MAP

 suor Dorothy Mae Stang, uccisa nel 2005 da criminali che osteggiavano il suo coraggioso impegno contro la deforestazione suor Dorothy Mae Stang, uccisa nel 2005 da criminali che osteggiavano il suo coraggioso impegno contro la deforestazione 

ಆಧುನಿಕ ರಕ್ತಸಾಕ್ಷಿಗಳ ಸ್ಮಾರಕಗಳಲ್ಲಿ ಸೇರ್ಪಡೆಗೊಂಡ ಅಮೇರಿಕದ ಮೊದಲ ಮಹಿಳೆ

ರೋಮ್‌ನಲ್ಲಿರುವ ಸ್ಯಾಂಟ್'ಎಜಿಡಿಯೊ ಸಮುದಾಯವು ಆಯೋಜಿಸಿದ ಸಮಾರಂಭದಲ್ಲಿ, ಓಹಿಯೋ ಮೂಲದ ಸಿಸ್ಟರ್. ಡೊರೊಥಿ ಸ್ಟಾಂಗ್ ರವರು ವಿಶ್ವದಾದ್ಯಂತ ಇತರ ಆಧುನಿಕ ಕ್ರೈಸ್ತ ರಕ್ತಸಾಕ್ಷಿಗಳ ನಿತ್ಯ ಸ್ಮರಣೆಯ ಸಮಾರಂಭದಲ್ಲಿ ಸೇರಿಕೊಂಡರು.

ಕೀಲ್ಸ್ ಗುಸ್ಸಿ

ಸುಮಾರು 20 ವರ್ಷಗಳ ಹಿಂದೆ ಬ್ರೆಜಿಲ್‌ನಲ್ಲಿ ತನ್ನ ಕೆಲಸಕ್ಕಾಗಿ ಕೊಲ್ಲಲ್ಪಟ್ಟ ಧಾರ್ಮಿಕ ಸಹೋದರಿಯೊಬ್ಬರು ರೋಮ್‌ನಲ್ಲಿ ಆಧುನಿಕ ರಕ್ತಸಾಕ್ಷಿಗಳ ನಿತ್ಯ ಸ್ಮರಣೆಯಲ್ಲಿ ಸೇರ್ಪಡೆಗೊಂಡ ಮೊದಲ ಅಮೇರಿಕದ ಮಹಿಳೆಯಾಗಲಿದ್ದಾರೆ.

ಸಿಸ್ಟರ್. ಡೊರೊಥಿ ಸ್ಟ್ಯಾಂಗ್ ರವರು ಯಾರು?
1931 ರಲ್ಲಿ ಜನಿಸಿದ ಸಿಸ್ಟರ್. ಡೊರೊಥಿ ಸ್ಟ್ಯಾಂಗ್ ರವರು 17ನೇ ವಯಸ್ಸಿನಲ್ಲಿ ಓಹಿಯೋದ ಸಿಸ್ಟರ್ಸ್ ಆಫ್ ನೊಟ್ರೆ ಡೇಮ್ ಡಿ ನಮೂರ್ ನ್ನು ಸೇರಿದರು. 1966 ರಲ್ಲಿ, ಅವರು ಬ್ರೆಜಿಲ್‌ನಲ್ಲಿ ಧರ್ಮಪ್ರಚಾರಕರಾದರು ಮತ್ತು ಬಡ ವಸಾಹತುಗಾರರ ಹಕ್ಕುಗಳಿಗಾಗಿ ಮತ್ತು ಮಳೆ-ಕಾಡಿನ ರಕ್ಷಣೆಗಾಗಿ ಅದರ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಬಯಸುವ ಮರ ಕಡಿಯುವವರು ಮತ್ತು ಭೂಮಾಲೀಕರ ವಿರುದ್ಧ ಹೋರಾಡಿದರು.

ಪಾಲನಾ ಕಾರ್ಮಿಕರು ಮತ್ತು ರೈತರ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡುವ ಕಥೋಲಿಕ ಧರ್ಮಸಭೆಯ ಸಂಘಟನೆಯಾದ ಪ್ಯಾಸ್ಟೋರಲ್ ಲ್ಯಾಂಡ್ ಕಮಿಷನ್‌ನೊಂದಿಗೆ ಅವರು ಪಾಲುದಾರಿಕೆ ಹೊಂದಿದ್ದರು. ಅವರ ಪ್ರಯತ್ನಗಳ ಫಲವಾಗಿ, ಬ್ರೆಜಿಲ್‌ನ ಪ್ಯಾರಾ ರಾಜ್ಯವು ಸಿಸ್ಟರ್.ಡೊರೊಥಿರವರನ್ನು "ವರ್ಷದ ಮಹಿಳೆ" ಎಂದು ಹೆಸರಿಸಿತು ಮತ್ತು ಅವರು ಬ್ರೆಜಿಲಿಯನ್ ಬಾರ್ ಅಸೋಸಿಯೇಷನ್‌ನಿಂದ ಆ ವರ್ಷದ ಮಾನವೀಯ ಪ್ರಶಸ್ತಿಯನ್ನು ಪಡೆದರು.

