MAP

2020.12.22 presepio 2020.12.22 presepio 

ಕ್ರಿಸ್‌ಮಸ್ 2024 – ಧರ್ಮಸಭೆಯು ಭರವಸೆಯ ಸಂಕೇತ

ಭಯ ಮತ್ತು ಅನಿಶ್ಚಿತತೆಯ ನೆರಳುಗಳಿಂದ ಕತ್ತಲೆಯನ್ನಾವರಿಸಿರುವ ಈ ಜಗತ್ತಿನಲ್ಲಿ ಯೇಸುವಿನ ಜನನವು, ಭರವಸೆಯ ಅತ್ಯಂತ ಶಕ್ತಿಶಾಲಿ ಸಂಕೇತ ಮತ್ತು ಸಂದೇಶವಾಗಿದೆ. ಕ್ರಿಸ್‌ಮಸ್ 2024, ಭರವಸೆಯ ಜೂಬಿಲಿ ವರ್ಷಾದ ಆರಂಭದಲ್ಲಿ, ವ್ಯಾಟಿಕನ್ ಆಕಾಶವಾಣಿಯು ಕಥೋಲಿಕ ನಾಯಕರನ್ನು "ಯುದ್ಧ-ಹಾನಿಗೊಳಗಾದ ಜಗತ್ತಿನಲ್ಲಿ ಕ್ರಿಸ್ತರ ಶಾಂತಿ" ಎಂಬ ವಿಷಯದ ಕುರಿತು ತಮ್ಮ ಚಿಂತನೆಗಳನ್ನು ಕೇಳಿದೆ. ಇಂದಿನ ಸಂದೇಶವು ಟೋಕಿಯೊದ ಮಹಾಧರ್ಮಾಧ್ಯಕ್ಷ ಮತ್ತು ಅಂತಾರಾಷ್ಟ್ರೀಯ ಕಾರಿತಾಸ್ನ ಅಧ್ಯಕ್ಷರಾದ ಕಾರ್ಡಿನಲ್ ಟಾರ್ಸಿಸಿಯೊ ಐಸಾವೊ ಕಿಕುಚಿರವರು, ಎಸ್‌ವಿಡಿ ಅವರಿಂದ ಬಂದಿದೆ. ಕಾರ್ಡಿನಲ್ ಟಾರ್ಸಿಸಿಯೊ ಐಸಾವೊ ಕಿಕುಚಿ ಸಂದೇಶ

ದಾರಿ ತಪ್ಪಿ ಕತ್ತಲೆಯಲ್ಲಿ, ಅದರಲ್ಲೂ ದಟ್ಟವಾದ ಕತ್ತಲೆಯಲ್ಲಿ ಅಲೆದಾಡುತ್ತಿರುವ ಪ್ರಯಾಣಿಕರಿಗೆ ಕತ್ತಲೆಯಲ್ಲಿ ಬೆಳಗುವ ಬೆಳಕು, ಭರವಸೆಯ ಬೆಳಕಾಗಿದೆ.
ಒಂದು ಪುಟ್ಟ ಬೆಳಕು ಎಷ್ಟೇ ಸಣ್ಣದಾಗಿ, ತನ್ನ ಪ್ರಕಾಶವನ್ನು ಹೊರಹೊಮ್ಮಿದರೂ ಆ ಬೆಳಕೂ ಸಹ ಭರವಸೆಯ ಮೂಲವಾಗುತ್ತದೆ. ನಮ್ಮ ಜೀವನವೇ ಒಂದು ಪಯಣ. ನಾವೆಲ್ಲರೂ ಪ್ರಯಾಣಿಕರು. ನಾವು ಸ್ವರ್ಗದ ಸಾಮ್ರಾಜ್ಯದಲ್ಲಿ ನಿತ್ಯ ಜೀವವನ್ನು ಪಡೆಯಲು, ಸ್ವರ್ಗದೆಡೆಗೆ ಸಾಗುತ್ತಿರುವ ಪ್ರಯಾಣಿಕರು, ಕತ್ತಲೆಯಲ್ಲಿ ಅಲೆದಾಡುತ್ತಾ ದೇವರ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.


