MAP

PALESTINIAN-ISRAEL-RELIGION-CHRISTIANITY-CHRISTMAS PALESTINIAN-ISRAEL-RELIGION-CHRISTIANITY-CHRISTMAS  (AFP or licensors)

ಪವಿತ್ರ ನಾಡಿನ ಸಮನ್ವಯ ನಿಯೋಗವು ಜನವರಿಯಲ್ಲಿ ಜೆರುಸಲೇಮ್‌ಗೆ ಭೇಟಿ ನೀಡಲಿದೆ

ಪವಿತ್ರ ನಾಡಿನ ಸಮನ್ವಯದ ನಿಯೋಗವು ಜನವರಿ 18-23 ರವರೆಗೆ ಜೆರುಸಲೇಮ್‌ಗೆ ಪ್ರಯಾಣಿಸಲಿದ್ದು, ಗಾಜಾದಲ್ಲಿ ನಡೆದ ಯುದ್ಧದಿಂದಾಗಿ ಈ ವರ್ಷ ಕಾರ್ಯಗತವಾಗದ ಪವಿತ್ರ ನಾಡಿನಲ್ಲಿನ ಕ್ರೈಸ್ತ ಸಮುದಾಯಗಳ ಐಕಮತ್ಯದ ವಾರ್ಷಿಕ ತೀರ್ಥಯಾತ್ರೆ.

ಲಿಸಾ ಝೆಂಗಾರಿನಿ

ಪವಿತ್ರ ನಾಡಿನ ಸಮನ್ವಯದ ನಿಯೋಗ (ಎಚ್‌ಎಲ್‌ಸಿ) ಎಂದು ಕರೆಯಲ್ಪಡುವ ಪವಿತ್ರ ನಾಡಿನಲ್ಲಿರುವ ಧರ್ಮಸಭೆಗೆ ಬೆಂಬಲವಾಗಿ ಧರ್ಮಾಧ್ಯಕ್ಷರ ಸಮ್ಮೇಳನದ ಸಮನ್ವಯವು ಪವಿತ್ರ ನಾಡಿನ ಐಕಮತ್ಯದ ವಾರ್ಷಿಕ ತೀರ್ಥಯಾತ್ರೆಯನ್ನು ಪುನರಾರಂಭಿಸುತ್ತದೆ. 7 ಅಕ್ಟೋಬರ್ 2023ರ ದುರಂತದ  ದಾಳಿಗಳು, ನಂತರದ ಯುದ್ಧ ಮತ್ತು ಗಾಜಾದಲ್ಲಿ ಮಾನವೀಯ ಬಿಕ್ಕಟ್ಟಿನ ಕಾರಣ ಪವಿತ್ರ ನಾಡಿನ ಐಕಮತ್ಯದ ವಾರ್ಷಿಕ ತೀರ್ಥಯಾತ್ರೆ ಕಾರ್ಯಕ್ರಮವು ನಡೆಯಲಿಲ್ಲ.

ಇಂಗ್ಲೆಂಡ್ ಮತ್ತು ವೇಲ್ಸ್‌ನ ಇಬ್ಬರು ಧರ್ಮಾಧ್ಯಕ್ಷರುಗಳು ಸೇರಿದಂತೆ ಹನ್ನೆರಡು ಧರ್ಮಾಧ್ಯಕ್ಷರುಗಳ ನಿಯೋಗವು ಜನವರಿ 18-23ರವರೆಗೆ ಜೆರುಸಲೇಮ್‌ ಗೆ ಪ್ರಯಾಣಿಸಲು ಸಿದ್ಧವಾಗಿದೆ.

