ಡಿಆರ್‌ಸಿಯಲ್ಲಿರುವ ಧರ್ಮಸಭೆಗಳು ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ಶಾಂತಿಗಾಗಿ ಮಾರ್ಗಸೂಚಿ
ಸ್ಟಾನಿಸ್ಲಾಸ್ ಕಂಬಾಶಿ, ಎಸ್‌ಜೆ ಮತ್ತು ಲಿಸಾ ಝೆಂಗಾರಿನಿ
ಪೂರ್ವ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC) ಮತ್ತು ವಿಶಾಲವಾದ ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ನಡೆಯುತ್ತಿರುವ ಅಭದ್ರತೆಯ ಮಧ್ಯೆ, ಕಾಂಗೋ ರಾಷ್ಟ್ರೀಯ ಧರ್ಮಾಧ್ಯಕ್ಷರ ಸಮ್ಮೇಳನ (CENCO) ಮತ್ತು ಕಾಂಗೋದ ಕ್ರೈಸ್ತ ಧರ್ಮಸಭೆಯನ್ನು(ಚರ್ಚ್ ಆಫ್ ಕ್ರೈಸ್ಟ್ ಇನ್ ಕಾಂಗೋ-ECC) ಪ್ರತಿನಿಧಿಸುವ ಕಾಂಗೋಲೀಸ್ ನ ಕಥೋಲಿಕರು ಮತ್ತು ಪ್ರೊಟೆಸ್ಟಂಟ್ ಧರ್ಮಸಭೆಗಳು - ಮೂರು ದಶಕಗಳಿಗೂ ಹೆಚ್ಚು ಕಾಲ ಈ ಪ್ರದೇಶವನ್ನು ಕಾಡುತ್ತಿರುವ, ನಿರಂತರವಾಗಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟು ಮತ್ತು ಸಂಘರ್ಷಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಹೊಸ ಮಹತ್ವಾಕಾಂಕ್ಷೆಯ ಶಾಂತಿ ಉಪಕ್ರಮವನ್ನು ಪ್ರಾರಂಭಿಸಲು ಪಡೆಗಳನ್ನು ಸೇರಿಕೊಂಡಿವೆ.
"ಡಿಆರ್‌ಸಿ ಮತ್ತು ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ಶಾಂತಿ ಮತ್ತು ಒಟ್ಟಿಗೆ ವಾಸಿಸುವ ಸಾಮಾಜಿಕ ಒಪ್ಪಂದ"
"ಡಿಆರ್‌ಸಿ ಮತ್ತು ಗ್ರೇಟ್ ಲೇಕ್ಸ್ ಪ್ರದೇಶದಲ್ಲಿ ಶಾಂತಿ ಮತ್ತು ಒಟ್ಟಿಗೆ ವಾಸಿಸುವ ಸಾಮಾಜಿಕ ಒಪ್ಪಂದ" ಎಂಬ ಶೀರ್ಷಿಕೆಯ ಈ ಶಾಂತಿ ಮಾರ್ಗಸೂಚಿಯು, ಹಿಂಸಾಚಾರವನ್ನು ಕೊನೆಗೊಳಿಸುವುದು ಮತ್ತು ಶಾಂತಿಯುತ ಸಹಬಾಳ್ವೆ ಮತ್ತು ಸಾಮಾಜಿಕ ಒಗ್ಗಟ್ಟನ್ನು ಬೆಳೆಸುವ ಹಂಚಿಕೆಯ ಗುರಿಯತ್ತ ನಾಗರಿಕರು, ಧಾರ್ಮಿಕ ಸಮುದಾಯಗಳು ಮತ್ತು ರಾಜಕೀಯ ನಾಯಕರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತದೆ.
