MAP

 Gli studenti del istituto ecumenco di Bossey nel Dicastero per la Comunicazione (Charlotta Smeds) Gli studenti del istituto ecumenco di Bossey nel Dicastero per la Comunicazione (Charlotta Smeds) 

ಕ್ರೈಸ್ತರ ಐಕ್ಯತಾ ವಾರ: 'ಪರಮತ್ರಿತ್ವ ದೇವರಲ್ಲಿ ವಿಶ್ವಾಸದಿಂದ ಒಟ್ಟುಗೂಡಿಸಲ್ಪಟ್ಟ ವಿಶ್ವಾಸಿಗಳು'

ಕ್ರೈಸ್ತರ ಏಕತೆಗಾಗಿ ವಾರ್ಷಿಕ ಪ್ರಾರ್ಥನಾ ವಾರಕ್ಕಾಗಿ ರೋಮ್‌ಗೆ ಒಂದು ವಾರದ ಭೇಟಿಯ ಕುರಿತು ಜಿನೀವಾದ ಬೋಸಿ ಎಕ್ಯುಮೆನಿಕಲ್ ಇನ್‌ಸ್ಟಿಟ್ಯೂಟ್‌ನ (ಬೋಸಿ ಸಾರ್ವತ್ರಿಕ ಸಂಸ್ಥೆ) ಇಬ್ಬರು ವಿದ್ಯಾರ್ಥಿಗಳೊಂದಿಗೆ ವ್ಯಾಟಿಕನ್ ಸುದ್ಧಿ ಮಾತನಾಡುತ್ತದೆ.

ಜೋಸೆಫ್ ಟುಲ್ಲೊಚ್

ಪ್ರತಿ ಶರತ್ಕಾಲದಲ್ಲಿ, ವರ್ಲ್ಡ್ ಕೌನ್ಸಿಲ್ ಆಫ್ ಚರ್ಚ್‌ಗಳು (ವಿಶ್ವ ಧರ್ಮಸಭೆಯ ಸಮಿತಿ) ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿರುವ ತನ್ನ ಬೋಸಿ ಎಕ್ಯುಮೆನಿಕಲ್ ಇನ್‌ಸ್ಟಿಟ್ಯೂಟ್‌ಗೆ ಸುಮಾರು 40 ವಿದ್ಯಾರ್ಥಿಗಳ ಸಮೂಹವನ್ನು ಸ್ವಾಗತಿಸುತ್ತವೆ.

ರೋಮ್‌ಗೆ ಭೇಟಿ ನೀಡಿದ ತಮ್ಮ ವಾಸ್ತವ್ಯದ ಸಮಯದಲ್ಲಿ, ವಿದ್ಯಾರ್ಥಿಗಳು - ವಿಶ್ವದಾದ್ಯಂತ ಮತ್ತು ಅನೇಕ ವಿಭಿನ್ನ ಕ್ರೈಸ್ತ ಸಂಪ್ರದಾಯಗಳಿಂದ ಬಂದವರು - 18ನೇ ಶತಮಾನದ, ಸ್ವಿಸ್ ಚಾಟೊದಲ್ಲಿ ಒಟ್ಟಿಗೆ ವಾಸಿಸುತ್ತಾರೆ, ಪ್ರಾರ್ಥಿಸುತ್ತಾರೆ ಮತ್ತು ಅಧ್ಯಯನ ಮಾಡುತ್ತಾರೆ. ಬೋಸಿಯದಲ್ಲಿ ಅವರ ವಾಸ್ತವ್ಯವು ಸಾಮಾನ್ಯವಾಗಿ ಒಂದು ಶೈಕ್ಷಣಿಕ ಶಿಕ್ಷಣಾವಧಿವರೆಗೆ (ಸೆಮಿಸ್ಟರ್) ಇರುತ್ತದೆ ಮತ್ತು ಈ ಶಿಕ್ಷಣಾವಧಿಯು ಕ್ರೈಸ್ತರ ಏಕತೆಗಾಗಿ ಪ್ರಾರ್ಥನಾ ವಾರಕ್ಕಾಗಿ ರೋಮ್‌ಗೆ ಭೇಟಿ ನೀಡುವ ಕಾರ್ಯವನ್ನೂ ಸಹ ಒಳಗೊಂಡಿರುತ್ತದೆ.

