MAP

Giubileo: card.Reina apre Porta Santa a S.Giovanni in Laterano Giubileo: card.Reina apre Porta Santa a S.Giovanni in Laterano  (ANSA)

ರೋಮ್‌ನ-ಸಂತ ಯೊವಾನ್ನರ ಲ್ಯಾಟೆರನ್ ಮಹಾದೇವಾಲಯದ ಪವಿತ್ರ ದ್ವಾರಗಳ ತೆರೆಯುವಿಕೆ

ಪವಿತ್ರ ಕುಟುಂಬದ ಹಬ್ಬದಂದು ರೋಮ್ ಧರ್ಮಕ್ಷೇತ್ರದ ಪ್ರಧಾನ ಶ್ರೇಷ್ಠಗುರುಗಳು (ಕಾರ್ಡಿನಲ್ ವಿಕಾರ್) ಕಷ್ಟಗಳನ್ನು ಎದುರಿಸುತ್ತಿರುವ ಕುಟುಂಬಗಳಿಗಾಗಿ ವಿಶೇಷವಾಗಿ ಪ್ರಾರ್ಥಿಸಲು ನಮ್ಮನ್ನು ಆಹ್ವಾನಿಸುತ್ತಾರೆ. ನಾವು ದೇವರಿಂದ ಎಷ್ಟೇ ದೂರ ಹೋದರೂ, ದೇವರು ನಮಗೆ ಪ್ರೀತಿಯ ಮತ್ತು ಅಚಲ ಭರವಸೆಯ ಮೂಲವಾಗಿದ್ದಾರೆ ಎಂದು ಒತ್ತಿಹೇಳುತ್ತಾರೆ.

ಆಂಟೋನೆಲ್ಲಾ ಪಲೆರ್ಮೊ

ಪವಿತ್ರ ಕುಟುಂಬ ಹಬ್ಬದ ಭಾನುವಾರದ ದಿವ್ಯಬಲಿಪೂಜೆಯಲ್ಲಿ ಅಧ್ಯಕ್ಷತೆ ವಹಿಸಿದ, ಕಾರ್ಡಿನಲ್ ಬಾಲ್ಡೊ ರೈನಾರವರು, ಯಾತ್ರಿಕರು ತಮ್ಮ ಹೊರೆಗಳಿಂದ ಮುಕ್ತರಾಗಲು ಮತ್ತು ವಿಶ್ವವು ತಮ್ಮ ಮೇಲೆ ಇರಿಸುವ ಹೊರೆಗಳನ್ನು ಕೆಳಗಿಳಿಸಲು ಹೇಗೆ ಇಲ್ಲಿಗೆ ಬರುತ್ತಾರೆ ಎಂಬುದನ್ನು ನೆನಪಿಸಿಕೊಂಡರು. ರೋಮ್ ನ ಧರ್ಮಕ್ಷೇತ್ರದ ವಿಶ್ವಗುರು ಫ್ರಾನ್ಸಿಸ್ ರವರು ಪ್ರಧಾನ ಶ್ರೇಷ್ಠಗುರುಗಳಾಗಿದ್ದು (ವಿಕಾರ್ ಜನರಲ್), ಸಂತ ಯೊವಾನ್ನರ ಲ್ಯಾಟೆರನ್ನ ಪಾಪೆಲ್ ಮಹಾದೇವಾಲಯ, ತಮ್ಮ ಪ್ರಧಾನಾಲಯದ ಪವಿತ್ರ ದ್ವಾರಗಳನ್ನು ತೆರೆದರು, ಈ ಆಚರಣೆಯು ಎಲ್ಲಾ ಧರ್ಮಕ್ಷೇತ್ರಗಳಲ್ಲಿ ಜೂಬಿಲಿ ಭರವಸೆಯ ವರ್ಷದ ಆರಂಭದ ಆಚರಣೆಯನ್ನು ಸೂಚಿಸುತ್ತದೆ.

