MAP

2019.08.01 Cardinal Charles Maung Bo, Cardinale Salelsiano, Arcivescovo di Yangon, Bhirmania 2019.08.01 Cardinal Charles Maung Bo, Cardinale Salelsiano, Arcivescovo di Yangon, Bhirmania 

ಕಾರ್ಡಿನಲ್ ಬೊ ವಿದಾಯ : “ನಾವು ಒಂದು ಪರಂಪರೆಯನ್ನು ರೂಪಿಸಿದ್ದೇವೆ”

ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೋರವರು ಏಷ್ಯಾದ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ (FABC) ಅಧ್ಯಕ್ಷರಾಗಿ ತಮ್ಮ ಎರಡನೇ ಬಾರಿಯ ಅಂತಿಮ ಮೂರು ವರ್ಷಗಳ ಅವಧಿಯನ್ನು ಮುಕ್ತಾಯಗೊಳಿಸಿದಾಗ ವಿದಾಯ ಸಂದೇಶವನ್ನು ನೀಡಿದರು, ಇದರಲ್ಲಿ ಅವರು 'ಪರಂಪರೆಯನ್ನು ರೂಪಿಸಿದ' ವಿವಿಧ ಯಶಸ್ಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಉತ್ತರಾಧಿಕಾರಿಯಾದ ಭಾರತದ ಕಾರ್ಡಿನಲ್ ಫೆಲಿಪೆ ನೇರಿ ಫೆರೋ ರವರನ್ನು ಸ್ವಾಗತಿಸುತ್ತಾರೆ. ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಮ್ಯಾನ್ಮಾರ್‌ನ ಯಾಂಗೋನ್‌ನ ಕಾರ್ಡಿನಲ್ ಚಾರ್ಲ್ಸ್ ಮೌಂಗ್ ಬೋರವರು ತಮ್ಮ ಎರಡನೇ ಮೂರು ವರ್ಷಗಳ ಅವಧಿಯನ್ನು ಏಷ್ಯಾದ ಧರ್ಮಾದ್ಯಕ್ಷರುಗಳ ಸಮ್ಮೇಳನಗಳ ಒಕ್ಕೂಟದ ಅಧ್ಯಕ್ಷರಾಗಿ ಮುಕ್ತಾಯಗೊಳಿಸುತ್ತಿರುವಾಗ ವಿದಾಯ ಸಂದೇಶವನ್ನು ನೀಡಿದ್ದಾರೆ, ಅವರು "ಗಾಢವಾದ ಕೃತಜ್ಞತೆ ಮತ್ತು ನಮ್ರತೆಯಿಂದ ತುಂಬಿದ್ದಾರೆ" ಎಂದು ಹೇಳಿದರು.

ಎಫ್‌ಎಬಿಸಿಗೆ ಸಹಾಯ ಮಾಡಲು ನಿರ್ಣಾಯಕರಾಗಿರುವ ಎಲ್ಲರಿಗೂ ಅವರು ಧನ್ಯವಾದ ಸಲ್ಲಿಸಿದಂತೆ, "ನಾವು ಯೇಸುವಿನಿಂದ ಮತ್ತು ಏಷ್ಯಾದ ಕ್ರೈಸ್ತಶಾಸ್ತ್ರದ ದೃಷ್ಟಿಯಿಂದ ಪ್ರೇರೇಪಿಸಲ್ಪಟ್ಟಿದ್ದೇವೆ" ಎಂದು ಅವರು ಗಮನಿಸಿದರು.

ಗಮನಾರ್ಹ ದಾಪುಗಾಲುಗಳು

"ನಮ್ಮ ಸಾಮೂಹಿಕ ಪ್ರಯತ್ನಗಳ ಮೂಲಕ, ನಮ್ಮ ಧ್ಯೇಯವನ್ನು ಪೂರೈಸುವಲ್ಲಿ ನಾವು ಗಮನಾರ್ಹ ದಾಪುಗಾಲು ಇಟ್ಟಿದ್ದೇವೆ" ಎಂದು ಕಾರ್ಡಿನಲ್ ಬೊರವರು ಗಮನಿಸಿದರು.

