MAP

2024.12.24 Catholic University Erbil 2024.12.24 Catholic University Erbil 

ಎರ್ಬಿಲ್‌ನಲ್ಲಿರುವ ಕಥೋಲಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒಟ್ಟಿಗೆ ಕ್ರಿಸ್‌ಮಸ್ ಆಚರಿಸುತ್ತಾರೆ

ಕುರ್ದಿಸ್ತಾನ್ ಪ್ರದೇಶದಲ್ಲಿ, ಇರಾಕ್‌ನಲ್ಲಿ ಸಹಬಾಳ್ವೆ ಮತ್ತು ವೈವಿಧ್ಯತೆಯ ವಿಶಿಷ್ಟ ಮಾದರಿಯನ್ನು ಪ್ರತಿನಿಧಿಸುವ ಎರ್ಬಿಲ್‌ನಲ್ಲಿರುವ ಕಥೋಲಿಕ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಧಾರ್ಮಿಕ ವಿಶ್ವಾಸದ ವಿದ್ಯಾರ್ಥಿಗಳು ಕ್ರಿಸ್‌ಮಸ್ ನ್ನು ಒಟ್ಟಿಗೆ ಆಚರಿಸುವ ವಾರ್ಷಿಕ ಸಂಪ್ರದಾಯದಲ್ಲಿ ಒಟ್ಟಾಗಿ ಸೇರುತ್ತಾರೆ. ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

ಎರ್ಬಿಲ್‌ನಲ್ಲಿರುವ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿದ್ಯಾರ್ಥಿಗಳು, ನಮ್ಮ ಪ್ರಭುವಿನ ಜನನವನ್ನು ಆಚರಿಸುತ್ತಿದ್ದಾರೆ.
ವಿಶ್ವವಿದ್ಯಾನಿಲಯದ ಹೇಳಿಕೆಯ ಪ್ರಕಾರ, ಈ ಚಿಹ್ನೆಯು, ಶಿಕ್ಷಣ ಮತ್ತು ಮಾನವೀಯ ಸಂಸ್ಥೆಯ ಗುರಿಯನ್ನು ಪ್ರತಿಬಿಂಬಿಸುತ್ತದೆ, ಅದು ತಾರತಮ್ಯವಿಲ್ಲದೆ ಎಲ್ಲರನ್ನೂ ಆಹ್ವಾನಿಸುತ್ತದೆ.


ವಾರ್ಷಿಕ ಸಂಪ್ರದಾಯ
ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ, ಕ್ರಿಸ್‌ಮಸ್ ಸಾಂಸ್ಕೃತಿಕ ಏಕತೆಯ ಸಂಕೇತವಾಗಿದೆ, ಕ್ರಿಸ್‌ಮಸ್ ಮರವನ್ನು ಅಲಂಕರಿಸುವುದು ಸೇರಿದಂತೆ ಈ ಕಾಲದ ಸಿದ್ಧತೆಗಳಲ್ಲಿ ಕ್ರೈಸ್ತರೊಂದಿಗೆ ಮುಸ್ಲಿಮರು ಭಾಗವಹಿಸುತ್ತಾರೆ. ಪರಸ್ಪರ ಈ ವಿನಿಮಯದ ಕ್ಷಣವನ್ನು ಅನುಭವಿಸಲು ವಿದ್ಯಾರ್ಥಿಗಳ ಆಸಕ್ತಿಯಿಂದಾಗಿ ಗಮನಾರ್ಹವಾಗಿ ಬೆಳೆದ ಈ ಘಟನೆಯು ವಾರ್ಷಿಕ ಸಂಪ್ರದಾಯವಾಗಿದೆ.

ಒಟ್ಟಾಗಿ ಆಚರಿಸುತ್ತಿದ್ದೇವೆ
ಈ ವರ್ಷ " ಕಥೋಲಿಕ ವಿಶ್ವವಿದ್ಯಾನಿಲಯ" ಎಂಬ ಹೆಸರನ್ನು ಹೊಂದಿದ್ದರೂ, ವಿವಿಧ ಧರ್ಮಗಳ ಅಪಾರವಾದ ಮೆಚ್ಚುಗೆಯನ್ನು ಪಡಿದಿದೆ, ಇದು ಕಥೋಲಿಕ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯವು ಈ ಪ್ರದೇಶದಲ್ಲಿ ಗಳಿಸಿರುವ ಅಪಾರವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ, ವಿಶ್ವವಿದ್ಯಾನಿಲಯವು 750 ವಿದ್ಯಾರ್ಥಿಗಳ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವೈವಿಧ್ಯಮಯ ಮಿಶ್ರಣವನ್ನು ಪ್ರತಿನಿಧಿಸುತ್ತದೆ, ಅದರ ಸ್ಥಾಪನೆಯ ನಂತರ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಾಕ್ಷಿಯಾಗಿದೆ.

ಯಾರನ್ನೂ ಕಡೆಗಣಿಸುವುದಿಲ್ಲ
ಇಂದು ಶೈಕ್ಷಣಿಕ ಉತ್ಕೃಷ್ಟತೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಧಾರ್ಮಿಕ ಸಹಬಾಳ್ವೆಯ ಸಂಕೇತವಾಗಿ ಮಾರ್ಪಟ್ಟಿರುವ ಎರ್ಬಿಲ್‌ನಲ್ಲಿ ಕಥೋಲಿಕ ವಿಶ್ವವಿದ್ಯಾಲಯದ ಪ್ರಾರಂಭವು ಇಟಲಿಯಧರ್ಮಾಧ್ಯಕ್ಷರುಗಳ ಸಮ್ಮೇಳನದ ದೇಣಿಗೆಯ ಮೂಲಕ ಮಾತ್ರ ಸಾಧ್ಯವಾಯಿತು.
ವಿಶ್ವವಿದ್ಯಾನಿಲಯವು ಈಗ ವಿವಿಧ ಧರ್ಮಗಳ ಅನೇಕ ಶಿಕ್ಷಣ ತಜ್ಞರಿಗೆ ನೆಲೆಯಾಗಿದೆ, ಬಹುಸಂಸ್ಕೃತಿಯ ಮತ್ತು ಬಹು-ಧಾರ್ಮಿಕ ಶೈಕ್ಷಣಿಕ ವಾತಾವರಣವನ್ನು ಒತ್ತಿಹೇಳುತ್ತದೆ. ಇದಲ್ಲದೆ, ಇದು ಹಲವಾರು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರಮುಖ ತಾಣವಾಗಿದೆ, ಜೊತೆಗೆ ವಿವಿಧ ವೈದ್ಯಕೀಯ, ವೈಜ್ಞಾನಿಕ ಮತ್ತು ಶೈಕ್ಷಣಿಕ ಸಮ್ಮೇಳನಗಳಿಗೆ ನೆಲೆಯಾಗಿದೆ.
 

26 ಡಿಸೆಂಬರ್ 2024, 13:10