MAP

2022.09.30 Sunday Gospel Reflections 2022.09.30 Sunday Gospel Reflections 

ಪ್ರಭುವಿನ ದಿನದ ಚಿಂತನೆ: 'ಹರ್ಷಿಸಿರಿ: ಯೇಸು, ನಮ್ಮ ಪರಮಾನಂದ, ಅವರು ಬರುತ್ತಿದ್ದಾರೆ'

ಧರ್ಮಸಭೆಯು ಆಗಮನ ಕಾಲದ ಮೂರನೇ ಭಾನುವಾರವನ್ನು ಆಚರಿಸುತ್ತಿದ್ದಂತೆ, ಧರ್ಮಗುರು. ಮರಿಯನ್ ನ್ಗುಯೆನ್ OSBರವರು, ʼಕಾಯುವ ಕಾಲವಾಗಿʼ ಆಗಮನ ಕಾಲವನ್ನು ಕೇಂದ್ರೀಕರಿಸುವ ದೈವಾರಾಧನೆ ವಿಧಿಯ ವಾಚನಗಳನ್ನು ಕುರಿತು ತಮ್ಮ ಚಿಂತನೆಗಳನ್ನು ನೀಡುತ್ತಾರೆ.

ಧರ್ಮಗುರು. ಮರಿಯನ್ ನ್ಗುಯೆನ್, OSB*

ಆಗಮನ ಕಾಲವು ʼಕಾಯುವ ಕಾಲವಾಗಿದೆʼ, ಆದರೆ ಇದು ಸಂತೋಷದ ಸಮಯವಾಗಿದೆ ಏಕೆಂದರೆ ನಾವು ಯಾರನ್ನು ನಿರೀಕ್ಷಿಸುತ್ತೇವೆಯೋ ಅವರು ನಾವು ಪ್ರೀತಿಸುವ ವ್ಯಕ್ತಿಯಾಗಿರುತ್ತಾರೆ. ಹೀಗಾಗಿ, ಎಲ್ಲಾ ವಾಚನಗಳು ಈ ಸಂತೋಷದೊಳಗೆ ಪ್ರವೇಶಿಸಲು ನಮ್ಮನ್ನು ಪ್ರೋತ್ಸಾಹಿಸುತ್ತವೆ. " ಹರ್ಷಧ್ವನಿಗೈ! ಓ ಸಿಯೋನ್ ಕುವರಿಯೇ," ಎಂದು ಪ್ರವಾದಿ ಜೆಫನ್ಯರು ಮೊದಲನೇ ವಾಚನದಲ್ಲಿ ಹೇಳುತ್ತಾರೆ. ಎರಡನೇ ವಾಚನದಲ್ಲಿ, ಸಂತ ಪೌಲರು ಫಿಲಿಪ್ಪಿಯವರಿಗೆ ತನ್ನ ಆಜ್ಞೆಯನ್ನು ಪುನರುಚ್ಚರಿಸುತ್ತಾನೆ, "ನಾನು ಮತ್ತೊಮ್ಮೆ ಹೇಳುತ್ತೇನೆ: ಹರ್ಷಿಸಿರಿ!" ಸಂತ ಸ್ನಾನಿಕ ಯೋವಾನ್ನರು, ತಮ್ಮ ಸುವಾರ್ತೆಯಲ್ಲಿ, ನಾವು ಈ ಸಂತೋಷವನ್ನು ಪ್ರವೇಶಿಸುವ, ವಿಧಾನಗಳನ್ನು ನಮಗೆ ನೀಡುತ್ತಾನೆ: ಅದೇನೆಂದರೆ ʼಹೃದಯದ ಶುದ್ಧತೆʼ.