ರೋಮ್‌ನ ಮೇಯರ್ ಸಹ ಈ ಆಚರಣೆಯಲ್ಲಿ ಪಾಲ್ಗೊಂಡರು, ಮಹಾದೇವಾಲಯದ ಮುಂಭಾಗದ ಚೌಕಟ್ಟಿನ ಸಭಾಂಗಣವನ್ನು ಮತ್ತು ಪವಿತ್ರ ಮೆಟ್ಟಿಲುಗಳ ಎದುರಿನ ಸ್ಥಳವನ್ನು ಉದ್ಘಾಟಿಸಿದರು, ಇದು ಈಗ ದೊಡ್ಡ ದೊಡ್ಡ ಹುಲ್ಲು ಮತ್ತು ಸುತ್ತಲೂ ನೀರಿನ ಕಾರಂಜಿಗಳ ಜೆಟ್‌ಗಳು ಮತ್ತು ಮಂಜಿನಿಂದ ಕೂಡಿರುವ ಕಾರ್ಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಪ್ರಪಂಚದ ವಿವಿಧ ಭಾಗಗಳಿಂದ ಧಾರ್ಮಿಕರು, ತಾಯಂದಿರು ಮತ್ತು ಅವರ ಮಕ್ಕಳು, ಯುವ ಕುಟುಂಬಗಳು, ಭಕ್ತಾಧಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಭಾಗವಹಿಸಿದ್ದರು, ಇದು ನಮ್ಮ ಪ್ರಪಂಚದ ಉತ್ಸಾಹವನ್ನು, ಸಂತೋಷ ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಅದರ ಬಗ್ಗೆ ಭರವಸೆಯನ್ನು ಸೂಚಿಸುತ್ತದೆ.

"ಈ ಸ್ಥಳದಲ್ಲಿರುವುದು ಎಷ್ಟು ಮಹತ್ವದ ಗೌರವವಾಗಿದೆ" ಎಂದು ಮಹಿಳೆಯೊಬ್ಬಳು ತನ್ನ ತಾಯಿಯೊಂದಿಗೆ ಹೇಳಿಕೊಂಡಿದ್ದಾರೆ. ಯುವತಿಯೊಬ್ಬಳು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಇಚ್ಛೆಯನ್ನು ಹೊಂದಿರುವವರ ಭಕ್ತಾಧಿಗಳ ಕುರಿತು, ಆದರೆ ಅಲ್ಲಿಗೆ ಬರಲು ಸಾಧ್ಯವಾಗದವರ ಉತ್ಸಾಹವನ್ನು ವ್ಯಕ್ತಪಡಿಸಿದಳು. "ನಮ್ಮ ಜೀವನವನ್ನು ಪರಿವರ್ತಿಸಿಕೊಳ್ಳಲು, ಇಲ್ಲಿ ಇರುವುದು ಬಹಳ ಮುಖ್ಯ, ಏಕೆಂದರೆ ನಾವೆಲ್ಲರೂ ಪವಿತ್ರತೆಯ ಜೀವನವನ್ನು ಜೀವಿಸಲು ಕರೆಯಲ್ಪಟ್ಟಿದ್ದೇವೆ" ಎಂದು ಮೆಕ್ಸಿಕೋದ ಧಾರ್ಮಿಕರೊಬ್ಬರು ಹೇಳುತ್ತಾರೆ. "ಹೌದು ಇದು ನಮಗೆ ಮುಖ್ಯವಾಗಿದೆ ಏಕೆಂದರೆ ದೇವರು ಇಲ್ಲದೆ ನಾವು ಏನೇ ಮಾಡಲು ಅಸಾಧ್ಯ" ಎಂದು ನಾಲ್ಕು ಮಕ್ಕಳೊಂದಿಗೆ ನ್ಯೂಯಾರ್ಕ್ ದಂಪತಿಗಳು ಹೇಳಿದರು. "ಭಗವಂತ ನಮಗೆ ಭರವಸೆಯನ್ನು ನೀಡಲಿ ಮತ್ತು ಆತನ ವಾಕ್ಯವನ್ನು ಜನರಿಗೆ ತಲುಪಿಸಲು ನಮಗೆ ನೆರವಾಗಲಿ" ಎಂದು ಉತ್ತರ ಇಟಲಿಯ ಮಹಿಳೆಯೊಬ್ಬರು ಹೇಳಿದರು.

