MAP

2024.12.23 foto presepe Cellanti 2024.12.23 foto presepe Cellanti 

ಕ್ರಿಸ್‌ಮಸ್ 2024: ಶತ್ರುಗಳನ್ನು ಸಹೋದರ ಸಹೋದರಿಯರಂತೆ ಕಾಣೋಣ

ಭಯ ಮತ್ತು ಅನಿಶ್ಚಿತತೆಯ ನೆರಳುಗಳಿಂದ ಕತ್ತಲೆಯಾದ ಜಗತ್ತಿನಲ್ಲಿ ಯೇಸುವಿನ ಜನನವು ಭರವಸೆಯ ಅತ್ಯಂತ ಶಕ್ತಿಶಾಲಿಯಾದ ಸಂಕೇತ ಮತ್ತು ಸಂದೇಶವಾಗಿದೆ. ಕ್ರಿಸ್‌ಮಸ್ 2024, ಭರವಸೆಯ ಜೂಬಿಲಿ ವರ್ಷದ ಆರಂಭದಲ್ಲಿ, ವ್ಯಾಟಿಕನ್ನಿನ ಆಕಾಶವಾಣಿಯು ಕಥೋಲಿಕ ನಾಯಕರನ್ನು "ಯುದ್ಧ-ಹಾನಿಗೊಳಗಾದ ಜಗತ್ತಿನಲ್ಲಿ ಕ್ರಿಸ್ತನ ಶಾಂತಿ" ಎಂಬ ವಿಷಯದ ಕುರಿತು ತಮ್ಮ ಚಿಂತನೆಗಳನ್ನು ಕೇಳಿದೆ. ಇಂದಿನ ಸಂದೇಶವು ಡೊಮಿನಿಕನ್ ಪ್ರಧಾನ ಶ್ರೇಷ್ಠಗುರುಗಳಾದ (ಕಾರ್ಡಿನಲ್) ತಿಮೋತಿ ರಾಡ್‌ಕ್ಲಿಫ್ ರವರಿಂದ ಬಂದಿದೆ. ಪ್ರಧಾನ ಶ್ರೇಷ್ಠಗುರುಗಳಾದ (ಕಾರ್ಡಿನಲ್) ತಿಮೋತಿ ರಾಡ್‌ಕ್ಲಿಫ್ ರವರ ಕ್ರಿಸ್‌ಮಸ್ ಸಂದೇಶ

ಇಂದು, ವಿಶ್ವವು ಹಿಂಸಾಚಾರದಿಂದ ಉದ್ರೇಕಗೊಳ್ಳುತ್ತಿದೆ, ನಾನು ಹುಟ್ಟಿದಾಗಿನಿಂದಲೂ, ಎರಡನೆಯ ಮಹಾಯುದ್ಧದ ಅಂತ್ಯದ ನಂತರವೂ ಹಿಂಸಾಚಾರದಿಂದ ಉದ್ರೇಕಗೊಳ್ಳುತ್ತಿದೆ.

ಈ ದ್ವೇಷವು ರಾಷ್ಟ್ರಗಳ ನಡುವೆ ಯುದ್ಧಕ್ಕೆ ಕಾರಣವಾಗುವುದಲ್ಲದೆ, ಸಮಾಜಗಳಲ್ಲಿಯೂ ಸಹ ಯುದ್ಧ ಹುಟ್ಟಿಕೊಳ್ಳಲು ಕಾರಣವಾಗುತ್ತದೆ.

ಸಾಮಾಜಿಕ ಜಾಲತಾಣವು ಈ ದ್ವೇಷವನ್ನು ಕೆರಳಿಸುತ್ತದೆ. ಈ ದ್ವೇಷವು ಓದುಗರನ್ನು ಆಕರ್ಷಿಸಿ, ಆರ್ಥಿಕ ಸಂಪತ್ತನ್ನು ಗಳಿಸುವಂತೆ ಮಾಡುತ್ತದೆ. ಧರ್ಮಸಭೆಯು ಕೂಡ ಹಿಂಸಾತ್ಮಕ ಆರೋಪಗಳಿಂದ ತುಂಬಿದೆ.

