MAP

Il Papa,liberare i giornalisti ingiustamente incarcerati Il Papa,liberare i giornalisti ingiustamente incarcerati  (ANSA)

ಸಂವಹನಕಾರರು 'ಉತ್ತಮ ಬದಲಾವಣೆಗಾಗಿ ಉಬ್ಬರವಿಳಿತದ ಅಲೆ'ಯಾಗಿದ್ದಾರೆ

ಸಂವಹನದ ಜ್ಯೂಬಿಲಿ ಉತ್ಸವದ ಎರಡನೇ ದಿನದಂದು, ಮಾರಿಯಾ ರೆಸ್ಸಾರವರು ಮತ್ತು ಕಾಲಮ್ ಮೆಕ್‌ಕ್ಯಾನ್ ರವರು ಮಾಧ್ಯಮ ವೃತ್ತಿಪರರಿಗೆ ಸಂಘರ್ಷದಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ ಭರವಸೆಯ ಕಥೆಗಳನ್ನು ಹೇಳಲು ಸವಾಲು ಹಾಕುತ್ತಾರೆ.

ಎಡೋರ್ಡೊ ಗಿರಿಬಾಲ್ಡಿ ಮತ್ತು ಕೀಲ್ಸ್ ಗುಸ್ಸಿ

"ನಾವು ಅತ್ಯಂತ ಲಘು ಮಾನವ ಕಾಲದಲ್ಲಿ ಬದುಕುತ್ತೇವೆ" ಎಂದು ಐರಿಶ್ ಬರಹಗಾರ ಮತ್ತು ನಿರೂಪಣೆ 4 ರ ಸಹ-ಸಂಸ್ಥಾಪಕರಾದ ಕೊಲಮ್ ಮೆಕ್‌ಕ್ಯಾನ್ ರವರು ವಾದಿಸಿದರು. ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯತೆಯು ಹೇಗೆ ಅಸಾಧಾರಣ ಪ್ರಗತಿಯನ್ನು ಸಾಧಿಸಿದೆ ಎಂಬುದನ್ನು ಅವರು ಗಮನ ಸೆಳೆದರು. ಆದರೂ, "ನಾವು ಒಂಟಿತನ ಮತ್ತು ಪ್ರತ್ಯೇಕತೆಯ ಸಾಂಕ್ರಾಮಿಕ ರೋಗದ ವಾತಾವರಣದ ಮಧ್ಯೆ ಬದುಕುತ್ತಿದ್ದೇವೆ" ಎಂದು ಅವರು ಹೇಳಿದರು.

ಸಂವಹನ ಜಗತ್ತಿನ ಜ್ಯೂಬಿಲಿಯ ಎರಡನೇ ದಿನದಂದು, ಮೆಕ್‌ಕ್ಯಾನ್ ರವರು ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಪತ್ರಕರ್ತೆ ಮಾರಿಯಾ ರೆಸ್ಸಾರವರು, ವ್ಯಾಟಿಕನ್‌ನ ಪಾಲ್ VI ಸಭಾಂಗಣದಲ್ಲಿ ವಿಶ್ವದಾದ್ಯಂತದ ಮಾಧ್ಯಮ ವೃತ್ತಿಪರರೊಂದಿಗೆ ಸಂವಹನಕಾರರಾಗಿ ಜಗತ್ತಿನಲ್ಲಿ ಅವರ ಪಾತ್ರದ ಕುರಿತು ಮಾತನಾಡಿದರು.

“ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಹೇಗೆ ಎಂದು ಊಹಿಸಿ. ನಾವು ಋತುವನ್ನು ತಡೆದು ನಮ್ಮ ಜಗತ್ತನ್ನು ಗುಣಪಡಿಸಬಹುದು,” ಎಂದು ರೆಸ್ಸಾರವರು ಹೇಳಿದರು.

ಸಂವಹನದ ಮೂಲಗಳಿಗೆ ಹಿಂತಿರುಗುವುದು
ಸಂವಹನಕ್ಕಾಗಿ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಪಾವೊಲೊ ರುಫಿನಿರಾದ, ಪತ್ರಕರ್ತ ಮತ್ತು ಬರಹಗಾರ ಮಾರಿಯೋ ಕ್ಯಾಲಬ್ರೆಸಿರವರು ನಿರ್ವಹಿಸಿದ ಅಧಿವೇಶನವನ್ನು ಪರಿಚಯಿಸಿದರು. ಈ ಜ್ಯೂಬಿಲಿಯ ವಿಶೇಷ ವಿಷಯಗಳನ್ನು ಎತ್ತಿ ತೋರಿಸುತ್ತಾ, ರುಫಿನಿರವರು "ಜನರು ಮತ್ತು ಯಂತ್ರಗಳ ನಡುವಿನ ಸಂವಹನದಲ್ಲಿ ನಾವು ಇನ್ನೂ ಹೇಗೆ ಆಶಿಸಬೇಕು ಮತ್ತು ತಂತ್ರಜ್ಞಾನವನ್ನು ಹೇಗೆ ಮಾರ್ಗದರ್ಶನ ಮಾಡಬಹುದು ಮತ್ತು ಹೇಗೆ ಮಾರ್ಗದರ್ಶನ ಮಾಡಬೇಕು ಎಂಬುದನ್ನು ಪ್ರಶ್ನಿಸಬೇಕು" ಎಂದು ವಿವರಿಸಿದರು.

