MAP

ಕಾರ್ಡಿನಲ್ ಪಿಜ್ಜಾಬಲ್ಲಾ: 'ಗಾಜಾದಲ್ಲಿ ಯುದ್ಧದ ಉತ್ತುಂಗವು ನಮ್ಮ ಮುಂದಿದೆ'

ನೆರವಿನ ಅಗತ್ಯವಿರುವ ಧರ್ಮಸಭೆಗೆ ನೆರವು (Aid to the church in need) ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ, ಲತೀನ್ ಕುಲಸಚಿವರು "ಮುಂಬರುವ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ನಾವು ಕೆಲವು ರಾಜಿಗಳಿಗೆ ಬರುತ್ತೇವೆ" ಎಂದು ತಮ್ಮ ಅನಿಸಿಕೆಯನ್ನು ಎತ್ತಿ ತೋರಿಸುತ್ತಾರೆ.

ಕೀಲ್ಸ್ ಗುಸ್ಸಿ

ಇಸ್ರಯೇಲ್ ದಾಳಿಗಳು ಗಾಜಾ ಗಡಿಯನ್ನು ಧ್ವಂಸಗೊಳಿಸುವುದನ್ನು ಮುಂದುವರೆಸಿವೆ. ಡಿಸೆಂಬರ್ 12ರಂದು 12 ಕಾವಲು ಸಹಾಯ ಟ್ರಕ್‌ಗಳು ಮತ್ತು ವೈದ್ಯಾಧಿಕಾರಿಗಳು ಸೇರಿದಂತೆ ಕನಿಷ್ಠ 35 ಪ್ಯಾಲೆಸ್ತೀನಿಯದವರು ಕೊಲ್ಲಲ್ಪಟ್ಟರು. ಸಂಘರ್ಷದ ಮಧ್ಯೆ, ಜೆರುಸಲೇಮ್ ನ ಲತೀನ್ ಕುಲಸಚಿವರು ಹಿಂಸಾಚಾರದ ಅಂತ್ಯವು ಹತ್ತಿರದಲ್ಲಿದೆ ಎಂದು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.

ಉತ್ತುಂಗವು ನಮ್ಮ ಮುಂದಿದೆ'

"ಗಾಜಾದಲ್ಲಿ ಯುದ್ಧದ ಉತ್ತುಂಗವು ನಮ್ಮ ಮುಂದಿದೆ ಎಂದು ನಾನು ಭಾವಿಸುತ್ತೇನೆ" ಎಂದು ಕಾರ್ಡಿನಲ್ ಪಿಯರ್‌ಬಟ್ಟಿಸ್ಟಾ ಪಿಜ್ಜಾಬಲ್ಲಾ ರವರು, ನೆರವಿನ ಅಗತ್ಯವಿರುವ ಧರ್ಮಸಭೆಗೆ ನೆರವು (Aid to the church in need)  ಈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಹೆಜ್ಬೊಲ್ಲಾ ಮತ್ತು ಇಸ್ರಯೇಲ್ ನಡುವೆ ಸ್ಥಾಪಿಸಲಾದ ಕದನ ವಿರಾಮವು ಗಾಜಾ ಮತ್ತು ಹಮಾಸ್ ಮೇಲೆ ಪ್ರಭಾವ ಬೀರುತ್ತದೆ ಎಂದು ಅವರು ವಾದಿಸಿದರು. ಕುಲಸಚಿವರು "ಮುಂಬರುವ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ, ನಾವು ಕೆಲವು ರಾಜಿಗಳಿಗೆ ಬರುತ್ತೇವೆ." ಎಂಬ ತಮ್ಮ ಅನಿಸಿಕೆಯನ್ನು ವಿವರಿಸಿದರು.

