MAP

BOSNIA-VATICAN-RELIGION-PILGRIMAGE-MEDJUGORJE BOSNIA-VATICAN-RELIGION-PILGRIMAGE-MEDJUGORJE  (AFP or licensors)

ಪ್ರೇಷಿತ ಸಂದರ್ಶಕ: 'ಕೃಪೆಯ ಸ್ಥಳವಾದ ಮೆಡ್ಜುಗೋರ್ಜೆಗೆ ಬನ್ನಿ'

ವಿಶ್ವಗುರು ಫ್ರಾನ್ಸಿಸ್ ರವರು ಮೆಡ್ಜುಗೋರ್ಜೆಗೆ ಪ್ರೇಷಿತ ಸಂದರ್ಶಕರಾಗಿ ಕಳುಹಿಸಿದ್ದ ಮಹಾಧರ್ಮಾಧ್ಯಕ್ಷರಾದ ಆಲ್ಡೊ ಕ್ಯಾವಲ್ಲಿರವರೊಂದಿಗೆ ವ್ಯಾಟಿಕನ್ ಸುದ್ಧಿ ಮಾತನಾಡಿತು. 'ಶಾಂತಿಯ ರಾಣಿ'ಗೆ ಕಾರಣವಾದ ಸಂದೇಶಗಳನ್ನು ಓದುವುದು ಮತ್ತು ಅವುಗಳ ಪ್ರಕಟಣೆಗೆ ಅಧಿಕಾರ ನೀಡುವ ಕಾರ್ಯವನ್ನು ಅವರು ವಹಿಸಿಕೊಂಡಿದ್ದಾರೆ.

ಆಂಡ್ರಿಯಾ ಟೋರ್ನಿಯೆಲ್ಲಿ

"ಮೆಡ್ಜುಗೊರ್ಜೆಯು ಒಂದು ಸಾಮಾನ್ಯ ಸ್ಥಳ - ಅದರಲ್ಲಿ ವಿಶೇಷವಾದದ್ದೇನೂ ಇಲ್ಲ. ಇದು ಕೃಪೆಯಿಂದ ಅಥವಾ ಅನುಗ್ರಹದಿಂದ, ವಿಶ್ವದಾದ್ಯಂತದ ಜನರು ಬರುವ ಆಧ್ಯಾತ್ಮಿಕ ತಾಣವಾಗಿದೆ. ವಿಶ್ವದಾದ್ಯಂತದ ಜನರು ಪ್ರವಾಸಕ್ಕೆ ಬರುತ್ತಾರೆ ಮತ್ತು ಪ್ರಾರ್ಥಿಸಲು ಪ್ರಾರಂಭಿಸುತ್ತಾರೆ."

ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ಮಹಾಧರ್ಮಾಧ್ಯಕ್ಷರಾದ ಆಲ್ಡೊ ಕ್ಯಾವಲ್ಲಿರವರ ಪ್ರಕಾರ ಅದು. ಅವರ ಜೀವಮಾನವಿಡೀ ವಿಶ್ವಗುರುಗಳ ರಾಜತಾಂತ್ರಿಕರಾಗಿದ್ದರು, ಅವರನ್ನು ನವೆಂಬರ್ 2021ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಬೋಸ್ನಿಯಾ ಮತ್ತು ಹರ್ಜೆಗೋವಿನಾದ ಒಂದ ಚಿಕ್ಕ ಪಟ್ಟಣವಾದ ಮೆಡ್ಜುಗೋರ್ಜೆಗೆ ಪ್ರೇಷಿತ ಸಂದರ್ಶಕರಾಗಿ ಕಳುಹಿಸಿದರು, ಇದು ಕಳೆದ ನಲವತ್ತು ವರ್ಷಗಳಿಂದ ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ಮಾತೆ ಮರಿಯಮ್ಮನವರ ಕೇಂದ್ರಗಳಲ್ಲಿ ಒಂದಾಗಿದೆ.

