ಕಥೋಲಿಕ ಲೋಕೋಪಕಾರಿ CNEWAನ ವಿಶ್ವಾಸ ಮತ್ತು ಸಂಸ್ಕೃತಿಯ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ
CNEWA ಮೂಲಕ
ಕ್ಯಾಥೋಲಿಕ್ ನಿಯರ್ ಈಸ್ಟ್ ವೆಲ್ಫೇರ್ ಅಸೋಸಿಯೇಷನ್/ ಪಾಶ್ಚಾತ್ಯ ಕಥೋಲಿಕ ಅಭಿವೃದ್ಧಿ ಸಂಘವು (CNEWA) ತನ್ನ ವಾರ್ಷಿಕ, ಸೌಖ್ಯ ಮತ್ತು ಭರವಸೆಯ ಆಚರಣೆಯನ್ನು ಸೋಮವಾರ, 9 ಡಿಸೆಂಬರ್, ನ್ಯೂಯಾರ್ಕ್ ನಗರದ ಖಾಸಗಿ ಕ್ಲಬ್‌ನಲ್ಲಿ ಆಯೋಜಿಸಿತು, ಮಧ್ಯಪ್ರಾಚ್ಯದಲ್ಲಿ ತನ್ನ ಕಾರ್ಯಾಚರಣಾ ಸಂಘದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ, ವಿಶ್ವಗುರುಗಳ ಸೇವಾನಿಯೋಗ, ಮಹಾಧರ್ಮಾಧ್ಯಕ್ಷರಾದ ಗೇಬ್ರಿಯೆಲ್ ಜಿ ರವರು. ಗೇಲ್ ಎಮ್. ಬೆನ್ಸನ್ ರವರ ವಿಶ್ವಾಸ ಮತ್ತು ಸಂಸ್ಕೃತಿ ಪ್ರಶಸ್ತಿಯನ್ನು, ಅದರ ಗೌರವಾನ್ವಿತ ಅತಿಥಿಯಾಗಿ ಕ್ಯಾಸಿಯಾರವರು ಪ್ರಸ್ತುತಪಡಿಸಿದರು.
ಶ್ರೀಮತಿ ಬೆನ್ಸನ್, ಒಬ್ಬ ಪ್ರಮುಖ ಲೋಕೋಪಕಾರಿ ಮತ್ತು ನ್ಯೂ ಓರ್ಲಿಯನ್ಸ್ ಸೇಂಟ್ಸ್‌ನ ಮಾಲೀಕ ಮತ್ತು ನ್ಯೂ ಓರ್ಲಿಯನ್ಸ್ ಪೆಲಿಕಾನ್ಸ್‌ನ ಗವರ್ನರ್, ತನ್ನ ಕಥೋಲಿಕ ವಿಶ್ವಾಸಕ್ಕೆ ಅಚಲವಾದ ಬದ್ಧತೆ ಮತ್ತು ಮಾನವ ಘನತೆಯ ಪ್ರಚಾರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಗುರುತಿಸಲ್ಪಟ್ಟರು.
ಆಕೆಯ ಸೇವಾ ಜೀವನವು ಆಕೆಯ ಕಥೋಲಿಕ ವಿಶ್ವಾಸದಲ್ಲಿ ಆಳವಾಗಿ ಬೇರೂರಿದೆ, ಅದು ಅವಳ ದತ್ತಿ ಕೆಲಸ ಮತ್ತು ಲೋಕೋಪಕಾರಿ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಿದೆ.
ಗೇಲ್ ಮತ್ತು ಟಾಮ್ ಬೆನ್ಸನ್ ಚಾರಿಟೇಬಲ್ ಫೌಂಡೇಶನ್ ಮೂಲಕ, ಅವರು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಗಡಿಯಲ್ಲಿರುವ ಸಮುದಾಯಗಳನ್ನು ಮೇಲಕ್ಕೆತ್ತುವುದರೊಂದಿಗೆ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಸೇರಿದಂತೆ ವ್ಯಾಪಕ ಶ್ರೇಣಿಯ ಉಪಕ್ರಮಗಳನ್ನು ಬೆಂಬಲಿಸಿದ್ದಾರೆ. ಕಥೋಲಿಕ ಧರ್ಮಸಭೆಯಲ್ಲಿ ಆಕೆಯ, ವಿಶ್ವಾಸ ಮತ್ತು ಉಪಸ್ಥಿತಿಯು ಇತರರಿಗೆ ಸಹಾಯ ಮಾಡಲು ಆಕೆಯ ಜೀವನಾದ್ಯಂತದ ಸಮರ್ಪಣೆಗೆ ಸ್ಫೂರ್ತಿಯ ಮೂಲವಾಗಿದೆ, ಯಾವಾಗಲೂ ಸಹಾನುಭೂತಿ ಮತ್ತು ಔದಾರ್ಯದಿಂದ ಅಗತ್ಯವಿರುವವರಿಗೆ ಸೇವೆ ಸಲ್ಲಿಸಲು ಪ್ರಯತ್ನಿಸುತ್ತದೆ.
