MAP

2024.02.21 Nigerian Bishop of Minna Diocese, Martin Igwe Uzoukwu 2024.02.21 Nigerian Bishop of Minna Diocese, Martin Igwe Uzoukwu 

ಸಿನೊಡಲ್ ಪ್ರಯಾಣ 'ನೈಜೀರಿಯಾದ ಮೈದುಗುರಿ ಧರ್ಮಕ್ಷೇತ್ರವನ್ನು ಪುನರ್ನಿರ್ಮಿಸುವಲ್ಲಿ ನಿರ್ಣಾಯಕ'

ಸ್ಥಳೀಯ ಧರ್ಮಕೇಂದ್ರದ ಧರ್ಮಗುರುವಿನ ಪ್ರಕಾರ, ಧರ್ಮಸಭೆಯ ಸಿನೊಡಾಲಿಟಿಯ ಪ್ರಯಾಣವು ನೈಜೀರಿಯಾದ ಮೈದುಗುರಿಯ ಧರ್ಮಕ್ಷೇತ್ರದಲ್ಲಿ ಕಥೋಲಿಕರ ವಿಶ್ವಾಸವನ್ನು ಮತ್ತು ಶುಭಸಂದೇಶದ ಏಕತೆಯನ್ನು ಪುನರುಜ್ಜೀವನಗೊಳಿಸಿದೆ.

ಮೈಕೆಲ್ ಮಾಡುಕ್ವೆ

ಧರ್ಮಗುರು, ನೈಜೀರಿಯಾದ ಮಿಚಿಕಾದ ಸಂತ ಅನ್ನಳ ಧರ್ಮಕೇಂದ್ರದ ಧರ್ಮಗುರು ಹೈಲ್ಲಮಾಡ ಮಥಿಯಾಸ್ ರವರು, ಬೊಕೊ ಹರಾಮ್ ನಡೆಸಿದ ವಿನಾಶದ ನಂತರ ಮೈದುಗುರಿ ಧರ್ಮಕ್ಷೇತ್ರದಲ್ಲಿ ಸಿನೊಡಲ್ ಪ್ರಯಾಣದ ಅಗತ್ಯತೆಯನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯೇತರ ಸಶಸ್ತ್ರ ಗುಂಪು ದೇಶದ ಈಶಾನ್ಯ ಭಾಗದಲ್ಲಿ ಧರ್ಮಸಭೆ ಮತ್ತು ಭಕ್ತ ವಿಶ್ವಾಸಿಗಳ ಮೇಲೆ ಹೆಚ್ಚು ಪರಿಣಾಮ ಬೀರಿದೆ.

"ಸಿನೊಡ್ ಎಂದರೆ ಧರ್ಮಪ್ರಚಾರದ ಮುಂದಿನ ದಾರಿಯನ್ನು ಯೋಚಿಸಲು ಮತ್ತು ಅದನ್ನು ಕಾರ್ಯರೂಪದಲ್ಲಿ ಪ್ರತಿಬಿಂಬಿಸಲು ಧರ್ಮಸಭೆಯನ್ನು ಒಟ್ಟಿಗೆ ತರುವುದು" ಎಂದು ಧರ್ಮಗುರು. ಹೈಲ್ಲಮಾಡರವರು ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. “ಆದ್ದರಿಂದ, ನಾವು ಈಶಾನ್ಯ ಮತ್ತು ಧರ್ಮಪ್ರಾಂತ್ಯದಲ್ಲಿ ಸಂಭವಿಸಿದ ಪರಿಸ್ಥಿತಿಯನ್ನು ನೋಡಬೇಕು; ಈ ಘಟನೆಗಳ ಜೊತೆಗೆ ಬಂದ ಆ ಪರಿಣಾಮಗಳು ಮತ್ತು ಸವಾಲುಗಳನ್ನು ನೋಡಲು ಮತ್ತು ಭವಿಷ್ಯದಲ್ಲಿ ಶುಭಸಂದೇಶದ ಹಾದಿಯನ್ನು ಒಟ್ಟುಗೂಡಿಸಿ ಧರ್ಮಸಭೆಯನ್ನು ವಿಜಯಿಯನ್ನಾಗಿ ಮಾಡುವಂತಹ ಒಂದು ಸುಂದರವಾದ ಅವಕಾಶವಾಗಿದೆ.

ಮೈದುಗುರಿ ಧರ್ಮಕ್ಷೇತ್ರದಲ್ಲಿ ಬೊಕೊ ಹರಾಮ್‌ನ ವಿನಾಶದ ಹೊರತಾಗಿಯೂ, ವಿಶೇಷವಾಗಿ ದೇವಾಲಯಗಳನ್ನು ಧ್ವಂಸ ಮಾಡುವಲ್ಲಿ ಮತ್ತು ಅವರ ಮನೆಗಳಿಂದ ಜನರನ್ನು ಅಪಹರಿಸಿದರೂ, ಸಿನೊಡಲ್ ಪ್ರಯಾಣವು ಧರ್ಮಕ್ಷೇತ್ರದ ಪುರ್ನರ್ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ಧರ್ಮಗುರು. ಹೈಲ್ಲಮಾಡರವರು ತಮ್ಮ ಭರವಸೆ ವ್ಯಕ್ತಪಡಿಸುತ್ತಾರೆ.

