ಸಂವಹನ ಜಗತ್ತಿನ ಮಹೋತ್ಸವ: ಮಾರಿಯಾ ರೆಸ್ಸಾ
ಮಾರಿಯಾ ಎ. ರೆಸ್ಸಾ
ಆಶಾವಾದವು ಕಾರ್ಯದಿಂದ ಹುಟ್ಟುತ್ತದೆ
ವಾವ್, ಇಲ್ಲಿರುವುದು ತುಂಬಾ ಅದ್ಭುತವಾಗಿದೆ. ಇದು ಬೆದರಿಸುವಂತಿದೆ, ಅಂದ ಹಾಗೆ! ಇದು ಒಂದು ಸ್ಮರಣೀಯ ಸಮಯದಂತೆ ಭಾಸವಾಗುತ್ತದೆ. ಇದು ಪವಿತ್ರವಾದ ಸ್ಥಳವಾಗಿದೆ ಹಾಗೂ ಜಾಗತಿಕ ಸಮುದಾಯವಾಗಿ ನಮ್ಮನ್ನು ಒಟ್ಟಿಗೆ ಬಂಧಿಸುವ ಮೌಲ್ಯಗಳಿಗೆ ಅನುಗ್ರಹ, ಚಿಂತನೆ ಮತ್ತು ಮರು ಬದ್ಧತೆಯ ಈ ಸಮಯದಲ್ಲಿ ನಾವು ಮಹೋತ್ಸವವನ್ನು ಪ್ರಾರಂಭಿಸುತ್ತಿದ್ದೇವೆ.
ನಮ್ಮ ಪ್ರಪಂಚವು ಆಳವಾಗಿ ಅಂದರೆ ಅಡಿಯಿಂದ ರೂಪಾಂತರವಾಗುತ್ತಿರುವ ವೀಶ್ವದಲ್ಲಿ ನಾವು ಜೀವಿಸುತ್ತಿರುವಂತಹ ಸರಿಯಾದ ಸಮಯದಲ್ಲಿ ಈ ಸಂವಹನದ ಜ್ಯೂಬಲಿ ಬಂದಿದೆ. ನಾವು ಜೀವಿಸುತ್ತರುವ ಇಂತಹ ವಾತಾವರಣವು ಸಂಭವಿಸಿದ್ದು ಕೊನೆಯ ಬಾರಿ, ಅಂದರೆ ಹೊಸ ತಂತ್ರಜ್ಞಾನವು ಫ್ಯಾಸಿಸಂನ ಉದಯಕ್ಕೆ ಅನುವು ಮಾಡಿಕೊಟ್ಟಾಗ, 80 ವರ್ಷಗಳ ಹಿಂದೆ ಹೀಗೆ ನಡೆದಿರಬಹುದು ಎಂಬುದು ನನ್ನ ಅನಿಸಿಕೆ. ಅದು ಸರಿಸುಮಾರು ಕೊನೆಯ ಬಾರಿಗೆ ಪತ್ರಕರ್ತರೊಬ್ಬರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು, ಆದರೆ ಕಾರ್ಲ್ ವಾನ್ ಒಸಿಯೆಟ್ಜ್ಕಿ ನನ್ನಷ್ಟು ಅದೃಷ್ಟಶಾಲಿಯಾಗಿರಲಿಲ್ಲ. ಅವರು ನಾಜಿ ವ್ಯವಸ್ಥೆಯ ಕಾರಾಗೃಹದಲ್ಲಿ ಹಿಂಸೆಗೊಳಗಾಗಿದ್ದರು ಮತ್ತು ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಹಲವು ವರ್ಷಗಳಿಂದ, ನಾನು ಎಚ್ಚರಿಕೆ ನೀಡುತ್ತಿದ್ದೇನೆ: ಹಿರೋಷಿಮಾದಂತೆಯೇ, ನಮ್ಮ ಮಾಹಿತಿ ಪರಿಸರ ವ್ಯವಸ್ಥೆಯಲ್ಲಿ ಪರಮಾಣು ಬಾಂಬ್ ಸ್ಫೋಟಗೊಂಡಿದೆ.
