MAP

SKOREA-POLITICS-CONFLICT SKOREA-POLITICS-CONFLICT  (AFP or licensors)

ದಕ್ಷಿಣ ಕೊರಿಯಾದ ಧರ್ಮಾಧ್ಯಕ್ಷರುಗಳು: ಸೈನಿಕಾಡಳಿತವು, ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಅಪಾಯವಿದೆ

ದಕ್ಷಿಣ ಕೊರಿಯಾದ ಕಥೋಲಿಕ ಧರ್ಮಾಧ್ಯಕ್ಷರುಗಳು: ಅಧ್ಯಕ್ಷ ಯೂನ್ ಸುಕ್ ಯೋಲ್ ರವರ ಇತ್ತೀಚಿನ ಸೈನಿಕಾಡಳಿತದ ಘೋಷಣೆಯನ್ನು ಟೀಕಿಸಿದ್ದಾರೆ, ಅವರು "ಕಾರ್ಯವಿಧಾನಾತ್ಮಕವಾಗಿ ನ್ಯಾಯಸಮ್ಮತವಲ್ಲದ" ತೆಗೆದುಕೊಂಡ ನಿರ್ಧಾರಕ್ಕೆ ತಾವೇ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಮಾರ್ಕ್ ಸಲ್ಯೂಡ್ಸ್ ರವರ, ಲಿಕಾಸ್‌ ರವರ ಸುದ್ಧಿಯ ಪ್ರಕಾರ,

ಡಿಸೆಂಬರ್ 4 ರಂದು ಬಿಡುಗಡೆಯಾದ ಪ್ರಬಲವಾದ ಪದಗಳ ಹೇಳಿಕೆಯಲ್ಲಿ, ಕೊರಿಯನ್ ಧರ್ಮಾಧ್ಯಕ್ಷರುಗಳ ಸಮ್ಮೇಳನವು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿತು ಮತ್ತು ಸೈನಿಕಾಡಳಿತದ ಘೋಷಣೆಯ ಬಗ್ಗೆ ಅಧ್ಯಕ್ಷ ಯೂನ್ ಸುಕ್ ಯೆಲ್ ರವರಿಂದ ವಿವರಣೆ ನೀಡಲು ಮತ್ತು ಕ್ಷಮೆಯಾಚಿಸಲು ಕರೆ ನೀಡಿತು.

"ಕಳೆದ ರಾತ್ರಿ ಆದೇಶಿಸಿದ ತುರ್ತು ಪರಿಸ್ಥಿತಿಯ ಹೇರುವಿಕೆಯು ಅನೇಕ ಕೊರಿಯನ್‌ ಜನರನ್ನು ಎಚ್ಚರವಾಗಿರುವಂತೆ ಮಾಡಿರಬೇಕು" ಎಂದು ಹೇಳಿಕೆಯನ್ನು ಒದಲಾಗಿದೆ. "ತುರ್ತು ಅಗತ್ಯವಿಲ್ಲದಿದ್ದರೆ, ರಾಜ್ಯದ ಸರ್ಕಾರ ಮತ್ತು ಆಡಳಿತ ಕಾರ್ಯವಿಧಾನಗಳನ್ನು ಸಾಮಾನ್ಯ ರೀತಿಯಲ್ಲಿ ಕೈಗೊಳ್ಳಬೇಕು ಮತ್ತು ನಾಗರಿಕರಿಗೆ ಅರ್ಥವಾಗುವಂತೆ ತಿಳಿ ಹೇಳಬೇಕು."

ಅಧ್ಯಕ್ಷ ಯೂನ್ ರವರ ಅಭೂತ ಪೂರ್ವ ಕ್ರಮವನ್ನು ರಾತ್ರಿ 10ಗಂಟೆಗೆ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಯಿತು. ಡಿಸೆಂಬರ್ 3ರಂದು. ಅವರು "ಉತ್ತರ ಕೊರಿಯಾದ ಪರವಾದ ಪಡೆಗಳನ್ನು ತೊಡೆದುಹಾಕಲು ಹಾಗೂ ಪ್ರಜಾಪ್ರಭುತ್ವದ ಸಾಂವಿಧಾನಿಕ ಕ್ರಮವನ್ನು ರಕ್ಷಿಸುವ" ಅಗತ್ಯವನ್ನು ಉಲ್ಲೇಖಿಸಿ ಸೈನಿಕಾಡಳಿತವನ್ನು ಘೋಷಿಸಿದರು.

ಆದಾಗ್ಯೂ, ಘೋಷಣೆಯು ಶೀಘ್ರ ವಿರೋಧವನ್ನು ಎದುರಿಸಿತು, ಮತ್ತು 2ಗಂಟೆಗೆ, ಸಂಸತ್ತಿನ ಮತವು ಆದೇಶವನ್ನು ಅಗಾಧವಾಗಿ ರದ್ದುಗೊಳಿಸಿತು, 300 ಸದಸ್ಯರಲ್ಲಿ 190 ಸದಸ್ಯರು ಅದರ ವಿರುದ್ಧ ಮತ ಚಲಾಯಿಸಿದರು ಮತ್ತು ಮತದಾನವನ್ನು ಭದ್ರಪಡಿಸಿಕೊಳ್ಳಲು ಮಿಲಿಟರಿ ದಿಗ್ಬಂಧನದ ಹೊರತಾಗಿಯೂ ಶಾಸಕರು ಸಭೆ ನಡೆಸಿದರು.
ಧರ್ಮಾಧ್ಯಕ್ಷರುಗಳು ಸೈನಿಕಾಡಳಿತದ ಘೋಷಣೆಯ ಸಮರ್ಥನೆ ಮತ್ತು ತುರ್ತುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಗೋಚರಿಸುವ ಬಾಹ್ಯ ಅಥವಾ ಯುದ್ಧಕಾಲದ ಬೆದರಿಕೆಗಳ ಕೊರತೆಯನ್ನು ಗಮನಿಸಿದರು.