ಸಿನೊಡಾಲಿಟಿಯ ಅಸ್ತಿತ್ವದಲ್ಲಿರುವ ಮನೋಭಾವವನ್ನು ನಿರ್ಮಿಸುವುದು
ಧರ್ಮಗುರು ಹೈಲ್ಲಮಾಡರವರು ಮೈದುಗುರಿಯಲ್ಲಿರುವ ಧರ್ಮಸಭೆಯು ಸಿನೊಡಲಿಟಿಯ ಹಾದಿಯಲ್ಲಿ ಪ್ರಯಾಣಿಸುತ್ತಿದೆ ಎಂದು ಒಪ್ಪಿಕೊಂಡರು.

"ಧರ್ಮಸಭೆಯು, ವಿಶೇಷವಾಗಿ ಆಫ್ರಿಕಾದ ಧರ್ಮಸಭೆಯು, ನಾವು ಕೋಮುವಾದಿ ಧರ್ಮಸಭೆಯಾಗಿದ್ದೇವೆ. ಕೋಮುವಾದಿ ಧರ್ಮಸಭೆಯಾಗಿ, ನಾವು ಈಗಾಗಲೇ ಜೀವನದ ಐಕ್ಯತೆಯ ಮನೋಭಾವವನ್ನು ಹೊಂದಿದ್ದೇವೆ,” ಎಂದು ಅವರು ಹೇಳಿದರು.

ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಶ್ರೀ ಸಾಮಾನ್ಯ ಭಕ್ತವಿಶ್ವಾಸಿಗಳಿಗೆ "ಕುಳಿತು, ಧರ್ಮಕ್ಷೇತ್ರದಲ್ಲಿ ಹೇಗೆ ಶುಭಸಂದೇಶದ ಧ್ಯೇಯವನ್ನು ಸಾಧಿಸಿ ಧರ್ಮಸಭೆಯನ್ನು ವಿಜಯಿಯನ್ನಾಗಿ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲು" ಮಾರ್ಗಗಳನ್ನು ಸೃಷ್ಟಿಸಿದ್ದಾರೆ ಎಂದು ಗಮನಿಸಿದರು.

ಅದು ಹೇಗೆಂದರೆ, "ನಾವು ನಮ್ಮ ವಿಶ್ವಾಸದಲ್ಲಿ ಅಭಿವೃದ್ಧಿ ಹೊಂದವುದು, ನಮ್ಮ ಸಂಸ್ಕೃತಿಯನ್ನು ಗೌರವಿಸುವುದು ಮತ್ತು ನಮ್ಮ ಕೆಲವು ನೈತಿಕತೆಯನ್ನು ಗೌರವಿಸುವುದು, ಒಂದೇ ಧರ್ಮಸಭೆಯಾಗಿ ಶುಭಸಂದೇಶದ ಧ್ಯೇಯದ ಹಾದಿಯನ್ನು ಗೆಲ್ಲುವೆಡೆಗೆ ಮುಂದುವರಿಸುವುದು."

ಸಿನೊಡಾಲಿಟಿ: ನಾವೆಲ್ಲರೂ ನಮ್ಮ ಕೆಲಸವನ್ನು ಮಾಡಬೇಕು
ಸಂತ ಅನ್ನಳ ಧರ್ಮಕೇಂದ್ರವನ್ನು ಉಲ್ಲೇಖಿಸಿ, ಧರ್ಮಗುರು ಹ್ಯೆಲ್ಲಮಾಡರವರು, ಧರ್ಮಕೇಂದ್ರದ ಪ್ರತಿಯೊಬ್ಬರು ಶ್ರದ್ಧೆಯಿಂದ ತಮ್ಮ ತಮ್ಮ ಕಾರ್ಯಚಟುವಟಿಕೆಗಳನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ.

ಧರ್ಮಸಭೆಯ ಭವಿಷ್ಯ
ವಿಶ್ವಗುರು ಸಂತ ದ್ವಿತೀಯ ಜಾನ್ ಪಾಲ್ ರವರು ತಮ್ಮ ಮಠಾಧೀಶರ ಉದ್ಘಾಟನೆಯ ಸಮಯದಲ್ಲಿ, ಅಲ್ಲಿ ನೆರೆದಿದ್ದ ಹೆಚ್ಚಿನ ಯುವಜನರಿಗೆ ಶುಭಾಶಯ ಕೋರಿದಾಗ ಒಮ್ಮೆ "ನೀವು ವಿಶ್ವದ ಭವಿಷ್ಯ, ಧರ್ಮಸಭೆಯ ಭರವಸೆ," ಎಂದು ಹೇಳಿದರು.