ಆದರೆ ಅವರ ಸೇವೆಯನ್ನು ಯಾರೂ ಸರಿಯಾದ ಅರ್ಥದಲ್ಲಿ ಸ್ವೀಕರಿಸಲಿಲ್ಲ. ಫೆಬ್ರವರಿ 12, 2005 ರಂದು, ಬಾಡಿಗೆ ಬಂದೂಕುಧಾರಿಗಳು ಸಿಸ್ಟರ್.ಡೊರೊಥಿಯವರ ಮೇಲೆ ಗುಂಡು ಹಾರಿಸಿ ಅವರನ್ನು ಸಾಯುವಂತೆ ಮಾಡಿದರು. ಆಗ ಅವರಿಗೆ 73 ವರ್ಷ ವಯಸ್ಸಾಗಿತ್ತು.

ಆಧುನಿಕ ಕಾಲದ ರಕ್ತಸಾಕ್ಷಿ
ಅವರ ರಕ್ತಸಾಕ್ಷಿಯ 20ನೇ ವಾರ್ಷಿಕೋತ್ಸವಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗ, ರೋಮ್‌ನ ಸ್ಯಾಂಟ್' ಎಜಿಡಿಯೊ ಸಮುದಾಯವು ಆಯೋಜಿಸಿದ ಸಮಾರಂಭದಲ್ಲಿ ಸಿಸ್ಟರ್.ಡೊರೊಥಿರವರನ್ನು ಸನ್ಮಾನಿಸಲಾಯಿತು. ಅವರ ಕೊಲೆಯಾದ ಸ್ಥಳದಿಂದ ರಕ್ತಸಿಕ್ತ ಮಣ್ಣಿನ ಒಂದು ಸಣ್ಣ ಪಾತ್ರೆ ಮತ್ತು ಅವರ ಸ್ವೆಟರ್‌ಗಳಲ್ಲಿ ಒಂದನ್ನು ದ್ವೀಪದಲ್ಲಿರುವ ಸಂತ ಬಾರ್ತಲೋಮೆವ್‌ನ ಮಹಾದೇವಾಲಯದಲ್ಲಿ ನಿತ್ಯ ಸ್ಮಾರಕಕ್ಕೆ ಸೇರಿಸಲಾಯಿತು - ಇದು ಆಧುನಿಕ ಕಾಲದಲ್ಲಿ ವಿಶ್ವಾಸಕ್ಕಾಗಿ ಕೊಲ್ಲಲ್ಪಟ್ಟ ಸಾವಿರಾರು ಕ್ರೈಸ್ತ ಪುರುಷರು ಮತ್ತು ಮಹಿಳೆಯರಿಗೆ ಸಮರ್ಪಿತವಾದ ದೇವಾಲಯವಾಗಿದೆ.

ಸಂತ ಬಾರ್ತಲೋಮೆವ್ ಮಹಾದೇವಾಲಯದಲ್ಲಿ ಸ್ಮಾರಕಕ್ಕೆ ಸೇರ್ಪಡೆಗೊಳ್ಳಲಿರುವ ಅಮೇರಿಕದ ಮೊದಲ ಮಹಿಳೆಯಾಗಿ ಸಿಸ್ಟರ್ ಡೊರೊಥಿರವರ ಸ್ಮರಣಾರ್ಥ ಸಮಾರಂಭವನ್ನು ನೋಡಲು 25ಕ್ಕೂ ಹೆಚ್ಚು ಅವರ ಸಂಬಂಧಿಕರು ಹಾಜರಿದ್ದರು.

ಸಿಸ್ಟರ್ ಡೊರೊಥಿ ಸ್ಟ್ಯಾಂಗ್ ರವರ ಮಾತುಗಳು
ಸಾಯುವ ಮೊದಲು, ಮಳೆ-ಕಾಡು ಮತ್ತು ಬಡ ಕಾರ್ಮಿಕರನ್ನು ರಕ್ಷಿಸುವ ಕಾರ್ಯದ ಪರಿಣಾಮವಾಗಿ ಸಿಸ್ಟರ್.ಡೊರೊಥಿರವರಿಗೆ ಹಲವಾರು ಕೊಲೆ ಬೆದರಿಕೆಗಳು ಬಂದಿದ್ದವು. ಆದರೂ, ಅಪಾಯವನ್ನು ಲೆಕ್ಕಿಸದೆ, ಅವರು ತಮ್ಮ ಸೇವೆಯನ್ನು ಮುಂದುವರಿಸಿದರು.

