MAP

cardinal Louis Raphael I Sako of Iraq cardinal Louis Raphael I Sako of Iraq  

ಕಾರ್ಡಿನಲ್ ಸಾಕೊ: 'ಒಟ್ಟಿಗೆ ಕೆಲಸ ಮಾಡುವುದು ಏಕತೆಯ ಸಂಕೇತವಾಗಿದೆ'

ಕ್ರೈಸ್ತರ ಏಕತೆಗಾಗಿ ಪ್ರಾರ್ಥನಾ ವಾರದ ಸಂದೇಶದಲ್ಲಿ, ಇರಾಕ್‌ನ ಚಾಲ್ಡಿಯನ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರು ಕ್ರೈಸ್ತರಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಏಕತೆಯನ್ನು ಎತ್ತಿ ತೋರಿಸುತ್ತಾರೆ, ಶಾಂತಿ, ನ್ಯಾಯ ಮತ್ತು ಮಾನವ ಹಕ್ಕುಗಳ ವಿಷಯಗಳು ಸೇರಿದಂತೆ ನಿಕಟ ಸಹಯೋಗಕ್ಕಾಗಿ ಕರೆ ನೀಡುತ್ತಾರೆ.

ಲಿಸಾ ಝೆಂಗಾರಿನಿ

ಜನವರಿ 18 ರಿಂದ 25 ರವರೆಗೆ ಕ್ರೈಸ್ತರ ಏಕತೆಗಾಗಿ ವಾರ್ಷಿಕ ಪ್ರಾರ್ಥನಾ ವಾರವನ್ನು ಆಚರಿಸಲು ವಿಶ್ವದಾದ್ಯಂತದ ಧರ್ಮಸಭೆಗಳು ಒಟ್ಟುಗೂಡುತ್ತಿರುವಾಗ, ಪಿತೃಪ್ರಧಾನ ಲೂಯಿಸ್ ರಾಫೆಲ್ ಸಾಕೊರವರು, ಐಕ್ಯತೆ ಎಂದರೆ ಧರ್ಮಸಭೆಗಳನ್ನು ಒಂದೇ ಘಟಕವಾಗಿ ವಿಲೀನಗೊಳಿಸುವುದಲ್ಲ, ಬದಲಿಗೆ ವಿವಿಧ ವೈವಿಧ್ಯತೆಯನ್ನು ಸ್ವೀಕರಿಸುವುದು ಮತ್ತು ಅದರ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಟ್ಟಿಗೆ ಕೆಲಸ ಮಾಡುವುದು ಎಂದು ಭಕ್ತವಿಶ್ವಾಸಿಗಳಿಗೆ ನೆನಪಿಸಿದ್ದಾರೆ. ಏಕತೆಯು ವಿಶ್ವಾಸದ ಹಂಚಿಕೆಯಲ್ಲಿ ಮತ್ತು ಪರಸ್ಪರ ಗೌರವದಲ್ಲಿ ಬೇರೂರಿರುವ ಆಧ್ಯಾತ್ಮಿಕ ಹಾಗೂ ಪ್ರಾಯೋಗಿಕ ಪ್ರಯತ್ನವಾಗಿದೆ ಎಂದು ಇರಾಕ್‌ನ ಚಾಲ್ಡಿಯನ್ ಕಥೋಲಿಕ ಧರ್ಮಸಭೆಯ ಮುಖ್ಯಸ್ಥರು ಪಾಲನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈವಿಧ್ಯತೆಯ ಶ್ರೀಮಂತಿಕೆ
ಈ ಸಂದೇಶವು‌ ಧರ್ಮಸಭೆಗಳ ಆಡಳಿತಾತ್ಮಕ ಅಥವಾ ರಚನಾತ್ಮಕ ವಿಲೀನವಾಗಿ ಏಕತೆಯ ಕಲ್ಪನೆಯನ್ನು ತಳ್ಳಿಹಾಕುತ್ತದೆ. ಪ್ರತಿಯೊಂದು ಧರ್ಮಸಭೆಗೆ ತನ್ನದೇ ಆದ ವಿಶಿಷ್ಟವಾದ ಇತಿಹಾಸ, ಸಂಪ್ರದಾಯಗಳು ಮತ್ತು ಆಡಳಿತವಿದ್ದು ಅದನ್ನು ಸಂರಕ್ಷಿಸಬೇಕಾಗಿದೆ. ಕಾರ್ಡಿನಲ್ ಸಾಕೊರವರು ವೈವಿಧ್ಯತೆಯನ್ನು ವಿಭಜನೆಯ ಮೂಲಕ್ಕಿಂತ ಶ್ರೀಮಂತಿಕೆಯ ಒಂದು ರೂಪವಾಗಿ ಆಚರಿಸಲು ಕರೆ ನೀಡುತ್ತಾರೆ. ಕ್ರೈಸ್ತ ಧರ್ಮದ ಸಂಪ್ರದಾಯಗಳ ನಡುವಿನ ನಿಕಟ ಸಂಬಂಧಗಳಿಗೆ, ಮಾರ್ಗವಾಗಿ ಸಂವಾದ ಮತ್ತು ಹಂಚಿಕೆಯ ದೃಷ್ಟಿಕೋನವನ್ನು ಅವರು ಪ್ರತಿಪಾದಿಸುತ್ತಾರೆ.

