MAP

Chiude Villaggio Italia, Vespucci saluta anno nuovo ad Abu Dhabi Chiude Villaggio Italia, Vespucci saluta anno nuovo ad Abu Dhabi  (ANSA)

ಐತಿಹಾಸಿಕ ಇಟಾಲಿಯದ ಹಡಗು 2025 ರ "ಜೂಬಿಲಿ ದೇವಾಲಯ" ಎಂದು ಗೊತ್ತುಪಡಿಸಲಾಗಿದೆ

ಇಟಾಲಿಯದ ಪಡೆಗಳ ಮಹಾಧರ್ಮಾಧ್ಯಕ್ಷರು, ಇಟಾಲಿಯದ ನೌಕಾಪಡೆಯ ಐತಿಹಾಸಿಕ ಫ್ಲ್ಯಾಗ್‌ಶಿಪ್ "ಅಮೆರಿಗೊ ವೆಸ್ಪುಚಿ" ನ್ನು ಮಿಲಿಟರಿ ಆರ್ಡಿನರಿಯೇಟ್‌ನ ಜೂಬಿಲಿ ಸ್ಥಳಗಳಲ್ಲಿ ಒಂದಾಗಿದೆ ಎಂದು ಗೊತ್ತುಪಡಿಸುತ್ತಾರೆ, ಅಲ್ಲಿ ಯಾತ್ರಿಕರು ಪವಿತ್ರ ವರ್ಷದಲ್ಲಿ ಸಂಪೂರ್ಣ ದಂಡ ಪರಿಹಾರವನ್ನು ಪಡೆಯಬಹುದು.

ಲಿಸಾ ಝೆಂಗಾರಿನಿ

ಇಟಾಲಿಯನ್ ನೌಕಾಪಡೆಯ ಪ್ರಮುಖ ಹಡಗು "ಅಮೆರಿಗೊ ವೆಸ್ಪುಚಿ"ಯನ್ನು 2025 ರ "ಜೂಬಿಲಿಯ ದೇವಾಲಯ" ಎಂದು ಗೊತ್ತುಪಡಿಸಲಾಗಿದೆ, ಅಲ್ಲಿ ಯಾತ್ರಿಕರು ಪವಿತ್ರ ವರ್ಷದಲ್ಲಿ ಸಂಪೂರ್ಣ ದಂಡ ಪರಿಹಾರವನ್ನು ಪಡೆಯಬಹುದು.

ಇಟಾಲಿಯನ್ ಪಡೆಗಳ ಧರ್ಮಾಧ್ಯಕ್ಷರಾದ ಸ್ಯಾಂಟೋ ಮಾರ್ಸಿಯಾನೊರವರು 15ನೇ ಶತಮಾನದ ಇಟಾಲಿಯನ್ ಪರಿಶೋಧಕನ ಹೆಸರಿನ ಐತಿಹಾಸಿಕ ಹಡಗನ್ನು ಅಧಿಕೃತವಾಗಿ ಗೊತ್ತುಪಡಿಸಿದರು, ಆ ಸಮಯದಲ್ಲಿ ಅವರು "ಅಮೆರಿಕಾ" ಎಂಬ ಹೆಸರನ್ನು ನೀಡಿದರು, ಇತ್ತೀಚೆಗೆ ಇಟಾಲಿಯನ್ ಮಿಲಿಟರಿ ಆರ್ಡಿನರಿಯೇಟ್‌ನಲ್ಲಿ ಜೂಬಿಲಿ ವರ್ಷದ ಉದ್ಘಾಟನೆಯ ಸಂದರ್ಭದಲ್ಲಿ, ಧರ್ಮಕ್ಷೇತ್ರದ ಮಿಲಿಟರಿ ಕಿರು ದೇವಾಲಯಗಳ ಧರ್ಮಗುರುಗಳು ಮತ್ತು ಸಶಸ್ತ್ರ ಪಡೆಗಳ ಸದಸ್ಯರ ಆಧ್ಯಾತ್ಮಿಕ ಸಹಾಯಕ್ಕೆ ಜವಾಬ್ದಾರರಾಗಿದ್ದಾರೆ.

