ ನಿತ್ಯಜೀವಕ್ಕೆ ಅವಕಾಶವಿದೆ. ಜೀವನದ ಮೌಲ್ಯ ಅಥವಾ ಆತ್ಮದ ಮೌಲ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಜನರ ಕೆಲಸವಲ್ಲ.

ನಮಗೆಲ್ಲರಿಗೂ ವಿಮೋಚನೆ ಬೇಕು; ನಮಗೆಲ್ಲರಿಗೂ ಪ್ರೀತಿ ಬೇಕು. "ಡೆತ್ ರೋ" ಎಂಬ ಹೆಸರನ್ನು "ವಿಮೋಚನೆಯ ಮಾರ್ಗ" ಎಂದು ಬದಲಾಯಿಸಲು ಕಾರಣವೇನೆಂದರೆ, ಈ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವ ಜನರ ಸಂಪೂರ್ಣ ಗ್ರಹಿಕೆಯನ್ನು, ಅವರು ನಿಷ್ಪ್ರಯೋಜಕ, ಕ್ರೂರ ಕೃತ್ಯಗಳನ್ನೆಸಗುವ ಆತ್ಮಗಳನ್ನು ಹೊಂದಿರುವವರನ್ನು, ಘನತೆ ಮತ್ತು ಪ್ರೀತಿಯಿಂದ ಕೂಡಿದ ಮನುಷ್ಯರನ್ನಾಗಿ ಪರಿವರ್ತಿಸಲು.

ಭರವಸೆಯ ಬೀಜಗಳನ್ನು ಬಿತ್ತುವುದರಿಂದ ದ್ವೇಷದ ಬೀಜಗಳ ನಡುವೆ ಬೆಳೆದು ಅವುಗಳ ನಡುವೆ ಭರವಸೆಯು ಅರಳಬಹುದು ಎಂದು ನನಗೆ ತಿಳಿದಿತ್ತು. ಇಲ್ಲಿ ವಾಸಿಸುತ್ತಿದ್ದ ಪುರುಷರು ಬೇರೆ ಜೈಲಿಗೆ ಸ್ಥಳಾಂತರಗೊಂಡರು. ಕೆಲವು ತಿಂಗಳುಗಳ ಹಿಂದೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯ ಕಾರಾಗೃಹದಲ್ಲಿ ಕುಳಿತುಕೊಂಡು ನಾನು ಈ ಗೀತೆಯನ್ನು ಬರೆಯುತ್ತಿದ್ದೇನೆ. ಈ ಕೋಣೆಯಲ್ಲಿ ಪ್ರೀತಿ ಮಾತ್ರ ಇದೆ ಎಂದು ನನಗೆ ಅನಿಸುತ್ತದೆ. ಪ್ರೀತಿ ಒಂದು ಸಾಂಕ್ರಾಮಿಕ, ನಾವೆಲ್ಲರೂ ಅದನ್ನು ಹರಡೋಣ! ಹೀಗೆ ಮಾಡುವುದರ ಮೂಲಕ ನಾವೆಲ್ಲರೂ ಒಟ್ಟಾಗಿ ಮರಣದಂಡನೆಯನ್ನು ನಿಜವಾಗಿಯೂ ವಿಮೋಚನೆಯ ಮಾರ್ಗವಾಗಿ ಬದಲಾಯಿಸಬಹುದು.

10 ಜನವರಿ 2025, 13:19