ಪ್ರಧಾನಾಲಯದಲ್ಲಿ ವಿಶ್ವಗುರುಗಳೊಂದಿಗೆ ಸಹಭಾಗಿತ್ವ
ಮಹಾದೇವಾಲಯದಲ್ಲಿ ನಡೆದ ಆಚರಣೆಯಲ್ಲಿ ಸುಮಾರು ಮೂರು ಸಾವಿರ ಭಕ್ತವಿಶ್ವಾಸಿಗಳು ಹಾಜರಿದ್ದರು, ಆದರೆ ಇತರರು ಅದನ್ನು ನೇರವಾಗಿ (ಲೈವ್ ಆಗಿ) ಅನುಸರಿಸಲು ಹೊರಗೆ ಉಳಿದರು. ಪವಿತ್ರ ಬಾಗಿಲನ್ನು ತೆರೆಯುವ ಮೂಲಕ ಕಾರ್ಡಿನಲ್ ರೈನಾರವರು ಉಚ್ಚರಿಸಿದ ಪ್ರಾರ್ಥನೆಯು, ಪವಿತ್ರ ಬಾಗಿಲಿನ ಮೂಲಕ ಹಾದುಹೋಗುವವರೆಲ್ಲರೂ ದೇವರ ಅನುಗ್ರಹದಿಂದ ಕೂಡಿರಬೇಕೆಂದು ಕೇಳಿಕೊಂಡರು: "ಒಂದೇ ಕುರಿ ಹಿಂಡಿನಲ್ಲಿ ಒಟ್ಟುಗೂಡುವ ಹಿಂಡಿನಂತೆ, ಅವರು ಈ ಜಯಂತಿ ವರ್ಷದಲ್ಲಿ ಫಲಪ್ರದವಾಗಿ ಬದುಕಲಿ." ಮೌನವಾಗಿ, ಪ್ರಾರ್ಥನೆಯ ವಿರಾಮದೊಂದಿಗೆ ಪವಿತ್ರ ಬಾಗಿಲಿನಕಂಚಿನ ಬಾಗಿಲು ತೆರೆಯಲಾಯಿತು, ತಕ್ಷಣವೇ "ಎಲ್ಲಾ ಧರ್ಮಸಭೆಗಳಿಗೆ ತಾಯಿ-ಧರ್ಮಸಭೆಯಾದ" ಮಹಾದೇವಾಲಯದಲ್ಲಿ ಜೂಬಿಲಿ ಸ್ತುತಿಸ್ತೋತ್ರಗಳನ್ನು ಸಲ್ಲಿಸುವಂತೆ ಘಂಟೆಗಳು ಮೊಳಗಿದವು. ಪ್ರಧಾನಾಲಯದಲ್ಲಿ ವಿಶ್ವಗುರು ಫ್ರಾನ್ಸಿಸ್ ರವರೊಂದಿಗಿನ ಗಳೊಂದಿಗೆ ಸಹಭಾಗಿತ್ವದಲ್ಲಿ, ಅವರ ಆಧ್ಯಾತ್ಮಿಕ ಬೆಂಬಲ ಮತ್ತು ಸಂತೋಷದ ಭರವಸೆಯೊಂದಿಗೆ ಪ್ರಾರ್ಥನೆಯಲ್ಲಿ ಸೇರಲು ಭಕ್ತಾಧಿಗಳನ್ನು ಆಹ್ವಾನಿಸಲಾಯಿತು.

