MAP

2024.12.02 Thailand Buddhist commemoration Cardinal Ayuso Guixot 2024.12.02 Thailand Buddhist commemoration Cardinal Ayuso Guixot 

ದಿವಂಗತ ಕಾರ್ಡಿನಲ್ ಆಯುಸೊವರವರ ಸ್ಮರಣೆಯ ದಿನವನ್ನು ಆಚರಿಸಲು ಕಥೋಲಿಕ ಮತ್ತು ಬೌದ್ಧ ಧರ್ಮದ ನಾಯಕರು ಬ್ಯಾಂಕಾಕ್‌ನಲ್ಲಿ ಸೇರಿದರು

ಥೈಲ್ಯಾಂಡ್‌ನ ಹಲವಾರು ಬೌದ್ಧ ಮತ್ತು ಕಥೋಲಿಕ ಧರ್ಮದ ನಾಯಕರು ಬ್ಯಾಂಕಾಕ್‌ನ ಪ್ರಮುಖ ಬೌದ್ಧ ಧರ್ಮದವರ ದೇವಾಲಯದಲ್ಲಿ ಅಂತರ್‌ಧರ್ಮೀಯ ಸಂಭಾಷಣೆಗಾಗಿ ಡಿಕಾಸ್ಟರಿಯ ನಾಯಕರಾಗಿದ್ದ ಕಾರ್ಡಿನಲ್ ಮಿಗುಯೆಲ್ ಏಂಜೆಲ್ ಆಯುಸೊ ಗಿಕ್ಸೊಟ್ ರವರ ಜೀವನ ಮತ್ತು ಪರಂಪರೆಯನ್ನು ಸ್ಮರಿಸಿ ಅವರು ಧೈವಾಧೀನರಾದ ದಿನವನ್ನು ಆಚರಿಸಲು ಸೇರಿದ್ದರು.

ಚೈನಾರಾಂಗ್ ಮೊಂಥಿಯೆನ್ವಿಚಿಯೆಂಚೈರವರಿಂದ, ಲಿಕಾಸ್‌ ರವರ ಸುದ್ಧಿಯಿಂದ

ದಿವಂಗತ ಕಾರ್ಡಿನಲ್ ಮಿಗುಯೆಲ್ ಏಂಜೆಲ್ ಆಯುಸೊ ಗೈಕ್ಸೊಟ್ರವರು, ಅಂತರ್‌ಧರ್ಮೀಯ ಸಂಭಾಷಣೆಗಾಗಿ ಡಿಕಾಸ್ಟರಿಯ ನಾಯಕರಾಗಿದ್ದರು. ಇವರನ್ನು ಡಿಸೆಂಬರ್ 1 ರಂದು ಬ್ಯಾಂಕಾಕ್‌ನ ಅತ್ಯಂತ ಪ್ರಮುಖ ಬೌದ್ಧ ದೇವಾಲಯಗಳಲ್ಲಿ ಒಂದಾದ ವಾಟ್ ಫ್ರಾ ಚೆಟುಫೊನ್ ವಿಮೊನ್ಮಾಂಗ್‌ಕ್ಲಾರಾರ್ಮ್ ರಾಟ್ಚವೊರಮಹಾವಿಹಾನ್‌ನಲ್ಲಿ ಗೌರವಿಸಲಾಯಿತು (ವಿಶ್ವದಾದ್ಯಂತ ಮಲಗಿರುವ ಬುದ್ಧನ ದೇವಾಲಯವೆಂದು ಕರೆಯಲ್ಪಡುವ ದೇವಾಲಯ), ಈ ದೇವಾಲಯದಲ್ಲಿ ಅವರ ಮರಣವನ್ನು ಸ್ಮರಿಸುವ ಒಂದು ಸಾಂಭ್ರಮಿಕ ಸಮಾರಂಭವನ್ನು ಆಚರಿಸಲಾಯಿತು.

ಈ ಅಭೂತಪೂರ್ವ ಘಟನೆಯು ಥೈಲ್ಯಾಂಡ್‌ನ ಬೌದ್ಧ ಮತ್ತು ಕಥೋಲಿಕ ಸಮುದಾಯಗಳ ನಡುವಿನ ಆಳವಾದ ಬಂಧವನ್ನು ಎತ್ತಿ ತೋರಿಸಿತು ಹಾಗೂ ಅಂತರ್‌ಧರ್ಮದ ತಿಳುವಳಿಕೆಯನ್ನು ಬೆಳೆಸಲು ಕಾರ್ಡಿನಲ್‌ರವರ ಪಟ್ಟುಬಿಡದ ಕಾರ್ಯದ ಸಮರ್ಪಣೆಯಿಂದ ಈ ನಮ್ಮ ಸಂಪರ್ಕವನ್ನು ಬಲಪಡಿಸಿದೆ ಎಂದು ಹೇಳಿದ್ದಾರೆ.

