MAP

VATICAN-POPE-AUDIENCE-JUBILEE VATICAN-POPE-AUDIENCE-JUBILEE  (AFP or licensors)

ಸಂವಹನ ಜಗತ್ತಿನ ಮಹೋತ್ಸವ: ಕೋಲಮ್ ಮೆಕ್‌ಕ್ಯಾನ್

"ನಿರೂಪಣೆ 4" ನ ಐರಿಶ್ ಲೇಖಕ ಮತ್ತು ಸಹ-ಸಂಸ್ಥಾಪಕ, ಇದು ನಮ್ಮ ಕಥೆಯ ವಿನಿಮಯ, ಕಲಾವಿದರ ಜಾಲ, ಕಲಿಕಾ ಸಂಪನ್ಮೂಲಗಳು ಮತ್ತು ನಾಗರಿಕ ತೊಡಗಿಸಿಕೊಳ್ಳುವಿಕೆಯ ಮೂಲಕ ಶಿಕ್ಷಕರಿಗೆ ಸಹಾನುಭೂತಿಯನ್ನು ಕಲಿಸಲು ಸೃಜನಶೀಲ ಸಾಧನಗಳನ್ನು ನೀಡುವ ಜಾಗತಿಕ ಜಾಲವಾಗಿದೆ.

ಕೋಲಮ್ ಮೆಕ್‌ಕ್ಯಾನ್

ದುರಸ್ತಿಯ ತೀರ್ಥಯಾತ್ರೆ
ಸುಮಾರು ನೂರು ವರ್ಷಗಳ ಹಿಂದೆ, ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸಿಗ್ಮಂಡ್ ಫ್ರಾಯ್ಡ್ ರವರ ನಡುವೆ ಪತ್ರಗಳ ಸರಣಿಯೇ ಸಾಗುತ್ತಿತ್ತು. "ಸಾಪೇಕ್ಷತಾ ಸಿದ್ಧಾಂತದ ಪಿತಾಮಹ" ಎಂದು ಕರೆಯಲ್ಪಡುವ ವಿಜ್ಞಾನಿ ಐನ್‌ಸ್ಟೈನ್ ರವರು ಎಲ್ಲದರ ಸಿದ್ಧಾಂತದಲ್ಲಿ ಆಸಕ್ತಿ ಹೊಂದಿದ್ದರು. ಮತ್ತು "ಮನೋವಿಶ್ಲೇಷಣೆಯ ಪಿತಾಮಹ" ಎಂದು ಕರೆಯಲ್ಪಡುವ ಫ್ರಾಯ್ಡ್ ರವರ ಮೆದುಳು ಮತ್ತು ದೇಹವನ್ನು ಅನ್ವೇಷಿಸುವಲ್ಲಿ ಆಸಕ್ತಿ ಹೊಂದಿದ್ದರು.

ಐನ್‌ಸ್ಟೈನ್ ಮತ್ತು ಫ್ರಾಯ್ಡ್ ರವರು, ಒಟ್ಟಿಗೆ ಅವರ ಕಾಲದ ಮುಂಚೂಣಿಯ ಮನಸ್ಸುಗಳಾಗಿದ್ದರು. ಆದರೆ ಕತ್ತಲೆಯ ಪರದೆ ಇಳಿದಿತ್ತು. ಯುರೋಪ್ ಒಂದು ವಿನಾಶಕಾರಿ ಯುದ್ಧದಿಂದ ಹೊರಬಂದಿತ್ತು ಮತ್ತು ಪ್ರಖ್ಯಾತ ವಿಜ್ಞಾನಿಗಳಿಗೆ ಅದು ಖಚಿತವಾಗಿ ತಿಳಿದಿಲ್ಲದಿದ್ದರೂ, ಜಗತ್ತು ಮತ್ತೊಂದು ವಿಪತ್ತಿನ ಅಂಚಿನಲ್ಲಿದೆ ಎಂದು ತೋರುತ್ತಿತ್ತು.