ಬಳಲುತ್ತಿರುವರೊಂದಿಗೆ ಆಪ್ತತೆ
ತಮ್ಮ ಪ್ರಬೋಧನೆಯಲ್ಲಿ, ಕಾರ್ಡಿನಲ್ ರೈನಾರವರು ವಿಶೇಷವಾಗಿ "ತಮ್ಮನ್ನು ಅನರ್ಹರೆಂದು ಭಾವಿಸುವವರನ್ನು" ಮತ್ತು ತಮ್ಮ ಹೃದಯದಲ್ಲಿ "ಆಳವಾದ ಕಹಿ ಅನುಭವದ ಭಾರವನ್ನು" ಹೊಂದಿರುವವರನ್ನು ನೆನಪಿಸಿಕೊಂಡರು. ಅವರೆಂದರೆ ಅಸ್ವಸ್ಥರು, ಕೈದಿಗಳು, ನೋವು, ಒಂಟಿತನ, ಬಡತನ ಮತ್ತು ಕಷ್ಟಗಳಿಂದ ಬಳಲುತ್ತಿರುವವರನ್ನು ನೆನಪಿಸಿಕೊಂಡರು. ಅವರನ್ನು ಕುರಿತು ಉತ್ತೇಜನಕಾರಿ ಮಾತುಗಳನ್ನು ನುಡಿದರು, "ನಿರುತ್ಸಾಹ ಅಥವಾ ಅರ್ಥ ಮಾಡಿಕೊಳ್ಳದ ಕೊರತೆಯಿಂದಾಗಿ" ಎಲ್ಲರೂ ನಿಮ್ಮನ್ನು ಕೈಬಿಟ್ಟರು ಎಂದು ಭಾವಿಸಬೇಡಿ, "ಯುದ್ಧಗಳು, ಅಪಶ್ರುತಿ ಮತ್ತು ಅಸಮಾನತೆಗಳಿಂದ ಹರಿದ ಈ ಜಗತ್ತಿನಲ್ಲಿ ಯಾರೆಲ್ಲಾ ಭರವಸೆಯನ್ನು ಕಳೆದುಕೊಂಡಿದ್ದಾರೆ ಅಥವಾ ತಂದೆ ದೇವರ ಅಪ್ಪುಗೆಯನ್ನು ಹುಡುಕುವುದನ್ನು ನಿಲ್ಲಿಸಿದ್ದಾರೊ, ಅವರಿಗಾಗಿ ನಾವೆಲ್ಲರೂ ನಮ್ಮ ಅಪ್ಪುಗೆಯನ್ನು ತೆರೆಯೋಣ"ಎಂದು ಹೇಳಿದರು.