ಈ ವರ್ಷದ ಸಮೂಹವು ರೋಮ್‌ಗೆ ಭೇಟಿ ನೀಡಿದಾಗ, ವ್ಯಾಟಿಕನ್ ಸುದ್ಧಿಯು ತನ್ನ ಇಬ್ಬರು ಸದಸ್ಯರೊಂದಿಗೆ ಮಾತನಾಡಲು ಅವಕಾಶವನ್ನು ಪಡೆದುಕೊಂಡಿತು - ಸ್ವಿಟ್ಜರ್‌ಲ್ಯಾಂಡ್‌ನ ಪ್ರೊಟೆಸ್ಟಂಟ್ ಧರ್ಮಸಭೆಯ ಟೋಬಿಯಾಸ್ ಆಡಮ್ ಮತ್ತು ಇಂಡೋನೇಷ್ಯಾದ ಬಟಕ್ ಕ್ರೈಸ್ತ ಪ್ರೊಟೆಸ್ಟಂಟ್ ಧರ್ಮಸಭೆಯ ಪೂಜ್ಯರಾದ ವೆರೋನಿಕಾ ಬ್ರಿಲಿಯಂಟ್ ರವರೊಂದಿಗೆ ಮಾತನಾಡಿದರು.

ರೋಮ್‌ನಲ್ಲಿ ಒಂದು ವಾರ
ಬೋಸ್ಸಿಯಿಂದ ಬಂದ 40 ಜನ ವಿದ್ಯಾರ್ಥಿಗಳು ಜನವರಿ 19ರ ಭಾನುವಾರ ರೋಮ್‌ಗೆ ಆಗಮಿಸಿದರು ಮತ್ತು 26 ರ ಭಾನುವಾರದವರೆಗೆ ಅಲ್ಲಿಯೇ ಇರುತ್ತಾರೆ.

ಆ ಸಮಯದಲ್ಲಿ, ಅವರು ಪ್ರಾರ್ಥನಾ ವಿಧಿಗಳಲ್ಲಿ ಭಾಗವಹಿಸುತ್ತಾರೆ, ವಿವಿಧ ವ್ಯಾಟಿಕನ್ ಡಿಕಾಸ್ಟ್ರೀಸ್‌ಗಳನ್ನು (ವ್ಯಾಟಿಕನ್‌ ಪೀಠದ ಅಧೀನ ಕಾರ್ಯದರ್ಶಿಗಳು) ಹಾಗೂ ರೋಮ್‌ನ ಕೆಲವು ಪ್ರಮುಖ ಧರ್ಮಸಭೆಗಳಿಗೆ ಭೇಟಿ ನೀಡುತ್ತಾರೆ ಮತ್ತು ನಗರದ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಸಹ ತಮ್ಮ ಸಮಯವನ್ನು ನಿಗದಿ ಪಡಿಸಿಕೊಳ್ಳುತ್ತಾರೆ.

ಬೋಸ್ಸಿಯಲ್ಲಿ ಅಧ್ಯಯನ ಮಾಡಿದ್ದ ವ್ಯಾಟಿಕನ್‌ನ ಡಿಕಾಸ್ಟರಿ ಫಾರ್ ಪ್ರಮೋಟಿಂಗ್ ಕ್ರಿಶ್ಚಿಯನ್ ಯೂನಿಟಿಯ ಅಧಿಕಾರಿಗಳನ್ನು ಭೇಟಿ ಮಾಡುವ ಅವಕಾಶವು "ರೋಮಾಂಚಕಾರಿ"ವಾದದ್ದು ಎಂದು ಪೂಜ್ಯರಾದ ಬ್ರಿಲಿಯಂಟ್ ರವರು ಹೇಳಿದರು.

"ಎರಡನೇ ವ್ಯಾಟಿಕನ್ ಸಮ್ಮೇಳನದ ನಂತರ ಸಾರ್ವತ್ರಿಕ/ಎಕ್ಯುಮೆನಿಕಲ್ ಚಳುವಳಿಯೊಂದಿಗೆ ರೋಮನ್ ಕಥೋಲಿಕ ನಿಶ್ಚಿಯತೆಗೆ ಡಿಕಾಸ್ಟರಿ ಆರಂಭಿಕ ಹಂತವಾಗಿತ್ತು" ಎಂದು ಅವರು ಹೇಳಿದರು.

"ಅಲಂಕಾರಿಕ ಹೆಸರುಗಳು ಮತ್ತು ವಿಶ್ವಗುರುಗಳ ಲಾಂಛನವನ್ನು ಹೊಂದಿರುವ ಆ ದೈತ್ಯ ಕಟ್ಟಡಗಳ ಒಳಗೆ ಹೋಗುವುದು ಆಕರ್ಷಮಯವಾಗಿತ್ತು" ಎಂದು ಆಡಮ್ ರವರು ಹೇಳುತ್ತಾರೆ.

"ಆ ಹೆಸರುಗಳನ್ನು ಹೊಂದಿರುವ ಜನರನ್ನು ಭೇಟಿಯಾಗುವುದು, ಅವರ ಕಥೆಗಳು, ಅವರ ವೈವಿಧ್ಯತೆ, ಅವರ ಹಿನ್ನೆಲೆಗಳನ್ನು ಕಂಡುಕೊಳ್ಳುವುದು ಮತ್ತು ಅವರನ್ನು ಕೇವಲ ಮನುಷ್ಯರಾಗಿ ಮಾತ್ರ ನೋಡುವುದಲ್ಲದೆ, ವಿಶ್ವಾಸಿಗಳಾಗಿಯೂ ಸಹ ನೋಡುವುದು ತುಂಬಾ ಆಸಕ್ತಿದಾಯಕವಾಗಿತ್ತು" ಎಂದು ಅವರು ಹೇಳಿದರು.

