MAP

2024.10.20 Bishop Simon Faddoul Radio Vaticana Nour El Khoury 2024.10.20 Bishop Simon Faddoul Radio Vaticana Nour El Khoury 

ಧರ್ಮಾಧ್ಯಕ್ಷ ಫದ್ದೌಲ್: ಸಿನೊಡಲಿಟಿಯ ಮೇಲೆ ಮರೋನೈಟ್ ಧರ್ಮಸಭೆಯ ಅಲೋಚನಾ ಸಭೆಯ ಕೊಡುಗೆ

ಸಿನೊಡಾಲಿಟಿಯು ಧರ್ಮಸಭೆಯಲ್ಲಿ ಬೇರೂರಲು ಪ್ರಾರಂಭಿಸಿದಾಗ, ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಮರೋನೈಟ್ ಧರ್ಮಾಧ್ಯಕ್ಷರುಗಳ ಅಲೋಚನಾ ಸಭೆಯು ಆಫ್ರಿಕಾದ ಸಂಸ್ಕೃತಿಯೊಂದಿಗೆ ಹೇಗೆ ಪ್ರತಿಧ್ವನಿಸುತ್ತದೆ ಎಂಬುದನ್ನು ಪರಿಶೋಧಿಸುತ್ತಾರೆ.

ನೂರ್ ಎಲ್ ಖೌರಿ - ಬೈರುತ್

ಆಫ್ರಿಕಾದ ಮರೋನೈಟ್ ಸ್ವರ್ಗಸ್ವೀಕೃತ ಧರ್ಮಕ್ಷೇತ್ರದ ಪ್ರಾಂತ್ಯಾಧಿಕಾರಿ ಧರ್ಮಾಧ್ಯಕ್ಷರಾದ ಸೈಮನ್ ಫದ್ದೌಲ್ ರವರು ಸಿನೊಡಲಿಟಿಗಾಗಿ ಅಲೋಚನಾ ಸಭೆಯನ್ನು ಮತ್ತು ಸಾರ್ವತ್ರಿಕ ಧರ್ಮಸಭೆಯ ಭವಿಷ್ಯದ ದಿಕ್ಕಿನಲ್ಲಿ ಆಫ್ರಿಕಾದಲ್ಲಿರುವ ಮರೋನೈಟ್ ಧರ್ಮಸಭೆಯ ಪ್ರಭಾವದ ಮೇಲೆ ಬೆಳಕು ಚೆಲ್ಲಿದ್ದಾರೆ.

ವ್ಯಾಟಿಕನ್ ಸುದ್ಧಿಗೆ ನೀಡಿದ ಸಂದರ್ಶನದಲ್ಲಿ, ಧರ್ಮಾಧ್ಯಕ್ಷರಾದ ಫದ್ದೌಲ್ ರವರು ಆಫ್ರಿಕಾದ ವೈವಿಧ್ಯಮಯ ಸಾಂಸ್ಕೃತಿಕ ಸಂದರ್ಭದಲ್ಲಿ ಸಿನೊಡಲ್ ಪ್ರಕ್ರಿಯೆಯನ್ನು ಹೇಗೆ ಗ್ರಹಿಸುತ್ತಾರೆ ಮತ್ತು ಕಾರ್ಯಗತಗೊಳಿಸುತ್ತಾರೆ ಎಂಬುದರ ಕುರಿತು ತಮ್ಮ ಒಳನೋಟವನ್ನು ನೀಡಿದರು.

ಆಫ್ರಿಕಾದಲ್ಲಿ ಮರೋನೈಟ್ ಉಪಸ್ಥಿತಿ
ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ 24 ದೇಶಗಳಲ್ಲಿ ಮರೋನೈಟ್ ವಿಶ್ವಾಸಿಗಳನ್ನು ಮುನ್ನೆಡಸಲು ಸ್ವರ್ಗಸ್ವೀಕೃತ ಧರ್ಮಕ್ಷೇತ್ರದ ಪ್ರಾಂತ್ಯಾಧಿಕಾರಿ ಧರ್ಮಾಧ್ಯಕ್ಷರಾದ ಸೈಮನ್ ಫದ್ದೌಲ್ ರವರನ್ನು ಒಬ್ಬ ಒಳ್ಳೆಯ ಕುರಿಗಾಹಿಯನ್ನಾಗಿ ರೂಪಿಸಿದ್ದಾರೆ. ಇದನ್ನು ಔಪಚಾರಿಕವಾಗಿ ಫೆಬ್ರವರಿ 28, 2018ರಂದು ಧರ್ಮಾಧ್ಯಕ್ಷರಾದ ಸೈಮನ್ ಫದ್ದೌಲ್ ರವರನ್ನು, ಮೊದಲನೇ ಧರ್ಮಾಧ್ಯಕ್ಷರಾಗಿ ರಚಿಸಲಾಗಿದ್ದರೂ, 2014ರಲ್ಲಿ ಅವರ ಮಾರ್ಗದರ್ಶನದಲ್ಲಿ ಅಪೋಸ್ಟೋಲಿಕ್ ಎಕ್ಸಾರ್ಕೇಟ್ ದಲ್ಲಿ ಸ್ಥಾಪಿಸಲ್ಪಟ್ಟಾಗ ಪ್ರಾರಂಭವಾಯಿತು.