ನವೆಂಬರ್ 27ರಂದು, ಇಸ್ರಯೇಲ್ ಮತ್ತು ಲೆಬನಾನ್ 14ತಿಂಗಳ ಸಂಘರ್ಷದ ನಂತರ ಕದನ ವಿರಾಮ ಒಪ್ಪಂದಕ್ಕೆ ಬಂದವು. ನಂತರ ಎರಡೂ ಕಡೆಯವರು ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ವಾದಿಸಿದರು. ಈ ದುರ್ಬಲವಾದ ಕದನ ವಿರಾಮವು ಗಾಜಾ ಗಡಿಯವರೆಗೆ ವಿಸ್ತರಿಸಿದರೂ ಸಹ, ಕಾರ್ಡಿನಲ್ ಪಿಜ್ಜಾಬಲ್ಲಾರವರು ಮಿಲಿಟರಿ ದಾಳಿಯ ಅಂತ್ಯವು ಸಂಘರ್ಷದ ಅಂತ್ಯವನ್ನು ಅರ್ಥೈಸುವುದಿಲ್ಲ ಎಂದು ವಿವರಿಸಿದರು.

ದೀರ್ಘಕಾಲೀನ ಕಾಳಜಿ

ಕಾರ್ಡಿನಲ್ ಪಿಜ್ಜಾಬಲ್ಲಾರವರು ವಿವರಿಸಿರುವ ಕಾಳಜಿಗಳಲ್ಲಿ ಒಂದೆಂದರೆ ಪವಿತ್ರ ನಾಡಿನಲ್ಲಿ ಅಪನಂಬಿಕೆ ಮತ್ತು ದ್ವೇಷದ ವ್ಯಾಪ್ತಿಯು-ದ್ವೇಷದ ಭಾಷಣದಿಂದ ಇನ್ನೊಂದನ್ನು ನಿರಾಕರಿಸುವವರೆಗೆ. ಇತರ ಯುದ್ಧಗಳು ಮತ್ತು ಸಂಘರ್ಷಗಳಿಗೆ ಹೋಲಿಸಿದರೆ, ಇದು ವಿಭಿನ್ನವಾಗಿದೆ. ಅಕ್ಟೋಬರ್ 7ರ ಮೊದಲು ಮತ್ತು ತದನಂತರ "ಹಿಂಸಾಚಾರವು ಮತ್ತು ಆಯಾ ಜನಸಂಖ್ಯೆಯ ಮೇಲೆ ಬೀರಿರುವ ಭಾವನಾತ್ಮಕ ಪ್ರಭಾವವು ಅಗಾಧವಾಗಿದೆ." ಎಂದು ಕುಲಸಚಿವರು ವಾದಿಸಿದರು.

ಸಂಘರ್ಷ ಕೊನೆಗೊಂಡಾಗ, ಅದು ಸರಳ ಪರಿಹಾರವಾಗುವುದಿಲ್ಲ. "ನಾವು ಮೂಲಸೌಕರ್ಯವನ್ನು ಪುನರ್ನಿರ್ಮಿಸಬಹುದು, ಆದರೆ ನಾವು ಸಂಬಂಧಗಳನ್ನು ಹೇಗೆ ಪುನರ್ನಿರ್ಮಿಸಬಹುದು?" ಎಂದು ಕುಲಸಚಿವರು ಹೇಳಿದರು. ಪವಿತ್ರ ನಾಡಿನ ಜನಸಂಖ್ಯೆಯ 1.5%ರಷ್ಟಿರುವ ಕೈಸ್ತರಿಗೆ, ಕಾರ್ಡಿನಲ್ ಪಿಜ್ಜಾಬಲ್ಲಾರವರು "ಎಲ್ಲರೊಂದಿಗೆ ಸಂಪರ್ಕ ಸಾಧಿಸುವ ಸ್ವಾತಂತ್ರ್ಯ" ಹೊಂದಿರುವುದರಿಂದ ಅವರ ಸ್ಥಾನವನ್ನು "ಸವಲತ್ತು" ಎಂದು ವಿವರಿಸಿದ್ದಾರೆ.

