MAP

FILE PHOTO: Migrants are transferred to a plane to be expelled from U.S., in El Paso

ಕಾರ್ಡಿನಲ್ ಕ್ಯುಪಿಚ್: ಯಾವುದೇ ವಲಸಿಗರ ಸಾಮೂಹಿಕ ಗಡೀಪಾರು ಯೋಜನೆಯನ್ನು ನಾವು ವಿರೋಧಿಸುತ್ತೇವೆ

ಚಿಕಾಗೋ ಪ್ರದೇಶದಲ್ಲಿ ದಾಖಲೆರಹಿತ ಜನರನ್ನು ಗುರಿಯಾಗಿಸಿಕೊಂಡು ಸಂಭಾವ್ಯ ಯೋಜಿತ ಸಾಮೂಹಿಕ ಗಡೀಪಾರುಗಳ ವರದಿಗಳನ್ನು ಕಾರ್ಡಿನಲ್ ಕ್ಯುಪಿಚ್ ರವರು ಉಲ್ಲೇಖಿಸುತ್ತಾರೆ, ವಲಸಿಗರು ಮತ್ತು ಆಶ್ರಯ ಪಡೆಯುವವರ ಮಾನವ ಘನತೆ, ನ್ಯಾಯ ಮತ್ತು ಹಕ್ಕುಗಳಿಗೆ ಕಥೋಲಿಕ ಧರ್ಮಸಭೆಯ ಬದ್ಧತೆಯನ್ನು ಪುನರುಚ್ಚರಿಸುತ್ತಾರೆ.

ಲಿಂಡಾ ಬೋರ್ಡೋನಿ
ಚಿಕಾಗೋ ಪ್ರದೇಶವನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಗಡೀಪಾರು ಮಾಡುವ ಅಮೇರಿಕದ ಹೊಸ ಆಡಳಿತದ ವರದಿಯಾದ ಯೋಜನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಚಿಕಾಗೋದ ಕಾರ್ಡಿನಲ್ ಬ್ಲೇಸ್ ಕ್ಯುಪಿಚ್ ರವರು, ಅಂತಹ ಕ್ರಮವನ್ನು ಕೈಗೊಂಡರೆ "ತೀವ್ರವಾಗಿ ತೊಂದರೆಗೊಳಗಾಗುವುದಲ್ಲದೆ, ನಮ್ಮನ್ನು ಆಳವಾಗಿ ಗಾಯಗೊಳಿಸುತ್ತದೆ" ಎಂದು ದೃಢಪಡಿಸಿದರು.

"ವಲಸಿಗರು ಮತ್ತು ಆಶ್ರಯ ಪಡೆಯುವವರ ಹಕ್ಕುಗಳ ರಕ್ಷಣೆಗಾಗಿ ಮಾತನಾಡುವಲ್ಲಿ ಕಥೋಲಿಕ ಸಮುದಾಯವು ಚಿಕಾಗೋದ ಜನರೊಂದಿಗೆ ನಿಂತಿದೆ. ಅದೇ ರೀತಿ, ವರದಿಗಳು ನಿಜವಾಗಿದ್ದರೆ, ದಾಖಲೆರಹಿತ ಪೋಷಕರಿಂದ ಜನಿಸಿದ ಅಮೆರಿಕದ ನಾಗರಿಕರ ಸಾಮೂಹಿಕ ಗಡೀಪಾರು ಮಾಡುವಿಕೆಯನ್ನು ಒಳಗೊಂಡಿರುವ ಯಾವುದೇ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿದಿರಬೇಕು," ಎಂದು ಅವರು ಹೇಳಿದರು.