ಧರ್ಮಾಧ್ಯಕ್ಷ ಫಡ್ಡೌಲ್ ರವರ ಎಪಿಸ್ಕೋಪಲ್ ಸ್ಥಾನವು ನೈಜೀರಿಯಾದಲ್ಲಿ ನೆಲೆಗೊಂಡಿದೆ ಮತ್ತು ಅವರು ಆಫ್ರಿಕಾದೊಂದಿಗೆ ಮರೋನೈಟ್ ಧರ್ಮಸಭೆಗಳ, ಶತಮಾನಗಳ ಸುದೀರ್ಘ ಸಂಬಂಧಗಳನ್ನು ನೆನಪಿಸಿಕೊಳ್ಳುತ್ತಾರೆ. "ನಾವು ಇಲ್ಲಿ 150 ವರ್ಷಗಳಿಗಿಂತ ಹೆಚ್ಚು ಕಾಲಂದಿದ್ದೇವೆ ಮತ್ತು ಮರೋನೈಟ್ ಉಪಸ್ಥಿತಿಯು ಆಫ್ರಿಕಾದಲ್ಲಿ ಚೆನ್ನಾಗಿ ಬೇರೂರಿದೆ" ಎಂದು ಅವರು ಹೇಳಿದರು, ಈ ಖಂಡದಲ್ಲಿ ಆಳವಾದ ಐತಿಹಾಸಿಕ ಸಂಬಂಧಗಳು ಧರ್ಮಸಭೆಯ ಬೆಳವಣಿಗೆಯ ಮೇಲೆ ಹೆಚ್ಚು ಪ್ರಭಾವ ಬೀರಿದೆ ಎಂದು ಎತ್ತಿ ತೋರಿಸಿದರು.

ಸಾರ್ವತ್ರಿಕ ಧರ್ಮಸಭೆಗೆ ಅಲೋಚನಾ ಸಭೆಯ ಪ್ರಾಮುಖ್ಯತೆ
ಸಿನೊಡಲ್ ಪರಿಕಲ್ಪನೆಗಳು ಆಫ್ರಿಕನ್ ಸಂಸ್ಕೃತಿಯೊಂದಿಗೆ ಎಷ್ಟು ಪ್ರತಿಧ್ವನಿಸುತ್ತವೆ ಎಂಬುದನ್ನು ಧರ್ಮಾಧ್ಯಕ್ಷ ಫದ್ದೌಲ್ ರವರು ಗಮನಿಸಿದರು, ಆಫ್ರಿಕನ್ನರಿಗೆ ಸಿನೊಡಾಲಿಟಿ ಹೊಸ ಪರಿಕಲ್ಪನೆಯಲ್ಲ ಎಂದು ವಿವರಿಸಿದರು. 

ಮರೋನೈಟ್ ಸಂಪ್ರದಾಯದಲ್ಲಿ, ಸಿನೊಡಾಲಿಟಿಯು ಆರಂಭಿಕ ಧರ್ಮಸಭೆಗಳಿಗಿಂತಲೂ ಹಿಂದಿನದು ಎಂದು ಅವರು ಹೇಳಿದರು. ಮರೋನೈಟ್ ಕಥೋಲಿಕ ಧರ್ಮಸಭೆಯು ಈ ಸಿನೊಡಲ್ ಸಂಪ್ರದಾಯವನ್ನು ಮುಂದುವರಿಸುತ್ತದೆ, ಧರ್ಮಾಧ್ಯಕ್ಷರುಗಳು ಮಹತ್ವದ ನಿರ್ಧಾರಗಳನ್ನು ಚರ್ಚಿಸುವ ಮತ್ತು ಉದ್ದೇಶಪೂರ್ವಕವಾಗಿ ಚರ್ಚಿಸುವ ಸಿನೊಡಲ್ ರಚನೆಯ ಮೂಲಕ ಕಾರ್ಯನಿರ್ವಹಿಸುತ್ತದೆ.

