ಮ್ಯಾನ್ಮಾರ್: ಕಚಿನ್ ರಾಜ್ಯದಲ್ಲಿ ನೂತನ ಧರ್ಮಾಧ್ಯಕ್ಷರ ಆಗಮನದಿಂದ ಹರ್ಷಗೊಂಡ ಕಾರ್ಡಿನಲ್ ಬೊರವರು
ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
"ಹರ್ಷಿಸು! ಹರ್ಷಿಸು! ಇಂದು, ಅಪಾರ ಕೃಪೆ ಮತ್ತು ತಡೆಯಲಾಗದ ಸಂತೋಷದ ಕ್ಷಣವನ್ನು ವೀಕ್ಷಿಸಲು ನಾವು ಒಟ್ಟುಗೂಡುತ್ತಿರುವಾಗ ಸ್ವರ್ಗ ಮತ್ತು ಭುವಿಯು ದೇವರ ಮಹಿಮೆಯನ್ನು ಘೋಷಿಸುತ್ತವೆ – ಮೈಟ್ಕಿನಾ ಧರ್ಮಕ್ಷೇತ್ರಕ್ಕೆ ನಮ್ಮ ಹೊಸ ಕುರುಬನ ಪವಿತ್ರೀಕರಣ!"
ಮ್ಯಾನ್ಮಾರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರೂ, ಏಷ್ಯದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೊರವರು, ರಾಷ್ಟ್ರದ ಕಚಿನ್ ರಾಜ್ಯದ ರಾಜಧಾನಿಯಾದ ಮೈಟ್ಕಿನಾ ಧರ್ಮಕ್ಷೇತ್ರಕ್ಕೆ ಧರ್ಮಾಧ್ಯಕ್ಷರಾಗಿ ಜಾನ್ ಮುಂಗ್ ಲಾ ಸ್ಯಾಮ್ ರವರನ್ನು ಪವಿತ್ರೀಕರಿಸಿದ್ದಕ್ಕಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಕಚಿನ್ ರಾಜ್ಯದಲ್ಲಿ ನಾಗರಿಕರು ಬಳಲುತ್ತಿದ್ದಾರೆ ಮತ್ತು ಸ್ಥಳಾಂತರಗೊಂಡಿದ್ದಾರೆ
ಉತ್ತರ ಮ್ಯಾನ್ಮಾರ್‌ನಲ್ಲಿರುವ ಮತ್ತು ಚೀನಾದ ಗಡಿಯಲ್ಲಿರುವ ಕಚಿನ್ ರಾಜ್ಯದಲ್ಲಿ ಪ್ರಧಾನವಾಗಿ ಕ್ರೈಸ್ತರಾದ ಕಚಿನ್ ಜನಾಂಗೀಯ ಗುಂಪು ವಾಸಿಸುತ್ತಿದೆ. ರಾಜ್ಯವು ಚಿನ್ನ, ಜೇಡ್ ಮತ್ತು ಅಪರೂಪದ ಮಣ್ಣಿನ ಗಣಿಗಳಿಂದ ಸಮೃದ್ಧವಾಗಿದೆ, ಇವುಗಳನ್ನು ಬಹುತೇಕ ಸಂಪೂರ್ಣವಾಗಿ ಚೀನಾಕ್ಕೆ ರಫ್ತು ಮಾಡಲಾಗುತ್ತದೆ.
ಮ್ಯಾನ್ಮಾರ್‌ನ ಮಿಲಿಟರಿ ಜುಂಟಾ ಮತ್ತು ಸಶಸ್ತ್ರ ಗುಂಪುಗಳ ನಡುವಿನ ದೀರ್ಘಕಾಲೀನ ಸಶಸ್ತ್ರ ಸಂಘರ್ಷಗಳಿಂದಾಗಿ ಈ ಪ್ರದೇಶವು ಹೆಚ್ಚುತ್ತಿರುವ ಅಸ್ಥಿರತೆಯನ್ನು ಎದುರಿಸುತ್ತಿದೆ ಮತ್ತು ಅಲ್ಲಿರುವ ಜನರು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸ್ಥಳಾಂತರವನ್ನು ಅನುಭವಿಸಿದ್ದಾರೆ.
ದೇವರ ಸಮಯ ಪರಿಪೂರ್ಣ
ಕಾರ್ಡಿನಲ್ ಬೊರವರು ತಮ್ಮ ಪ್ರಬೋಧನೆಯಲ್ಲಿ, ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷೀಯ ಪವಿತ್ರೀಕರಣ ಆಚರಣೆಯು ಸಂತೋಷದ ಮೇಲೆ ಕೇಂದ್ರೀಕರಿಸಿದೆ, "ಇದು ಕೇವಲ ಇನ್ನೊಂದು ದಿನದ ಬಗ್ಗೆ ಅಲ್ಲ; ಆದರೆ ಇದು ನವೀಕರಣದ ದಿನ, ಭರವಸೆಯ ಆಚರಣೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ಹೇರಳವಾದ ನೆಲದಲ್ಲಿ(ಗದ್ದೆಯಲ್ಲಿ) ಒಟ್ಟಾಗಿ ಕೆಲಸ ಮಾಡುವ ಕ್ರಿಯೆಗೆ ನೀಡಿರುವ ಕರೆ!" ಎಂದು ಹೇಳಿದರು.