ಪವಿತ್ರ ನಾಡಿನಲ್ಲಿ ಯುದ್ಧವನ್ನು ಸಹಿಸಿಕೊಳ್ಳುತ್ತಿರುವ ಕ್ರೈಸ್ತರೊಂದಿಗೆ ಒಗ್ಗಟ್ಟಿನ ತೀರ್ಥಯಾತ್ರೆ
1990ರ ದಶಕದ ಉತ್ತರಾರ್ಧದಲ್ಲಿ ರಚಿಸಲಾದ ಪವಿತ್ರ ನಾಡಿನ ಸಮನ್ವಯದ ನಿಯೋಗವನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಭೆ (CBCEW) ಆಯೋಜಿಸಿದೆ ಮತ್ತು ಯುರೋಪ್, ಉತ್ತರ ಅಮೇರಿಕಾ ಮತ್ತು ದಕ್ಷಿಣ ಆಫ್ರಿಕಾದಾದ್ಯಂತ ಧರ್ಮಾಧ್ಯಕ್ಷರುಗಳನ್ನು ಒಟ್ಟುಗೂಡಿಸುತ್ತದೆ. ಅವರ ಈ ಕ್ರಿಯೆಯು ನಾಲ್ಕು ʼಪಿʼ ಗಳ ಮೇಲೆ ಕೇಂದ್ರೀಕೃತವಾಗಿದೆ: ಪ್ರಸನ್ನತೆ, ಪ್ರಾರ್ಥನೆ, ತೀರ್ಥಯಾತ್ರೆ‌ (ಪಿಲ್ಗ್‌ರಿಮೇಜ್) ಮತ್ತು ಪ್ರಭಾವ. "ತೀರ್ಥಯಾತ್ರೆಯು" ಸಭೆಯ ಪ್ರಮುಖ ಅಂಶವಾಗಿದೆ, ಧರ್ಮಾಧ್ಯಕ್ಷರುಗಳು ಪವಿತ್ರ ನಾಡಿಗೆ ಹೋಗಿ ಸ್ಥಳೀಯ ಕ್ರೈಸ್ತ ಸಮುದಾಯಗಳಿಗೆ ನಿಮ್ಮನ್ನು ನಾವು ಮರೆತಿಲ್ಲ ಎಂದು ತಿಳಿಸುತ್ತಾರೆ; ಅವರೊಂದಿಗೆ ಪ್ರಾರ್ಥಿಸಲು; ಅವರ ನಾಡಿಗೆ ತೀರ್ಥಯಾತ್ರೆಯನ್ನು ಪ್ರೋತ್ಸಾಹಿಸಲು; ಮತ್ತು ಆಯಾ ದೇಶಗಳಲ್ಲಿ ಅವರ ಪರವಾಗಿ ವಾದಿಸಲು ಆ ಸ್ಥಳಕ್ಕೆ ತೀರ್ಥಯಾತ್ರೆ ಕೈ ಗೊಳ್ಳುತ್ತಾರೆ.

"ನಿಮ್ಮನ್ನು ಮರೆತಿಲ್ಲ"
ಹಮಾಸ್ ಮತ್ತು ಇಸ್ರಯೇಲ್ ನಡುವಿನ ಯುದ್ಧವು, ಅದರ ಸಾವು ಮತ್ತು ವಿನಾಶದೊಂದಿಗೆ ಅಡೆತಡೆಯಿಲ್ಲದೆ ಮುಂದುವರದಂತೆ, ಸಮನ್ವಯದ ಧರ್ಮಾಧ್ಯಕ್ಷರುಗಳು ಈಗ ಹೆಚ್ಚು ತುರ್ತಾಗಿ ಹೋಗಿ ಪವಿತ್ರ ನಾಡಿನ ಕ್ರೈಸ್ತರು ಮತ್ತು ಅಕ್ಟೋಬರ್ 7 ರಿಂದ ಬಳಲುತ್ತಿರುವ ಎಲ್ಲರೊಂದಿಗೆ ಒಗ್ಗಟ್ಟಾಗಿರಬೇಕು ಎಂದು ಭಾವಿಸುತ್ತಾರೆ. "ಪವಿತ್ರ ನಾಡಿನಲ್ಲಿನ ಯುದ್ಧ ಮತ್ತು ಸಂಕಟದ ವಿನಾಶವು ಹೃದಯವನ್ನು ಮುರಿಯುವಂತಿದೆ ಮತ್ತು ಪ್ರಾರ್ಥನೆ, ಬೆಂಬಲ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ಮಾರ್ಗಗಳನ್ನು ಹುಡುಕುವ ಅಗತ್ಯವು ಎಂದಿಗೂ ಹೆಚ್ಚು ತುರ್ತು ಅಲ್ಲ" ಎಂದು ಅಂತರಾಷ್ಟ್ರೀಯ ವ್ಯವಹಾರಗಳು ಮತ್ತು HLCಯ ಮಾಡರೇಟರ್ (ಚರ್ಚಾನಿರ್ವಾಹಕ) ಮತ್ತು CBCEWನ ವಿಭಾಗದ ಅಧ್ಯಕ್ಷ ಧರ್ಮಾಧ್ಯಕ್ಷರಾದ ನಿಕೋಲಸ್ ಹಡ್ಸನ್ ರವರು ವಿವರಿಸುತ್ತಾರೆ.

"ಕ್ರೈಸ್ತರಾಗಿ, ಬಳಲುತ್ತಿರುವವರೊಂದಿಗೆ ಒಗ್ಗಟ್ಟಿನಿಂದ ಇರಲು ಮತ್ತು 'ನಿನ್ನನ್ನು ಮರೆತಿಲ್ಲ, ನಾವು ನಿಮ್ಮೊಂದಿಗಿದ್ದೇವೆ ಎಂದು ಹೇಳಲು ನಾವು ಕರೆ ನೀಡುತ್ತೇವೆ."

ಲಂಡನ್‌ಗೆ ತಮ್ಮ ಇತ್ತೀಚಿನ ನಾಲ್ಕು ದಿನಗಳ ಭೇಟಿಯ ಸಂದರ್ಭದಲ್ಲಿ ಕಾರ್ಡಿನಲ್ ಪಿಯರ್‌ಬಟ್ಟಿಸ್ಟಾ ಪಿಜ್ಜಾಬಲ್ಲಾರವರ ಮಾತುಗಳನ್ನು ನೆನಪಿಸಿಕೊಂಡ ಧರ್ಮಾಧ್ಯಕ್ಷರಾದ ಹಡ್ಸನ್ ರವರು, ಈ ಪ್ರದೇಶದಲ್ಲಿ ಸಾಮರಸ್ಯ ಮತ್ತು ದೀರ್ಘಕಾಲದ ಶಾಂತಿಯನ್ನು ತರಲು ಕ್ರೈಸ್ತರು ವಹಿಸಬಹುದಾದ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದರು.