ಮೆಕ್ಸಿಕೋ ನಗರದಲ್ಲಿ ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅವರು ತೀರ್ಥಯಾತ್ರೆ ಕೈಗೊಳ್ಳುತ್ತಿದ್ದು, ಕಾರ್ಡಿನಲ್ ರವರು ಹೊಸ ಸರ್ಕಾರ ಆಡಳಿತವು ಸಾಮಾನ್ಯ ಒಳಿತನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಆದಾಗ್ಯೂ, ಈ ಪ್ರದೇಶವನ್ನು ಗುರಿಯಾಗಿಸಿಕೊಂಡು ಸಂಭಾವ್ಯ ಸಾಮೂಹಿಕ ಗಡೀಪಾರುಗಳ ಬಗ್ಗೆ ಪ್ರಸಾರವಾಗುತ್ತಿರುವ ವರದಿಗಳನ್ನು ಅವರು ಖಂಡಿಸಿದರು ಮತ್ತು ಅಂತಹ ಕ್ರಮಗಳು ನಗರದ ವಲಸೆ ಪರಂಪರೆಗೆ ದ್ರೋಹ ಬಗೆಯುತ್ತವೆ ಎಂದು ಹೇಳಿದರು.

ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಅಕ್ರಮ ವಲಸೆಯ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳುವುದಾಗಿ ಪ್ರತಿಜ್ಞೆ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಅಧಿಕಾರ ಸ್ವೀಕಾರ ಸಮಾರಂಭದ ಮುನ್ನಾ-ದಿನದಂದು ಕಾರ್ಡಿನಲ್ ಕ್ಯುಪಿಚ್ ರವರ ಹೇಳಿಕೆ ಬಂದಿದೆ.

ಚಿಕಾಗೋವನ್ನು ಫೆಡರಲ್ ವಲಸೆ ಅಧಿಕಾರಿಗಳೊಂದಿಗೆ ಸಹಕಾರವನ್ನು ಸೀಮಿತಗೊಳಿಸುವ "ಪವಿತ್ರ ಸ್ಥಳ" ನ್ಯಾಯವ್ಯಾಪ್ತಿ ಎಂದು ಪರಿಗಣಿಸಲಾಗಿದೆ.

ಅಮೆರಿಕದ ಹೆಚ್ಚಿನ ಭಾಗದಂತೆ ಚಿಕಾಗೋ ಕೂಡ ತನ್ನ ಚೈತನ್ಯ ಮತ್ತು ವೈವಿಧ್ಯತೆಗೆ ವಲಸಿಗರ ತಲೆಮಾರುಗಳೇ ಕಾರಣ ಎಂದು ಕಾರ್ಡಿನಲ್ ರವರು ಗಮನಸೆಳೆದರು. "ಚಿಕಾಗೋದಲ್ಲಿ ಸ್ಥಳೀಯ ಜನರನ್ನು ಹೊರತುಪಡಿಸಿ, ಈ ಪರಂಪರೆಯಿಂದ ಪ್ರಯೋಜನ ಪಡೆಯದವರು ಬೇರೆ ಯಾರೂ ಇಲ್ಲ" ಎಂದು ಅವರು ಗಮನಿಸಿದರು.

ಆತ್ಮಸಾಕ್ಷಿ ಮತ್ತು ಕ್ರಮಕ್ಕೆ ಕರೆ
ಕಾರ್ಡಿನಲ್ ಕ್ಯುಪಿಚ್ ರವರು ಕಾನೂನುಬದ್ಧ ವಲಸೆ ಜಾರಿಯನ್ನು ಮಾನವ ಘನತೆ ಮತ್ತು ಹಕ್ಕುಗಳ ರಕ್ಷಣೆಯೊಂದಿಗೆ ಸಮತೋಲನಗೊಳಿಸುವ ಮಹತ್ವವನ್ನು ಎತ್ತಿ ತೋರಿಸಿದರು, "ನಮ್ಮ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ರಕ್ಷಿಸಲು ಕಾನೂನು ಜಾರಿ ಮಾಡುವ ಕಾನೂನುಬದ್ಧ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ - ವಲಸಿಗರು ಅಥವಾ ದೀರ್ಘಕಾಲದ ಅಲ್ಲಿನ ನಿವಾಸಿಗಳು ಅಥವಾ ನಾಗರಿಕರು ಎಸಗುವ ಅಪರಾಧವನ್ನು ಸಹಿಸಲಾಗುವುದಿಲ್ಲ" ಎಂದು ಹೇಳಿದರು.