ಸಂವಹನಕಾರರ ಪಾತ್ರವನ್ನು ಯಾವಾಗಲೂ "ನಮ್ಮ ವೃತ್ತಿಯ ಮೂಲಗಳಿಗೆ ಹೋಗಿ, ನಮ್ಮ ಭರವಸೆಯ ಮೂಲಗಳಿಗೆ ಮರಳುವ ಇಚ್ಛೆ" ಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.

ರಕ್ಷಣಾಯೋಜನೆಯ ಕಥೆಗಳನ್ನು ಹೇಳಿ
ಮಾರಿಯೊ ಕ್ಯಾಲಬ್ರೆಸಿ "ಕೆಟ್ಟದ್ದನ್ನು ಹೇಳಲೇಬೇಕು" ಎಂದು ಒಪ್ಪಿಕೊಂಡರು. "ಆದರೆ ಅದನ್ನು ಏಕೈಕ ನಿರೂಪಣೆಯಾಗಿ, "ಜಗತ್ತನ್ನು ನೋಡುವ ಏಕೈಕ ಮಸೂರ" ಅಥವಾ "ಮಾಹಿತಿಯ ಯಂತ್ರ"ವಾಗಿ ಮಾಡುವುದರ ವಿರುದ್ಧ ಅವರು ಎಚ್ಚರಿಸಿದರು. ಈ ನಿರೂಪಣೆಯೊಳಗೆ, "ಪ್ರತಿರೋಧದ ಚಿಹ್ನೆಗಳು" ಸ್ಪಷ್ಟವಾಗಿ ಗೋಚರಿಸಬೇಕು. ಆದಾಗ್ಯೂ, ಸಮಾಜವು ಈ ಚಿಹ್ನೆಗಳನ್ನು ಗಮನಿಸಲು ಅಸಮರ್ಥವಾಗಿದೆ ಎಂದು ತೋರುತ್ತದೆ. ಪತ್ರಕರ್ತರು ರಕ್ಷಣಾಯೋಜನೆಯ ಕಥೆಯನ್ನು ಹೇಳುವ ಅಭಿರುಚಿಯನ್ನು ಹೊಂದಿದ್ದಾರೆ ಎಂದು ಕ್ಯಾಲಬ್ರೆಸಿರವರು ಒತ್ತಿ ಹೇಳಿದರು.

ಸಾಮಾಜಿಕ ವೇದಿಕೆಗಳು ತಟಸ್ಥವಾಗಿಲ್ಲ
“ನಾವು ನಮ್ಮ ಪ್ರಪಂಚವು ರೂಪಾಂತರಗೊಳ್ಳುತ್ತಿರುವ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ,” ಎಂದು ಮಾರಿಯಾ ರೆಸ್ಸಾರವರು ಹೈಲೈಟ್ ಮಾಡಿದರು, ಇದು ಅನಿವಾರ್ಯವಾಗಿ ಆಧುನಿಕ ತಂತ್ರಜ್ಞಾನಗಳಿಂದ ರೂಪುಗೊಂಡಿದೆ. ಆದರೆ ಲಾಭದ ಅನ್ವೇಷಣೆಯಿಂದ ಮಾತ್ರ ನಡೆಸಲ್ಪಡುವುದರ ವಿರುದ್ಧ ಅವರು ಎಚ್ಚರಿಸಿದರು, ಇದು "ಜನರ ವಿಶ್ವಾಸವನ್ನು ನಾಶಪಡಿಸುತ್ತದೆ", ಇದು ವ್ಯಾಪಕವಾದ "ಒಂಟಿತನದ ಸಾಂಕ್ರಾಮಿಕ" ರೋಗಕ್ಕೆ ಕಾರಣವಾಗುತ್ತದೆ.