ಸಾಮಾನ್ಯ ವಿಶ್ವಾಸ
ವಿಶ್ವಗುರು ದ್ವಿತೀಯ ಸಂತ ಜಾನ್ ಪಾಲ್ ರವರು ವಿವರಿಸಿದಂತೆ, ಕ್ರೈಸ್ತ ಧರ್ಮದ "ಎರಡು ಶ್ವಾಸಕೋಶಗಳು" ಎಂದು ಕರೆಯಲ್ಪಡುವ ಕಥೋಲಿಕ ಮತ್ತು ಸನಾತನ (ಆರ್ಥೊಡಾಕ್ಸ್) ಸಂಪ್ರದಾಯಗಳ ನಡುವೆ, ಕ್ರೈಸ್ತ ಧರ್ಮಸಭೆಗಳಲ್ಲಿ ಈಗಾಗಲೇ ಇರುವ ಏಕತೆಯ ಹಲವಾರು ಮೂಲಭೂತ ಅಂಶಗಳನ್ನು ಚಾಲ್ಡಿಯನ್ ಪಿತೃಪ್ರಧಾನರು ಎತ್ತಿ ತೋರಿಸುತ್ತಾರೆ. ನೈಸಿಯಾ (325) ಮತ್ತು ಕಾನ್ಸ್ಟಾಂಟಿನೋಪಲ್ (381) ಪರಿಷತ್ತುಗಳು ಸ್ಥಾಪಿಸಿದ ವಿಶ್ವಾಸ ಪ್ರಮಾಣವನ್ನು, ಪ್ರೇಷಿತ ಉತ್ತರಾಧಿಕಾರ ಮತ್ತು ಏಳು ಸಂಸ್ಕಾರಗಳ ಆಚರಣೆಯನ್ನು ಎರಡೂ ಧರ್ಮಸಭೆಗಳು ಹಂಚಿಕೊಳ್ಳುತ್ತವೆ ಎಂದು ಕಾರ್ಡಿನಲ್ ಸಾಕೊರವರು ನೆನಪಿಸಿಕೊಂಡರು.

ಬಾಗ್ದಾದ್‌ನ ಕುಲಸಚಿವರು ಪ್ರೊಟೆಸ್ಟಂಟ್ ಧರ್ಮಸಭೆಗಳ ಕೊಡುಗೆಗಳನ್ನು ಸಹ ಗುರುತಿಸಿದರು, ಈ ಸಂಪ್ರದಾಯಗಳಲ್ಲಿನ ವಿಘಟನೆಯ ಹೊರತಾಗಿಯೂ, ಇದು 20ನೇ ಶತಮಾನದ ಆರಂಭದಲ್ಲಿ ಕ್ರೈಸ್ತ ಧರ್ಮದ ಏಕತೆಗಾಗಿ ಪ್ರಾರ್ಥನಾ ವಾರವನ್ನು ಪ್ರಾರಂಭಿಸಿತು.

ಕಾರ್ಡಿನಲ್ ಸಾಕೊರವರು, ಐಸಿಸ್‌ನಿಂದ ಕೊಲ್ಲಲ್ಪಟ್ಟ 2015ರ ಕಾಪ್ಟಿಕ್ ರಕ್ತಸಾಕ್ಷಿಯ ಹಬ್ಬದ ದಿನವನ್ನು ಕಥೋಲಿಕ ಪೂಜಾ ವಿಧಿಯ ಪಂಚಾಂಗದಲ್ಲಿ ಪರಿಚಯ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ಇತ್ತೀಚಿನ ನಿರ್ಧಾರವನ್ನು ರೋಮ್‌ ನ ರಕ್ತಸಾಕ್ಷಿಗಳ ಪಟ್ಟಿಯಲ್ಲಿ ಪೂರ್ವದ ಧರ್ಮಸಭೆಯ ನಿನೆವೆಯ ಸಂತ ಐಸಾಕ್ ರವರನ್ನು ಸೇರಿಸುವ ಬಗ್ಗೆ ಉಲ್ಲೇಖಿಸಿದರು. ಇಂತಹ ಚಿಹ್ನೆಗಳು ಪವಿತ್ರತೆ ಮತ್ತು ಆಧ್ಯಾತ್ಮಿಕ ಹಂಚಿಕೆಯ ಪರಂಪರೆಯ ಹೆಚ್ಚುತ್ತಿರುವ ಸ್ವೀಕಾರವನ್ನು ಸಂಕೇತಿಸುತ್ತವೆ.