ಆದಾಗ್ಯೂ, "ಇಲಿನಾಯ್ಸ್‌ನಲ್ಲಿ ವಲಸಿಗರ ಹಕ್ಕುಗಳನ್ನು ರಕ್ಷಿಸಲು ಸ್ಥಳೀಯ ಮತ್ತು ರಾಜ್ಯ ಶಾಸನವನ್ನು ಧರ್ಮಸಭೆಯು ಬಲವಾಗಿ ಬೆಂಬಲಿಸುತ್ತದೆ" ಎಂದು ಅವರು ಒತ್ತಿ ಹೇಳಿದರು.

ಅಮೆರಿಕದಲ್ಲಿ ದಾಖಲೆರಹಿತ ಪೋಷಕರಿಗೆ ಜನಿಸಿದ ಮಕ್ಕಳನ್ನು ಗಡೀಪಾರು ಮಾಡುವ ವರದಿಗಳಿಗೆ ಬಲವಾದ ವಿರೋಧ ವ್ಯಕ್ತಪಡಿಸಿದ ಅವರು, ಇದು ಮೂಲಭೂತ ಮಾನವ ಹಕ್ಕುಗಳಿಗೆ ಅವಮಾನ ಮತ್ತು ಕುಟುಂಬದ ಏಕತೆಯ ಮೇಲಿನ ದಾಳಿ ಎಂದು ಹೇಳಿದರು.

ಜಾಗತಿಕ ಮತ್ತು ಪಾಲನಾ ದೃಷ್ಟಿಕೋನ
ವಿಶ್ವಗುರು ಫ್ರಾನ್ಸಿಸ್ ರವರನ್ನು ಉಲ್ಲೇಖಿಸಿ, ಕಾರ್ಡಿನಲ್ ಕ್ಯುಪಿಚ್ ರವರು ಮಾನವ ಹಕ್ಕುಗಳನ್ನು ಗೌರವಿಸುವ ಮತ್ತು ವಿವೇಚನಾರಹಿತ ಗಡೀಪಾರುಗಳನ್ನು ತಪ್ಪಿಸುವ ವಲಸೆ ಆಡಳಿತಕ್ಕೆ ಕರೆ ನೀಡಿದರು.

"ನಾವು ಪರಿಚಯವುಳ್ಳ ಮುಖಗಳು ಮತ್ತು ಹೆಸರುಗಳನ್ನು ಹೊಂದಿರುವ ಜನರೊಂದಿಗೆ ವ್ಯವಹರಿಸುತ್ತಿದ್ದೇವೆ ಎಂಬುದನ್ನು ನಾವು ಬೇಗನೆ ಮರೆತುಬಿಡುತ್ತೇವೆ" ಎಂದು ಅವರು ಹೇಳಿದರು ಮತ್ತು ಗಂಭೀರವಾದ ಬೆದರಿಕೆಗಳನ್ನು ಎದುರಿಸುತ್ತಿರುವ ದೇಶಗಳಿಗೆ ವ್ಯಕ್ತಿಗಳನ್ನು ಮರಳಿ ವಾಪಸ್ ಕಳುಹಿಸುವುದರ ವಿರುದ್ಧ ವಶ್ವಗುರುಗಳ ಎಚ್ಚರಿಕೆಯನ್ನು ಅವರು ಪುನರಾವರ್ತಿಸಿ ಹೇಳಿದರು.

"ಲಕ್ಷಾಂತರ ವಲಸಿಗರು ತಮ್ಮ ತಾಯ್ನಾಡಿನಿಂದ ಸುರಕ್ಷಿತ ತೀರಗಳಿಗೆ ಪಲಾಯನ ಮಾಡುತ್ತಾರೆ ಏಕೆಂದರೆ ಅದು ಅವರಿಗೆ ಮತ್ತು ಅವರ ಮಕ್ಕಳಿಗೆ ಜೀವನ್ಮರಣದ ಸಮಸ್ಯೆಯಾಗಿದೆ" ಎಂದು ಅವರು ಹೇಳಿದರು.