ಕೆಲವರಿಗೆ ಈ ಕಾಲದಲ್ಲಿ ಸಂತೋಷ ಸಿಗುವುದು ಕಷ್ಟ. ಕಾರಣಗಳು ಹಲವು ಮತ್ತು ವೈವಿಧ್ಯಮಯವಾಗಿರಬಹುದು, ಆದರೆ ಒಂದು ಕಾರಣ ಮಾತ್ರ ಯಾವಾಗಲೂ ಇರುತ್ತದೆ: ಅದೇನೆಂದರೆ ದೇವರನ್ನು ಮರೆತುಬಿಡುವುದು. ಜನಪ್ರಿಯ ಹೇಳಿಕೆಯ ಪ್ರಕಾರ, "ಯೇಸುವೆ ಈ ಕಾಲಕ್ಕೆ ಕಾರಣ"; ಕಾರಣ ಇಲ್ಲದಿದ್ದರೆ ಸಂತೋಷವೂ ಇಲ್ಲ. ದೇವದೂತರು ಕುರುಬರಿಗೆ ಆ ಸಂತೋಷದ ಕಾರಣವನ್ನು ಮೊದಲು ಘೋಷಿಸಿದರು, "ನಾನು ನಿಮಗೆ ಪರಮಾನಂದವನ್ನು ತರುವ ಶುಭಸಂದೇಶವನ್ನು ಘೋಷಿಸುತ್ತೇನೆ... ಏಕೆಂದರೆ ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ, ಅದು ಪ್ರಭು ಯೇಸು ಕ್ರಿಸ್ತ" (ಲೂಕ 2: 1-11). ಜೆಫನ್ಯ ಮತ್ತು ಪೌಲರು ಪರಮಾನಂದಕ್ಕೆ ಕಾರಣಗಳನ್ನು ನೀಡುತ್ತಾರೆ: “ಪ್ರಭುವು ನಿಮ್ಮ ಮಧ್ಯದಲ್ಲಿದ್ದಾರೆ” ಮತ್ತು “ಪ್ರಭುವು ಸಮೀಪಿಸಿದ್ದಾರೆ.” ಕ್ರೈಸ್ತನ ಸಂತೋಷವು ಯೇಸುವಿನ ಮೇಲೆ ಮತ್ತು ನಮಗಾಗಿ, ಆತನ ಪ್ರೀತಿಯ ಮೇಲೆ ಕೇಂದ್ರೀಕರಿಸುವುದನ್ನು ಒಳಗೊಂಡಿರಬೇಕು. ಸನ್ಯಾಸಿಗಳಿಗೆ ಯೇಸುವಿನ ಮೇಲೆ ಕೇಂದ್ರೀಕರಿಸಲು ಇರುವ ಸಾಧನಗಳೆಂದರೆ ʼಮೌನ ಮತ್ತು ಪ್ರಾರ್ಥನೆʼ (cf. ಬೆನೆಡಿಕ್ಟ್ 7:56 ನಿಯಮ). ದೇವರು, ಕೆಲವೊಮ್ಮೆ ತನ್ನ ಸಂದೇಶವನ್ನು ಪಿಸುಮಾತುಗಳ ಮೂಲಕ ಹೇಳಲು ಇಚ್ಛಿಸುತ್ತಾರೆ, ಆ ಸಂದೇಶವನ್ನು ಮೌನದಲ್ಲಿ ಮಾತ್ರ ಕೇಳಬಹುದು (1 ಅರಸರು 19:12 - ಕಡೆಗೊಂದು ಮೆಲುದನಿ ಕೇಳಿಸಿತು).

ಅಪೊಲೊದ ಬಲಿಪೀಠವನ್ನು ಬದಲಿಸಲು ಸಂತ ಸ್ನಾನಿಕ ಯೊವಾನ್ನರಿಗೆ ಗೌರವಾರ್ಥವಾಗಿ ಮೊಂಟೆಕಾಸಿನೊದಲ್ಲಿ ಬೆನೆಡಿಕ್ಟ್ ಮಠವನ್ನು ನಿರ್ಮಿಸಿದ ಕ್ಷಣದಿಂದ ಬೆನೆಡಿಕ್ಟೈನ್‌ಸಭೆಯವರು ಯಾವಾಗಲೂ ಸ್ನಾನಿಕ ಯೊವಾನ್ನರನ್ನು ತಮ್ಮ ಆದರ್ಶಕರು ಎಂದು ಮೆಚ್ಚಿಕೊಂಡಿದ್ದಾರೆ (cf. ಡೈಲಾಗ್ಸ್ II, 37). ಇಂದಿನ ಶುಭಸಂದೇಶದಲ್ಲಿ ಸಂತ ಸ್ನಾನಿಕ ಯೊವಾನ್ನರ ಸಲಹೆಯು ಸನ್ಯಾಸಿಗಳ ಜ್ಞಾನಾರ್ಜನೆಯ ಮೂಲವಾಗಿದೆ:

“ನಿಮಗೆ ಎರಡು ಅಂಗಿಗಳಿದ್ದರೆ, ಒಂದನ್ನು ಏನೂ ಇಲ್ಲದವನಿಗೆ ಕೊಡಿ; ಅಂತೆಯೇ ಆಹಾರ ಉಳ್ಳವನು ಇಲ್ಲದವನೊಂದಿಗೆ ಹಂಚಿಕೊಳ್ಳಲಿ,”." ಈ ಸಲಹೆಯು ಪ್ರವಾದಿ ಮೋಸೆಸ್ ರವರು "ನಿಮ್ಮಲ್ಲಿ ಏನೂ ಇಲ್ಲದಿರುವಾಗ, ನೀವು ಎಲ್ಲವನ್ನೂ ಹೊಂದಿದ್ದೀರಿ" (cf. rb 33) ಎಂದು ಹೇಳಿದಾಗ, ಇದು ಲೌಕಿಕ ವಿಷಯಗಳಿಂದ ಬೇರ್ಪಡಿಸಬೇಕಾದ ಸನ್ಯಾಸಿ ತತ್ವವನ್ನು ಪ್ರದರ್ಶಿಸುತ್ತದೆ. ವಸ್ತುಗಳಿಂದ ಬೇರ್ಪಡುವಿಕೆ ಎಂದರೆ ವಿಶ್ವದಲ್ಲಿರುವ ಕ್ರೈಸ್ತ ಬಾಂಧವರಿಂದ ಬೇರ್ಪಡುಸುವುದಲ್ಲ, ಆದರೆ ಅದರ ಬದಲಿಗೆ ಇತರರೊಂದಿಗೆ ಆಳವಾದ ಐಕ್ಯತೆಯನ್ನು ಬೆಳೆಸುವುದು ಎಂದು ಅಬ್ಬಾ ಅಂತೋಣಿನಿಯವರು ಹೇಳುತ್ತಾರೆ, "ನಮ್ಮ ಜೀವನ ಮತ್ತು ನಮ್ಮ ಸಾವು ನಮ್ಮ ನೆರೆಹೊರೆಯವರೊಂದಿಗೆ" (cf. rb 4:26; 72:8).