ಕಷ್ಟದಲ್ಲಿರುವ ಕುಟುಂಬಗಳಿಗಾಗಿ ಪ್ರಾರ್ಥನೆ
"ದೈವಾನುಗ್ರಹದ ಸಂಪಾತ"ದ ಮೂಲಕ ಅವರು ಇಂದು ನಜರೇತಿನ ಪವಿತ್ರ ಕುಟುಂಬದ ಹಬ್ಬವನ್ನು ಆಚರಿಸುತ್ತಿದ್ದಾರೆ, "ಪ್ರತಿ ದೇಶೀಯ ಸಮುದಾಯದ ಮಾದರಿ ಮತ್ತು ಪರಮತ್ರಿತ್ವದ ಐಕ್ಯತೆಯ ಪ್ರತಿಬಿಂಬವು, ಎಲ್ಲರನ್ನು ತಮ್ಮನ್ನು ತಾವು ದೇವರ ಕುಟುಂಬದ ಒಂದು ಭಾಗವಾಗಿ ಗುರುತಿಸಿಕೊಳ್ಳಲು ಆಹ್ವಾನಿಸುತ್ತಾರೆ, ಏಕತೆ ಮತ್ತು ಪ್ರೀತಿಯಲ್ಲಿ ಬೆಳೆಯಲು ಕರೆ ನೀಡುತ್ತಿದ್ದಾರೆ. ಅವರು ತಮ್ಮ ಪ್ರಾರ್ಥನೆಯಲ್ಲಿ ವಿಶೇಷವಾಗಿ ಕಷ್ಟ ಮತ್ತು ಸಂಕಟದಲ್ಲಿರುವ ಕುಟುಂಬಗಳನ್ನು ನೆನಪಿಸಿಕೊಂಡರು. ದಿವ್ಯಬಲಿಪೂಜೆಯ ಸಮಯದಲ್ಲಿ ಪ್ರಾರ್ಥನಾ ಉದ್ದೇಶಗಳಲ್ಲಿ ಒಂದರಲ್ಲಿ, ನಿರ್ದಿಷ್ಟವಾಗಿ ಬಡತನದಲ್ಲಿರುವ ಕುಟುಂಬಗಳನ್ನು ನೆನಪಿಸುತ್ತಾ: "ಬಡವರು ನಾಗರಿಕ ನಾಯಕರ ಗಮನದ ಕೇಂದ್ರದಲ್ಲಿರಲಿ ಮತ್ತು ಹೆಚ್ಚು ಘನತೆಯ ಭವಿಷ್ಯಕ್ಕಾಗಿ ಅಗತ್ಯವಾದ ಬೆಂಬಲವನ್ನು ಪಡೆಯಲಿ" ಅವರಿಗಾಗಿ ಪ್ರಾರ್ಥಿಸಿದರು.

ನಮ್ಮ ಮನ, ಮನೆಗಳಲ್ಲಿ ದೇವರನ್ನು ಸ್ವಾಗತಿಸುವುದು
ಕಾರ್ಡಿನಲ್ ರೈನಾ ಅವರು "ನಾವು ದಾಟಿದ ಪವಿತ್ರ ಬಾಗಿಲು ನಮ್ಮ ಮನೆಗಳ ಹೊಸ್ತಿಲನ್ನು ದಾಟುವಾಗ ನಾವು ಮಾಡುವ ದೈನಂದಿನ ಸೂಚಕವನ್ನು ಪ್ರಚೋದಿಸುತ್ತದೆ. ಈಗ ವಿಶಾಲವಾಗಿ ತೆರೆದಿರುವ ಈ ಬಾಗಿಲು ಪ್ರಭುವಿನ ಮನೆಗೆ ಮಾತ್ರವಲ್ಲದೆ ಆತನ ಹೃದಯದ ಆಳಕ್ಕೂ ನಮ್ಮನ್ನು ಪರಿಚಯಿಸಿದೆ." ಮತ್ತು ಪರಮಪ್ರಸಾದದ ದೈವಾರಾಧನೆಯ ವಿಧಿಯ ಮೊದಲು ಕುಟುಂಬಗಳ ಪ್ರಾರ್ಥನೆಯಲ್ಲಿ, ಸಂಗಾತಿಯ ಕ್ರಿಯೆಗಳಿಗೆ ಮಾರ್ಗದರ್ಶನ ನೀಡಲು ಪವಿತ್ರಾತ್ಮರಿಗೆ ಆಹ್ವಾನ ನೀಡಲಾಯಿತು, ಇದರಿಂದಾಗಿ ಮಾನವನು ಮತ್ತು ಮಕ್ಕಳು ಕ್ರೈಸ್ತ ಬೆಳವಣಿಗೆಯ ಕುಟುಂಬದಲ್ಲಿ ಬೆಂಬಲವನ್ನು ಪಡೆದು ಮತ್ತು ಆ ಪ್ರೀತಿಯು, ಮದುವೆ ಎಂಬ ಬಂಧದಿಂದ ಪವಿತ್ರವಾಗಿಸಿ, ಯಾವುದೇ ದೌರ್ಬಲ್ಯ ಮತ್ತು ಬಿಕ್ಕಟ್ಟುಗಳಿಗಿಂತ ಇದು ಹೆಚ್ಚು ಪ್ರಬಲವಾದದ್ದು ಎಂದು ಸಾಬೀತುಪಡಿಸಬಹುದು ಎಂದು ಹೇಳಿದರು. ನಾವು ನಮ್ಮ ಸ್ವಂತ ಮನೆಗಳ ಬಾಗಿಲಿನ ಹೊಸ್ತಿಲನ್ನು ದಾಟುವಾಗ, ನಾವು ನಮ್ಮ ಕುಟುಂಬಗಳಿಗೆ, ನಮ್ಮ ದೈನಂದಿನ ಸಂಬಂಧಗಳಲ್ಲಿ, ಮಕ್ಕಳೊಂದಿಗನ ನಮ್ಮ ಸಂಬಂಧಕ್ಕೆ, ವೈವಾಹಿಕ ಬಂಧಗಳಿಗೆ, ಮನೆಯಲ್ಲಿರುವ ಹಿರಿಯರ ಕಡೆ ಗಮನ ಹರಿಸಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವ ಮೂಲಕ ದೇವರನ್ನು ನಮ್ಮ ಮನ, ಮನೆಗಳಿಗೆ ತರಲು ಪ್ರಯತ್ನಿಸೋಣ ಎಂದು ತಮ್ಮ ಪ್ರಬೋಧನೆಯಲ್ಲಿ ತಿಳಿಸಿದರು.