ಅಧಿಕಾರ ಮತ್ತು ಹಣದ ಅನ್ವೇಷಣೆಯಲ್ಲಿ, ತಂತ್ರಜ್ಞಾನವು ನಮ್ಮ ಎಲ್ಲಾ ಪ್ರಜಾಪ್ರಭುತ್ವಗಳ ಜೀವಕೋಶ ಮಟ್ಟದಲ್ಲಿ ಕಪಟ ಕುಶಲತೆಯನ್ನು ಸಕ್ರಿಯಗೊಳಿಸಿತು: ನಮ್ಮಲ್ಲಿ - ಮತದಾರರಲ್ಲಿ - ಭಯ, ಕೋಪ ಮತ್ತು ದ್ವೇಷವನ್ನು ಸೂಕ್ಷ್ಮವಾಗಿ ಗುರಿಯಾಗಿರಿಸಿಕೊಳ್ಳುವುದು; ನಂಬಿಕೆಯನ್ನು ನಾಶಮಾಡುವ ವ್ಯತ್ಯಾಸದ ನಿರೂಪಣೆಯ ಬೀಜಗಳನ್ನು ಬಿತ್ತುವುದು. ಇದನ್ನು ಅಮೆರಿಕದ ಶ್ರೇಷ್ಠ ಶಸ್ತ್ರಚಿಕಿತ್ಸಾ ಅಧಿಕಾರಿಯೊಬ್ಬರು ಒಂಟಿತನದ ಸಾಂಕ್ರಾಮಿಕ ರೋಗ ಎಂದು ಕರೆದರು. ಅದು ನೆರೆಯವರನ್ನು ನೆರೆಯವರ ವಿರುದ್ಧ ತಿರುಗಿಸಿತು, ದೊಂಬಿ ಆಡಳಿತವನ್ನು ಪುರಸ್ಕರಿಸಿತು.
ಈ ಸಂವಹನ ಜ್ಯೂಬಿಲಿಯು ಜಗತ್ತು ತಲೆಕೆಳಗಾಗಿರುವಾಗ ಸಮಯದಲ್ಲಿ ಸಂಭವಿಸುತ್ತಿದೆ: "ಯಾವುದು ಸರಿಯಾದದ್ದು, ಅದು ತಪ್ಪು; ಮತ್ತು ಯಾವುದು ತಪ್ಪು, ಅದು ಸರಿ" ಸಮಯದಲ್ಲಿ ಸಂಭವಿಸುತ್ತಿದೆ. ನಾನು ಚಿಕ್ಕವನಳಿದ್ದಾಗ ಮತ್ತು ಆತ್ಮಸಾಕ್ಷಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಕಲಿಯುತ್ತಿದ್ದಾಗ ಒಂದು ಹಳೆಯ ವ್ಯಂಗ್ಯಚಿತ್ರ ನೆನಪಾಯಿತು. ಪ್ರತಿಯೊಂದು ಪ್ರಮುಖ ಧರ್ಮವೂ ಒಂದು ವಿಷಯವನ್ನು ಹೊಂದಿದೆ: ಹೋರಾಡಲು ಕಠಿಣವಾದ ಯುದ್ಧವು ಯಾವುದೆಂದರೆ, ಪ್ರತಿಯೊಬ್ಬರು ನಾವು ನಮ್ಮೊಳಗೆ ಸತ್ಯ ಮತ್ತು ತಪ್ಪಿನ ನಡುವೆ ನಡೆಯುವ ಹೋರಾಟ. ಇಸ್ಲಾಂ ಧರ್ಮವು ಇದನ್ನು ಜಿಹಾದ್ ಎಂದು ಕರೆಯುತ್ತದೆ; ಅದು ನಿಮ್ಮೊಳಗೆ ನಡೆಯುವ ಯುದ್ಧ.
ನೀವು ನನ್ನ ವಯಸ್ಸಿನವರಾಗಿದ್ದರೆ ಈ ವ್ಯಂಗ್ಯಚಿತ್ರವನ್ನು ನೀವು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಬಲಭಾಗದಲ್ಲಿ, "ಮಾಡು. ಮಾಡು. ಮಾಡು!" ಎಂದು ದೆವ್ವವು ನಿಮ್ಮನ್ನು ಪ್ರಚೋದಿಸುತ್ತಿದೆ, ನಿಮ್ಮ ಎಡಭಾಗದಲ್ಲಿ, ಈ ದೇವದೂತರು ಇದ್ದಾರೆ, ಅದು ನಿಮಗೆ ಇತರ ಜನರ ಬಗ್ಗೆ ಸಹಾನುಭೂತಿ, ಸುವರ್ಣ ನಿಯಮವನ್ನು ನೆನಪಿಸುತ್ತದೆ: ಸರಿಯಾದದ್ದನ್ನು ಮಾಡಿ; ದಯೆಯಿಂದಿರಿ. ಸ್ವಾರ್ಥಿಯಾಗಬೇಡಿ ಎಂದು ಹೇಳುವುದು. ಹಂಚಿಕೊಳ್ಳಲು. ನಿಮ್ಮ ಕೆಟ್ಟ ಪ್ರವೃತ್ತಿಗಳ ವಿರುದ್ಧ ಹೋರಾಡಲು. ದೆವ್ವ ಮತ್ತು ದೇವದೂತರು ಯಾವುದು ಉತ್ತಮ ಮತ್ತು ಯಾವುದು ಕೆಟ್ಟದು ಎಂಬ ಆತ್ಮಸಾಕ್ಷಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭವನ್ನು ಸೃಷ್ಟಿಸುತ್ತಾರೆ.