ಪ್ರಾರ್ಥನಾ ವಾರ
ಪ್ರತಿ ವರ್ಷ ಜನವರಿ 18ರಿಂದ 25ರವರೆಗೆ ಆಚರಿಸಲಾಗುವ ಕ್ರೈಸ್ತರ ಐಕ್ಯತೆಗಾಗಿ ಪ್ರಾರ್ಥನಾ ವಾರದ ಭಾಗವಾಗಿ ವಿದ್ಯಾರ್ಥಿಗಳು ರೋಮ್‌ನಲ್ಲಿದ್ದಾರೆ.

"ಇದು ಬಹಳ ಮುಖ್ಯವಾದ ವಾರ ಎಂದು ನಾನು ಭಾವಿಸುತ್ತೇನೆ" ಎಂದು ಆಡಮ್ ಹೇಳುತ್ತಾರೆ, "ಏಕತೆ ಎಂದರೇನು ಎಂಬುದರ ರುಚಿಯನ್ನು ಇದು ನಮಗೆ ನೀಡುತ್ತದೆ."

ಈ ಪ್ರಾರ್ಥನಾ ವಾರದಲ್ಲಿ ಭಾಗವಹಿಸುವವರು "ಒಟ್ಟಿಗೆ ಪ್ರಾರ್ಥಿಸುತ್ತಾರೆ, ನಮ್ಮ ದೇವರ ಮುಂದೆ ಒಟ್ಟಿಗೆ ನಿಲ್ಲುತ್ತಾರೆ ಮತ್ತು ಪರಸ್ಪರರ ಸಂಪ್ರದಾಯಗಳನ್ನು ತಿಳಿದುಕೊಳ್ಳುತ್ತಾರೆ" ಎಂದು ಅವರು ಹೇಳಿದರು. ಆ ಪ್ರಾರ್ಥನೆಯು ಬಹು ಅರ್ಥಭರಿತವಾಗಿದ್ದು, ಜ್ಞಾರ್ನಾಜನೆಗೆ ಸುಂದರವಾದ ಪ್ರಾರ್ಥನೆಯಾಗಿದೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅದು ದೈವಶಾಸ್ತ್ರದ ವ್ಯತ್ಯಾಸಗಳು ಅಥವಾ ನಮ್ಮನ್ನು ದೇವರಿಂದ ಬೇರ್ಪಡಿಸುವುದು ಯಾವುದು ಎಂಬುದರ ಬಗ್ಗೆ ಮಾತ್ರವಲ್ಲ, ನಮ್ಮನ್ನು ದೇವರೊಂದಿಗೆ ಒಂದುಗೂಡಿಸುವ ವಿಷಯವೂ ಸಹ ಅದರಲ್ಲಿ ಅಡಗಿದೆ - ಮತ್ತು ಅದು ನಮ್ಮ ಪರಮತ್ರಿತ್ವರ ತ್ರಯೇಕ ದೇವರಲ್ಲಿ ನಾವಿಟ್ಟಿರುವ ವಿಶ್ವಾಸವಾಗಿದೆ.

"ನಾನು ವಿಶ್ವಗುರು ದ್ವಿತೀಯ ಜಾನ್ ಪಾಲ್ ರವರ ನಿಗೂಢವಾದ ಉಟ್ ಉನಮ್ ಸಿಂಟ್ (ಎಲ್ಲರೂ ಒಂದಾಗಿರಬಹುದು) ಬಗ್ಗೆ ಯೋಚಿಸುತ್ತಿದ್ದೆ" ಎಂದು ಪೂಜ್ಯರಾದ ಬ್ರಿಲಿಯಂಟ್ ರವರು ಹೇಳುತ್ತಾರೆ.

"ನಮಗೆ ನಮ್ಮದೇ ಆದ ಸಂಪ್ರದಾಯವಿದೆ, ನಮಗೆ ವಿಭಿನ್ನ ಹಿನ್ನೆಲೆಗಳಿವೆ, ಆದರೆ ಕೊನೆಯಲ್ಲಿ ನಾವೆಲ್ಲಾ ಒಂದೇ ದೇಹವಾಗಿ ಒಟ್ಟಿಗೆ ನಿಲ್ಲುತ್ತೇವೆ – ಕ್ರಿಸ್ತರೇ ಅದರ ಮುಖ್ಯಸ್ಥರಾಗಿದ್ದಾರೆ."

21 ಜನವರಿ 2025, 13:28