ವಿಶ್ವಾಸ ಮತ್ತು ಸಂಸ್ಕೃತಿ ಪ್ರಶಸ್ತಿಯು - ವಿಶ್ವಾಸ, ಸಂಸ್ಕೃತಿ ಮತ್ತು ಮಾನವ ಘನತೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಉತ್ತೇಜಿಸಲು ಅಸಾಮಾನ್ಯ ಪ್ರಯತ್ನಗಳನ್ನು ಪ್ರದರ್ಶಿಸಿದ ವ್ಯಕ್ತಿಗಳನ್ನು ಗುರುತಿಸುತ್ತದೆ.
"ಗೇಲ್ ಬೆನ್ಸನ್‌ಗೆ ಈ ಪ್ರಶಸ್ತಿಯನ್ನು ನೀಡಲು ನಾವು ಹೆಮ್ಮೆಪಡುತ್ತೇವೆ, ಇದು ಇಲ್ಲಿ ಮತ್ತು ವಿದೇಶಗಳ ಸಮುದಾಯಗಳ ಮೇಲೆ ಅವರ ಆಳವಾದ ಪ್ರಭಾವದ ಪ್ರತಿಬಿಂಬವಾಗಿದೆ" ಎಂದು CNEWA ಅಧ್ಯಕ್ಷ. ಶ್ರೇಷ್ಠಗುರು ಪೀಟರ್ I. ವಕಾರಿರವರ" ಸೇವೆಗೆ ಆಕೆಯ ವಿಶ್ವಾಸ-ಚಾಲಿತ ವಿಧಾನ, ಅತ್ಯಂತ ದುರ್ಬಲರನ್ನು ಸಬಲೀಕರಣಗೊಳಿಸುವ ಆಕೆಯ ಸಮರ್ಪಣೆ ಮತ್ತು ಧರ್ಮಸಭೆಗೆ ಆಕೆಯ ಆಳವಾದ ಬದ್ಧತೆಯು CNEWA ಯ ಪ್ರಮುಖ ಧ್ಯೇಯದೊಂದಿಗೆ ಪ್ರತಿಧ್ವನಿಸುವ ಗುಣಗಳಾಗಿವೆ." ಎಂದು ಹೇಳಿದರು.
"ನಾನು CNEWA ದಿಂದ ಗುರುತಿಸಲ್ಪಟ್ಟಿರುವುದಕ್ಕೆ ತುಂಬಾ ವಿನಮ್ರಳಾಗಿದ್ದೇನೆ" ಎಂದು ಶ್ರೀಮತಿ ಬೆನ್ಸನ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಹೇಳಿದರು. "ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ರಕ್ಷಿಸಲು ಸಂಸ್ಥೆಯ ಕೆಲಸವು ನಿಜವಾಗಿಯೂ ಗಮನಾರ್ಹವಾಗಿದೆ ಮತ್ತು ಈ ದೃಷ್ಟಿಕೋನವನ್ನು ಹಂಚಿಕೊಳ್ಳುವ ಇತರರೊಂದಿಗೆ ಸಹಕರಿಸುವುದು ನನಗೆ ದೊರಕಿರುವ ಒಂದು ಸವಲತ್ತು. ಇತರರಿಗೆ ಸೇವೆ ಸಲ್ಲಿಸಲು ನಮ್ಮನ್ನು ಕರೆಯಲಾಗಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ ಮತ್ತು ಯಾರಿಗೆ ಹೆಚ್ಚು ನೀಡಲಾಗುತ್ತದೆ, ಅವರಿಂದ ಹೆಚ್ಚು ನಿರೀಕ್ಷಿಸಲಾಗುತ್ತದೆ. ಈ ಪ್ರಶಸ್ತಿಯು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡುವಲ್ಲಿ ನಂಬಿಕೆ ಮತ್ತು ಸೇವೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
CNEWA ತನ್ನ ಗೌರವಾನ್ವಿತ ಅತಿಥಿಯಾಗಿ ವಿಶ್ವಸಂಸ್ಥೆಯ ಪವಿತ್ರ ಪೀಠದ ಖಾಯಂ ವೀಕ್ಷಕ ಮಹಾಧರ್ಮಾಧ್ಯಕ್ಷರಾದ ಗೇಬ್ರಿಯಲ್ ಜಿ. ಕ್ಯಾಸಿಯಾರವರನ್ನು ಗುರುತಿಸಿದೆ. ರಾಜತಾಂತ್ರಿಕ ಸೇವೆಯಲ್ಲಿ ಅವರ ವೃತ್ತಿಜೀವನದುದ್ದಕ್ಕೂ, ಮಹಾಧರ್ಮಾಧ್ಯಕ್ಷರಾದ ಕ್ಯಾಸಿಯಾರವರು ಶಾಂತಿ, ನ್ಯಾಯ ಮತ್ತು ಭರವಸೆಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ.