ಆಭಯಧಾಮಗಳಾಗಿರುವ ಪೂಜಾ ಸ್ಥಳಗಳು
ವಲಸೆ ಜಾರಿಯ ಚಟುವಟಿಕೆಗಳಿಂದ ಪವಿತ್ರ ಸ್ಥಳಗಳನ್ನು ರಕ್ಷಿಸುವ ಕಥೋಲಿಕ ಧರ್ಮಸಭೆಯ ಬದ್ಧತೆಯನ್ನು ಚಿಕಾಗೋದ ಕಾರ್ಡಿನಲ್ ರವರು ದೃಢಪಡಿಸಿದರು. 2011ರಿಂದ ಜಾರಿಯಲ್ಲಿರುವ ಸೂಕ್ಷ್ಮ ಸ್ಥಳಗಳ ನೀತಿಯನ್ನು ಅವರು ಉಲ್ಲೇಖಿಸಿದರು, ಇದು ದೇವಾಲಯಗಳು ಮತ್ತು ಶಾಲೆಗಳಂತಹ ಸ್ಥಳಗಳಲ್ಲಿ ಜಾರಿ ಕ್ರಮಗಳನ್ನು ನಿರುತ್ಸಾಹಗೊಳಿಸುತ್ತದೆ.

"ವಿಶ್ವಾಸವುಳ್ಳ ಸಮುದಾಯಗಳ ಸದಸ್ಯರಿಗೆ, ಬೆದರಿಕೆ ಹಾಕಲಾಗಿರುವ ಸಾಮೂಹಿಕ ಗಡೀಪಾರುಗಳು, 'ಈ ಕ್ಷಣದಲ್ಲಿ ದೇವರು ನಮಗೆ ಏನು ಹೇಳುತ್ತಿದ್ದಾನೆ?' ಎಂಬ ಚಿಂತೆಗೊಳಪಡಿಸುವ ಪ್ರಶ್ನೆಯನ್ನು ನಮ್ಮಲ್ಲಿ ಬಿಡುತ್ತವೆ" ಎಂದು ಅವರು ಕೇಳಿದರು ಮತ್ತು ಆತ್ಮಸಾಕ್ಷಿಯ ಸಾಮೂಹಿಕ ಪರೀಕ್ಷೆಗೆ ಕರೆ ನೀಡಿದರು.

ಸಂವಾದ ಮತ್ತು ಒಗ್ಗಟ್ಟಿಗೆ ಆಹ್ವಾನ
ಕಾರ್ಡಿನಲ್ ಕ್ಯುಪಿಚ್ ರವರ ಹೇಳಿಕೆಯು ಸಂವಾದಕ್ಕಾಗಿ, ಕಾನೂನಿನ ನಿಯಮ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಗೌರವಿಸುವ ಪರಿಹಾರಗಳಿಗಾಗಿ ಮನವಿಯೊಂದಿಗೆ ಮುಕ್ತಾಯಗೊಂಡಿತು.

"ಇತರರ ಹಕ್ಕುಗಳಿಗಾಗಿ ಮಾತನಾಡಲು ಮತ್ತು ಅಗತ್ಯವಿರುವವರನ್ನು ನೋಡಿಕೊಳ್ಳುವ ಸಮಾಜದ ಬಾಧ್ಯತೆಯನ್ನು ನೆನಪಿಸಲು ವಿಶ್ವಾಸಭರಿತ ಜನರನ್ನು ಆಹ್ವಾನಿಸಲಾಗುತ್ತದೆ" ಎಂದು ಅವರು ಹೇಳಿದರು, "ವರದಿಯಾಗುತ್ತಿರುವ ವಿವೇಚನಾರಹಿತ ಸಾಮೂಹಿಕ ಗಡೀಪಾರು ನಡೆಸಿದರೆ, ಅದು ಎಲ್ಲಾ ಜನರು ಮತ್ತು ಸಮುದಾಯಗಳ ಘನತೆಗೆ ಅವಮಾನವಾಗುತ್ತದೆ ಮತ್ತು ಅಮೆರಿಕದವರಾಗಿರುವುದರ ಅರ್ಥದ ಪರಂಪರೆಯನ್ನು ನಿರಾಕರಿಸುತ್ತದೆ" ಎಂದು ಹೇಳಿದರು.

19 ಜನವರಿ 2025, 14:39