"ಸಿನೊಡಲ್ ಪ್ರಕ್ರಿಯೆಯ ಸೌಂದರ್ಯವೆಂದರೆ ನಿರ್ಧಾರಗಳು ಕ್ರಮಾನುಗತದಿಂದ ಬರುತ್ತಿಲ್ಲ ಆದರೆ ಸಂಭಾಷಣೆಗಳು, ಸಹಯೋಗ ಮತ್ತು ವಿಶ್ವಾಸಿಗಳು ನೀಡುವ ಅಭಿಪ್ರಾಯಗಳ ಮೂಲಕ ಬರುತ್ತವೆ" ಎಂದು ಧರ್ಮಾಧ್ಯಕ್ಷರಾದ ಫದ್ದೌಲ್‌ ರವರು ಹೇಳಿದರು.

ಸಿನೊಡ್‌ನಲ್ಲಿ ಮರೋನೈಟ್ ನ ಧ್ವನಿ
ಧರ್ಮಾಧ್ಯಕ್ಷ ಫದ್ದೌಲ್ ರವರು ಆಫ್ರಿಕಾದಲ್ಲಿನ ಮರೋನೈಟ್ ಧರ್ಮಸಭೆಯ ಪ್ರಾಮುಖ್ಯತೆ ಮತ್ತು ಸಿನೊಡಲ್ ಕೆಲಸಕ್ಕೆ ಅದರ ಕೊಡುಗೆಗಳನ್ನು ಒತ್ತಿ ಹೇಳಿದರು.

“ಸಾರ್ವತ್ರಿಕ ಧರ್ಮಸಭೆಯ ಭಾಗವಾಗಿ, ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ನಮ್ಮ ಅನುಭವಗಳನ್ನು ಹಂಚಿಕೊಳ್ಳಲು ನಮಗೆ ಹಕ್ಕಿದೆ. ಸಿನೊಡಾಲಿಟಿಯ ಅಲೋಚನಾ ಸಭೆಯಲ್ಲಿ ನಮ್ಮ ಧರ್ಮಕ್ಷೇತ್ರದ ನಮ್ಮ ಪ್ರತಿನಿಧಿಗಳ ಮೂಲಕ, ನಮ್ಮ ಧ್ವನಿಗಳನ್ನು ಕೇಳುವಂತಾಯಿತು ಮತ್ತು ವಿಶಾಲವಾದ ಸಂಭಾಷಣೆಗೆ ನಾವು ನಮ್ಮ ಅನನ್ಯ ದೃಷ್ಟಿಕೋನದ ಕೊಡುಗೆಯನ್ನು ನೀಡುತ್ತೇವೆ,” ಎಂದು ಅವರು ಹೇಳಿದರು.

ಸಿನೊಡಾಲಿಟಿಯ ಅಲೋಚನಾ ಸಭೆಯು ಆರಂಭಿಕ ಹಂತದಲ್ಲಿ ನೈಜೀರಿಯಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದೊಂದಿಗೆ ಅವರ ಧರ್ಮಕ್ಷೇತ್ರಕ್ಕೆ ನಿಕಟವಾಗಿ ಕೆಲಸ ಮಾಡಿದರು,

ಆಫ್ರಿಕನ್ ನೈಜತೆಗಳೊಂದಿಗೆ ಪೂರ್ವ ಸಂಪ್ರದಾಯಗಳನ್ನು ಸಮತೋಲನಗೊಳಿಸುವುದು
ಲೆಬನಾನಿನ ಮರೋನೈಟ್ ಧರ್ಮಾಧ್ಯಕ್ಷರಾಗಿ, ಧರ್ಮಾಧ್ಯಕ್ಷರಾದ ಫಡೌಲ್ ರವರು ತಮ್ಮದೇ ಆದ ರೀತಿಯ "ತೀರ್ಥಯಾತ್ರೆ" ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ, ಹಾಗೆಯೇ ಆಫ್ರಿಕನ್ ಕ್ರೈಸ್ತ ಧರ್ಮವೂ ವಿಶ್ವದಲ್ಲಿ ಎಲ್ಲರಂತೆ, ಎಲ್ಲರೂ ಎದುರಿಸುವ ಸವಾಲನ್ನು ಇವರೂ ಸಹ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಮರೋನೈಟ್ ಧರ್ಮಸಭೆಯ ಪುರಾತನ ಪರಂಪರೆ ಮತ್ತು ಆಫ್ರಿಕಾದ ವಿಶಿಷ್ಟ ಸ್ವಭಾವವನ್ನು ಒಳಗೊಳ್ಳುವ ಸಂಪ್ರದಾಯದ ನಡುವೆ ಅಧಿಕೃತ ಸಮತೋಲನವನ್ನು ಹೇಗೆ ಪಡೆಯುವುದು ಎಂದು ಅವರು ಆಶ್ಚರ್ಯ ಪಡುತ್ತಾರೆ. ಈ ಸಮತೋಲನವು "ಸಾಮರಸ್ಯದಿಂದ" ಬರುತ್ತದೆ ಎಂದು ಅವರು ಹೇಳಿದರು.