ಯೇಸುವು ಹಿಂಸಾಚಾರದಿಂದ ಛಿದ್ರವಾಗಿರುವ ದೇಶದಲ್ಲಿ ಬೆಳೆದು ಬಂದವರು. ಅವರು ಬಾಲ್ಯದಿಲ್ಲರುವಾಗಲೇ, ರೋಮ್‌ ನ ಆಕ್ರಮಣಕಾರರಿಂದ ಭೀಕರವಾಗಿ ಕೊಲ್ಲಲ್ಪಟ್ಟ 2000 ಯೆಹೂದ್ಯ ಬಂಡುಕೋರರನ್ನು ಶರೀರಸಹಿತ ಶಿಲುಬೆಗೇರಿಸಿದ್ದನ್ನು ಖಂಡಿತವಾಗಿ ನೋಡಿರುತ್ತಾರೆ ಮತ್ತು ಅವರು ಅಹಿಂಸೆಯ ವ್ಯಕ್ತಿಯಾಗಿದ್ದು, ಯಾರಾದರೂ ನಿಮ್ಮನ್ನು ದಂಡಿಸಿದರೆ, ಬದಲಿಗೆ ನೀವು ಇನ್ನೊಂದು ಕೆನ್ನೆಯನ್ನು ತೋರಿಸುವಂತೆ ನಮ್ಮನ್ನು ಕೇಳಿಕೊಂಡ ದೇವಾರಾಗಿದ್ದಾರೆ.

ನಾವು ಅವರಿಂದ ಹೇಗೆ ಕಲಿಯಬಹುದು?

ಹಿಂಸಾಚಾರವು ಭಯದಿಂದ ಹುಟ್ಟಿಕೊಳ್ಳುತ್ತದೆ, ಆದ್ದರಿಂದ ನಾವು ಇನ್ನೊಬ್ಬ ವ್ಯಕ್ತಿಯನ್ನು ದುರ್ಬಲ ಮನುಷ್ಯನಂತೆ ನೋಡುವುದಲ್ಲ, ಬದಲಿಗೆ, ಅವರಲ್ಲಿ ನಮ್ಮಂತೆ ಪ್ರೀತಿಸುವ ಮತ್ತು ನೋಯಿಸುವ ಸಾಮರ್ಥ್ಯವಿದೆ ಎಂದು ಗ್ರಹಿಸಬೇಕು.

ಭಯವು ಇತರರನ್ನು ಶತ್ರುಗಳನ್ನಾಗಿ ಕಾಣುವಂತೆ ಮಾಡುತ್ತದೆ.

ಆದರೆ ನಾವು ಭಯಪಡಬೇಕಾಗಿಲ್ಲ, ಏಕೆಂದರೆ ಪಾಸ್ಖ ಹಬ್ಬದ ದಿನದಂದು ಪ್ರೀತಿಯು ವಿಜಯವನ್ನು ಕಂಡಿತು. ದ್ವೇಷವು ಸೋಲನ್ನು ಅನುಭವಿಸಿತು ಎಂದು ಅರಿಯೋಣ.

ಕೋಪಕ್ಕೆ ಕೋಪದಿಂದ ಪ್ರತಿಕ್ರಿಯಿಸುವವರ ಗುಲಾಮಗಿರಿಯಿಂದ ಮುಕ್ತರಾಗೋಣ. ಹಿಂಸೆಯು ನನ್ನೊಂದಿಗೆ ಕೊನೆಗೊಳ್ಳಲಿ ಎಂದು ಹೇಳುವಷ್ಟು ಸ್ವಾತಂತ್ರ್ಯವನ್ನು, ಶುಭ ಶುಕ್ರವಾರದಂದು, ಹಿಂಸೆಯು ನಮ್ಮ ಪ್ರಭುವಿನೊಂದಿಗೆ ಕೊನೆಗೊಳ್ಳುವುದರ ಮೂಲಕ ನಾವೆಲ್ಲರೂ ಈ ಸ್ವಾತಂತ್ರ್ಯವನ್ನು ಪಡೆದಿದ್ದೇವೆ.

ಅಸ್ವಸ್ಥರು, ವೇಶ್ಯೆಯರು, ಅವರ ಶತ್ರುಗಳು ಮತ್ತು ರೋಮ್‌ ನ ಆಕ್ರಮಣಕಾರರ, ಆಂತರಿಕ ಘನತೆ ಮತ್ತು ಒಳ್ಳೆಯತನವನ್ನು ಯೇಸು ನೋಡಿದರು.

ನಾವು ಯಾರನ್ನು ಶತ್ರುಗಳೆಂದು ಭಾವಿಸುತ್ತೇವೆಯೋ ಅವರನ್ನೆಲ್ಲಾ ದೇವರ ಪ್ರತಿರೂಪದಲ್ಲಿರುವ ನಮ್ಮ ಸಹೋದರ ಸಹೋದರಿಯರೆಂಬ ಹೋಲಿಕೆಯಲ್ಲಿ ಕಾಣೋಣ.

26 ಡಿಸೆಂಬರ್ 2024, 09:54