"ನಮ್ಮ ಮಹತ್ವದ ಸಾಧನೆಗಳಲ್ಲಿ ಮುಂದುವರೆಯುತ್ತಿರುವ ಸಿನೊಡಲ್ ಪ್ರಯಾಣವೊಂದಾಗಿದೆ, ಅಲ್ಲಿ ನಾವು ಸಹಯೋಗ, ಸಂಭಾಷಣೆ ಮತ್ತು ಪರಸ್ಪರ ತಿಳುವಳಿಕೆಯ ಮನೋಭಾವವನ್ನು ಸ್ವೀಕರಿಸಿದ್ದೇವೆ" ಎಂದು ಅವರು ಹೇಳಿದರು, ಇದು "ಎಫ್‌ಎಬಿಸಿಯೊಳಗಿನ ಬಂಧಗಳನ್ನು ಬಲಪಡಿಸಿದೆ, ಮಾತ್ರವಲ್ಲದೆ ಹೆಚ್ಚು ಸ್ಪಷ್ಟವಾಗಿ ನಮ್ಮ ಹಂಚಿಕೊಳ್ಳುವ ದೃಷ್ಟಿ ಮತ್ತು ಉದ್ದೇಶವನ್ನು" ವಿವೇಚಿಸಲು ಅವಕಾಶ ಮಾಡಿಕೊಟ್ಟಿದೆ" ಎಂದು ಹೇಳಿದರು.

ಕಳೆದ ಆರು ವರ್ಷಗಳ ಅವಧಿಯಲ್ಲಿ ಬಹಳಷ್ಟು ಸಾಧಿಸಲಾಗಿದೆ ಮತ್ತು ಹೆಚ್ಚಿನ ಪ್ರಗತಿಯನ್ನು ಮಾಡಲಾಗಿದೆ ಎಂದು ಕಾರ್ಡಿನಲ್ ಬೊರವರು ನೆನಪಿಸಿಕೊಂಡರು.

ನೂತನ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ

ಅವರ ಸಂದೇಶದಲ್ಲಿ, ಕಚೇರಿಯಿಂದ ಹೊರಹೋಗುವ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಯಾದ ಕಾರ್ಡಿನಲ್ ಫಿಲಿಪ್ ನೆರಿಯವರು, ಭಾರತದಲ್ಲಿನ ಗೋವಾದ ಮಹಾಧರ್ಮಾಧ್ಯಕ್ಷರಾದ ಇ ದಮಾವೊರವರು ಮತ್ತು ರಾಷ್ಟ್ರದ ಧರ್ಮಾಧ್ಯಕ್ಷರುಗಳ ಸಮ್ಮೇಳನದ (CCBI) ಅಧ್ಯಕ್ಷರನ್ನು ಆತ್ಮೀಯವಾಗಿ ಸ್ವಾಗತಿಸಿದರು.

"ನಮ್ಮ ಹೊಸ ನಾಯಕರಾಗಿ ಪೂಜ್ಯ ಶ್ರೇಷ್ಠಗುರುಗಳಾದ ಕಾರ್ಡಿನಲ್ ಫಿಲಿಪ್ ನೇರಿರವರನ್ನು ಸ್ವಾಗತಿಸಲು ನಾನು ಸಂತೋಷಪಡುತ್ತೇನೆ," ಎಂದು ಕಾರ್ಡಿನಲ್ ಬೊರವರು ಹೇಳಿದರು. ಅವರ ಬೌದ್ಧಿಕ ಪರಾಕ್ರಮ, ಸಾಮಾಜಿಕ ಕುಶಾಗ್ರಮತಿ ಮತ್ತು ಪ್ರವಾದಿಯಂತಹ ನಾಯಕತ್ವದ ಗುಣಗಳು ನಿಜವಾಗಿಯೂ ಸ್ಪೂರ್ತಿದಾಯಕವಾಗಿವೆ.