ಸಾಮಾಜಿಕ ಮಾಧ್ಯಮವು ಮಾಡಿದ್ದು, ನಿಮ್ಮ ಭುಜದಿಂದ ದೇವದೂತನನ್ನು ಕಿತ್ತುಹಾಕಿ, ದೆವ್ವವನ್ನು ಬೆಳೆಸಿ, ಅದು ನಿಮ್ಮ ನರಮಂಡಲಕ್ಕೆ ನೇರ ಸಂಪರ್ಕವನ್ನು ನೀಡಿತು. ದೊಡ್ಡ ತಂತ್ರಜ್ಞಾನವು ಸಾಮಾಜಿಕ ಮಾಧ್ಯಮವನ್ನು ಸಂಪರ್ಕದ ಸಾಧನದಿಂದ ಸಾಮೂಹಿಕ ವರ್ತನೆಯ ಎಂಜಿನಿಯರಿಂಗ್‌ನ ಆಯುಧವಾಗಿ ಪರಿವರ್ತಿಸಿದೆ. ಈ ವೇದಿಕೆಗಳು ತಟಸ್ಥ ತಂತ್ರಜ್ಞಾನಗಳಲ್ಲ; ಅವು ನಮ್ಮ ಆಳವಾದ ಮಾನಸಿಕ ದುರ್ಬಲತೆಗಳನ್ನು ಬಳಸಿಕೊಳ್ಳಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ವ್ಯವಸ್ಥೆಗಳಾಗಿವೆ. ಅವು ನಮ್ಮ ಆಕ್ರೋಶ ಮತ್ತು ದ್ವೇಷವನ್ನು ಹೆಚ್ಚುಸುತ್ತವೆ; ನಮ್ಮ ವಿಭಜನೆಗಳನ್ನು ವರ್ಧಿಸುತ್ತವೆ; ಮತ್ತು ಸೂಕ್ಷ್ಮವಾಗಿ ಯೋಚಿಸುವ ನಮ್ಮ ಸಾಮರ್ಥ್ಯವನ್ನು, ಸಹಾನುಭೂತಿಯ ಸಾಮರ್ಥ್ಯವನ್ನು ವ್ಯವಸ್ಥಿತವಾಗಿ ನಾಶಮಾಡುತ್ತವೆ.
ತಂತ್ರಜ್ಞಾನವು ನಾವು ಯಾರೆಂದು ಕೆಟ್ಟದರ ಪ್ರತಿಫಲ ನೀಡಿದಾಗ, UBUNTU ನಮ್ಮ ಭವಿಷ್ಯಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ನಮಗೆ ಕಲಿಸುತ್ತದೆ; ಸತ್ಯ, ನ್ಯಾಯ ಮತ್ತು ಶಾಂತಿಗಾಗಿ ಹೋರಾಟವು ಬೇರೆಯವರ ಯುದ್ಧವಲ್ಲ; ಅದು ನಮ್ಮದು. ಈ ಸಭಾಂಗಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಹ ಸತ್ಯಕ್ಕಾಗಿ ಹೋರಾಡುವ ಜವ್ದಾರಿ ಹೊಂದಿದ್ದಾನೆ.
ಹಾಗಾದರೆ ನಾವು ಏನು ಮಾಡಬಹುದು? 4 ಸಲಹೆಗಳಿವೆ:
1. ಸಹಯೋಗಿಸಿ, ಸಹಯೋಗಿಸಿ, ಸಹಯೋಗಿಸಿ - ಮಾಹಿತಿ ಕಾರ್ಯಾಚರಣೆಗಳು ನಮ್ಮನ್ನು ಪರಸ್ಪರ ವಿರುದ್ಧವಾಗಿ ಎತ್ತಿಕಟ್ಟಲು ಪ್ರಯತ್ನಿಸುವ ಸಮಾಜದ ಬಿರುಕು ರೇಖೆಗಳನ್ನು ಮುಚ್ಚಲು ಈಗಲೇ ವಿಶ್ವಾಸವನ್ನು ನಿರ್ಮಿಸಿ ಮತ್ತು ಬಲಪಡಿಸಿ, ಒಟ್ಟಾಗಿ ಶಾಂತಿಯ ವಿಶ್ವವನ್ನು ಸ್ಥಾಪಿಸಲು ಶ್ರಮಿಸಬೇಕು.