“ಗೊತ್ತು ಮಾಡಿರುವುದಕ್ಕಿಂತ ಹೆಚ್ಚಾಗಿ ಕಿತ್ತುಕೊಳ್ಳಬೇಡಿ." ದುರಾಸೆಯ ಉಪಸ್ಥಿತಿಯು ದೇವರ ಅನುಗ್ರಹದ ಮೇಲಿಡುವ ವಿಶ್ವಾಸದ ಕೊರತೆಯ ಸಾಕ್ಷಿಯಾಗಿದೆ. ಅಬ್ಬಾ ಪೊಮೆನ್ ರವರು ಹೇಳಿಕೆಯ ಪ್ರಕಾರ, "ಇಂದಿನ ಬಗ್ಗೆ ಕಾಳಜಿ ವಹಿಸುವವನು ನಾಳೆಯ ಬಗ್ಗೆಯೂ ಕಾಳಜಿ ವಹಿಸುವವನು" (cf. ಮತ್ತಾಯ 6:34; rb 4:74).

“ಬಲಾತ್ಕಾರದಿಂದಾಗಲಿ, ಸುಳ್ಳು ಬೆದರಿಕೆಯಿಂದಾಗಲಿ, ಯಾರನ್ನೂ ಸುಲಿಗೆ ಮಾಡಬೇಡಿ; ನಿಮಗೆ ಬರುವ ಸಂಬಳದಿಂದ ತೃಪ್ತರಾಗಿರಿ.” ಈ ಪ್ರಸ್ತುತ ಕಾಲದಲ್ಲಿ ಕಠಿಣ ಸಲಹೆಯನ್ನು ಒಪ್ಪಿಕೊಳ್ಳಬಹುದು, ಆದರೆ ಕೇವಲ ಹೊರಗಿನ ವಿಷಯಗಳಲ್ಲಿ ತೃಪ್ತಿಯನ್ನು ಹುಡುಕುವುದು ಆಂತರಿಕ ವಿಷಯಗಳ ಬಗ್ಗೆ ಶೂನ್ಯತೆಯ ಸಾಕ್ಷಿಯಾಗಿದೆ; ರುಚಿಕರವಾದ ಭೋಜನವನ್ನು ಆನಂದಿಸಿದ ವ್ಯಕ್ತಿಯು ಸ್ನಿಕರ್ಸ್ ಬಾರ್ ಮಿಠಾಯಿಗಾಗಿ ಹಾತೊರೆಯುವುದಿಲ್ಲ. ಅಬ್ಬಾ ಅಂತೋಣಿಯವರು ಹೇಳುವ ಪ್ರಕಾರ, "ತನ್ನ ಹೃದಯದಲ್ಲಿ ದೇವರನ್ನು ಹೊಂದಿರುವವನು ಎಲ್ಲದರಲ್ಲೂ ತೃಪ್ತನಾಗಿರುತ್ತಾನೆ" (cf. ಲೂಕ 12:15; rb 5:14). ದೂರುವುದು ಮತ್ತು ಗೊಣಗುವುದು ಸಂತೋಷ ಮತ್ತು ಕೃತಜ್ಞತೆಯ ಸನ್ಯಾಸಿಗಳ ಸದ್ಗುಣವನ್ನು ನಾಶಪಡಿಸುತ್ತದೆ.

ಯೇಸು, ನಮ್ಮ ಪರಮಾನಂದ, ಅವರು ಬರುತ್ತಿದ್ದಾರೆ. ನಿಶ್ಚಲತೆಯ ಮೂಲಕ ಆತನಿಗೆ ಸ್ಥಳಾವಕಾಶ ಕಲ್ಪಿಸೋಣ. ಆಧ್ಯಾತ್ಮಿಕ ಗೊಂದಲವಿರುವ ನಮ್ಮ ಹೃದಯಗಳನ್ನು ಶುದ್ಧೀಕರಿಸುವ ಮೂಲಕ ನಾವು ವಿಶ್ವದ ಪರಮಾನಂದನ್ನು ಸ್ವಾಗತಿಸೋಣ ಮತ್ತು ನಮ್ಮ ಹೃದಯಗಳನ್ನು ಪ್ರೀತಿ, ವಿಶ್ವಾಸ, ಉದಾರತೆ ಮತ್ತು ಕೃತಜ್ಞತೆಯಿಂದ ಅಲಂಕರಿಸೋಣ.

15 ಡಿಸೆಂಬರ್ 2024, 10:26