MAP

ಇಸ್ರೇಲ್ ದಾಳಿ: 15 ಫೆಲಿಸ್ತೀನಿಯರು ಮೃತ್ಯು

ಗಾಝಾ ಪಟ್ಟಿಯಾದ್ಯಂತ ಬುಧವಾರ ಇಸ್ರೇಲ್ ಮಿಲಿಟರಿ ನಡೆಸಿದ ದಾಳಿಯಲ್ಲಿ ಕನಿಷ್ಠ 15 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾದ ವೈದ್ಯಕೀಯ ಇಲಾಖೆ ಹೇಳಿದೆ.

ವರದಿ: ವ್ಯಾಟಿಕನ್ ನ್ಯೂಸ್

ಗಾಝಾ ಪಟ್ಟಿಯಾದ್ಯಂತ ಬುಧವಾರ ಇಸ್ರೇಲ್ ಮಿಲಿಟರಿ ನಡೆಸಿದ ದಾಳಿಯಲ್ಲಿ ಕನಿಷ್ಠ 15 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾದ ವೈದ್ಯಕೀಯ ಇಲಾಖೆ ಹೇಳಿದೆ.

ಗಾಝಾ ನಗರದಲ್ಲಿ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದ ಅಲ್-ತಬೀಯನ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಹಮಾಸ್‍ನ ಮಾಜಿ ವಕ್ತಾರ ಫೌಜಿ ಬರ್ಹಮ್ ಅವರ ಇಬ್ಬರು ಮಕ್ಕಳು ಸೇರಿದಂತೆ ಸೇರಿದಂತೆ 8 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಸುಮಾರು 20 ಮಂದಿ ಗಾಯಗೊಂಡಿದ್ದಾರೆ.

ಗಾಝಾ ನಗರದ ಶೆಜೈಯಾ ಉಪನಗರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 4 ಮಂದಿ, ಉತ್ತರ ಗಾಝಾದ ಬೀಟ್ ಲಾಹಿಯಾದಲ್ಲಿ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.

ಈ ಮಧ್ಯೆ, ಲೆಬನಾನ್‍ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಒಪ್ಪಂದ ಏರ್ಪಟ್ಟಿರುವುದಾಗಿ ವರದಿಯಾಗಿದೆ.

28 ನವೆಂಬರ್ 2024, 16:38