ಐನ್‌ಸ್ಟೈನ್ ಮಾನವೀಯತೆಯ "ದ್ವೇಷದ ಕಾಮ" ವನ್ನು ಅನ್ವೇಷಿಸಲು ಬಯಸಿದ್ದರು ಮತ್ತು ಆದ್ದರಿಂದ ಅವರು ಫ್ರಾಯ್ಡ್‌ರವರಿಗೆ ಪತ್ರ ಬರೆದು "ಮನುಷ್ಯನ ಮಾನಸಿಕ ಬೆಳವಣಿಗೆಯನ್ನು, ದ್ವೇಷ ಮತ್ತು ವಿನಾಶದ ಮನೋಧರ್ಮಗಳಿಗೆ ನಿರೋಧಕವಾಗುವಂತೆ ಮಾರ್ಗದರ್ಶನ ಮಾಡಲು ಮತ್ತು ನಾಗರಿಕತೆಯನ್ನು ಯುದ್ಧದ ಬೆದರಿಕೆಯಿಂದ ಬಿಡುಗಡೆ ಮಾಡಲು ಸಾಧ್ಯವೇ?" ಎಂದು ಕೇಳಿದರು.

ಒಂದು ದೊಡ್ಡ, ಧೈರ್ಯಶಾಲಿ ಪ್ರಶ್ನೆ. ಯುದ್ಧದ ಅವಶೇಷಗಳಿಂದ ನಾಗರಿಕತೆಯನ್ನು ಹೇಗೆ ಬಿಡುಗಡೆ ಮಾಡಬಹುದು ಮತ್ತು ಬಹುಶಃ ವಿಶ್ವ ಶಾಂತಿಯ ಕಲ್ಪನೆಯನ್ನು ಹೇಗೆ ಬೆಳೆಸಬಹುದು? ಫ್ರಾಯ್ಡ್ ರವರು ಅಂತಿಮವಾಗಿ ಈ ಪ್ರಶ್ನೆಗೆ ಉತ್ತರಿಸಿದಾಗ, ದುಃಖಕರವೆಂದರೆ, ತನ್ನ ಜೀವನದುದ್ದಕ್ಕೂ ತಾನು ಜನರಿಗೆ ಜೀರ್ಣಿಸಲು ಅಥವಾ ನುಂಗಲು ಕಷ್ಟಕರವಾದ ಸತ್ಯಗಳನ್ನು ಹೇಳುತ್ತಿದ್ದೇನೆ ಎಂದು ಐನ್‌ಸ್ಟೈನ್‌ ರವರಿಗೆ ಹೇಳಿದರು. ಅವರ ಅಭಿಪ್ರಾಯದಲ್ಲಿ, ಮಾನವಕುಲವು ಯುದ್ಧದ ಅಗಾಧ ದುಷ್ಪರಿಣಾಮಗಳನ್ನು ಎದುರಿಸಲು ಸಾಧ್ಯವಾಗುವ ಸಾಧ್ಯತೆ ಬಹಳ ಕಡಿಮೆ. ಆದರೂ, ಬೆಳಕಿನ ಬಿರುಕಿತ್ತು. ಯುದ್ಧವನ್ನು ಕೊನೆಗೊಳಿಸುವುದು ಸಂಪೂರ್ಣವಾಗಿ ಅಸಾಧ್ಯವಾಗಬಹುದು, ಆದರೆ ಅದರ ವಿರುದ್ಧ ಎದ್ದು ನಿಂತು ಶಾಂತಿ ಮತ್ತು ನ್ಯಾಯಕ್ಕಾಗಿ ಹೋರಾಡುವುದು ಅಸಾಧ್ಯವಾಗಿರಲಿಲ್ಲ. "ಮಾನವರ ನಡುವೆ ಭಾವನಾತ್ಮಕ ಸಂಬಂಧಗಳನ್ನು ಸೃಷ್ಟಿಸುವ ಯಾವುದೇ ವಿಷಯವು ಅನಿವಾರ್ಯವಾಗಿ ಯುದ್ಧವನ್ನು ಎದುರಿಸಬೇಕು" ಎಂದು ಫ್ರಾಯ್ಡ್ ಹೇಳಿದರು.

25 ಜನವರಿ 2025, 15:31