“ನಾವೆಲ್ಲರೂ ಜೆರುಸಲೇಮ್‌ನಲ್ಲಿ ಹುಟ್ಟಿದ್ದೇವೆ, ಅಲ್ಲಿ ಪ್ರಭುವಿನ ಶಿಲುಬೆ ಮತ್ತು ಪುನರುತ್ಥಾನವಿದೆ. ಆದರೆ ಕಲ್ಲುಗಳು ಮತ್ತು ಸ್ಥಳಗಳನ್ನು ನೋಡಲು ನಾವು ಅಲ್ಲಿಗೆ ಹೋಗುವುದಿಲ್ಲ. ಕ್ರೈಸ್ತ ಸಮುದಾಯದ ಜೀವಂತ ಕಲ್ಲುಗಳನ್ನು ಭೇಟಿಯಾಗಲು ನಾವು ಅಲ್ಲಿಗೆ ಹೋಗಬೇಕು”ಎಂದು ಮಹಾಧರ್ಮಾಧ್ಯಕ್ಷರಾದ ಕ್ಯಾಸಿಯಾರವರು ಆಚರಣೆಯಲ್ಲಿ ಹೇಳಿದರು.
“ಅದಕ್ಕಾಗಿಯೇ ನಿಮ್ಮ ಕೊಡುಗೆ, ನಿಮ್ಮ ಸ್ನೇಹ, ನಿಮ್ಮ ಬೆಂಬಲ ಬಹಳ ಮುಖ್ಯ. ಭಗವಂತನು ಅವತರಿಸಲು ನಿರ್ಧರಿಸಿದ ಸ್ಥಳದಲ್ಲಿ ಸಹಾಯ ಮಾಡುವುದನ್ನು ಮುಂದುವರಿಸಲು, ಮನುಷ್ಯನಾಗಲು, ಪ್ರೀತಿಯ ಉಪಸ್ಥಿತಿ, ಸಹಾಯ, ಸಂಭಾಷಣೆ, ಬೆಂಬಲ, ಶಿಕ್ಷಣದ ಸಾಕ್ಷಿಯಾಗಿ ಮುಂದುವರಿಯಲು ನಿಮ್ಮ ಬೆಂಬಲ ಬಹಳ ಮುಖ್ಯ ಎಂದು ಹೇಳಿದ್ದಾರೆ.
CNEWA-ಪಾಂಟಿಫಿಕಲ್ ಮಿಷನ್/ ವಿಶ್ವಗುರುಗಳ ಸೇವಾನಿಯೋಗದಿಂದ ಮಧ್ಯಪ್ರಾಚ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಕ್ಕಳು ಮತ್ತು ಅವರ ಕುಟುಂಬಗಳ ತಕ್ಷಣದ ಅಗತ್ಯಗಳನ್ನು ಪರಿಹರಿಸಲು ತುರ್ತು ಅಭಿಯಾನವನ್ನು ಪ್ರಾರಂಭಿಸಲು, ಸಂಸ್ಥೆಯು $25,000ಗಳ ಹೊಂದಾಣಿಕೆಯ ಉಡುಗೊರೆಯನ್ನು ಸ್ವೀಕರಿಸಿದೆ.
ಪವಿತ್ರ ಪೀಠದ ಉಪಕ್ರಮ, CNEWA ಮಧ್ಯಪ್ರಾಚ್ಯ, ಈಶಾನ್ಯ ಆಫ್ರಿಕಾ, ಭಾರತ ಮತ್ತು ಪೂರ್ವ ಯುರೋಪ್‌ನಲ್ಲಿ ಯಾವಾಗಲೂ ಪೂರ್ವ ಧರ್ಮಸಭೆಗಳ ಮೂಲಕ ಮತ್ತು ಅದರೊಂದಿಗೆ ಕಾರ್ಯನಿರ್ವಹಿಸುತ್ತದೆ.
1926ರಲ್ಲಿ ವಿಶ್ವಗುರು ಹನ್ನೊಂದನೇ ಭಕ್ತಿನಾಥರು CNEWA ಸ್ಥಾಪಿಸಿದರು, CNEWA ಸ್ಥಳಾಂತರಗೊಂಡ ಕುಟುಂಬಗಳಿಗೆ ಸಹಾಯವನ್ನು ಧಾವಿಸುತ್ತದೆ; ಅತ್ಯಂತ ದುರ್ಬಲರಿಗೆ ಆರೋಗ್ಯ ರಕ್ಷಣೆ ನೀಡುತ್ತದೆ; ಗಡಿಯಲ್ಲಿರುವ, ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ವಿಶೇಷ ಅಗತ್ಯವುಳ್ಳವರನ್ನು ನೋಡಿಕೊಳ್ಳುವ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ; ಧರ್ಮಸಭೆಯು ನಡೆಸುವ ಉಪಕ್ರಮಗಳು ಮತ್ತು ಪುನರ್ವಸತಿ, ಸಲಹೆ ಮತ್ತು ಬದುಕುಳಿದವರನ್ನು ಗುಣಪಡಿಸುವ ಕಾರ್ಯಕ್ರಮಗಳು; ಮತ್ತು ಯಾಜಕರು, ಧಾರ್ಮಿಕ ಸಹೋದರಿಯರು ಮತ್ತು ಸಾಮಾನ್ಯ ನಾಯಕರ ಶಿಕ್ಷಣ ಮತ್ತು ರಚನೆಯನ್ನು ಬೆಂಬಲಿಸುತ್ತದೆ.