"ಅಧ್ಯಕ್ಷ ಯೂನ್ ರವರ ತುರ್ತು ಪರಿಸ್ಥಿತಿಯ ಘೋಷಣೆಯು ಕಾರ್ಯವಿಧಾನದ ನ್ಯಾಯಸಮ್ಮತತೆಯ ಹಲವಾರು ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ ಎಂದು ಸಾಂವಿಧಾನಿಕ ವಕೀಲರು ಒಪ್ಪುತ್ತಾರೆ. ಸಂಸತ್ತಿನ ಮತದಾನದ ನಂತರ ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲಾಗಿದ್ದರೂ, ಅಂತಹ ಘೋಷಣೆಯನ್ನು ಸಮರ್ಥಿಸುವಷ್ಟು ಗಂಭೀರ ಮತ್ತು ತುರ್ತು ವಿಷಯವಾಗಿದೆಯೇ ಎಂಬುದು ಪ್ರಶ್ನಾರ್ಹವಾಗಿದೆ.

ಮೇ 1980ರ ಗ್ವಾಂಗ್ಜು ಹತ್ಯಾಕಾಂಡ ಸೇರಿದಂತೆ ದಕ್ಷಿಣ ಕೊರಿಯಾದ ನೋವಿನ ಇತಿಹಾಸವನ್ನು ಉಲ್ಲೇಖಿಸಿದ ಧರ್ಮಾಧ್ಯಕ್ಷರುಗಳು ದೇಶವು ಕಷ್ಟಪಟ್ಟು ಗಳಿಸಿದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಹುದಾದ ಕ್ರಮಗಳ ವಿರುದ್ಧ ಎಚ್ಚರಿಕೆ ನೀಡಿದರು.

"ನಮ್ಮ ಪ್ರಜಾಪ್ರಭುತ್ವವನ್ನು ದೊಡ್ಡ ತ್ಯಾಗದಿಂದ ನಿರ್ಮಿಸಲಾಗಿದೆ" ಎಂದು ಧರ್ಮಾಧ್ಯಕ್ಷರುಗಳು ಬರೆದಿದ್ದಾರೆ. "ಕೊರಿಯಾದಲ್ಲಿನ ಕಥೋಲಿಕ ಧರ್ಮಸಭೆಯು ಸಕ್ರಿಯವಾಗಿ ಬೆಂಬಲಿಸುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಕೊರಿಯನ್ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ."

ಕೊರಿಯನ್ ಧರ್ಮಾಧ್ಯಕ್ಷರುಗಳ ಸಮ್ಮೇಳನದ ವಕ್ತಾರ ಮತ್ತು ಸುವಾನ್‌ನ ಧರ್ಮಾಧ್ಯಕ್ಷ, ಧರ್ಮಾಧ್ಯಕ್ಷ ಮ್ಯಾಥಿಯಾಸ್ ಲಾಂಗ್-ಹೂನ್ ಆರ್‌ಐರವರು ಸಹಿ ಮಾಡಿದ ಹೇಳಿಕೆಯು ಸಾರ್ವಜನಿಕರನ್ನು ಉದ್ದೇಶಿಸಿ ಅಧ್ಯಕ್ಷ ಯೂನ್ ರವರನ್ನು ಕ್ಷಮೆಯಾಚಿಸಲು ಕರೆದಿದೆ.

"ಏನಾಯಿತು ಎಂಬುದನ್ನು ವಿವರಿಸಲು ಅಧ್ಯಕ್ಷರು ವೈಯಕ್ತಿಕವಾಗಿ ಜನರ ಮುಂದೆ ಹೋಗುವುದು ಕಡ್ಡಾಯವಾಗಿದೆ, ಜನರಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವುದು ಮತ್ತು ಸೈನಿಕಾಡಳಿತವು ಹೇರುವ ಮತ್ತು ತೆಗೆದುಹಾಕುವ ಪ್ರಕ್ರಿಯೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ" ಎಂದು ಧರ್ಮಾಧ್ಯಕ್ಷರುಗಳು ಹೇಳಿದರು.

ಕೊರಿಯಾದ ಧರ್ಮಾಧ್ಯಕ್ಷರುಗಳು ಉತ್ತರದಾಯಿತ್ವ ಮತ್ತು ಸಂವಾದಕ್ಕೆ ಕರೆ ನೀಡಿದರು, ಅಧ್ಯಕ್ಷರು ಮತ್ತು ಸರ್ಕಾರವು "ಕೊರಿಯಾದ ಕಥೋಲಿಕ ಧರ್ಮಸಭೆಯು ಮತ್ತು ಕೊರಿಯನ್ ಜನರ ವಿನಂತಿಗಳಿಗೆ ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಲು" ಒತ್ತಾಯಿಸಿದರು.
 

05 ಡಿಸೆಂಬರ್ 2024, 16:50