ಅಮೆರಿಗೊ ವೆಸ್ಪುಚಿಯ ವಿಶ್ವ ಪ್ರವಾಸ
ಜುಲೈ 2023 ರಿಂದ, 1931 ರ ಹಿಂದಿನ ಮತ್ತು ಪ್ರಸ್ತುತ ಇಟಾಲಿಯದ ಸಶಸ್ತ್ರ ಪಡೆಗಳ ತರಬೇತಿ ಹಡಗಾಗಿ ಬಳಸಲಾಗುತ್ತಿರುವ ಮೂರು-ಮಾಸ್ಟೆಡ್ ನೌಕಾಯಾನ ಹಡಗು “ಅಮೆರಿಗೊ ವೆಸ್ಪುಚಿ”, ಐದು ಖಂಡಗಳ ಹಲವಾರು ನಗರಗಳಿಗೆ ಇಟಲಿಯದ ಸಾಂಸ್ಕೃತಿಕ ರಾಯಭಾರಿಯಾಗಿ ವಿಶ್ವದ ಪ್ರವಾಸವನ್ನು ಕೈಗೊಳ್ಳುತ್ತಿದೆ.

ಹಡಗಿನ ಪತ್ರಿಕಾ ಕಚೇರಿಯ ಹೇಳಿಕೆಯ ಪ್ರಕಾರ, ಇದು ಡಿಸೆಂಬರ್ 28 ರವರೆಗೆ ಈ ಪ್ರವಾಸವನ್ನು ಮುಂದುವರಿಸುತ್ತದೆ, ಇದನ್ನು "ಪವಿತ್ರ ತೀರ್ಥಯಾತ್ರೆಗಳಿಗಾಗಿ ಮತ್ತು ಸಮುದ್ರದಲ್ಲಿನ ಅದರ ಕಾರ್ಯಾಚರಣೆಗಳಲ್ಲಿ ಧಾರ್ಮಿಕ ಭೇಟಿಗಳಿಗಾಗಿ" ಜೂಬಿಲಿ ತಾಣವಾಗಿ ಕಾರ್ಯ ನಿರ್ವಹಿಸಲಾಗುತ್ತದೆ.

ಸ್ಥಳೀಯ ಧರ್ಮಾಧ್ಯಕ್ಷರ ಆಯ್ಕೆ ಮಾಡಿದ ದೇವಾಲಯಕ್ಕೆ ಅಥವಾ ಪುಣ್ಯಕ್ಷೇತ್ರಕ್ಕೆ ತೀರ್ಥಯಾತ್ರೆ ಮಾಡುವುದು ಜೂಬಿಲಿ ವರ್ಷದಲ್ಲಿ ಭಕ್ತವಿಶ್ವಾಸಿಗಳು ಪೂರ್ಣ ದಂಡಪರಿಹಾವನ್ನು ಪಡೆಯಲು ಒಂದು ಷರತ್ತಾಗಿದೆ. ರೋಮ್‌ನ ಕೆಲವು ದೇವಾಲಯಗಳಲ್ಲಿ ಪ್ರಾರ್ಥಿಸುವುದು, ಕರುಣೆಯ ಕಾರ್ಯಗಳನ್ನು ಕೈಗೊಳ್ಳುವುದು, ಸಾಮಾಜಿಕ ಮಾಧ್ಯಮದಿಂದ ಉಪವಾಸ ಮಾಡುವುದು ಮತ್ತು ಸ್ವಯಂಸೇವಕರಾಗುವುದು ಇತರ ವಿಧಾನಗಳು ರೋಮ್‌ಗೆ ತೀರ್ಥಯಾತ್ರೆ ಮಾಡುವ ವಿಧಾನಗಳಾಗಿವೆ.