ದೇವರ ಮಕ್ಕಳಾಗುವ ಉಡುಗೊರೆ
ಕಾರ್ಡಿನಲ್ ರೈನಾರವರು ತಮ್ಮ ಪ್ರಬೋಧನೆಯನ್ನು ದುಂದುಗಾರನ ಮಗನ ಸಾಮತಿಯ ಮೂಲಕ ವ್ಯಾಪಕವಾಗಿ ಚಿತ್ರಿಸಿದ್ದಾರೆ ಮತ್ತು ಅದು ದೇವರ ಮಕ್ಕಳಂತೆ ಜೀವಿಸಲು ಕೊಡುವ ಅಳವಾದ ಅರ್ಥವನ್ನು ಮರುಶೋಧಿಸಲು ನಮ್ಮನ್ನು ಹೇಗೆ ಕರೆಯುತ್ತದೆ ಮತ್ತು ಪ್ರಭುವಿನ ಪಿತೃತ್ವದ ಬಗ್ಗೆ ನಮ್ಮ ಮಾನವ ಗ್ರಹಿಕೆಯು ಎಷ್ಟು ಬಾರಿ ವಿಕೃತವಾಗಿರಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ. ಪ್ರಭುವು ನಮ್ಮೊಂದಿಗೆ ಬಯಸುತ್ತಿರುವ ಸಂಬಂಧವು "ಶರತ್ತಿನ ಮೇರೆಗೆ ದೇವರ ಮಕ್ಕಳಾಗುವುದಲ್ಲ, ಅಥವಾ ಅರ್ಹತೆಯಿಂದಲ್ಲ, ಆದರೆ ಇದು ಅವರಿಂದ ಬಂದ ಉಡುಗೊರೆಯಾಗಿದೆ."