ಅದೇ ರೀತಿಯಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು ಆಗಾಗ್ಗೆ ಹೇಳುತ್ತಾರೆ, "ಪ್ರಿಯ ಯುವಜನರೇ, ನೀವು ಬೆಳೆಯುತ್ತಿರುವ ಅಥವಾ ಮುಂದುವರೆಯುತ್ತಿರುವ ಧರ್ಮಸಭೆಯ ಜೀವಂತ ಭರವಸೆ!"

ಧರ್ಮಗುರು ಹ್ಯೆಲ್ಲಮಾಡರವರು, ನಾವು ನಮ್ಮ ಧರ್ಮಕೇಂದ್ರದಲ್ಲಿ ಯುವಕರನ್ನು ಒಳಗೊಳ್ಳಲು ಉದ್ದೇಶಪೂರ್ವಕ ವಿಧಾನಗಳ ಅನೇಕ ಆಯೋಜನೆಗಳನ್ನು ಯೋಜಿಸುವ ಕಾರ್ಯದಲ್ಲಿದ್ದೇವೆ.

"ನಾವು ಯುವ ಶೃಂಗಸಭೆಯನ್ನು ಯೋಜಿಸುತ್ತಿದ್ದೇವೆ, ಆಶಾದಾಯಕವಾಗಿ ಮುಂದಿನ ವರ್ಷದ ಆರಂಭದಲ್ಲಿ," "ಇವೆಲ್ಲವೂ ಜನರನ್ನು ಒಟ್ಟುಗೂಡಿಸಲು ಮತ್ತು ಶುಭಸಂದೇಶಧ ಪ್ರಚಾರಕ್ಕಾಗಿ ಭವಿಷ್ಯದ ತರಬೇತಿ ನೀಡಿ ಅವರನ್ನು ರೂಪಿಸಲು ಸಜ್ಜಾಗುತ್ತಿವೆ." ಎಂದು ಅವರು ಹೇಳಿದರು.

ಸಿನೊಡಾಲಿಟಿಯ ಫಲದ ಸಂಕೇತಗಳು
ಫಾ. ಸಿನೊಡಲ್ ಚರ್ಚೆಗಳು "ಸಹಾಯಕವಾಗಿವೆ" ಎಂದು ಹೈಲ್ಲಮಾಡರವರು ಒಪ್ಪಿಕೊಂಡರು.

ಧರ್ಮಕೇಂದ್ರದ ಸಮುದಾಯವಾಗಿ ಹೇಗೆ ಮುಂದುವರೆಯುವುದು ಎಂಬುದರ ಕುರಿತು ಜನರು ಸಹ ಸುಂದರವಾದ ಆಲೋಚನೆಗಳೊಂದಿಗೆ ಬರುತ್ತಿರುವ ಕಾರಣ ಸಿನೊಡಾಲಿಟಿಯು "ಪರಿಣಾಮಕಾರಿಯಾಗಲು ಪ್ರಾರಂಭಿಸಿದೆ" ಎಂದು ಅವರು ಗಮನಿಸಿದರು.

ಧರ್ಮಸಭೆಯು ತನ್ನ ಸಿನೊಡಾಲಿಟಿಯ ಪ್ರಯಾಣವನ್ನು ಮುಂದುವರೆಸುತ್ತಿರುವಾಗ, ಧರ್ಮಸಭೆಯ ಧರ್ಮಪ್ರಚಾರದ ಕಾಯಕದಲ್ಲಿ ಸಿನೊಡ್, ಧರ್ಮಕೇಂದ್ರವು ಸಮುದಾಯಗಳನ್ನು ಮತ್ತೆ ಒಂದುಗೂಡಿಸಿದೆ ಎಂದು ಧರ್ಮಗುರು. ಹಿಲ್ಲೆಮಾಡರವರು ಹೇಳಿದರು.

"ನನಗೆ ಬಂದಿರುವ ಸಂದೇಶವಿದು," "ವಿಶ್ವಗುರುವು ಯಾವುದೋ ಪ್ರಮುಖ ವಿಷಯದೊಂದಿಗೆ ಬಂದಿದ್ದಾರೆ, ಮತ್ತು ನಾವು ಮಾಡಬೇಕಾಗಿರುವುದು ನಮ್ಮ ಕೆಲವು ಉತ್ತಮ ನೈತಿಕ ಗುಣಗಳನ್ನು ಒತ್ತಿಹೇಳಲು ಧರ್ಮಸಭೆಯಂತೆ ಒಟ್ಟುಗೂಡುವುದು ಮತ್ತು ಅವುಗಳನ್ನು ಸುವಾರ್ತೆಯ ಪ್ರಚಾರಕ್ಕಾಗಿ ಬಳಸುವುದು." ಎಂದು ಅವರು ಹೇಳಿದರು.

17 ಡಿಸೆಂಬರ್ 2024, 11:33