ಕೊಲಂಬಿಯಾದಲ್ಲಿ ಸಶಸ್ತ್ರ ಸಂಘರ್ಷ: "ಒಬ್ಬರನ್ನೊಬ್ಬರು ಕೊಲ್ಲುವುದು ಸರಿಯಲ್ಲ"
ಧರ್ಮಗುರು.ಜೋಹಾನ್ ಪ್ಯಾಚೆಕೊ ಮತ್ತು ಕೀಲ್ಸ್ ಗುಸ್ಸಿ
ಈಶಾನ್ಯ ಕೊಲಂಬಿಯಾದ ಕ್ಯಾಟಟಂಬೊ ಪ್ರದೇಶದಲ್ಲಿ ಮತ್ತು ವೆನೆಜುವೆಲಾದ ಗಡಿಯಲ್ಲಿ, ಅಕ್ರಮ ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಗಳು ಈಗಾಗಲೇ 80ಕ್ಕೂ ಹೆಚ್ಚು ಸಾವುಗಳಿಗೆ, ನೂರಾರು ಕುಟುಂಬಗಳು ಸ್ಥಳಾಂತರವಾಗಲು ಕಾರಣವಾಗಿವೆ. ಸರ್ಕಾರ ಮತ್ತು ಸಶಸ್ತ್ರ ಗುಂಪುಗಳ ನಡುವಿನ ಶಾಂತಿ ಮಾತುಕತೆಗಳನ್ನು ಸ್ಥಗಿತಗೊಳಿಸಿವೆ.
ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಟಿಬು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು, ಇಸ್ರಯೇಲ್ ನ ಶ್ರೇಷ್ಠಗುರುವಾದ ಬ್ರಾವೋ, ಪ್ರಸ್ತುತ ಸಂಘರ್ಷವು " ಆ ಪ್ರದೇಶದಲ್ಲಿರುವ ಎರಡು ಕ್ರಾಂತಿಕಾರಿ ಪಡೆಗಳು ಮತ್ತು ಅವುಗಳ ನೈಜತೆಗಳ ಬಗ್ಗೆ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವ ಅಕ್ರಮ ಸಶಸ್ತ್ರ ಗುಂಪುಗಳ ನಡುವಿನ ವ್ಯತ್ಯಾಸಗಳಿಂದ" ಹೇಗೆ ಈ ಸಂಘರ್ಷವು ಉದ್ಭವಿಸಿತು ಎಂಬುದನ್ನು ವಿವರಿಸಿದರು.
ಇದರೊಂದಿಗೆ, ಧರ್ಮಾಧ್ಯಕ್ಷರು ಮತ್ತೊಂದು ವಿವಾದದ ಮೂಲವನ್ನು ಎತ್ತಿ ತೋರಿಸಿದರು. “ಅವರು ಉತ್ಪಾದಿಸುವ ಕೋಕಾ ಪೇಸ್ಟ್ ನಿಂದ ಪ್ರಾದೇಶಿಕ ನಿಯಂತ್ರಣದ ಸಮಸ್ಯೆ ಮತ್ತು ಈ ಉತ್ಪಾದನೆಯಿಂದ ಉದ್ಭವಾಗುತ್ತಿರುವ ಗೊಂದಲ ಹಾಗೂ ನಾವು ಎದುರುಗೊಳ್ಳುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ.” ಇವರು ಹೊತ್ತಿಕ್ಕಿದ ಬೆಂಕಿಯ ಕಿಡಿಯು ಅವರ 8 ತಿಂಗಳ ಮಗು ಸೇರಿದಂತೆ ಒಂದು ಕುಟುಂಬದ ಸಾವಿಗೆ ಕಾರಣವಾಯಿತು.
ವಲಸೆ ಸ್ಥಳಾಂತರ
ಟಿಬು ಧರ್ಮಕ್ಷೇತ್ರದಲ್ಲಿ, ವೆನೆಜುವೆಲಾದ ವಲಸಿಗರಿಗೆ ಸಹಾಯ ಮಾಡಲು ಕೆಲವು ವರ್ಷಗಳ ಹಿಂದೆ “ವಿಶ್ವಗುರು ಫ್ರಾನ್ಸಿಸ್ ಕೇಂದ್ರವನ್ನು” ಸ್ಥಾಪಿಸಲಾಯಿತು ಮತ್ತು ಈಗ ಇದು ಸಶಸ್ತ್ರ ಹಿಂಸಾಚಾರದಿಂದ ಪಲಾಯನ ಮಾಡುವ ವಿವಿಧ ಗ್ರಾಮೀಣ ಪ್ರದೇಶಗಳಿಂದ ಸ್ಥಳಾಂತರಗೊಂಡವರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತದೆ. ಕೊಲಂಬಿಯಾದ ಕೆಲವು ವಲಸಿಗರೂ ಸಹ ವೆನೆಜುವೆಲಾದ ಸಮುದಾಯಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಈ ಘರ್ಷಣೆಗಳ ಪರಿಣಾಮಗಳಲ್ಲಿ "ಮಕ್ಕಳು, ಹತಾಶರಾಗಿರುವ ಕುಟುಂಬಗಳು, ಆ ಪ್ರದೇಶದಿಂದ ಜನರು ಹೊರಹೋಗುವುದು, ಕುಕುಟಾ ನಗರದ ಕಡೆಗೆ ಭಾರಿ ಸ್ಥಳಾಂತರ"ವಾಗಿದ್ದಾರೆ ಎಂದು ಧರ್ಮಾಧ್ಯಕ್ಷರಾದ ಬ್ರಾವೋರವರು ಅಂದಾಜಿಸಿದ್ದಾರೆ. ಈ ವಲಸೆಯು, "ದೊಡ್ಡ ಮತ್ತು ಸಣ್ಣ ಎರಡೂ ಜಾನುವಾರುಗಳೊಂದಿಗೆ ಕೈಬಿಟ್ಟ ಜಮೀನುಗಳನ್ನು ಮತ್ತು ಯಾರೂ ಕಾಳಜಿ ವಹಿಸದ ಮನೆಗಳನ್ನು ಬಿಟ್ಟು, ನಿರ್ಜನ ಮತ್ತು ದೊಡ್ಡ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ" ಎಂದು ಅವರು ವಿವರಿಸಿದರು.