ವಾಟ್ ಫ್ರಾ ಚೆಟುಫೊನ್‌ನ ಮಠಾಧೀಶರಾದ ಅವರ ಪರಮಪೂಜ್ಯರಾದ ಸೊಮ್‌ಡೆಟ್ ಫ್ರಾ ಮಹಾ ತಿರಚನ್ ರವರು, ತಮ್ಮ ಹತ್ತು ಬೌದ್ಧ ಸನ್ಯಾಸಿಗಳೊಂದಿಗೆ ಕಾರ್ಡಿನಲ್‌ ರವರ ಆತ್ಮದ ಹಾದಿಯು ಸ್ವರ್ಗಕ್ಕೆ ಸಿದ್ಧಗೊಳಿಸುವಂತೆ, ಅವರ ಧರ್ಮದ ವಿಧಿಯಲ್ಲಿ ಪ್ರಾರ್ಥನೆಗಳನ್ನು ಪಠಿಸಿ, ಅವರಿಗಾಗಿ ಪ್ರಾರ್ಥಿಸಿ ಈ ಅರ್ಹತೆ ನೀಡುವ ಸಮಾರಂಭವನ್ನು ಏರ್ಪಡಿಸಿದರು

ಥೈಲ್ಯಾಂಡ್‌ನ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಧರ್ಮಾಧ್ಯಕ್ಷ ಜೋಸೆಫ್ ಚುಸಾಕ್ ಸಿರಿಸುಟ್‌ ರವರು, ಸಂತ ಯೋವಾನ್ನರ ಶುಭಸಂದೇಶದಿಂದ ಸುವಾರ್ತೆಯನ್ನು ಉಲ್ಲೇಖಿಸುತ್ತಾ “ಗೋಧಿಯ ಧಾನ್ಯವು ಭೂಮಿಗೆ ಬಿದ್ದು ಸಾಯದಿದ್ದರೆ, ಅದು ಬರೀ ಧಾನ್ಯವಾಗಿ ಉಳಿಯುತ್ತದೆ; ಆದರೆ ಅದು ಸತ್ತರೆ, ಅದು ಹೆಚ್ಚು ಫಲವನ್ನು ನೀಡುತ್ತದೆ.” ಎಂದು ಪಠಿಸಿ ಕಥೋಲಿಕ ಧರ್ಮಾಚರಣೆಯನ್ನು ಅನುಸರಿಸಿದರು:

ವಾಚನಗಳು ಅಂತರ್‌ಧರ್ಮೀಯ ಸಂಪರ್ಕಗಳನ್ನು ಒಂದುಗೂಡಿಸುವಲ್ಲಿ ಕಾರ್ಡಿನಲ್‌ರವರ ನಿರಂತರ ಶ್ರಮವನ್ನು ಒತ್ತಿಹೇಳುತ್ತದೆ.

ಕಾರ್ಡಿನಲ್ ಆಯುಸೊರವರು ಅಂತರ್ಧರ್ಮೀಯ ಸಂವಾದದಲ್ಲಿ ಜಾಗತಿಕ ನಾಯಕರಾಗಿದ್ದರು. ನವೆಂಬರ್ 2022ರಲ್ಲಿ, ಅವರು ಥೈಲ್ಯಾಂಡ್‌ನಲ್ಲಿ ಏಳನೇ ಬೌದ್ಧ-ಕ್ರೈಸ್ತ ಸಮಾವೇಶದಲ್ಲಿ ಭಾಗವಹಿಸಿದರು, ಇದು ಪ್ರಪಂಚದಾದ್ಯಂತ 150 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಈ ಸಮಾವೇಶಕ್ಕೆ ಕರೆದಿತ್ತು.