"ನೀವು ಕಾಯುತ್ತಾ ಕಾಯುತ್ತಿದ್ದಿರಿ; ನೀವು ಪ್ರಾರ್ಥಿಸುತ್ತಾ ಪ್ರಾರ್ಥಿಸುತ್ತಿದ್ದೀರಿ. ಕುರುಬನಿಗಾಗಿ ನಮ್ಮ ದೈನಂದಿನ ಕೂಗಿಗೆ ಉತ್ತರಿಸಲಾಗದಂತೆ ದೇವರು ಎಷ್ಟು ಬಾರಿ ಮೌನವಾಗಿದ್ದನೆಂದು ಅನಿಸಿತು?" ಎಂದು ಕಾರ್ಡಿನಲ್ ಬೊರವರು ಧೈರ್ಯ ತುಂಬುತ್ತಾ ಕೇಳಿದರು, "ಆದರೂ, ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾನು ಈ ಸತ್ಯವನ್ನು ಧೈರ್ಯದಿಂದ ಘೋಷಿಸುತ್ತೇನೆ: ದೇವರ ಸಮಯವು ಪರಿಪೂರ್ಣವಾಗಿದೆ, ಮತ್ತು ಆತನ ಸಮಯ ಬಂದಾಗ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ!"
'ನಮ್ಮ ಹೃದಯಗಳ ಆಳವನ್ನು ಮುಟ್ಟುವ' ಕಥೆ
ಕಾರ್ಡಿನಲ್ ಬೊರವರು, ನೂತನ ಧರಮಾಧ್ಯಕ್ಷರ ವೈಯಕ್ತಿಕ ಕಥೆಯು "ನಮ್ಮ ಹೃದಯಗಳ ಆಳವನ್ನು ಮುಟ್ಟುತ್ತದೆ" ಮತ್ತು "ನಮ್ಮ ವಿಶ್ವಾಸವನ್ನು ಪ್ರಚೋದಿಸುತ್ತದೆ" ಎಂದು ಹೇಳಿದರು, ಏಕೆಂದರೆ ಅವರು "ವಿನಮ್ರ ಸಂದರ್ಭಗಳಲ್ಲಿ ಜನಿಸಿದರು", ಆದರೆ ಅಂತಿಮವಾಗಿ "ಶ್ರಮದ ಸರಳತೆ ಮತ್ತು ಶಾಂತ ಪರಿಶ್ರಮ" ದೊಂದಿಗೆ ಜೀವನವನ್ನು ಜೀವಿಸುತ್ತಾರೆ, "ನಜರೇತಿನಲ್ಲಿ ಯೇಸುವಿನ ರಹಸ್ಯಾ ಜೀವನವನ್ನು ಪ್ರತಿಬಿಂಬಿಸುವಾ - ತೋರಿಕೆಯಲ್ಲಿ ಸರಳ ಮತ್ತಾ ಸಾಧಾರಣವಾಗಿದೆ, ಆದರೆ ದೈವಿಕ ಉದ್ದೇಶದಿಂದ ತುಂಬಿದ ಜೀವನವಾಗಿದೆ."
ಕಚಿನ್ ಜನರಿಗೆ ಭರವಸೆಯ ದಾರಿದೀಪ
ಧರ್ಮಾಧ್ಯಕ್ಷರ ಪರಿಶ್ರಮ ಮತ್ತು ಕೃಪೆಯ "ಅಸಾಧಾರಣ ಪ್ರಯಾಣ"ದ ಬಗ್ಗೆ, ಕಾರ್ಡಿನಲ್ ರವರು "ಕಚಿನ್ ಜನರಿಗೆ ಭರವಸೆಯ ದಾರಿದೀಪವಾಗಿದೆ” ಎಂದು ಒತ್ತಿ ಹೇಳಿದರು.
"ಯಾವುದೇ ಕಷ್ಟವು ದೇವರ ರೂಪಾಂತರದ ಶಕ್ತಿಯನ್ನು ಮೀರಿದ್ದಲ್ಲ, ಅವರ ಮಹಿಮೆಗೆ ತುಂಬಾ ಸರಳವಾದ ಜೀವನವಿಲ್ಲ, ಮತ್ತು ಅವರ ಪ್ರೀತಿಗೆ ತುಂಬಾ ದೂರವಾದ ಕನಸು ಇಲ್ಲ" ಎಂದು ಅವರು ನೆನಪಿಸಿದರು.
ಕಾರ್ಡಿನಲ್ ಬೊರವರ ಅಭಿಪ್ರಾಯದಲ್ಲಿ, ಕಚಿನ್‌ನಲ್ಲಿರುವ ಧರ್ಮಸಭೆಯು ಅನೇಕ ವಿಧಗಳಲ್ಲಿ ಒಂದು ಚೈತನ್ಯಶೀಲ ಧರ್ಮಸಭೆಯಾಗಿದೆ, ವಿಶೇಷವಾಗಿ ಸಾಮಾನ್ಯ ಜನರು ಮತ್ತು ನೂರಾರು ಧರ್ಮಬೋಧಕರ ಹೆಚ್ಚಿನ ಒಳಗೊಳ್ಳುವಿಕೆಯಿಂದಾಗಿ.
ಇದನ್ನು ಗಮನಿಸಿದರೆ, ಕಚಿನ್‌ನಲ್ಲಿರುವ ಧರ್ಮಾಧ್ಯಕ್ಷರ ಪಾತ್ರವು ಆಳವಾದ ಜವಾಬ್ದಾರಿಯನ್ನು ಹೊಂದಿದೆ ಎಂದು ಮ್ಯಾನ್ಮಾರ್‌ನ ಕಾರ್ಡಿನಲ್ ಪುನರುಚ್ಚರಿಸಿದರು, "ಆಳವಾದ ಸಹಾನುಭೂತಿ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಕಲಿಸಲು, ಪವಿತ್ರಗೊಳಿಸಲು ಮತ್ತು ಆಡಳಿತ ನಡೆಸಲು ಅವರಿಗೆ ಅಗತ್ಯವಿರುತ್ತದೆ."