ತಂದೆಯ ತೆರೆದ ತೋಳುಗಳೇ ಪವಿತ್ರ ಬಾಗಿಲು
ತಂದೆಯ ತೆರೆದ ತೋಳುಗಳು, ಮೀಸಲಾತಿಯಿಲ್ಲದೆ, ಮೃದುತ್ವ, ಸಹಾನುಭೂತಿ ಮತ್ತು "ಅಚಲವಾದ ಭರವಸೆ" ನಮ್ಮ ಘನತೆಯನ್ನು ಪುನಃಸ್ಥಾಪಿಸಲು ಸಮರ್ಥವಾಗಿವೆ ಎಂದು ಕಾರ್ಡಿನಾ ರೈನಾರವರು ಒತ್ತಿಹೇಳಿದರು. ಮತ್ತೊಮ್ಮೆ, ಇಬ್ಬರು ಪುತ್ರರ ದುಂದುಗಾರನ ಮಗನ ಸಾಮತಿಯ ಬೆಳಕಿನಲ್ಲಿ, ಅವರು ಬಹಳ ಸಮಾಧಾನದಿಂದ ಪ್ರಬೋಧನೆಯ ಮೂಲಕ ತಮ್ಮ ಚಿಂತನೆಯನ್ನು ಹಂಚಿಕೊಂಡರು: "ನಾವು ಎಷ್ಟು ದೂರ ಹೋಗಿದ್ದೇವೆ ಎಂಬುದು ಮುಖ್ಯವಲ್ಲ, ನಾವು ದೇವರ ಬಳಿಗೆ ಮರಳಲು ನಿರ್ಧರಿಸಿದ ಕ್ಷಣದಲ್ಲಿ ನಾವು ಎಷ್ಟು ವ್ಯರ್ಥ ಮಾಡಿದ್ದೇವೆ ಅಥವಾ ನಾಶವಾಗಿದ್ದೇವೆ, ಆದರೂ ನಾವು ಎಂದಿಗೂ ಮುಚ್ಚಿದ ಬಾಗಿಲನ್ನು ಕಾಣುವುದಿಲ್ಲ, ಆದರೆ ನಮ್ಮನ್ನು ಸ್ವಾಗತಿಸುವ ಮತ್ತು ಆಶೀರ್ವದಿಸುವ ಆ ತೆರೆದ ತೋಳುಗಳಾದ ಪವಿತ್ರ ಬಾಗಿಲು ನಮ್ಮನ್ನು ಅಪ್ಪಿಕೊಳ್ಳಲು ಕಾತುರದಿಂದ ಕಾಯುತ್ತಿರುತ್ತದೆ ಎಂದು ವಿವರಿಸುತ್ತಾರೆ.

ಹೀಗೆ ಮುಂದುವರಿಸುತ್ತಾ: "ಆ ತೆರೆದ ತೋಳುಗಳಿಂದ, ನಾವು ಧರ್ಮಸಭೆಯಾಗಲು, ಅದರ ಸಂಸ್ಕಾರವಾಗಲು, ನಮ್ಮ ಸ್ವಾತಂತ್ರ್ಯವನ್ನು ಉತ್ತಮವಾದುದರ ಕಡೆಗೆ ಮಾರ್ಗದರ್ಶಿಸುವ ದೇವರ ಕುಟುಂಬವಾಗಲು ಕಲಿಯುತ್ತೇವೆ." ಆದ್ದರಿಂದ, ಅವರು ವಿಶ್ವಾಸದಿಂದ ಪವಿತ್ರ ಬಾಗಿಲಿನ ಮೂಲಕ ಹಾದುಹೋಗಲು, ಪ್ರಭುವಿನ ಒಳ್ಳೆಯತನವನ್ನು ಆಸ್ವಾದಿಸಲು ಮತ್ತು ಆಲೋಚಿಸಲು, ಅವರ ಸಂತೋಷವನ್ನು ಅನುಭವಿಸಲು ಮತ್ತು ಜಗತ್ತಿನಲ್ಲಿ "ಭರವಸೆಯ ದಣಿವರಿಯದ ಬಿತ್ತುವವರು ಮತ್ತು ಭ್ರಾತೃತ್ವವನ್ನು ನಿರ್ಮಿಸುವವರಾಗಲು" ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿದರು.
 

31 ಡಿಸೆಂಬರ್ 2024, 08:11