ಮಾಧ್ಯಮ ತಂತ್ರಗಳನ್ನು ಪುನರ್-ರಚಿಸಲು ಜ್ಯೂಬಿಲಿ ಸಹಾಯ
FSSA ನ ಹಿರಿಯ ಸಿಸ್ಟರ್.ಜೆಸಿಂಟರ್ ಆಂಟೊನೆಟ್ ಒಕೋತ್
ವಿಶ್ವದಾದ್ಯಂತ ಸಂವಹನಕಾರರನ್ನು ಗುರಿಯಾಗಿಸಿಕೊಂಡು ವರ್ಷಪೂರ್ತಿ ನಡೆಯುವ ಭರವಸೆಯ ಜ್ಯೂಬಿಲಿ ಹಬ್ಬದ ಮೊದಲ ಕಾರ್ಯಕ್ರಮವು ವೇಗವಾಗಿ ಸಮೀಪಿಸುತ್ತಿರುವುದರಿಂದ, ಪೂರ್ವ ಆಫ್ರಿಕಾ ಧರ್ಮಾಧ್ಯಕ್ಷರ ಸಮ್ಮೇಳನಗಳ ಸದಸ್ಯರ ಸಂಘ(AMECEA) ಪ್ರದೇಶದ ರಾಷ್ಟ್ರೀಯ ಕಚೇರಿಗಳ ನಿರ್ದೇಶಕರಾಗಿ ಡಜನ್ಗಟ್ಟಲೆ ಮಾಧ್ಯಮ ವೃತ್ತಿಪರರು ರೋಮ್‌ಗೆ ಪ್ರಯಾಣಿಸಲಿದ್ದಾರೆ.
1963ರಲ್ಲಿ ಸಾಮಾಜಿಕ ಸಂವಹನ ಮಾಧ್ಯಮ (ಡಿಗ್ರಿ ಇಂಟರ್ ಮಿರಿಫಿಕಾ) ಮತ್ತು 1971ರಲ್ಲಿ ಕಮ್ಯುನಿಯೊ ಎಟ್ ಪ್ರೋಗ್ರೆಸಿಯೊ ಎಂಬ ಧರ್ಮಾಧ್ಯಕ್ಷರುಗಳ ಪಾಲನಾ ನಿರ್ದೇಶನದ ನಿಯಮಗಳು ಬಂದ ನಂತರ, AMECEAದ ಧರ್ಮಾಧ್ಯಕ್ಷರುಗಳು 1973ರಲ್ಲಿ ಜಾಂಬಿಯಾದ ಲುಸಾಕಾದಲ್ಲಿ ಈ ನಿಯಮಗಳನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ನಿರ್ಣಯಿಸಲು ಸಭೆಯನ್ನು ಆಯೋಜಿಸಿದರು.
"50 ವರ್ಷಗಳ ನಂತರ, ಡಿಜಿಟಲ್ ತಂತ್ರಜ್ಞಾನಗಳು ಸಂವಹನ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಸಂದರ್ಭದಲ್ಲಿ ಆ ತಂತ್ರಗಳನ್ನು ಪುನರ್ವಿಮರ್ಶಿಸುವ ಸಮಯ ಬಂದಿದೆ" ಎಂದು AMECEAದ ಸಾಮಾಜಿಕ ಸಂವಹನ ಸಂಯೋಜಕರಾದ ಧರ್ಮಗುರು.ಆಂಡ್ರ್ಯೂ ಕೌಫಾರವರು ಹೇಳಿದ್ದಾರೆ.
AMECEA ಸಂವಹನಕಾರರನ್ನು ಬಲಪಡಿಸಲು ಜ್ಯೂಬಿಲಿ ಭೇಟಿ
"ಭರವಸೆಯ ಯಾತ್ರಿಕರು" ಎಂಬ ವಿಷಯದ 2025ರ ಸಾಮಾನ್ಯ ಜ್ಯೂಬಿಲಿಯು, ಧರ್ಮಸಭೆಯಲ್ಲಿರುವ ವಿವಿಧ ಗುಂಪುಗಳಿಗೆ ತಮ್ಮ ಶುಭಸಂದೇಶ-ಪ್ರಚಾರ ಮಾರ್ಗವನ್ನು ಹೆಚ್ಚಿಸಲು ಅವಕಾಶವನ್ನು ಒದಗಿಸುತ್ತದೆ.