ಒಬ್ಬಂಟಿಯಾಗಿ ಪ್ರಯಾಣಿಸುವುದು ಸುಲಭವಲ್ಲ. ನಾವು ಭಯ ಮತ್ತು ಆತಂಕದಿಂದ ಮುಳುಗಿಹೋಗಿದ್ದೇವೆ, ಆದರೆ, ನಾವೆಲ್ಲರೂ ಒಂದು ವಿಷಯವನ್ನು ಗಮನದಲ್ಲಿಡೋಣ, ನಮ್ಮೊಂದಿಗೆ ನಡೆಯುವವರಾದ ಪ್ರಭು ಯೇಸುವು ನಮ್ಮೊಂದಿಗಿದ್ದಾರೆ ಎಂದು ತಿಳಿಯೋಣ.
ಈ ಪ್ರಯಾಣದಲ್ಲಿ ಪ್ರಭು ಯೇಸು ನಮ್ಮೊಂದಿಗೆ ನಡೆಯುವರು, ಕತ್ತಲೆಯಲ್ಲಿ ಹೊಳೆಯುವ ಬೆಳಕಾಗಿದ್ದಾರೆ. ಕ್ರಿಸ್ತ ಜನನ ದೃಶ್ಯದಲ್ಲಿ, ನವಜಾತ ಶಿಶುವನ್ನು ಕತ್ತಲೆಯಲ್ಲಿ ಹೊಳೆಯುವ ಬೆಳಕು ಎಂದು ವಿವರಿಸಲಾಗಿದೆ. ನಮ್ಮ ರಕ್ಷಕರಾದ ಯೇಸು ಕತ್ತಲೆಯಲ್ಲಿ ಹೊಳೆಯುವ ಬೆಳಕಾಗಿದ್ದು, ಕತ್ತಲೆಯಲ್ಲಿ ಮತ್ತು ಸಾವಿನ ನೆರಳಿನಲ್ಲಿ ಜೀವಿಸುವ ಜನರಿಗೆ ಜೀವದ ಭರವಸೆಯನ್ನು ತರುತ್ತಾರೆ.


ಇಂದು ಜಗತ್ತಿನಲ್ಲಿ, ವಿವಿಧ ರೀತಿಯ ಹಿಂಸೆಗಳು ಜೀವಗಳ ಮೇಲೆ ಆಕ್ರಮಣ ಮಾಡುತ್ತಿವೆ. ಪ್ರಪಂಚವು ಹಿಂಸೆಯ ಆಳ್ವಿಕೆಯಿಂದ ಪ್ರಾಬಲ್ಯ ತೋರುತ್ತಿದೆ. ಮ್ಯಾನ್ಮಾರ್, ಉಕ್ರೇನ್ ಮತ್ತು ಪವಿತ್ರ ನಾಡಿನಲ್ಲಿ, ವಿಶೇಷವಾಗಿ ಗಾಜಾದಲ್ಲಿರುವ ಜನರನ್ನು ನಾವು ನೆನಪಿಸಿಕೊಳ್ಳೋಣ. ವಿಶ್ವದಾದ್ಯಂತ ಮಾನವ ಜೀವನದ ವಿರುದ್ಧ ನಡೆಯುತ್ತಿರುವ ಹಿಂಸೆಯೆಂಬ ಕತ್ತಲಲ್ಲಿ ಬದುಕುತ್ತಿರುವ ಜನರನ್ನು ನಾವು ನೆನಪಿಸಿಕೊಳ್ಳೋಣ.
ದೇವರು ನಮಗೆ ನೀಡಿದ ಉಡುಗೊರೆಯಾದ ಜೀವನವನ್ನು, ಅದರ ಆರಂಭದಿಂದ ಅಂತ್ಯದವರೆಗೆ ವಿನಾಯಿತಿ ಇಲ್ಲದೆ ರಕ್ಷಿಸಬೇಕು. ಯಾವುದೇ ರೂಪದಲ್ಲಿಯೂ ಜೀವ ತೆಗೆಯುವ ಹಿಂಸೆಯನ್ನು ಸಹಿಸಬಾರದು.


ಜೀವವನ್ನು ರಕ್ಷಿಸುವುದು ಭರವಸೆಯ ಬೆಳಕಿನ ಮೂಲವಾಗಿದೆ. ಧರ್ಮಸಭೆಯಾಗಿರುವ ನಾವು, ಭರವಸೆಯ ಮೂಲವಾಗಲು ಧರ್ಮಸಭೆಯು ನಮಗೆ ಕರೆ ನೀಡುತ್ತಿದೆ.

ಮುಂಬರುವ ಜೂಬಿಲಿ ವರ್ಷದಲ್ಲಿ. ಧರ್ಮಸಭೆಯಾಗಿರುವ ನಾವು, ಕತ್ತಲೆಯಲ್ಲಿ ಅಲೆದಾಡುವ ಪ್ರಯಾಣಿಕರಿಗೆ ಆಶ್ರಯ ಮತ್ತು ಸೌಕರ್ಯವನ್ನು ನೀಡಲು ನಮ್ಮ ದ್ವಾರಗಳನ್ನು ವಿಶಾಲವಾಗಿ ತೆರೆಯಬೇಕು. ನಾವು ನಮ್ಮ ಪ್ರಭುವಾದ ಯೇಸು ಕ್ರಿಸ್ತರ ಆ ಪ್ರಕಾಶಮಾನ ಬೆಳಕನ್ನು ಹೊತ್ತವರಾಗಿರಬೇಕು.
ಯೇಸು ಸ್ವತಃ ಸದಾ ಕಾಲಕ್ಕೂ ನಮ್ಮೊಂದಿಗಿರುವವರಾಗಿದ್ದಾರೆ, ನಮ್ಮೊಂದಿಗೆ ಒಟ್ಟಿಗೆ ನಡೆಯುವವರಾಗಿದ್ದಾರೆ, ಭರವಸೆಯ ಬೆಳಕನ್ನು ಸದಾ ಉರಿಯುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತಾರೆ.
 

26 ಡಿಸೆಂಬರ್ 2024, 13:15