ಈ ವಾರದ ಆರಂಭದಲ್ಲಿ ಕಿನ್ಶಾಸಾದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, CENCO ಮತ್ತು ECC ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೇ಼ಷ್ಠಗುರು ಡೊನಾಟಿಯನ್ ನ್ಶೋಲ್ ರವರು ಮತ್ತು ಪೂಜ್ಯರಾದ ಎರಿಕ್ ನ್ಸೆಂಗಾರವರು ಈ ಮಾರ್ಗಸೂಚಿಯನ್ನು ಮಂಡಿಸಿದರು.
ಶಾಶ್ವತ ಪ್ರಾದೇಶಿಕ ಸ್ಥಿರತೆಯನ್ನು ಸಾಧಿಸುವತ್ತ ಎಲ್ಲಾ ಪಕ್ಷಗಳ ಸಜ್ಜುಗೊಳಿಸುವಿಕೆಯನ್ನು ಉತ್ತೇಜಿಸಲು ವಿವಿಧ ಪಾಲುದಾರರಿಂದ ಬಂದ ಹಲವಾರು ಕರೆಗಳಿಗೆ ಪ್ರತಿಕ್ರಿಯೆಯಾಗಿ ಧರ್ಮಸಭೆಗಳು ಪ್ರಾರಂಭಿಸಿದ ದೀರ್ಘ ಪ್ರಕ್ರಿಯೆಯ ಫಲಿತಾಂಶವೇ ಈ ಒಪ್ಪಂದ ಎಂದು ಇಬ್ಬರು ಕ್ರೈಸ್ತ ಧರ್ಮದ ನಾಯಕರು ವಿವರಿಸಿದರು.
ದುಃಖ, ಸಾವು ಮತ್ತು ಸ್ಥಳಾಂತರದ ವಿಷವರ್ತುಲವನ್ನು ಕೊನೆಗೊಳಿಸುವುದು.
ದಶಕಗಳಿಂದ ಮಿಲಿಟಿಯಾ ಹಿಂಸಾಚಾರದಿಂದ ಬಳಲುತ್ತಿರುವ ಕಾಂಗೋಲೀಸ್ ನ ಪೂರ್ವ ಪ್ರಾಂತ್ಯಗಳಲ್ಲಿ ಅಭದ್ರತೆ ಮತ್ತು ಅಸ್ಥಿರತೆ, 2022 ರಲ್ಲಿ ರುವಾಂಡಾ ಬೆಂಬಲಿತ, ಮಾರ್ಚ್ 23ರ ಚಳುವಳಿ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಹೊಸ ಉತ್ತುಂಗಕ್ಕೇರಿತು.
ಸರ್ಕಾರಿ ಪಡೆಗಳು ಮತ್ತು ಸೇನಾಪಡೆಗಳ ನಡುವಿನ ಘರ್ಷಣೆಗಳು, ಈಗ ಇಸ್ಲಾಂ ಧರ್ಮದ ಗುಂಪುಗಳು, ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಲಿಂಗ ಆಧಾರಿತ ಹಿಂಸಾಚಾರದ ವಿನಾಶಕಾರಿ ಘಟನೆಗಳು ದೇಶದೊಳಗೆ 6 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಿವೆ ಮತ್ತು 1 ಮಿಲಿಯನ್ ಜನರು ಆಫ್ರಿಕಾದಾದ್ಯಂತ ಆಶ್ರಯ ಪಡೆಯುವಂತೆ ಒತ್ತಾಯಿಸಿವೆ. ಶಾಂತಿಯ ಮಾತುಕತೆಗಳು ಮತ್ತು ಕದನ ವಿರಾಮ ಒಪ್ಪಂದಗಳು ಸೇರಿದಂತೆ ಪರಿಸ್ಥಿತಿಯನ್ನು ಪರಿಹರಿಸಲು ರಾಜತಾಂತ್ರಿಕ ಪ್ರಯತ್ನಗಳು ಸ್ಥಳೀಯ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಸಂಕೀರ್ಣ ಜಾಲದಿಂದ ದುರ್ಬಲಗೊಂಡಿವೆ.