ಆಫ್ರಿಕಾದಲ್ಲಿ ಮರೋನೈಟ್ ವಿಶ್ವಾಸಿಗಳಿಗೆ ಸಂದೇಶ
ಅಂತಿಮವಾಗಿ, ಧರ್ಮಾಧ್ಯಕ್ಷ ಫಡೌಲ್ ರವರು ಆಫ್ರಿಕನ್ ಖಂಡದ ಮರೋನೈಟ್ ವಿಶ್ವಾಸಿಗಳಿಗೆ ಅಲೋಚನಾ ಸಭೆಗೆ ಸ್ಫೂರ್ತಿಯಾಗಿರಲು ಮತ್ತು ಧರ್ಮಸಭೆಯ ಭವಿಷ್ಯಕ್ಕಾಗಿ ಅವುಗಳನ್ನು ಹೇಗೆ ಪಡೆಯುವುದು ಎಂಬುದನ್ನು ವಿವರಿಸಿದರು.

"ಅಲೋಚನಾ ಸಭೆಯು ಕೇವಲ ಧರ್ಮಾಧ್ಯಕ್ಷರುಗಳ ಅಥವಾ ದೈವಶಾಸ್ತ್ರಜ್ಞರ ಕಾರ್ಯವಲ್ಲ," "ಧರ್ಮಸಭೆಯ ಜೀವನದಲ್ಲಿ ಪ್ರತಿಯೊಬ್ಬರು ಹೂಡಿಕೆ ಮಾಡಲು ಎಲ್ಲಾ ಕ್ರೈಸ್ತರಿಗೆ ಇದು ಮನವಿಯಾಗಿದೆ." ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ, ಧರ್ಮಸಭೆಯ ಕ್ಷೇಮಕ್ಕಾಗಿ ಅವರವರ ಪಾತ್ರವನ್ನು ವಹಿಸಬೇಕು, ಪ್ರತಿಯೊಬ್ಬ ಕ್ರೈಸ್ತರು ವಿಶ್ವಾಸದಿಂದ ಜೀವಿಸಬೇಕು ಮತ್ತು ದೇವರು ಸಮುದಾಯವನ್ನು ಎಲ್ಲಿಗೆ ಮುನ್ನಡೆಸುತ್ತಿದ್ದಾನರೆ ಎಂಬುದನ್ನು ವಿವೇಚಿಸಬೇಕು.

ಮರೋನೈಟ್ ಧರ್ಮಾಧ್ಯಕ್ಷರು ವಿಶ್ವಾಸಿಗಳಲ್ಲಿ ಭರವಸೆ ಮತ್ತು ಒಳಗೊಳ್ಳುವಿಕೆಯನ್ನು ಒತ್ತಾಯಿಸಿದರು, ಅಲೋಚನಾ ಸಭೆಯು ಆಫ್ರಿಕಾ ಮತ್ತು ಧರ್ಮಸಭೆಗೆ ಹೊಸ ವಾಸ್ತವಿಕತೆಯನ್ನು ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಸಭೆಯು ತನ್ನ ದೈನಂದಿನ ಜೀವನದಲ್ಲಿ ಸಿನೊಡಾಲಿಟಿಯನ್ನು ಬೇರೂರಿಸಲು ಪ್ರಯತ್ನಿಸುತ್ತಿರುವಾಗ, ಧರ್ಮಾದ್ಯಕ್ಷರಾದ ಫಡ್ಡೌಲ್ ರವರು ಪ್ರತಿ ಧರ್ಮಸಭೆಯನ್ನು ತನ್ನದೇ ಆದ ವಿಶಿಷ್ಟ ಧ್ವನಿಯೊಂದಿಗೆ ಚರ್ಚೆ ಮಾಡಲು ಆಹ್ವಾನಿಸಿದರು, ಆದರೆ ಆಫ್ರಿಕಾದ ಮೇಲೆ ವಿಶೇಷ ಗಮನವಹಿಸಬೇಕು, ಸಾರ್ವತ್ರಿಕ ಧರ್ಮಸಭೆಯು ಇದನ್ನು ಎಚ್ಚರಿಕೆಯಿಂದ ಆಲಿಸಬೇಕು ಎಂದು ಅವರು ಹೇಳಿದರು.

18 ಡಿಸೆಂಬರ್ 2024, 12:58