೨೦೨೪ನೇ ವರ್ಷವು ಮೆಡ್ಜುಗೊರ್ಜೆಗೆ ಒಂದು ಪ್ರಮುಖ ವರ್ಷವಾಗಿತ್ತು: ಕಳೆದ ಮೇ ತಿಂಗಳಲ್ಲಿ, ವಿಶ್ವಾಸದ ಸಿದ್ಧಾಂತದ ವಿಭಾಗವು ಆಪಾದಿತ ಅಲೌಕಿಕ ವಿದ್ಯಮಾನಗಳ ಕುರಿತು ಹೊಸ ಮಾನದಂಡಗಳನ್ನು ಪ್ರಕಟಿಸಿತು, ಇದು ಪವಿತ್ರ ಪೀಠಾಧಿಕಾರವನ್ನು ಅಲೌಕಿಕತೆಯ ಘೋಷಣೆಗೆ ಒಪ್ಪಿಸದೆ ಭಕ್ತಿಗೆ ಹಸಿರು ಬೆಳಕಿನ ನಿಶಾನೆ ನೀಡುವುದನ್ನು ಸುಲಭಗೊಳಿಸುತ್ತದೆ. ಸೆಪ್ಟೆಂಬರ್‌ನಲ್ಲಿ, ಮೆಡ್ಜುಗೊರ್ಜೆಯ ಆಧ್ಯಾತ್ಮಿಕ ಅನುಭವಕ್ಕೆ ಮೀಸಲಾಗಿರುವ 'ಶಾಂತಿಯ ರಾಣಿ' ಎಂಬ ಶೀರ್ಷಿಕೆಯ ಟಿಪ್ಪಣಿಯನ್ನು ಪ್ರಕಟಿಸಲಾಯಿತು, ಇದು ಮಾತೆ ಮರಿಯಮ್ಮನವರ ವಿದ್ಯಮಾನಕ್ಕೆ 'ನುಲ್ಲಾ ಒಸ್ತಾ' - ಹೊಸ ರೂಢಿಗಳಲ್ಲಿ ಸೇರಿಸಲಾದ ಅತ್ಯುನ್ನತ ಮನ್ನಣೆಯನ್ನು ನೀಡಿತು. ಅಂದಿನಿಂದ ದಾರ್ಶನಿಕರು ಸ್ವೀಕರಿಸುವ 'ಆಪಾದಿತ ಸಂದೇಶಗಳನ್ನು' 'ಧರ್ಮಸಭೆಯ ಅನುಮೋದನೆಯೊಂದಿಗೆ' ಪ್ರಕಟಿಸಲಾಗುತ್ತದೆ.

ವ್ಯಾಟಿಕನ್ ಸುದ್ದಿ: ಕೆಲವು ವರ್ಷಗಳಿಂದ, ನೀವು ಮೆಡ್ಜುಗೋರ್ಜೆ ಧರ್ಮಕೇಂದ್ರದಲ್ಲಿ ವಾಸಿಸುತ್ತಿದ್ದೀರಿ ಮತ್ತು ಯಾತ್ರಿಕರನ್ನು ಭೇಟಿಯಾಗುತ್ತಿದ್ದೀರಿ. ನಿಮ್ಮ ಅನುಭವವೇನು?
ಮಹಾಧರ್ಮಾಧ್ಯಕ್ಷರಾದ ಆಲ್ಡೊ ಕವಾಲಿ: ನಾನು ಎಂದಿಗೂ ಮೆಡ್ಜುಗೋರ್ಜೆಗೆ ಹೋಗಿರಲಿಲ್ಲ. ಆದರೆ ನಾನು ಇಟಾಲಿಯ ಮತ್ತು ನನ್ನ ದೇಶದ ಅನೇಕರಂತೆ, ಅಲ್ಲಿಗೆ ಹೋದವರೊಂದಿಗೆ ನನಗೆ ಸಂಪರ್ಕವಿತ್ತು. ಅವರು ಮೆಡ್ಜುಗೋರ್ಜೆಯಿಂದ ಹಿಂತಿರುಗಿದಾಗ, ಈ ಜನರು ಆಧ್ಯಾತ್ಮಿಕ ಮತ್ತು ಮಾನವ ಮಟ್ಟದಲ್ಲಿ ಹೆಚ್ಚು ಬದ್ಧರಾಗಿದ್ದರು ಎಂದು ನಾನು ಯಾವಾಗಲೂ ಗಮನಿಸಿದೆ: ದೇವಾಲಯದಲ್ಲಿ, ಧರ್ಮಬೋಧನೆಯಲ್ಲಿ ಹಾಗೂ ಒಳ್ಳೆಯದನ್ನು ಮಾಡುವಲ್ಲಿ. ಅವರು ಮೊದಲಿಗಿಂತ ಹೆಚ್ಚು ಬದ್ಧರಾಗಿದ್ದರು. ಈಗ ನಾನು ಮೂರು ವರ್ಷಗಳಿಂದ ಈ ಸ್ಥಳದಲ್ಲಿದ್ದೇನೆ: ಇಲ್ಲಿ ವಿಶೇಷವಾದ ಏನೂ ಇಲ್ಲದ ಒಂದು ಸಾಮಾನ್ಯ ಸ್ಥಳವಾಗಿದೆ ಮತ್ತು ಇದು ಕೇವಲ ಅನುಗ್ರಹದಿಂದ ಮಾತ್ರ ವಿಶ್ವದಾದ್ಯಂತದ ಜನರು ಬರುವ ಆಧ್ಯಾತ್ಮಿಕ ಸ್ಥಳವಾಗಿದೆ. ಅವರು ಅಲ್ಲಿಗೆ ಬಂದು ಪ್ರಾರ್ಥಿಸಲು ಪ್ರಾರಂಭಿಸುತ್ತಾರೆ. ಅವರು ಪ್ರಭು ಯೇಸುವಿನೊಂದಿಗೆ ಸಂಪರ್ಕಕ್ಕೆ ಬರುತ್ತಾರೆ ಮತ್ತು ನಿತ್ಯ ಕನ್ಯೆಯಾಗಿರುವ ಮಾತೆ ಮರಿಯಮ್ಮನವರು ಅವರನ್ನು ಮುನ್ನಡೆಸುತ್ತಾರೆ. ಇದು ಸರಳವಾದ ಪ್ರಾರ್ಥನೆ: ಅವರು ತಮ್ಮ ಜೀವನವನ್ನು ಬದಲಾಯಿಸಲು, ಮೊದಲಿಗಿಂತ ಉತ್ತಮವಾಗಿ ಜೀವಿಸಲು, ಅವರು ಹೊಂದಿರುವ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಉತ್ತಮವಾಗಿ ನಿಭಾಯಿಸಲು ಬಯಸುತ್ತಾರೆ. ಈ ಬದಲಾವಣೆಯನ್ನು ಮತಾಂತರ ಎಂದು ಕರೆಯಲಾಗುತ್ತದೆ ಮತ್ತು ಇದು ಪ್ರಾಯಶ್ಚಿತ್ತದ ಸಂಸ್ಕಾರದಲ್ಲಿ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಇದು ಸಾಮಾನ್ಯವಾಗಿ ಮೆಡ್ಜುಗೋರ್ಜೆಯಲ್ಲಿ ಸಂಭವಿಸುತ್ತದೆ.