ಸ್ವಾತಂತ್ರ್ಯಕ್ಕಾಗಿ ಪ್ರತಿಪಾದಿಸುವುದು ರೆಸ್ಸಾರವರ ಪತ್ರಿಕೋದ್ಯಮ ವೃತ್ತಿಜೀವನದ ಪ್ರಮುಖ ಭಾಗವಾಗಿದೆ. ಫಿಲಿಪೈನ್ಸ್‌ನ ಡ್ಯುಟರ್ಟೆರವರ ಆಡಳಿತದ ಬಗ್ಗೆ ವಿಮರ್ಶಾತ್ಮಕ ವರದಿಗಳನ್ನು ನೀಡಿದ ಪರಿಣಾಮವಾಗಿ, ಮಾನ ನಷ್ಟ ಸೇರಿದಂತೆ ವಿವಿಧ ಆರೋಪಗಳ ಮೇಲೆ ಅವರನ್ನು ಬಂಧಿಸಲಾಯಿತು ಮತ್ತು ಅವರಿಗೆ ಶಿಕ್ಷೆ ವಿಧಿಸಲಾಯಿತು.

"ಯಾವುದು ಸರಿಯಾದದ್ದು, ಅದು ತಪ್ಪು; ಮತ್ತು ಯಾವುದು ತಪ್ಪು, ಅದು ಸರಿ" ಎಂಬುದೇ ಆಗಿರುವ ಈ ಜಗತ್ತಿನ ಒಂದು ಮಹತ್ವದ ಸಮಯವು ಜ್ಯೂಬಿಲಿಯಲ್ಲಿ ಕಾಣಬಹುದಾಗಿದೆ ಎಂದು ರೆಸ್ಸಾರವರು ವಿವರಿಸಿದರು. ಮಾಧ್ಯಮಗಳಲ್ಲಿ ಪ್ರತಿದಿನ "ಕುಶಲತೆ" ಎಷ್ಟು ವ್ಯಾಪಕವಾಗಿ ನಡೆಯುತ್ತಿದೆ ಎಂಬುದನ್ನು ಅವರು ಒತ್ತಿ ಹೇಳಿದರು. "ನೀವು ಒಂದು ಸುಳ್ಳನ್ನು ಲಕ್ಷಾಂತರ ಬಾರಿ ಹೇಳುತ್ತೀರಿ, ಮತ್ತು ಅಂತಯೇ ಕ್ರಮೇಣ ಅದು ಸತ್ಯವಾಗುತ್ತದೆ. ಸುಳ್ಳುಗಳು ಸತ್ಯಗಳು ಎಂದು ನೀವು ಜನರಿಗೆ ಮನವರಿಕೆ ಮಾಡಿದರೆ, ನೀವು ಅವುಗಳನ್ನು ನಿಯಂತ್ರಿಸುತ್ತೀರಿ" ಎಂದು ರೆಸ್ಸಾರವರು ಎಚ್ಚರಿಸಿದರು.

"ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಬೇಕು"
“ಯುದ್ಧದ ಅವಶೇಷಗಳಿಂದ ನಾವು ನಾಗರಿಕತೆಯನ್ನು ಹೇಗೆ ಉತ್ತೇಜಿಸಬಹುದು?” ಸಿಗ್ಮಂಡ್ ಫ್ರಾಯ್ಡ್ ರವರ ಮತ್ತು ಆಲ್ಬರ್ಟ್ ಐನ್‌ಸ್ಟೈನ್ ರವರ ನಡುವಿನ ಸಂಭಾಷಣೆಯನ್ನು ಉಲ್ಲೇಖಿಸುತ್ತಾ ಕಾಲಮ್ ಮೆಕ್ ಕ್ಯಾನ್ ರವರು ತಮ್ಮ ಚಿಂತನೆಯನ್ನು ಹೀಗೆ ಪ್ರಾರಂಭಿಸಿದರು.

ಜಾಗತಿಕ ಸಮುದಾಯವು "ಭಾವನೆಗಳ ಒಕ್ಕೂಟ" ಮತ್ತು "ಪ್ರವೃತ್ತಿಯ ವಿಧಾನ"ವನ್ನು ಹುಡುಕುವ ಅಗತ್ಯವನ್ನು ಮೆಕ್‌ಕ್ಯಾನ್ ರವರು ಒತ್ತಿ ಹೇಳಿದರು. ಕಥೆ ಹೇಳುವ ಉಪಕ್ರಮವಾದ ನಿರೂಪಣೆ 4 ರ ಸಹ-ಸಂಸ್ಥಾಪಕರಾಗಿ, ಕಥೆಗಳು "ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಅಂಟು" ಎಂದು ಅವರು ಒತ್ತಿ ಹೇಳಿದರು.