ದುಃಖ, ಸಾವು, ಅತ್ಯಾಚಾರ, ಬಲವಂತದ ಸ್ಥಳಾಂತರ ಮತ್ತು ವಿನಾಶದ ವಿಷವರ್ತುಲವನ್ನು ತಡೆಯಲು ಕಾಂಗೋಲೀಸ್ ನ ಧರ್ಮಸಭೆಗಳು "ಪಲಾವರ್ ಮರ" ಎಂದು ಕರೆಯಲ್ಪಡುವ ಅಡಿಯಲ್ಲಿ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸುವ ಉತ್ತಮವಾದ ಆಫ್ರಿಕಾದ ಪೂರ್ವಜರ ಸಂಪ್ರದಾಯಗಳನ್ನು ಪುನಃಸ್ಥಾಪಿಸಲು ಕರೆ ನೀಡುತ್ತವೆ. 2025 ರ ಜ್ಯೂಬಿಲಿ ವರ್ಷವನ್ನು "ಶಾಂತಿ ಮತ್ತು ಒಟ್ಟಿಗೆ ವಾಸಿಸುವ ವರ್ಷ" ಎಂದು ಘೋಷಿಸುತ್ತಾ, ಅವರು ಉಪ-ಪ್ರದೇಶದ ಸಮುದಾಯಗಳು ಮತ್ತು ರಾಜ್ಯಗಳನ್ನು, ವಿಶೇಷವಾಗಿ ಡಿಆರ್‌ಸಿ, ರುವಾಂಡಾ ಮತ್ತು ಬುರುಂಡಿಗಳನ್ನು, "ಶಾಂತಿಯುತ ಮತ್ತು ಏಕೀಕೃತ ಸಹಬಾಳ್ವೆ"ಯತ್ತ ಕೆಲಸ ಮಾಡಲು ಮತ್ತು "ಉತ್ತಮ ಗಡಿಯಾಚೆಗಿನ ನೆರೆಹೊರೆಯನ್ನು"ಅಭಿವೃದ್ಧಿಗೊಳಿಸಲು ಒತ್ತಾಯಿಸುತ್ತಾರೆ, ಇದರಿಂದಾಗಿ ಅವರ ನಾಗರಿಕರು ತಮ್ಮ "ಸ್ವಯಂ ನಿರ್ಣಯ" ವನ್ನು ಪ್ರತಿಪಾದಿಸಬಹುದು.
ಶಾಶ್ವತ ಶಾಂತಿಗಾಗಿ ಐದು ಪ್ರಮುಖ ತತ್ವಗಳು
ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ಸಾಮಾಜಿಕ-ರಾಜಕೀಯ ಸ್ಥಿರತೆಯನ್ನು ನಿರ್ಮಿಸಲು ಅಡಿಪಾಯವಾಗಿ ಐದು ಪ್ರಮುಖ ತತ್ವಗಳನ್ನು ಮಾರ್ಗಸೂಚಿ ಗುರುತಿಸುತ್ತದೆ: "ಆಫ್ರಿಕಾದ ಗುರುತಿನ ಆನ್ತೋಲಾಜಿಕಲ್ ಪೌಂಡೇಚನ್"ನ "ಬುಮುಂಟು"ನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಮರುಸ್ಥಾಪಿಸುವುದು; ಸಂವಾದ ಮತ್ತು ಒಮ್ಮತದ ಮೂಲಕ ಸಂಘರ್ಷಗಳನ್ನು ಪರಿಹರಿಸುವುದು, ಹಿಂಸಾಚಾರವನ್ನು ಆಶ್ರಯಿಸದೆ ಮೂಲ ಕಾರಣಗಳನ್ನು ಸಂಶೋಧಿಸಿ ಮೊದಲು ಅದನ್ನು ಪರಿಹರಿಸುವುದು; ಏಕೀಕೃತ ಮತ್ತು ಸ್ಥಿತಿಸ್ಥಾಪಕ ಆಫ್ರಿಕಾವನ್ನು ಬೆಳೆಸಲು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದು; ಸಶಸ್ತ್ರ ಸಂಘರ್ಷಗಳನ್ನು ನಿಲ್ಲಿಸಲು, ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯನ್ನು ತಡೆಯಲು ಆಫ್ರಿಕಾದ ರಾಜಕೀಯ ನಾಯಕರ ಮೇಲೆ ಪ್ರಭಾವ ಬೀರುವುದು; ನ್ಯಾಯ, ಶಾಂತಿ ಮತ್ತು ಪರಿಸರ ಸುಸ್ಥಿರತೆಯನ್ನು ಬೆಳೆಸಲು ಅಂತರರಾಷ್ಟ್ರೀಯ ಸಮುದಾಯವು ಈ ಪ್ರಯತ್ನಗಳನ್ನು ಪ್ರಾಮಾಣಿಕತೆಯಿಂದ ಬೆಂಬಲಿಸಲು ಪ್ರೋತ್ಸಾಹಿಸುವುದು.
