ಭಾರತದಲ್ಲಿನ ಧರ್ಮಕೇಂದ್ರದ ಭಕ್ತಾಧಿಗಳ ಕೈಬರಹದ ಎರಡು ಬೈಬಲ್‌ಗಳು
ಸಿಸ್ಟರ್. ಫ್ಲೋರಿನಾ ಜೋಸೆಫ್ ರವರಿಂದ, SCN
ಕಥೋಲಿಕ ಸಮುದಾಯಗಳು ಸಾಮಾನ್ಯವಾಗಿ ತಮ್ಮ ವಿಶ್ವಾಸವನ್ನು ಪುನರುಜ್ಜೀವನಗೊಳಿಸಲು ಹೆಣಗಾಡುತ್ತಿರುವ ಜಗತ್ತಿನಲ್ಲಿ, ಭಾರತದ ಸ್ಥಳೀಯ ದೇವಾಲಯದ ಯುವ ಗುಂಪು ಅಕ್ಷರಶಃ ನಿರೂಪಣೆಯನ್ನು ಪುನಃ ಬರೆದಿದೆ.
ಬೈಬಲ್ ಪವಿತ್ರಗ್ರಂಥದ ಯೋಜನೆ / ಬಿಬ್ಲಿಯಾ ಪ್ರಾಜೆಕ್ಟ್ 2024, ಮಹಾರಾಷ್ಟ್ರದ ಪುಣೆಯಲ್ಲಿರುವ ಕಾರ್ಮೆಲ್ ಧರ್ಮಕೇಂದ್ರದ ಯುವ ಸಮೂಹದ ನೇತೃತ್ವದಲ್ಲಿ ಆರು ತಿಂಗಳ ಉಪಕ್ರಮವು ಇತಿಹಾಸವನ್ನು ಸೃಷ್ಟಿಸಿದೆ.
700 ಕ್ಕೂ ಹೆಚ್ಚು ಧರ್ಮಕೇಂದ್ರದ ಭಕ್ತಾಧಿಗಳು ಎರಡು ಕೈಬರಹದ ಬೈಬಲ್‌ಗಳನ್ನು ತಯಾರಿಸಲು ಸಹಕರಿಸಿದರು, ಒಂದು ಇಂಗ್ಲಿಷ್‌ನಲ್ಲಿ ಮತ್ತು ಇನ್ನೊಂದು ಮಲಯಾಳಂನ ಭಾಷೆಯಲ್ಲಿ.
ಈ ಸ್ಮಾರಕದ ಪ್ರಯತ್ನವು ಎರಡು ಬೈಬಲ್‌ಗಳಲ್ಲಿ ಇಂಗ್ಲಿಷ್‌ನಲ್ಲಿ 2,700 ಪುಟಗಳು ಮತ್ತು ಮಲಯಾಳಂನಲ್ಲಿ 2,800 ಪುಟಗಳನ್ನು ಒಳಗೊಂಡಿತ್ತು.
ಈ ಬೈಬಲ್‌ಗಳನ್ನು ಭಾನುವಾರದಂದು ಧರ್ಮಕೇಂದ್ರದ ಹಬ್ಬದ ಪೂಜಾ ಆರಾಧನಾ ವಿಧಿಯ ಸಮಯದಲ್ಲಿ ಸಾಂಭ್ರಮಿಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು ಮತ್ತು ಈಗ ಧರ್ಮಕೇಂದ್ರದ ಭಕ್ತಾಧಿಗಳ ಸಮರ್ಪಣೆ ಮತ್ತು ವಿಶ್ವಾಸದ ಪುರಾವೆಯಾಗಿ ದೇವಾಲಯದ ಬಲಿಪೀಠದಲ್ಲಿ ಇರಿಸಲಾಗಿದೆ.
ಸಮುದಾಯವಾಗಿ ವಿಶ್ವಾಸವನ್ನು ಆಳಗೊಳಿಸುವುದು
ಈ ಆಧ್ಯಾತ್ಮಿಕ ಉಪಕ್ರಮವು ಕೈಬರಹದ ಗ್ರಂಥದಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇವರೊಂದಿಗೆ ತಮ್ಮ ಸಂಬಂಧವನ್ನು ಗಾಢವಾಗಿಸಲು ಧರ್ಮಕೇಂದ್ರದ ಭಕ್ತಾಧಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡುತ್ತಾ, ಧರ್ಮಕೇಂದ್ರದ ಯುವ ಭಕ್ತಾಧಿ ಅಲ್ಮೆಟಾ ಜಾಯ್, "ಯುವಕರಿಗಾಗಿ, ಈ ಯೋಜನೆಯು ನಮ್ಮ ಸಂಪರ್ಕವನ್ನು ಮತ್ತು ಧರ್ಮಗ್ರಂಥದ ಜ್ಞಾನವನ್ನು ಗಮನಾರ್ಹವಾಗಿ ಬಲಪಡಿಸಿದೆ" ಎಂದು ಹೇಳಿದರು.