ಅನೇಕ ಯಾತ್ರಿಕರನ್ನು ನೋಡಿದಾಗ ನಿಮಗೆ ಏನು ಹೊಳೆಯುತ್ತದೆ?
ಮೆಡ್ಜುಗೋರ್ಜೆಗೆ ಯುವಕರು ಮತ್ತು ಹಿರಿಯರು ಇಬ್ಬರೂ ಬರುತ್ತಾರೆ. ಅವರು ಯಾವುದೇ ಪ್ರಾಯೋಜಕತ್ವವಿಲ್ಲದೆ ಬರುತ್ತಾರೆ. ಅವರೆಲ್ಲರೂ ಒಂದೇ ಉದ್ದೇಶದಿಂದ ಬರುತ್ತಾರೆ: ಪ್ರಭುವನ್ನು ಮತ್ತು ನಿತ್ಯ ಕನ್ಯಾ ಮರಿಯಮ್ಮನವರನ್ನು ಭೇಟಿ ಮಾಡಲು ಬರುತ್ತಾರೆ. ಅವರು ನೋಡಲು ಅಥವಾ ಭೇಟಿ ನೀಡುವ ವಿಶೇಷವಾದದ್ದೂ ಏನೂ ಕಾಣುವುದಿಲ್ಲ: ಧಾರ್ಮಿಕ ಪ್ರವಾಸೋದ್ಯಮದ ತಾಣವಾಗಿ ನಾವು ನೀಡಲು ಏನೂ ಇಲ್ಲ. ಆದರೆ ಇಲ್ಲಿ ಯುವಕರು ಮತ್ತು ವಯಸ್ಕರು ಪ್ರಾರ್ಥಿಸಲು ಪ್ರಾರಂಭಿಸುತ್ತಾರೆ. ನಾನು ಮೂರು ವರ್ಷಗಳ ಹಿಂದೆ ಫೆಬ್ರವರಿಯಲ್ಲಿ ಬಂದಿದ್ದೆ ಮತ್ತು ದೇವಾಲಯದ ಹಿಂದಿನ ಹೊರಾಂಗಣ ಬೆಂಚುಗಳ ನಡುವೆ ನಿಂತಿದ್ದೆ. ಲತೀನ್ ಕುಟುಂಬವೊಂದು ಒಳಗೆ ಬಂದಿತು, 15 ವರ್ಷದ ಹುಡುಗ ಬಂಡಾಯಗಾರ, ನಿಜವಾದ ಬಂಡಾಯಗಾರ! ಕೇವಲ ಐದು ನಿಮಿಷಗಳ ನಂತರ ಅವನು ತಪ್ಪೊಪ್ಪಿಕೊಳ್ಳಲು ಬಂದನು ... ಮತ್ತು ಪೋಷಕರು ಅವನನ್ನು ಆಶ್ಚರ್ಯದಿಂದ ನೋಡಿದರು. ಇದು ಜನರನ್ನು ಭೇಟಿ ಮಾಡಲು ಪ್ರಭುವು ಆಯ್ಕೆ ಮಾಡಿಕೊಂಡಿರುವ ಅನುಗ್ರಹ/ಕೃಪೆಯ ಸ್ಥಳವಾಗಿದೆ. ವಿಶ್ವಗುರುಗಳ ಅಧಿಕಾರ ಎಂದರೆ: ಹೋಗು, ಹೋಗು! ಅಲ್ಲಿಗೆ ಹೋಗಿ, ಏಕೆಂದರೆ ಅದು ಕೃಪೆಯ ಸ್ಥಳವಾಗಿದೆ, ಅಲ್ಲಿ ನೀವು ಪ್ರಭುವನ್ನು ಭೇಟಿಯಾಗುತ್ತೀರಿ ಮತ್ತು ಪ್ರಭುವು ನಿಮ್ಮನ್ನು ಭೇಟಿಯಾಗುತ್ತಾರೆ.