ಈ ಸಮಾವೇಶವು "ಕರುಣೆ ಮತ್ತು ಗಾಯಗೊಂಡ ಮನುಕುಲವನ್ನು ಹಾಗೂ ಈ ಧರೆಯನ್ನು ಗುಣಪಡಿಸುವ ದೈವ ಸಂಭಾಷಣೆ" ಎಂಬ ವಿಷಯಾಧಾರಿತದ ಮೇಲೆ ಕೂಡಿತ್ತು, ವಿಶೇಷವಾಗಿ ಸಹಾನುಭೂತಿ ಮತ್ತು ಪ್ರೀತಿಯು, ಸಾಮಾಜಿಕ ಮತ್ತು ಪರಿಸರ ಸವಾಲುಗಳನ್ನು ಎದುರಿಸುವ ಮಾರ್ಗಗಳ ಬಗ್ಗೆ ಒತ್ತಿಹೇಳಿತು.

ಈ ಸಮಾವೇಶವು ವಿಶ್ವಾಸಿಗಳ ನಡುವೆ ಬೆಳೆಯುತ್ತಿರುವ ಸಹಕಾರವನ್ನು ಸಂಕೇತಿಸುತ್ತದೆ, ಇದು ಮಹತ್ವದ ಸಂಕೇತವೆಂದು ಗುರುತಿಸಲ್ಪಟ್ಟಿದೆ: ಥೈಲ್ಯಾಂಡ್‌ನ ಬೌದ್ಧ ಧರ್ಮದ ನಾಯಕರು ವಿಶ್ವಗುರು ಫ್ರಾನ್ಸಿಸ್ ಮತ್ತು ಕಾರ್ಡಿನಲ್ ಆಯುಸೊರವರಿಗೆ ಉಡುಗೊರೆಗಳನ್ನು ನೀಡಿದರು, ಸಹಾನುಭೂತಿಯನ್ನು ಉತ್ತೇಜಿಸುವಲ್ಲಿ ಪರಸ್ಪರ ಬೆಂಬಲವನ್ನು ಪ್ರತಿಜ್ಞೆ ಮಾಡಿದರು ಮತ್ತು ಜಾಗತಿಕ ಬಿಕ್ಕಟ್ಟುಗಳಿಗೆ ತಮ್ಮ ಜವಾಬ್ದಾರಿಯನ್ನು ಹಂಚಿಕೊಂಡರು.

ಸ್ಪೇನ್‌ನಲ್ಲಿ ಜನಿಸಿದ ಕಾರ್ಡಿನಲ್ ಆಯುಸೊರವರು ತಮ್ಮ ಜೀವನವನ್ನು ಅಂತರಧರ್ಮದ ಸಂಭಾಷಣೆಗೆ ಮುಡಿಪಾಗಿಟ್ಟರು. ಈಜಿಪ್ಟ್ ಮತ್ತು ಸುಡಾನ್‌ನಲ್ಲಿ ಧರ್ಮಪ್ರಚಾರಕರಾಗಿ ಅವರ ಜೀವನದ ಅನುಭವವು ಅವರ ದೃಷ್ಟಿಕೋನವನ್ನು ಪುಷ್ಟೀಕರಿಸಿತು, ಕ್ಕ್ರೈಸ್ತ-ಮುಸ್ಲಿಂರ ಸಂಬಂಧಗಳನ್ನು ಬೆಳೆಸುವಲ್ಲಿ ಅವರನ್ನು ಪ್ರಮುಖ ವ್ಯಕ್ತಿಯಾಗಿಸಿತು ಎಂದು ನುಡಿದಿದ್ದಾರೆ.

ಅವರ ನಾಯಕತ್ವದಲ್ಲಿ, ಅಂತರ್‌ಧರ್ಮದ ಸಂಭಾಷಣೆಯ ಡಿಕ್ಯಾಸ್ಟರಿಗೆ ವಿಶ್ವಗುರು ಫ್ರಾನ್ಸಿಸ್ರವರು ಮತ್ತು ಅಲ್ ಅಜರ್‌ನ ಗ್ರ್ಯಾಂಡ್ ಇಮಾಮ್ ಅಹ್ಮದ್ ಅಲ್-ತಯ್ಯೆಬ್ರವರು ಮಾನವ ಭ್ರಾತೃತ್ವದ 2019 ರ ದಾಖಲೆಗೆ ಸಹಿ ಹಾಕುವಂತಹ ಮೈಲಿಗಲ್ಲುಗಳನ್ನು ಸಾಧಿಸಿದರು.
 

02 ಡಿಸೆಂಬರ್ 2024, 11:25