ಪವಿತ್ರ ವರ್ಷದಲ್ಲಿ "ಸೈನ್ಯದ ನಡುವೆ ವಾಸಿಸುವ ದೇವಾಲಯವು, ಧರ್ಮಸಭೆ ಮತ್ತು ಜಗತ್ತು, ದೇವರ ಆಗಮನದ ನಿರೀಕ್ಷೆಯನ್ನು ಎದುರು ನೋಡುತ್ತಿದೆ ಮತ್ತು ದೇವರು ಮಿಲಿಟರಿ ಜಗತ್ತಿಗೆ ವಹಿಸಿಕೊಡುವ ಭರವಸೆಯನ್ನು ವ್ಯಕ್ತಪಡಿಸುವ ಚಿಹ್ನೆಗಳನ್ನು ಸ್ಥಾಪಿಸಲು ಬಯಸುತ್ತದೆ" ಎಂದು ಮಹಾಧರ್ಮಾಧ್ಯಕ್ಷರಾದ ಮಾರ್ಸಿಯಾನೋರವರು ವಿವರಿಸಿದರು.

"ಇವುಗಳಲ್ಲಿ ಖಂಡಿತವಾಗಿಯೂ ಪವಿತ್ರ ಮಹೋತ್ಸವ ತಾಣಗಳು ಸೇರಿವೆ, ಅವುಗಳ ಮೂಲಕ ನಮ್ಮ ಸೇನೆಯು ಮಹೋತ್ಸವ ಭೋಗದಿಂದ ಪಡೆಯುವ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯಬಹುದು" ಎಂದು ಅವರು ಹೇಳಿದರು.

ಸಮುದ್ರದಲ್ಲಿ ಮಿಲಿಟರಿಯ ಆಧ್ಯಾತ್ಮಿಕ ಜೀವನದ ಜೊತೆಯಲ್ಲಿ
ಅಮೆರಿಗೊ ವೆಸ್ಕ್‌ಪುಚಿಯಲ್ಲಿ ಹಲವಾರು ಕಥೋಲಿಕ ಧರ್ಮಗುರುಗಳು ಯಾವಾಗಲೂ ಸೇವೆ ಸಲ್ಲಿಸುತ್ತಿದ್ದಾರೆಂದು ಮಹಾಧರ್ಮಾಧ್ಯಕ್ಷರು ನೆನಪಿಸಿಕೊಂಡರು, "ಸಿಬ್ಬಂದಿಯ ಆಧ್ಯಾತ್ಮಿಕ ಜೀವನವನ್ನು ಮೌನವಾಗಿ ಆದರೆ ಬಹಳ ಪರಿಣಾಮಕಾರಿಯಾಗಿ ಜೊತೆಗೂಡಿದ್ದಾರೆ ಮತ್ತು ಅವರು ಈ ಭರವಸೆಯ ಜೂಬಿಲಿ ವರ್ಷದಲ್ಲಿ ಅದನ್ನು ವಿಶೇಷ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ."

ನೇಪಲ್ ಬಳಿಯ ಕ್ಯಾಸೆರ್ಟಾ ಪ್ರಾಂತ್ಯದ ಸಾಂತಾ ಮಾರಿಯಾ ಕ್ಯಾಪುವಾ ವೆಟೆರೆಯಲ್ಲಿರುವ ಮಿಲಿಟರಿ ಪೆನಿಟೆನ್ಷಿಯರಿ ಆರ್ಗನೈಸೇಶನ್ ದೇವಾಲಯದಲ್ಲಿ ಆಚರಿಸಲಾದ ದಿವ್ಯಬಲಿಪೂಜೆಯೊಂದಿಗೆ ಮಹಾಧರ್ಮಾಧ್ಯಕ್ಷರಾದ ಮಾರ್ಸಿಯಾನೋರವರು ತಮ್ಮ ಧರ್ಮಕ್ಷೇತ್ರದಲ್ಲಿ ಜೂಬಿಲಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು. ತಮ್ಮ ಪ್ರಬೋಧನೆಯ ಸಮಯದಲ್ಲಿ, ಜುಬಿಲಿ ಭೋಗದ ಅರ್ಥವನ್ನು ವಿವರಿಸಿದ ನಂತರ, ಮಹಾಧರ್ಮಾಧ್ಯಕ್ಷರಾದ ಮಾರ್ಸಿಯಾನೋರವರು "ಕ್ಷಮೆಯು ನಮ್ಮಂತಹವರಿಗೆ ಶಾಂತಿಯ ಸಂಸ್ಕೃತಿಯನ್ನು ನಿರ್ಮಿಸಲು ಕರೆಯಲ್ಪಟ್ಟವರಿಗೆ ಒಂದು ಗಾಂಭೀರ್ಯವಾದ ಮತ್ತು ಮೂಲಭೂತ ಹೆಜ್ಜೆಯಾಗಿದೆ" ಎಂದು ಒತ್ತಿ ಹೇಳಿದರು. ಸಾಮಾನ್ಯವಾಗಿ, ಇತರರನ್ನು ಕ್ಷಮಿಸಲು ಮೊದಲು ತನ್ನನ್ನು ತಾನು ಕ್ಷಮಿಸಿಕೊಳ್ಳಬೇಕು. "ಅನೇಕ ವಿಧಗಳಲ್ಲಿ ಸಶಸ್ತ್ರ ಪಡೆಗಳು ಮತ್ತು ಪೊಲೀಸ್‌ ಪುರುಷರು ಮತ್ತು ಮಹಿಳೆಯರ ಜೀವನ ಮತ್ತು ಧ್ಯೇಯವನ್ನು ನಿರೂಪಿಸುವ, ಪ್ರತಿಯೊಬ್ಬರಿಗೂ ವಿಶ್ವಾಸದ ಪ್ರಯಾಣವನ್ನು ಗುರುತಿಸುವ" ತೀರ್ಥಯಾತ್ರೆಯ ಬಗ್ಗೆ ಹೇಳಿದರು.