2. ನೈತಿಕ ಸ್ಪಷ್ಟತೆಯೊಂದಿಗೆ ಸತ್ಯವನ್ನು ಮಾತನಾಡಿ - ಅನ್ಯಾಯದ ಮುಂದೆ ಮೌನವಾಗಿರುವುದು ಜಟಿಲತೆಯಾಗಿದೆ. ಅದು ವ್ಯವಸ್ಥಿತ ಜನಾಂಗೀಯತೆಯಾಗಿರಲಿ, ಆರ್ಥಿಕ ಅಸಮಾನತೆಯಾಗಿರಲಿ ಅಥವಾ ಪ್ರಜಾಪ್ರಭುತ್ವದ ರೂಢಿಗಳ ಸವೆತವಾಗಿರಲಿ, ಭಕ್ತವಿಶ್ವಾಸಿಗಳು ತಮ್ಮ ಪ್ರವಾದಿಗಳ ಧ್ವನಿಗೆ ಮರಳಿ ಕಿವಿಗೊಡಬೇಕು. ನಮ್ಮ ಸಾರ್ವಜನಿಕ ಮಾಹಿತಿ ಪರಿಸರ ವ್ಯವಸ್ಥೆಗಳನ್ನು ನಿಯಂತ್ರಿಸುವವರಿಂದ - ಸರ್ಕಾರಗಳಿಂದ ಹಿಡಿದು ದೊಡ್ಡ ತಂತ್ರಜ್ಞಾನದಿಂದ ಮತ್ತು ಮಾಧ್ಯಮದವರೆಗೆ - ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಒತ್ತಾಯಿಸಿರಿ.
3. ಅತ್ಯಂತ ದುರ್ಬಲರನ್ನು ರಕ್ಷಿಸಿ - ತಮ್ಮ ಜೀವಗಳನ್ನು ಪಣಕ್ಕಿಡುವ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು ಮತ್ತು ಕಾರ್ಯಕರ್ತರನ್ನು ಬೆಂಬಲಿಸಿ. ಜರ್ಮನಿಯ ಮಾರ್ಟಿನ್ ನೀಮೊಲ್ಲರ್ ರವರ ಉಲ್ಲೇಖ ನೆನಪಿದೆಯೇ? ನನ್ನ ಮೊದಲ ಬಂಧನದ ನಂತರ ನಮ್ಮ ಅತಿದೊಡ್ಡ ಪತ್ರಿಕೆ ಪ್ರಕಟಿಸಿದ ನಮ್ಮ ಫಿಲಿಪೈನ್ ಆವೃತ್ತಿ ಇಲ್ಲಿದೆ: "ಮೊದಲು ಅವರು ಪತ್ರಕರ್ತರನ್ನು ಹುಡುಕಲು ಬಂದರು. ಮುಂದೆ ಏನಾಯಿತು ಎಂಬುದು ನಮಗೆ ತಿಳಿದಿಲ್ಲ." ನಿಮ್ಮ ಜಾಲಸಂಪರ್ಕಗಳು ಸಮುದಾಯಗಳಿಗೆ ಶಕ್ತಿಶಾಲಿ ಗುರಾಣಿಗಳಾಗಿರಬಹುದು. ವಲಸಿಗರು, ಧಾರ್ಮಿಕ ಅಲ್ಪಸಂಖ್ಯಾತರು, LGBTQ+ ಮತ್ತು ತಾರತಮ್ಯ ಎದುರಿಸುತ್ತಿರುವ ಇತರರನ್ನು ಬೆಂಬಲಿಸಿರಿ. ಇದರಿಂದ ನಮ್ಮ ಸಾಮೂಹಿಕ ಜಾಗರೂಕತೆಯು ದ್ವೇಷದ ಸಾಮಾನ್ಯೀಕರಣವನ್ನು ತಡೆಯಬಹುದು.