"ಅವರ ಆಳವಾದ ವಿಶ್ವಾಸ ಮತ್ತು ಕ್ರಿಸ್ತನನ್ನು ಕೇಂದ್ರೀಕರಿಸುವ ದೃಷ್ಟಿಯೊಂದಿಗೆ ವಿವೇಚನಾಶೀಲ ಮತ್ತು ಲೆಕ್ಕಾಚಾರದ ನಿರ್ಧಾರಗಳನ್ನು ಮಾಡುವ ಅವರ ಸಾಮರ್ಥ್ಯವು ನಮ್ಮ ಭವಿಷ್ಯಕ್ಕಾಗಿ ಉತ್ತಮ ಭರವಸೆಯನ್ನು ಹೊಂದಿದೆ" ಎಂದು ಅವರ ಮಾತುಗಳನ್ನು ಮುಂದುವರಿಸಿದರು.

"ಧೈರ್ಯ ಮತ್ತು ಚಿಂತನಶೀಲ ಕಾರ್ಯಗಳನ್ನು ಕೈಕೊಳ್ಳುವ ಅವರ ಸಾಮರ್ಥ್ಯವು ನಿಸ್ಸಂದೇಹವಾಗಿ ಪ್ರಗತಿ ಮತ್ತು ಪ್ರಭಾವದ ಹೊಸ ಯುಗವನ್ನು ಪ್ರಾರಂಭಿಸುತ್ತದೆ, ನಾವು ಪ್ರಾರಂಭಿಸಿದ ಕೆಲಸವನ್ನು ಮುಂದುವರೆಸುತ್ತದೆ ಮತ್ತು ನಮ್ಮ ಪ್ರಸ್ತುತ ಕಲ್ಪನೆಗೂ ಮೀರಿದ ರೀತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ" ಎಂದು ಕಾರ್ಡಿನಲ್ ಬೊರವರು ಹೇಳಿದ್ದಾರೆ.

ಸಂತೋಷದಾಯಕ ಕ್ರಿಸ್‌ ಮಸ್ ಮತ್ತು ಹೊಸ ವರ್ಷದ ಶುಭಾಶಯಗಳು

"ನಿಮ್ಮ ಅಚಲವಾದ ಸಮರ್ಪಣೆ, ಸೃಜನಾತ್ಮಕ ಕೊಡುಗೆಗಳು, ಮತ್ತು ಪ್ರಾರ್ಥನೆಗಳು ಮತ್ತು ಬೆಂಬಲ," ಅವರು "ಈ ಪ್ರಯಾಣದ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದೆ" ಎಂದು ಅವರು ಹೇಳಿದರು.

ಈ ವರ್ಷದ ಅಂತ್ಯದೊಂದಿಗೆ, ಕಾರ್ಡಿನಲ್ ರವರು ಸಂತೋಷದಾಯಕ ಕ್ರಿಸ್‌ ಮಸ್ ಮತ್ತು ಸಮೃದ್ಧಿಯ ಹೊಸ ವರ್ಷದ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಕಾರ್ಡಿನಲ್ ಬೋರವರು ಪ್ರಾರ್ಥನೆಯ ಮೂಲಕ ಏಷ್ಯಾದಾದ್ಯಂತ ಇರುವ ಭಕ್ತವಿಶ್ವಾಸಿಗಳಿಗೆಲ್ಲಾ ಶಾಂತಿ, ಸಂತೋಷ, ಹೊಸ ಶಕ್ತಿ ಮತ್ತು ಭರವಸೆಯನ್ನು ನೀಡುತ್ತಾರೆ.

26 ಡಿಸೆಂಬರ್ 2024, 10:24