ದೇವರು ಮತ್ತು ಭ್ರಾತೃತ್ವದೊಂದಿಗಿನ ಒಡನಾಟದಲ್ಲಿ ಬೆಳೆಯುವುದು
"ಕಷ್ಟಗಳು ಮತ್ತು ಸಂತೋಷಗಳಲ್ಲಿ, ಮಾನವ ಜೀವನ, ನ್ಯಾಯ ಮತ್ತು ಶಾಂತಿಯ ರಕ್ಷಣೆಗಾಗಿ ಹಂಚಿಕೆಯ ಸೇವೆಯಲ್ಲಿ ದೇವರು ಮತ್ತು ಭ್ರಾತೃತ್ವದೊಂದಿಗಿನ ಒಡನಾಟದಲ್ಲಿ ಬೆಳೆಯಲು ಮಹೋತ್ಸವವು ಒಂದು ಸವಲತ್ತು ಪಡೆದ ಸಮಯವಾಗಲಿ" ಎಂದು ಅವರು ಹೇಳಿದರು.

ಇಟಾಲಿಯನ್ ಮಿಲಿಟರಿ ಆರ್ಡಿನೇರಿಯೇಟ್‌ಗಾಗಿ ಗೊತ್ತುಪಡಿಸಿದ ಇತರ ಜೂಬಿಲಿ ತಾಣಗಳಲ್ಲಿ ಸಾಂತಾ ಕ್ಯಾಟೆರಿನಾ ಡ ಸಿಯೆನಾದ ದೇವಾಲಯ, ರೋಮ್‌ನಲ್ಲಿರುವ ಸೆಲಿಯೊ ಮಿಲಿಟರಿ ಆಸ್ಪತ್ರೆಯ ದೇವಾಲಯ ಮತ್ತು ಸಾಂತಾ ಮಾರಿಯಾ ಕ್ಯಾಪುವಾ ವೆಟೆರೆಯಲ್ಲಿರುವ ಪೆನಿಟೆನ್ಷಿಯರಿಯ ಪ್ರಾರ್ಥನಾ ಮಂದಿರ, ಹಾಗೆಯೇ ಅಂತರರಾಷ್ಟ್ರೀಯ ಶಾಂತಿಪಾಲನಾ ಮತ್ತು ನೌಕಾ ಕಾರ್ಯಾಚರಣೆಗಳ ಇತರ ಸ್ಥಳಗಳು ಈ ಪಟ್ಟಿಯಲ್ಲಿ ಸೇರಿಕೊಳ್ಳುತ್ತವೆ.

14 ಜನವರಿ 2025, 17:04