4. ನಿಮ್ಮ ಶಕ್ತಿಯನ್ನು ನೀವು ಗುರುತಿಸಿ - ಶಾಂತಿಯನ್ನು ನಿರ್ಮಿಸುವುದು ವೀರರಿಗೆ ಮಥತ್ರ ಮೀಸಲಾಗಿಲ್ಲ; ಇದು ಸುಳ್ಳನ್ನು ಸ್ವೀಕರಿಸಲು ಮತ್ತು ಜೀವಿಸಲು ನಿರಾಕರಿಸುವ ಸಾಮೂಹಿಕ ಜನರ ಕೆಲಸವಾಗಿದೆ. ನಮ್ಮ ಸಮುದಾಯದ ಸಹಾಯವಿಲ್ಲದೆ ರಾಪ್ಲರ್ (ಫಿಲಿಫೈನ್ಸ್ ನ ಸುದ್ಧಿ ಆಯೋಗ) ಬದುಕುಳಿಯಲು ಸಾಧ್ಯವಿಲ್ಲ, ಅವರು ಯಾವಾಗಲೂ ಮಾನವ ಸ್ವಭಾವದ ಒಳ್ಳೆಯತನವನ್ನು ನನಗೆ ನೆನಪಿಸುತ್ತಿದ್ದರು. ನೀವು ಶಕ್ತಿಶಾಲಿಯಾಗಿದ್ದೀರಿ ಮತ್ತು ಅದನ್ನು ಆ ಶಕ್ತಿಯನ್ನು ಒಳ್ಳೆಯದಕ್ಕಾಗಿ ಈ ಒಂದು ಬದಲಾವಣೆಯ ಅಲೆಯಾಗಿ ಮಾರ್ಪಡಿಸಿ. ಈ ಕಾರ್ಯ ಬರೀ ಪ್ರೀತಿಯಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಳ್ಳಿ.
ನಾನು ಅವುಗಳನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ: ಸಹಕರಿಸಿ; ನೈತಿಕ ಸ್ಪಷ್ಟತೆಯೊಂದಿಗೆ ಸತ್ಯವನ್ನು ಮಾತನಾಡಿ; ಅತ್ಯಂತ ದುರ್ಬಲರನ್ನು ರಕ್ಷಿಸಿ; ಮತ್ತು ನಿಮ್ಮ ಶಕ್ತಿಯನ್ನು ನೀವು ಗುರುತಿಸಿರಿ.
ಅತ್ಯಂತ ಕೆಟ್ಟ ಸಮಯದಲ್ಲೂ ಸಹ, ಭರವಸೆ ನಿಷ್ಕ್ರಿಯವಾಗಿರುವುದಿಲ್ಲ; ಅದು ಸಕ್ರಿಯ, ಪಟ್ಟುಬಿಡದ ಮತ್ತು ಕಾರ್ಯತಂತ್ರದಿಂದ ಕೂಡಿರುತ್ತದೆ. ನಮ್ಮ ವಿಶ್ವಾಸದ ಸಂಪ್ರದಾಯಗಳು ಶತಮಾನಗಳ ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ; ನಾವು ಆ ರೂಪಾಂತರದ ಕಥೆಗಳನ್ನು ಹಂಚಿಕೊಳ್ಳಬೇಕಾಗಿದೆ.
ಈ ಸಮಯ ಮುಖ್ಯ. ಏಕೆಂದರೆ ಇಷ್ಟೇ, ನೀವು ಏನು ಮಾಡಲು ಆರಿಸಿಕೊಳ್ಳುತ್ತೀರಿ ಎಂಬುದು ಮುಖ್ಯ.
ಈ ಸಂಭಾಗಣದಲ್ಲಿ ಅನೇಕ ಬುದ್ಧಿವಂತರು, ಪ್ರತಿಭಾವಶಾಲಿಗಳು ನಮ್ಮಲ್ಲಿ ಹಲವರು ಇದ್ದಾರೆ. ನೀವೆಲ್ಲರೂ ಬಂದಿದ್ದಕ್ಕಾಗಿ ನಿಮಗೆ ಧನ್ಯವಾದಗಳು; ನಮ್ಮನ್ನು ಒಟ್ಟಿಗೆ ಕರೆತಂದಿದ್ದಕ್ಕಾಗಿ ಪೀಠದ ಅಧೀನ ಕಾರ್ಯದರ್ಶಿಗಳಿಗೆ (ಡಿಕ್ಯಾಸ್ಟರಿಗೆ), ವ್ಯಾಟಿಕನ್‌ಗೆ, ವಿಶ್ವಗುರುಗಳಿಗೆ ಧನ್ಯವಾದಗಳು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಊಹಿಸಿ, ಎಂತಹ ಅದ್ಬುತವಾದ ವಿಶ್ವವವನ್ನು ಸೃಷ್ಟಿಸಬಹುದು. ಒಗ್ಗಟ್ಟಿನ ಅಣೆಕಟ್ಟು ಬೀಳುವುದನ್ನು ತಡೆಯಬಹುದು ಮತ್ತು ನಮ್ಮ ಜಗತ್ತನ್ನು ಸೌಖ್ಯಪಡಿಸಬಹುದು.