ಈ ಕಥೆಗಳು ಅಸಾಂಪ್ರದಾಯಿಕ ಹಿನ್ನೆಲೆಯ ಜನರಿಂದ ಬಂದಾಗ ಅವು ಇನ್ನೂ ಹೆಚ್ಚು ಅಮೂಲ್ಯವಾಗಿವೆ. ನಾವು ಈ ಕಥೆಗಳನ್ನು ನಿರ್ಲಕ್ಷಿಸಿದಾಗ, ನಮ್ಮನ್ನು ಸಂಪೂರ್ಣವಾಗಿ ನಾಶಮಾಡುವ ಸಾಮರ್ಥ್ಯವಿರುವ ನಮ್ಮ ಸಂಭವನೀಯ ಕತ್ತಲೆಯ ನಿರ್ಣಾಯಕ ಹಂತವನ್ನು ನಾವು ತಲುಪುತ್ತೇವೆ ಎಂದು ಮೆಕ್‌ಕ್ಯಾನ್ ರವರು ಎಚ್ಚರಿಸಿದ್ದಾರೆ. ಮನುಷ್ಯನು ತನ್ನ ನೆರೆಹೊರೆಯವರನ್ನು ಪ್ರೀತಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ, ಏಕೆಂದರೆ ಅವನು ಇನ್ನೊಬ್ಬನನ್ನು ತೊಡೆದುಹಾಕುವಷ್ಟು ಸ್ವಾರ್ಥಿಯಾಗುತ್ತಾನೆ.

ಮನುಷ್ಯನು ತನ್ನ ನೆರೆಯವರನ್ನು ಕಳೆದುಕೊಂಡಾಗ, ಅವನು ತನ್ನನ್ನು ತಾನು ಕಳೆದುಕೊಳ್ಳುತ್ತಾನೆ ಮತ್ತು ಇದರ ಪರಿಣಾಮವಾಗಿ ನಮ್ಮ "ಶತ್ರುಗಳೆಂದು ಭಾವಿಸಲಾದ" ಕಥೆಗಳ "ರದ್ದುಗೊಳಿಸುವಿಕೆ" ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದರು. ಇದನ್ನು ತಪ್ಪಿಸಲು, ಆಲ್ಬರ್ಟ್ ಐನ್‌ಸ್ಟೈನ್ ರವರ "ಜಾಗತಿಕ ಆಡಳಿತ" ದ ಒಂದು ರೂಪವನ್ನು ಕಲ್ಪಿಸಿಕೊಂಡಿದ್ದರು. ಈ ಕಲ್ಪನೆಯಿಂದ, "ವಿಶ್ವಸಂಸ್ಥೆಯಂತಹ ಸಂಸ್ಥೆಗಳು ಹುಟ್ಟಿಕೊಂಡವು." ಆದಾಗ್ಯೂ, ಅವುಗಳ ಭರವಸೆಯ ಮೂಲದ ಹೊರತಾಗಿಯೂ, "ನಾವು ನಿರೀಕ್ಷಿಸಿದಂತೆ ಅವು ಕೆಲಸ ಮಾಡಿಲ್ಲ."

ಬದಲಾವಣೆ ತನ್ನ ಮೂಲದಿಂದ ಪ್ರಾರಂಭವಾಗುತ್ತದೆ
ಬದಲಾವಣೆಗಳು ಮೂಲದಿಂದ ಪ್ರಾರಂಭಿಸಿವೆ, ಆದರೆ ನಿರ್ಧಾರಗಳು ಇನ್ನೂ ಮೇಲಿನಿಂದ ಬರುವುದರಿಂದ ಸಾಕಷ್ಟು ಬದಲಾಗಿಲ್ಲ," ಎಂದು ಮೆಕ್‌ಕ್ಯಾನ್ ರವರು ಗಮನಿಸಿದರು. ನಿಜವಾದ ಬದಲಾವಣೆ, "ಅಡಿಪಾಯ ಅಂದರೆ ಮೂಲದಿಂದ" ಪ್ರಾರಂಭವಾಗುತ್ತದೆ ಎಂದು ಅವರು ಹೇಳಿದರು.

ರೆಸ್ಸಾರವರು ಮತ್ತು ಮೆಕ್‌ಕ್ಯಾನ್ ಇಬ್ಬರ ಭರವಸೆ ಮತ್ತು ಚಿಂತನೆಯ ಮಾತುಗಳು ಮೆಸ್ಟ್ರೋ ಉಟೊ ಉಘಿರವರಷ್ಟೇ ಶಕ್ತಿಶಾಲಿ ಮತ್ತು ಸ್ಪೂರ್ತಿದಾಯಕ ಸಂಗೀತದೊಂದಿಗೆ ಹೆಣೆದುಕೊಂಡಿವೆ. ಸಮಕಾಲೀನ ಇಟಾಲಿಯದ ಪಿಟೀಲು ವಾದನದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಅವರ ಪ್ರದರ್ಶನವು ಸಂವಾದದ ಮುಕ್ತಾಯವನ್ನು ಗುರುತಿಸಿತು, ಇದು ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ಬಹುನಿರೀಕ್ಷಿತ ಸಭೆಗೆ ಕಾರಣವಾಯಿತು.
 

25 ಜನವರಿ 2025, 15:02