ಶಾಂತಿ ಮತ್ತು ಸಾಮರಸ್ಯಕ್ಕಾಗಿ ಚಾರ್ಟರ್‌ನಲ್ಲಿ ಕೆಲಸ ಮಾಡುವುದು
ಕಾರ್ಯದ ಸಂಕೀರ್ಣತೆಯನ್ನು ಗುರುತಿಸಿ, ಕಾಂಗೋಲೀಸ್ ನ ಧರ್ಮಸಭೆಗಳು ಶಾಂತಿ ಮತ್ತು ಸಾಮಾಜಿಕ ಒಗ್ಗಟ್ಟಿನ ಕುರಿತು ವಿಷಯಾಧಾರಿತ ಆಯೋಗಗಳನ್ನು ಸ್ಥಾಪಿಸಲು ಯೋಜಿಸಿವೆ. ಈ ಆಯೋಗಗಳು ಉದ್ದೇಶಿಸಿರುವ ವಿಷಯಗಳನ್ನು ವಿವಿಧ ಕಾರ್ಯಾಗಾರಗಳಲ್ಲಿ ಚರ್ಚಿಸಲಾಗುವುದು ಮತ್ತು ಮುಂಬರುವ ತಿಂಗಳುಗಳಲ್ಲಿ ರಾಷ್ಟ್ರೀಯ ವೇದಿಕೆಯಲ್ಲಿ ಅಂಗೀಕರಿಸಲಾಗುವ ಶಾಂತಿ ಮತ್ತು ಸಾಮರಸ್ಯಕ್ಕಾಗಿ ರಾಷ್ಟ್ರೀಯ ಚಾರ್ಟರ್‌ನಲ್ಲಿ ಸೇರಿಸಬೇಕಾದ ಶಿಫಾರಸುಗಳು ಮತ್ತು ನಿರ್ಣಯಗಳಲ್ಲಿ ಅಂತ್ಯಗೊಳ್ಳುತ್ತವೆ.
ಎರಡೂ ಧರ್ಮಸಭೆಗಳು ತಮ್ಮ ಮನವಿಯನ್ನು "ಪ್ರವಾದಿ ಮತ್ತು ಪಾಲನೆ" ಎಂದು ವಿವರಿಸುತ್ತವೆ ಮತ್ತು ಸಾಮಾಜಿಕ ಒಪ್ಪಂದದ ಯಶಸ್ಸು ಹೆಚ್ಚಾಗಿ ಕಾಂಗೋಲೀಸ್ ಜನರ ಬೆಂಬಲದಲ್ಲಿದೆ ಎಂದು ಒತ್ತಿಹೇಳುತ್ತವೆ. ತಮ್ಮ ಪಾಲಿಗೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸಾಮಾಜಿಕ ರಾಜಕೀಯ ನಟರೊಂದಿಗೆ ವಕಾಲತ್ತು ವಹಿಸಲು ಮತ್ತು ತಮ್ಮ ಉಪಕ್ರಮವನ್ನು ವರ್ಧಿಸಲು ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅವರು ಪ್ರತಿಜ್ಞೆ ಮಾಡಿದ್ದಾರೆ.