ಕಾರ್ಡಿನಲ್ ಫಿಲಿಪ್ ನೇರಿ ಫೆರೋರವರು FABCನ ಹೊಸ ಅಧ್ಯಕ್ಷರು
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಭಾರತೀಯ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷ ಮತ್ತು ಗೋವಾದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫಿಲಿಪ್ ನೆರಿ ಫೆರೋರವರು 1 ಜನವರಿ 2025 ರಂದು ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ (ಫೆಡರೇಶನ್ ಆಫ್ ಏಷ್ಯನ್ಸ್ ಬಿಷಪ್‌ಗಳ ಸಮ್ಮೇಳನಗಳ FABC) ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಅವರು ಎರಡು ಬಾರಿ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕಾರ್ಡಿನಲ್ ಚಾರ್ಲ್ಸ್ ಮುವಾಂಗ್ ಬೊ, SDB, ಮ್ಯಾನ್ಮಾರ್‌ನ ಧರ್ಮಾಧ್ಯಕ್ಷೀಯ ಸಮ್ಮೇಳನದ ಅಧ್ಯಕ್ಷ ಮತ್ತು ಯಾಂಗೋನ್‌ನ ಮಹಾಧರ್ಮಾಧ್ಯಕ್ಷರವರ ಉತ್ತರಾಧಿಕಾರಿಯಾದರು.
ಹೊಸ ನಾಯಕತ್ವ
22 ಫೆಬ್ರವರಿ 2024 ರಂದು ಬ್ಯಾಂಕಾಕ್‌ನಲ್ಲಿ ನಡೆದ ಕೊನೆಯ ಕೇಂದ್ರ ಸಮಿತಿ ಸಭೆಯಲ್ಲಿ ಕಾರ್ಡಿನಲ್ ಫೆರೋರವರು ಹೊಸ FABC ಅಧ್ಯಕ್ಷರಾಗಿ ಆಯ್ಕೆಯಾದರು.
ಫಿಲಿಪೈನ್ಸ್‌ನ ಕಲ್ಲೋಕನ್‌ನ ಕಾರ್ಡಿನಲ್ ಪಾಬ್ಲೊ ವರ್ಜಿಲಿಯೊ ಡೇವಿಡ್ ರವರು ಈಗ FABC ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರೆ, ಟೋಕಿಯೊದ ಕಾರ್ಡಿನಲ್ ಟಾರ್ಸಿಸಿಯೊ ಕಿಕುಚಿ ಮತ್ತೆ FABC ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟ (FABC)
ದಕ್ಷಿಣ, ಆಗ್ನೇಯ, ಪೂರ್ವ ಮತ್ತು ಮಧ್ಯ ಏಷ್ಯಾದ ಧರ್ಮಾಧ್ಯಕ್ಷರುಗಳನ್ನು ಒಳಗೊಂಡಿರುವ ಒಕ್ಕೂಟ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್, ವಿಯೆಟ್ನಾಂ, ಲಾವೋಸ್ ಮತ್ತು ಕಾಂಬೋಡಿಯಾ, ಮಲೇಷ್ಯಾ-ಸಿಂಗಾಪುರ್-ಬ್ರೂನಿ, ಇಂಡೋನೇಷಿಯಾ, ಟಿಮೋರ್ ಲೆಸ್ಟೆ, ಫಿಲಿಪೈನ್ಸ್, ಕೊರಿಯಾ, ಜಪಾನ್, ಹಾಗೆಯೇ ಮಧ್ಯ ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನ ಮತ್ತು ಚೀನದ ಪ್ರಾದೇಶಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನ ಸೇರಿದಂತೆ 15 ಏಷ್ಯದ ಕಥೊಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಸದಸ್ಯರನ್ನು ಒಟ್ಟುಗೂಡಿಸುತ್ತದೆ.
ಇದರ ಜೊತೆಗೆ, ಮಕಾವು, ಹಾಂಗ್ ಕಾಂಗ್, ಮಂಗೋಲಿಯಾ, ನೇಪಾಳ ಮತ್ತು ನೊವೊಸಿಬಿರ್ಸ್ಕ್‌ಧರ್ಮಾಧ್ಯಕ್ಷರುಗಳಂತಹ 'ಸಹ ಸದಸ್ಯರೂ' ಸಹ ಇದ್ದಾರೆ.
ಒಕ್ಕೂಟವು ಭಾರತದ ಎಲ್ಲಾ ಧರ್ಮಾಧ್ಯಕ್ಷರುಗಳನ್ನು ಒಳಗೊಂಡಿದೆ, ಒಟ್ಟು 277 ಸಂಖ್ಯೆಗಳುಳ್ಳ, ಲತೀನ್, ಸಿರೋ-ಮಲಬಾರ್ ಮತ್ತು ಸಿರೋ-ಮಲಂಕಾರ ಧರ್ಮಸಭೆಗಳೂ ಸಹ ಈ ಒಕ್ಕೂಟದಲ್ಲಿ ಸೇರಿದೆ.