ಒಡೆದ ಸಮುದಾಯಗಳಲ್ಲಿ ಸಮನ್ವಯತೆಗಾಗಿ ಕೆಲಸ ಮಾಡುವುದು
ಆಗಮನ ಕಾಲದ ಮೊದಲ ಭಾನುವಾರದಂದು ವೆಸ್ಟ್‌ಮಿನಿಸ್ಟರ್ ಪ್ರಧಾನಾಲಯದ ದಿವ್ಯಬಲಿಪೂಜೆಯ ತಮ್ಮ ಪ್ರಬೋಧನೆಯಲ್ಲಿ, ಜೆರುಸಲೇಮ್‌ನ ಲತೀನ್ ಕುಲಸಚಿವರು ಪವಿತ್ರ ನಾಡಿನಲ್ಲಿರುವ ಕ್ರೈಸ್ತರ ವಿಶೇಷ ಕರೆಯ ಕುರಿತು ಮಾತನಾಡುತ್ತಾ, ಸಮುದಾಯಗಳನ್ನು ಮತ್ತೆ ಒಟ್ಟಿಗೆ ತರಲು, ದ್ವೇಷ ಮತ್ತು ಪರಸ್ಪರ ಭಯದಿಂದ ಮುರಿದುಹೋಗಿರುವ ಸಂಬಂಧಗಳನ್ನು ಪುನರ್ನಿರ್ಮಿಸಲು ಕೆಲಸ ಮಾಡುತ್ತಿದ್ದಾರೆ.

"ಜನವರಿ 2025ರಲ್ಲಿ ನಮ್ಮ ಭೇಟಿಯು ಪವಿತ್ರ ನಾಡಿನಲ್ಲಿರುವ ಧರ್ಮಸಭೆಯೊಂದಿಗೆ, ಬಳಲುತ್ತಿರುವ ಮತ್ತು ಭರವಸೆಯಿಲ್ಲದ ಎಲ್ಲರೊಂದಿಗೆ ನಮ್ಮ ಐಕ್ಯತೆಯ ಬಂಧವನ್ನು ಪುನರುಚ್ಚರಿಸುವ ಸಮಯವಾಗಿದೆ" ಎಂದು ಧರ್ಮಾಧ್ಯಕ್ಷರಾದ ಹಡ್ಸನ್ ರವರು ಹೇಳಿದರು, ಜನರು ಶಾಂತಿ, ಸತ್ಯ ಮತ್ತು ಸಮನ್ವಯದ ಮಾರ್ಗಗಳ ಮಾರ್ಗದರ್ಶನಕ್ಕಾಗಿ ಪವಿತ್ರಾತ್ಮರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

“ಸ್ವರ್ಗದ ತಂದೆಯೇ, ನಿಮ್ಮ ಪುತ್ರನು ಹುಟ್ಟಿ – ಬೆಳೆದು, ತಮ್ಮ ಮರಣ ಮತ್ತು ಪುನರುತ್ಥಾನದ ಮೂಲಕ ಪವಿತ್ರೀಕರಿಸಿದ ಈ ನಾಡಿನಲ್ಲಿ ನರಳುತ್ತಿರುವ ಎಲ್ಲರಿಗೂ ಈ ಕ್ರಿಸ್ತಜಯಂತಿಯಂದು ನಾವು ಪ್ರಾರ್ಥಿಸುತ್ತೇವೆ. ಪ್ರಭು ಯೇಸು ಅವರನ್ನು ತನ್ನ ಪವಿತ್ರ ಹೃದಯದಲ್ಲಿ ಹಿಡಿದಿಟ್ಟುಕೊಳ್ಳಲಿ. ಪವಿತ್ರ ನಾಡನ್ನು ನವೀಕರಿಸಲು ಮತ್ತು ಅವರ ಜನರನ್ನು ಶಾಂತಿ, ಸತ್ಯ ಮತ್ತು ಸಮನ್ವಯದ ಮಾರ್ಗಗಳಿಗೆ ಮಾರ್ಗದರ್ಶನ ನೀಡಲು ಆ ಪವಿತ್ರಾತ್ಮರನ್ನು ಮತ್ತೆ ಕಳುಹಿಸಿಬೇಕೆಂದು. ನಮ್ಮ ಪ್ರಭು ಯೇಸುಕ್ರಿಸ್ತರ ಮೂಲಕ ನಿಮ್ಮನ್ನು ಪ್ರಾರ್ಥಿಸುತ್ತೇವೆ. ಆಮೆನ್.”

30 ಡಿಸೆಂಬರ್ 2024, 09:46