ಹಿಂಸಾಚಾರದ ಸಂತ್ರಸ್ತರೊಂದಿಗೆ ಭರವಸೆಯ ಯಾತ್ರಿಕರು
ಹಿಂಸಾಚಾರದಲ್ಲಿ ಭಾಗಿಯಾಗಿರುವ ಗುಂಪುಗಳು "ಒಬ್ಬರನ್ನೊಬ್ಬರು ಕೊಲ್ಲುವುದು ಸರಿಯಲ್ಲ ಅಥವಾ ಒಳ್ಳೆಯದಲ್ಲ ಎಂದು ಅರಿತುಕೊಂಡು ತಮ್ಮ ಪ್ರಜ್ಞೆಗೆ ಬರುವಂತೆ" ಧರ್ಮಾಧ್ಯಕ್ಷರು ಮನವಿ ಮಾಡಿಕೊಂಡರು. "ಮುಗ್ಧರು ಅಥವಾ ಮುಗ್ಧರಲ್ಲದ ಪುರುಷರು ಮತ್ತು ಮಹಿಳೆಯರ ರಕ್ತ" ನಿರಂತರವಾಗಿ ಸುರಿಯುವುದರ ವಿರುದ್ಧ, ಅವರು ವಾದಿಸಿದರು.
ಈ ಜ್ಯೂಬಿಲಿಯ ಭರವಸೆ ವರ್ಷದ ಸಂದೇಶವನ್ನು ಎತ್ತಿ ತೋರಿಸುತ್ತಾ, ಧರ್ಮಾಧ್ಯಕ್ಷರಾದ ಬ್ರಾವಾರವರು "ನಾವು ಭರವಸೆಯ ಯಾತ್ರಿಕರಾಗಿ, ಹಿಂಸಾಚಾರದ ಸಂತ್ರಸ್ತರೊಂದಿಗೆ, ಸಶಸ್ತ್ರ ಸಂಘರ್ಷಗಳ ಸಂತ್ರಸ್ತರೊಂದಿಗೆ ಯೇಸುಕ್ರಿಸ್ತರನ್ನು ಎದುರುಗೊಳ್ಳುತ್ತಿದ್ದೇವೆ" ಎಂದು ಒತ್ತಿ ಹೇಳಿದರು.
ದೀರ್ಘಕಾಲೀನ ಸಂಘರ್ಷ
60 ವರ್ಷಗಳಿಂದ, ಕೊಲಂಬಿಯಾ ಅಂತರ್ಯುದ್ಧ, ಹಿಂಸಾಚಾರ ಮತ್ತು ದಂಗೆಗಳನ್ನು ಸಹಿಸಿಕೊಂಡಿದೆ, ಇದು ಪಶ್ಚಿಮ ಗೋಳಾರ್ಧದಲ್ಲಿ ಅತಿ ಹೆಚ್ಚು ಕಾಲ ನಡೆದ ಸಶಸ್ತ್ರ ಸಂಘರ್ಷವಾಗಿದೆ. 1960ರ ದಶಕದಲ್ಲಿ ವಿವಿಧ ದಂಗೆಗಳಿಂದ ಗೆರಿಲ್ಲಾ ಗುಂಪುಗಳು ಹೊರಹೊಮ್ಮಿದವು - ರಾಷ್ಟ್ರೀಯ ವಿಮೋಚನಾ ಸೇನೆ ಅಥವಾ ELN ಮತ್ತು ಕೊಲಂಬಿಯಾದ ಕ್ರಾಂತಿಕಾರಿ ಸಶಸ್ತ್ರ ಪಡೆಗಳು ಅಥವಾ FARC, ಈ ಎರಡು ಗುಂಪುಗಳ ರಚನೆಗೆ ಕಾರಣವಾಯಿತು. ಮಾದಕವಸ್ತು ಆರ್ಥಿಕತೆಯ ಪರಿಚಯದೊಂದಿಗೆ, ಸಶಸ್ತ್ರ ಗ್ಯಾಂಗ್‌ಗಳು ಬೆಳೆದವು.
ವಿಭಿನ್ನ ಮತ್ತು ಸತತ ಸಶಸ್ತ್ರ ಸಂಘರ್ಷಗಳ ಪರಿಣಾಮವಾಗಿ, ಕೊಲಂಬಿಯಾದ 44 ಮಿಲಿಯನ್ ಜನರಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ, ಸರ್ಕಾರವು ELN ನೊಂದಿಗೆ ಶಾಂತಿ ಮಾತುಕತೆ ನಡೆಸಲು ಪ್ರಯತ್ನಿಸಿತು, ಇತ್ತೀಚಿನದು 2024ರ ಶರತ್ಕಾಲದಲ್ಲಿ ಕೈಗೊಂಡ ಶಾಂತಿ ಮಾತುಕತೆ. ಆದರೆ, ಜನವರಿ 20ರಂದು, ರಾಷ್ಟ್ರೀಯ ವಿಮೋಚನಾ ಸೇನೆಯ ದಾಳಿಯು ದೇಶದ ಈಶಾನ್ಯ ಭಾಗದಲ್ಲಿ ಕನಿಷ್ಠ ಪಕ್ಷ 80 ಜನರನ್ನು ಕೊಂದಿದೆ.