"ನಾವು ಅಧ್ಯಾಯಗಳನ್ನು ನಿಯೋಜಿಸಬೇಕಾಗಿತ್ತು, ಕಾಗದವನ್ನು ವಿನ್ಯಾಸಗೊಳಿಸಬೇಕಾಗಿತ್ತು, ಅವುಗಳನ್ನು ಧರ್ಮಕೇಂದ್ರದ ಭಕ್ತಾಧಿಗಳಿಗೆ ವಿತರಿಸಬೇಕಾಗಿತ್ತು, ಮತ್ತು ನಂತರ ಕೈಬರಹದ ಹಾಳೆಗಳನ್ನು ಕರಡಚ್ಚು ತಿದ್ದುವವರ ಒದುವಿಕೆ/ ಪ್ರೂಫ್ ರೀಡ್ ಮಾಡಿ ಮತ್ತು ಜೋಡಿಸಬೇಕಾಗಿತ್ತು" ಎಂದು ಅಲ್ಮೆಟಾ ಹೇಳಿದರು. "ಇದು ಬಹಳಷ್ಟು ಕೆಲಸವಾಗಿತ್ತು, ಆದರೆ ನಾವು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನಂದಿಸಿದ್ದೇವೆ."
ಪ್ರತಿ ಯೋಜನಾ ಅವಧಿಯು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು ಮತ್ತು ಕೊನೆಗೊಳ್ಳುತ್ತಿತ್ತು, ಭಾಗವಹಿಸುವವರಲ್ಲಿ ಉದ್ದೇಶ ಮತ್ತು ಏಕತೆಯ ಪ್ರಜ್ಞೆಯನ್ನು ಬೆಳೆಸುತ್ತಿತ್ತು ಎಂದು ಅವರು ಗಮನಿಸಿದರು.
ಪರಿವರ್ತನೆಯ ಅನುಭವ
ಈ ಯೋಜನೆಯು ಧರ್ಮಕೇಂದ್ರದೊಳಗೆ ಒಂದು ಸಂಭ್ರಮವನ್ನು ಸೃಷ್ಟಿಸಿತು, ಕುಟುಂಬಗಳು ಮತ್ತು ದಂಪತಿಗಳು ತಮ್ಮ ದೈನಂದಿನ ದಿನಚರಿಗಳ ನಡುವೆ ತಮ್ಮ ಧರ್ಮಗ್ರಂಥಗಳನ್ನು ಬರೆಯಲು ಆದ್ಯತೆ ನೀಡಿದರು.
ಪಠ್ಯಗಳನ್ನು ಓದುವಾಗ ಮತ್ತು ಬರೆಯುವಾಗ, ಧರ್ಮಕೇಂದ್ರದ ಭಕ್ತಾಧಿಗಳು ತಮ್ಮ ವಯಸ್ಸನ್ನು ಲೆಕ್ಕಿಸದೆ, ಅವರ ಪ್ರಸ್ತುತ ನೈಜತೆಗಳಿಗೆ ಹೊಂದಿಕೆಯಾಗುವ ಸ್ಫೂರ್ತಿಯನ್ನು ಕಂಡರು, ಪ್ರಶ್ನೆಗಳು ಸ್ಪಷ್ಟತೆಯನ್ನು ಪಡೆಯಲು ಅವರನ್ನು ಮುಂದಕ್ಕೆ ತಳ್ಳಿದವು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಧರ್ಮಗ್ರಂಥಗಳನ್ನು ಅಧ್ಯಯನ ಮಾಡುವ ಆಸಕ್ತಿಯನ್ನು ಬೆಳೆಸಿಕೊಂಡರು ಎಂದು ಅಲ್ಮೆಟಾ ಹೇಳಿದರು.