ವ್ಯಾಟಿಕನ್ ಸುದ್ಧಿಯ ಜೊತೆ ಮಾತನಾಡಿದ ಧರ್ಮಗುರು.ಕೌಫಾರವರು, ಜ್ಯೂಬಿಲಿಯ AMECEA ಸಮ್ಮೇಳನಗಳಿಗೆ "ಹೊಸ ಪ್ರವೃತ್ತಿಗಳು ಮತ್ತು ಅಗತ್ಯವಿರುವ ಪಾಲನಾ ವಿಧಾನಗಳ ಕುರಿತು ಧರ್ಮಾಧ್ಯಕ್ಷರುಗಳು ಮತ್ತು ರಾಷ್ಟ್ರೀಯ ಸಂಯೋಜಕರಲ್ಲಿ ಜಾಗೃತಿ ಮೂಡಿಸಲು ಅವಕಾಶವನ್ನು ನೀಡುತ್ತದೆ" ಎಂದು ಹೇಳಿದರು. ಅದೇ ಸಮಯದಲ್ಲಿ, ಸಮ್ಮೇಳನವು ಧರ್ಮಾಧ್ಯಕ್ಷರುಗಳು ಮತ್ತು ರಾಷ್ಟ್ರೀಯ ಸಂಯೋಜಕರನ್ನು ಒಟ್ಟಿಗೆ ತರುತ್ತದೆ ಎಂಬ ಅಂಶವು ಧರ್ಮಸಭೆಯ ಸಂವಹನವನ್ನು ಮಾಡುವ ಸಿನೊಡಲ್ ವಿಧಾನವಾಗಿದೆ.
ಫಾದರ್ ಕೌಫಾರವರ ಪ್ರಕಾರ, ಪವಿತ್ರ ವರ್ಷವು ಒಟ್ಟಾಗಿ ಪ್ರಯಾಣಿಸುವ ಮಾರ್ಗದಲ್ಲಿದೆ, ಧರ್ಮಸಭೆಯು ಭಕ್ತವಿಶ್ವಾಸಿಗಳನ್ನು ಜೀವನದ ಸವಾಲುಗಳನ್ನು ಭರವಸೆಯೊಂದಿಗೆ ನಿಭಾಯಿಸಲು ಪ್ರೋತ್ಸಾಹಿಸುತ್ತದೆ.
ಅದೇ ರೀತಿ, "ಜನರಿಗೆ ಭರವಸೆ ನೀಡಲು ಕಥೋಲಿಕ ಮಾಧ್ಯಮ ಧರ್ಮಪ್ರಚಾರಕರು, ಭರವಸೆಯ ಯಾತ್ರಿಕರು ಎಂಬ ವಿಷಯದ ಚಿಂತನೆಯಲ್ಲಿ ಜನರೊಂದಿಗೆ ತಮ್ಮ ಕಾರ್ಯಗಳನ್ನು ತೊಡಗಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಸಂವಹನ ಸಂಯೋಜಕರು ಬದ್ಧರಾಗಿದ್ದಾರೆ" ಎಂದು ಅವರು ಹೇಳಿದರು.
ಆಫ್ರಿಕಾದ ಸಂವಹನಕಾರರು ಒಟ್ಟಿಗೆ ಪ್ರಯಾಣಿಸಲಿದ್ದಾರೆ
ವಿಶ್ವದ ಜ್ಯೂಬಿಲಿಯ ಸಂವಹನ AMECEA ಸಂವಹನಕಾರರನ್ನು ಮಾತ್ರವಲ್ಲದೆ, ವಿಶ್ವದಾದ್ಯಂತದ ಮಾಧ್ಯಮ ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ.
2023ರಲ್ಲಿ ಆಚರಿಸಲಾದ ಆಫ್ರಿಕಾ ಮತ್ತು ಮಡಗಾಸ್ಕರ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಸಿಂಪೋಸಿಯಂ (SECAM)ನ ಉಪಕ್ರಮವಾದ ಪ್ಯಾನ್ ಆಫ್ರಿಕನ್ ಕಮಿಟಿ ಫಾರ್ ಸೋಶಿಯಲ್ ಕಮ್ಯುನಿಕೇಷನ್ಸ್ (CEPACS)ನ ಸುವರ್ಣ ಮಹೋತ್ಸವವನ್ನು ಧರ್ಮಗುರು ಕೌಫಾರವರು ನೆನಪಿಸಿಕೊಂಡರು.