"ನಮ್ಮ ಶುಭಸಂದೇಶದ ಕರೆಯು ನಮ್ಮ ಜನರನ್ನು ಕಷ್ಟಕರ ಮತ್ತು ಅಪಾಯಕರ ಕಾರ್ಯಗಳನ್ನು ಕೈಗೊಳ್ಳಲು ಕರೆ ನೀಡುತ್ತದೆ. ಅವರಿಗೆ ಈ ಸವಲತ್ತು ಇಲ್ಲ; ಹಾಗೊಮ್ಮೆ ಅವರು ಬಹಿರಂಗವಾಗಿ ವಿರೋಧಿಸಿದರೆ ಅವರನ್ನು ಕೊಲ್ಲಲಾಗುತ್ತಿತ್ತು - ನಿಜಕ್ಕೂ ಅವರನ್ನು ಕೊಲ್ಲಲಾಗುತ್ತದೆ."

ರಕ್ತಸಾಕ್ಷಿಗಳ ದೇವಾಲಯ
2000ನೇ ಇಸವಿಯ ಜೂಬಿಲಿ ಹಬ್ಬದ ಸಂದರ್ಭದಲ್ಲಿ, 20ನೇ ಶತಮಾನದ ಕ್ರೈಸ್ತ ಧರ್ಮದ ರಕ್ತಸಾಕ್ಷಿಗಳನ್ನು ಸಂಶೋಧಿಸಲು ಮತ್ತು ಗುರುತಿಸಲು ವಿಶ್ವಗುರು ಸಂತ ಜಾನ್ ಪಾಲ್ II 1999ರಲ್ಲಿ "ಹೊಸ ರಕ್ತಸಾಕ್ಷಿಗಳ ಆಯೋಗ"ವನ್ನು ಸ್ಥಾಪಿಸಿದರು. ಈ ಆಯೋಗವು ರೋಮ್‌ನ ದ್ವೀಪದಲ್ಲಿರುವ ಸಂತ ಬಾರ್ತಲೋಮೆವ್‌ನ ಮಹಾದೇವಾಲಯದಲ್ಲಿ ನೆಲೆಗೊಂಡಿತ್ತು.

ಈ ಪುರುಷರು ಮತ್ತು ಮಹಿಳೆಯರ ಸಾಕ್ಷ್ಯಗಳು ಮತ್ತೊಮ್ಮೆ ಇತಿಹಾಸದಲ್ಲಿ ಮರೆಯಾಗದಂತೆ ಉಳಿಸಿಕೊಳ್ಳಲು, ವಿಶ್ವಗುರು ಜಾನ್ ಪಾಲ್ IIರವರು ಮಹಾದೇವಾಲಯವನ್ನು "ವಿಶ್ವಾಸದ ಹೊಸ ಸಾಕ್ಷಿಗಳ" ಸ್ಮಾರಕ ಸ್ಥಳವಾಗಿ ಸಮರ್ಪಿಸಿದರು.

"ಎರಡನೆಯ ಮಹಾಯುದ್ಧದ ಅನುಭವದ ತದನಂತರದ ವರ್ಷಗಳು, ಇಪ್ಪತ್ತನೇ ಶತಮಾನದ ಆರಂಭದಿಂದಲೂ ಅದರ ಅಂತ್ಯದವರೆಗೆ, ಕ್ರಿಸ್ತರ ಸತ್ಯದಿಂದ ಪ್ರೇರಿತವಾದ ವಿಶ್ವಾಸ ಮತ್ತು ಕಿರುಕುಳ, ಹಿಂಸೆ, ಮರಣವನ್ನು ಅನುಭವಿಸಿದವರ ಉಜ್ವಲ ಉದಾಹರಣೆಯನ್ನು ಕೃತಜ್ಞತೆಯಿಂದ ಪರಿಗಣಿಸಲು ನನ್ನನ್ನು ಪ್ರೇರೇಪಿಸಿತು. ಅವರು ಅನೇಕರು! ಅವರ ಸ್ಮರಣೆಯನ್ನು ನಾವು ಕಳೆದುಕೊಳ್ಳಬಾರದು, ಬದಲಿಗೆ ಅದನ್ನು ದಾಖಲಿತ ರೀತಿಯಲ್ಲಿ ಮರುಪಡೆಯಬೇಕು."

11 ಜನವರಿ 2025, 10:54