ನೀವು ಮೆಡ್ಜುಗೊರ್ಜೆಯ ದಾರ್ಶನಿಕರನ್ನು ಭೇಟಿ ಮಾಡಿದ್ದೀರಾ?
ಹೌದು. ಅವರು ನಮ್ಮಂತೆಯೇ ಸರಳ ಜನರು ಎಂದು ನಾನು ಹೇಳಬಲ್ಲೆ, ಅವರಿಗೆ ತಮ್ಮದೇ ಆದ ಕುಟುಂಬಗಳಿವೆ, ಪ್ರತಿ ಕುಟುಂಬದಲ್ಲಿರುವ ಸಮಸ್ಯೆಗಳಂತೆಯೇ ಅವರಿಗೂ ಇವೆ.

ಮಧ್ಯಪ್ರವೇಶಿಸಲು ಕ್ಷಮಿಸಿ: ಯಾರೋ ಒಬ್ಬರು ಆಕ್ಷೇಪಣೆ ವ್ಯಕ್ತಪಡಿಸಿದರು, ಏಕೆಂದರೆ ಅವರಲ್ಲಿ ಯಾರೂ ಯಾಜಕರು ಅಥವಾ ಸನ್ಯಾಸಿನಿಗಳಾಗಿಲ್ಲ......
ಆಹ್ವಾನಿತರೂ ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ ಎನ್ನುವ ಹಾಗೆ, ಎಲ್ಲರಿಗೂ ಅವರದೇ ಆದ ದೈವಕರೆಯಿದೆ! ಅವರು ಸರಳ ಜನರು ಮತ್ತು ಒಳ್ಳೆಯ ಜನರು. ನಿಮ್ಮ ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ. ನಾವು ಒಬ್ಬರನ್ನೊಬ್ಬರು ಆಗಾಗ್ಗೆ ನೋಡುತ್ತೇವೆ, ನಾವು ಒಟ್ಟಿಗೆ ಕಾಫಿ ಕುಡಿಯುತ್ತೇವೆ. ಅವರು ವಿಶ್ವಾಸದಲ್ಲಿ ಬೆಳೆಯುವ ಜನರು, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಬುದ್ಧಿವಂತರಾಗುತ್ತಾರೆ, ಹೆಚ್ಚು ಹೆಚ್ಚು ಜ್ಞಾನಾರ್ಜನೆಯನ್ನು ಪಡೆಯುತ್ತಾರೆ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ: ಅವರು ಯಾಜಕರು ಅಥವಾ ಸನ್ಯಾಸಿನಿಗಳಾಗಿಲ್ಲ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ಧ್ಯೇಯವನ್ನು ಹೊಂದಿದ್ದಾರೆ, ತಮ್ಮದೇ ಆದ ಕುಟುಂಬ ಜೀವನವನ್ನು ಹೊಂದಿದ್ದಾರೆ.