ಸಂಘರ್ಷದ ಮುಖದಲ್ಲಿ ಭರವಸೆ

ಆದಾಗ್ಯೂ, ಸಂಘರ್ಷದ ನಡುವೆ ಪವಿತ್ರ ನಾಡಿನಲ್ಲಿ ಜೀವನವು ಕ್ರೈಸ್ತರಿಗೆ ಸುಲಭವಲ್ಲ. ಇಸ್ರಯೇಲ್‌ ನಲ್ಲಿ ಕೆಲಸ ಮಾಡಿದ ಬಹುತೇಕ ಎಲ್ಲಾ ಕ್ರೈಸ್ತರು ಅಕ್ಟೋಬರ್ 7, 2023ರ ನಂತರ ತಮ್ಮ ಪರವಾನಗಿಗಳನ್ನು ರದ್ದುಗೊಳಿಸಿದ್ದಾರೆ. "ಯೇಸುವಿನ ನಾಡಿನಲ್ಲಿ, ಯೇಸುವಿನ ಸ್ಮರಣೆಯನ್ನು ಜೀವಂತವಾಗಿಡಲು" ಪವಿತ್ರ ನಾಡಿನಲ್ಲಿ ಕ್ರೈಸ್ತರನ್ನು ಇರಿಸುವ ಅಗತ್ಯವನ್ನು ಕುಲಸಚಿವರು ಒತ್ತಿ ಹೇಳಿದರು.

ಆದರೂ, "ಯಾವುದೇ ಅಲ್ಪಾವಧಿಯ ಪರಿಹಾರವಿಲ್ಲ" ಎಂಬ ಕಾರಣಕ್ಕಾಗಿ ಭವಿಷ್ಯದ ಭರವಸೆಯನ್ನು ರಾಜಕೀಯ ಪರಿಹಾರದೊಂದಿಗೆ ಬಂಧಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ಕಾರ್ಡಿನಲ್ ಪಿಜ್ಜಾಬಲ್ಲಾರವರ ಭರವಸೆಯನ್ನು ವಿಶ್ವಾಸದೊಂದಿಗೆ ಬಂಧಿಸಲಾಗಿದೆ ಎಂದು ವಿವರಿಸಿದರು. ಅವರು ಇದು ಕೇವಲ "ಒಳ್ಳೆಯ ಪದಗಳಲ್ಲ, ಆದರೆ ಇದು ನಿಜವಾಗಿದೆ. ಎಲ್ಲೆಡೆ, ಗಾಜಾದಿಂದ ವೆಸ್ಟ್ ಬ್ಯಾಂಕ್, ಜೆರುಸಲೇಮ್ ಮತ್ತು ಇಸ್ರಯೇಲ್ ವರೆಗೆ. "ಇತರರಿಗಾಗಿ ಏನನ್ನಾದರೂ ಮಾಡಲು ತಮ್ಮನ್ನು ತಾವು ಒಪ್ಪಿಸುವ ಜನರ ದೃಶ್ಯಗಳನ್ನು” ಕುಲಸಚಿವರು ವಿವರಿಸಿದರು. ಈ ಸಣ್ಣ ಕಾರ್ಯಗಳು ರಾಜಕೀಯ ಪರಿಸ್ಥಿತಿಯನ್ನು ಬದಲಾಯಿಸದಿದ್ದರೂ, ಕಾರ್ಡಿನಲ್ ಪಿಜ್ಜಾಬಲ್ಲಾರವರ "ಭರವಸೆಯಿದೆ" ಏಕೆಂದರೆ "ನಾವು ಇರುವಲ್ಲಿ ಏನನ್ನಾದರೂ ಬದಲಾಯಿಸಬಹುದು" ಎಂದರ್ಥ, ಎಂಬುದನ್ನು ಹೇಳಿದರು.

15 ಡಿಸೆಂಬರ್ 2024, 06:56