ಪ್ರಾಯೋಗಿಕ ಸಹಕಾರ
ಸಂದೇಶವು ಸಹಕಾರದ ಮೂಲಕ ಏಕತೆಯ ಪ್ರಾಯೋಗಿಕ ಅಭಿವ್ಯಕ್ತಿಯ ಮೇಲೆ ಕೇಂದ್ರೀಕರಿಸುತ್ತದೆ. ಬೈಬಲ್, ದೈವಶಾಸ್ತ್ರ, ದೈವಾರಾಧನಾ ವಿಧಿ ಮತ್ತು ಧರ್ಮೋಪದೇಶ, ಕುರಿತು ವೈಜ್ಞಾನಿಕ ಸಂಶೋಧನೆಗಾಗಿ ಜಂಟಿ ಆಯೋಗಗಳ ರಚನೆ; ಸಾಮಾನ್ಯ ಆಸಕ್ತಿಯ ವಿಷಯಗಳ ಕುರಿತು ಜಂಟಿ ವಿಚಾರ ಸಂಕಿರಣಗಳನ್ನು ಆಯೋಜಿಸುವುದು; ಆಧ್ಯಾತ್ಮಿಕ ಅನುಭವಗಳ ವಿನಿಮಯ; ನೈತಿಕ ವಿಷಯಗಳ ಕುರಿತು ಒಟ್ಟಾಗಿ ಕೆಲಸ ಮಾಡುವುದು ಮತ್ತು ಒಂದೇ ಧ್ವನಿಯಲ್ಲಿ ಮಾತನಾಡುವ ವಿಶ್ವಾಸವುಳ್ಳ ಹೊಸ ಪೀಳಿಗೆಯ ಧರ್ಮಗುರುಗಳನ್ನು ಸಿದ್ಧಪಡಿಸುವುದು ಸೇರಿದಂತೆ ಹಲವಾರು ರೀತಿಯ ಸಹಯೋಗವನ್ನು ಇದು ಸೂಚಿಸುತ್ತದೆ. ಇದರ ಜೊತೆಗೆ, ಬಡತನ, ಅನ್ಯಾಯ, ಭ್ರಷ್ಟಾಚಾರ, ಪರಿಸರ ಅವನತಿಯ ಸಾಮಾಜಿಕ ದುಷ್ಪರಿಣಾಮಗಳು, ಯುದ್ಧದ ವಿರುದ್ಧ ಹೋರಾಡುವಲ್ಲಿ ಮತ್ತು ಮರುಸಜ್ಜುಗೊಳಿಸುವಿಕೆ ಹಾಗೂ ಉಗ್ರವಾದವನ್ನು ವಿರೋಧಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕಾರ್ಡಿನಲ್ ಸಾಕೊರವರು ಧರ್ಮಸಭೆಗಳನ್ನು ಒತ್ತಾಯಿಸುತ್ತಾರೆ.

ಪಿತೃಪ್ರಧಾನ ಸಾಕೊರವರ ಪ್ರಕಾರ, ಈ ಸಹಕಾರವು "ಸಾಮಾಜಿಕ ಒಗ್ಗಟ್ಟು ಮತ್ತು ಶಾಂತಿಯನ್ನು ಬಲಪಡಿಸುತ್ತದೆ", ಕ್ರಿಸ್ತರ ಧ್ಯೇಯಕ್ಕೆ ಅನುಗುಣವಾಗಿ "ಧರ್ಮಸಭೆ ಮತ್ತು ಕ್ರೈಸ್ತರು ಅಯಾ ಸಂದರ್ಭಗಳಲ್ಲಿ ಕಾರ್ಯಗತಗೊಳಿಸಬೇಕು."

ಸಿರಿಯಾದಲ್ಲಿನ ಧರ್ಮಸಭೆಗಳ ಉದಾಹರಣೆ
ಕ್ರೈಸ್ತ ಧರ್ಮದ ಸಹಕಾರದ ಉದಾಹರಣೆಯಾಗಿ ಕಾರ್ಡಿನಲ್ ಸಾಕೊರವರು ಸಿರಿಯಾವನ್ನು ಉಲ್ಲೇಖಿಸಿದರು, ಅಲ್ಲಿ ಬಶರ್ ಅಸ್ಸಾದ್ ರವರ ಪತನದ ನಂತರ ಧರ್ಮಸಭೆಗಳು ಪೌರತ್ವವನ್ನು ಆಧರಿಸಿದ ಹೊಸ ನಾಗರಿಕ ವ್ಯವಸ್ಥೆಗೆ ಕರೆ ನೀಡುವ ತಮ್ಮ ಧ್ವನಿಗಳನ್ನು ಎತ್ತಿವೆ, ಅದು ಎಲ್ಲಾ ನಾಗರಿಕರ ಹಕ್ಕುಗಳು, ಘನತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. "ಇದು" ಕಾರ್ಡಿನಲ್ ಸಾಕೊರವರ ಪ್ರಕಾರ "ಧರ್ಮಸಭೆಗಳು ಏಕತೆ ಮತ್ತು ಭರವಸೆಗೆ ಸಾಕ್ಷಿಯಾಗುವುದು ಹೀಗೆ" ಎಂದು ತೀರ್ಮಾನಿಸಿದರು.
 

21 ಜನವರಿ 2025, 13:47