ಮೆಡ್ಜುಗೋರ್ಜೆ ಧರ್ಮಕೇಂದ್ರದಲ್ಲಿ ಈ ಮೂರು ವರ್ಷಗಳಲ್ಲಿ ನೀವು ಏನು ಕಲಿತಿದ್ದೀರಿ?
ಅಲ್ಲಿ ಅನುಗ್ರಹವಿದೆ ಎಂದು ವಿಶ್ವಾಸಿಸುತ್ತೇನೆ. ಪ್ರಭುವು ತನ್ನ ಅನುಗ್ರಹದಿಂದ ಯಾವಾಗಲೂ ನಮ್ಮನ್ನು ಅನುಸರಿಸುತ್ತಾನೆ ಎಂದು ನಾನು ಕಲಿತಿದ್ದೇನೆ. ಪ್ರಭುವು ನಮ್ಮ ಜೀವನಕ್ಕಾಗಿ ಒಂದು ಯೋಜನೆಯನ್ನು ಹೊಂದಿದ್ದಾನೆ ಮತ್ತು ನಮ್ಮೊಂದಿಗೆ ಇರುತ್ತಾರೆ ಎಂದು ನಾನು ಕಲಿತಿದ್ದೇನೆ. ಏಕೆಂದರೆ ಅವರು ನಮ್ಮನ್ನು ಅಪಾರವಾಗಿ ಪ್ರೀತಿಸುತ್ತಾರೆ.

ಮೆಡ್ಜುಗೋರ್ಜೆಯಲ್ಲಿ, ನಮ್ಮ ತಾಯಿ ತನ್ನನ್ನು 'ಶಾಂತಿಯ ರಾಣಿ' ಎಂದು ಕರೆದುಕೊಂಡರು. ನಮ್ಮ ಕಾಲದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾದ ಸಂದೇಶ.
1981ರ ಮೊದಲ ಆಪಾದಿತ ಸಂದೇಶಗಳಲ್ಲೊಂದಾಗಿದೆ ಮತ್ತು ಈ ವಿಷಯವು ಬಹಳ ಆಳವಾದದ್ದು. ಅದು ಹೇಳುವುದೇನೆಂದರೆ: ಶಾಂತಿ, ಶಾಂತಿ ಶಾಂತಿ ಆಳ್ವಿಕೆ ನಡೆಸಲಿ. ಆದರೆ ಜಾಗರೂಕರಾಗಿರಿ: ನಮ್ಮ ನಡುವೆ ಶಾಂತಿಯಲ್ಲ, ಮೊದಲು ದೇವರು ಮತ್ತು ನಮ್ಮ ನಡುವೆ ಮತ್ತು ನಂತರ ನಮ್ಮ ನಡುವೆ ಮತ್ತು ಮನುಕುಲದ ನಡುವೆ. ಇದು ಮೂಲಭೂತ. ಯೆಹೂದ್ಯರು ಈಜಿಪ್ಟ್‌ನಿಂದ ಹೊರಬಂದಾಗ, ದೇವರು ಪ್ರವಾದಿ ಮೋಶೆಯ ಮೂಲಕ ಹೇಳಿದರು: ನೀವು ಸ್ವತಂತ್ರವಾಗಿ ಬದುಕಲು ಬಯಸಿದರೆ, ಅನುಸರಿಸಲು ಕೆಲವು ನಿಯಮಗಳಿವೆ- ಅವು ಆಜ್ಞೆಗಳು. ಶಾಂತಿಗೆ ದೇವರು ಮೂಲಭೂತ. ಆಜ್ಞೆಗಳನ್ನು ಪಾಲಿಸಿ ನಾವು ಜೀವಿಸಲು, ನಮಗೆ ಕೆಲವು ವಿಷಯಗಳನ್ನು ಹೇಳಲಾಗಿದೆ: ಜೀವನವನ್ನು ಗೌರವಿಸಿ-ಕೊಲ್ಲಬೇಡಿ, ಕುಟುಂಬವು ಮೂಲಭೂತವಾಗಿದೆ-ಪರಸ್ಪರ ಗೌರವಿಸಿ. ನಾವು ಹೀಗೆ ಬದುಕಿದರೆ ನಾವು ಶಾಂತಿಯಿಂದ ಬದುಕುತ್ತೇವೆ. ಮತ್ತೊಂದೆಡೆ, ನಾವು ಹೀಗೆ ಬದುಕದಿದ್ದರೆ, ನಮ್ಮ ನಡುವೆ ಯುದ್ಧಗಳು ಉದ್ಭವವಾಗುತ್ತವೆ ಎಂದು ಹೇಳಿದರು.

15 ಜನವರಿ 2025, 14:35