ಬರೆಯುವ ಮೊದಲು, ಪ್ರತಿ ಭಾಗವಹಿಸುವವರಿಗೆ ಮೂರು ವೈಯಕ್ತಿಕ ಉದ್ದೇಶಗಳಿಗಾಗಿ ಪ್ರಾರ್ಥಿಸಲು ಕೇಳಿಕೊಳ್ಳಲಾಯಿತು, ಅದು ಅವರು ಎದುರಿಸಿದ ಸವಾಲುಗಳ ಮೂಲಕ ನಿರಂತರತೆಯನ್ನು ಸಾಧಿಸಲು ಸಹಾಯ ಮಾಡಿತು ಎಂದು ಅವರು ಹೇಳಿದರು.
ಯುವ ಸಮೂಹದ ಮತ್ತೋರ್ವ ಸದಸ್ಯೆ ಜೆಸ್ನಾ ಜಿಕ್ಸನ್, "ಯೋಜನೆಯ ಸಮಯದಲ್ಲಿ ರೂಪಾಂತರದ ಸಾಕ್ಷ್ಯಗಳನ್ನು ಹಂಚಿಕೊಳ್ಳಲು ವಿಶೇಷ ಆರಾಧನೆಯನ್ನು ನಡೆಸಲಾಯಿತು. ಅನೇಕ ಧರ್ಮಕೇಂದ್ರದ ಭಕ್ತಾಧಿಗಳು ತಮ್ಮನ್ನು ಪವಿತ್ರ ಗ್ರಂಥಗಳೊಂದಿಗೆ ತೊಡಗಿಸಿಕೊಂಡಾಗ ಪವಾಡಗಳು ಮತ್ತು ವೈಯಕ್ತಿಕ ಪ್ರಗತಿಯನ್ನು ಅನುಭವಿಸಿದರು."
ಯೋಜನೆಯ ಪೂರ್ಣಗೊಳ್ಳುವಿಕೆಯ ಬಗ್ಗೆ ಅನಿಶ್ಚಿತತೆಯ ಕ್ಷಣಗಳನ್ನು ಪ್ರತಿಬಿಂಬಿಸುತ್ತಾ, ಜೆಸ್ನಾ ಸೇರಿಸಿದರು, "ಇದು ಸ್ವತಃ ವಿಶ್ವಾಸದ ಪ್ರಯಾಣವಾಗಿತ್ತು. ಇದು ಅನೇಕರ ಜೀವನವನ್ನು ಆಳವಾಗಿ ಪ್ರಭಾವಿಸಿದೆ ಮತ್ತು ಈಗ, ನಮ್ಮಲ್ಲಿ ಹೆಚ್ಚಿನವರು ಹಿಂದೆಂದಿಗಿಂತಲೂ ಧರ್ಮಗ್ರಂಥವನ್ನು ಅಧ್ಯಯನ ಮಾಡಲು ಉತ್ಸುಕರಾಗಿದ್ದೇವೆ."
ಬೈಬಲ್ ಪವಿತ್ರಗ್ರಂಥದ ಯೋಜನೆ / ಬಿಬ್ಲಿಯಾ ಪ್ರಾಜೆಕ್ಟ್ 2024 ಅನ್ನು ಸಹೋದರ ನಿಖಿಲ್ ತಾಚುಪರಂಬಿಲ್ ರವರ ಮಾರ್ಗದರ್ಶನದಲ್ಲಿ ನಿರ್ದೇಶಿಸಲಾಗಿದೆ. ಯುವ ಪ್ರೇರಕ ಮತ್ತು ಸಹೋದರ ಜೋಯಲ್ ಕೊಳಂಚೇರಿ, ಯೋಜನೆಯ ಸಂಯೋಜಕರು.
ಕಾರ್ಮೆಲ್
ಕಾರ್ಮೆಲ್ ಧರ್ಮಕೇಂದ್ರ ಸಿರೋ-ಮಲಬಾರ್ ಪೂಜಾವಿಧಿಯ ಧರ್ಮಸಭೆಯಾಗಿದೆ, ಇದು ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (CMI) ಸಭೆಯ ನೇತೃತ್ವದಲ್ಲಿದೆ.
ಪುಣೆಯಲ್ಲಿ ಸಿರೋ-ಮಲಬಾರ್ ಸಮುದಾಯಕ್ಕೆ ಸೇವೆ ಸಲ್ಲಿಸಲು 1988 ರಲ್ಲಿ ಸ್ಥಾಪಿಸಲಾಯಿತು, ಧರ್ಮಕೇಂದ್ರ ಪ್ರಸ್ತುತ ಧರ್ಮಕೇಂದ್ರದ ಗುರು ಜೇಮ್ಸ್ ಥೈಲ್ ರವರ ನೇತೃದಲ್ಲಿ ಕಾರ್ಯಗತಗೊಂಡಿತು.