MAP

ಸುವಾರ್ತಾ ಪ್ರಸಾರ ಭಾನುವಾರ: ಸುವಾರ್ತಾ ಪ್ರಸಾರಕರ ಜೀವನವನ್ನು ಪ್ರದರ್ಶಿಸಲಿರುವ ಪಾಂಟಿಫಿಕಲ್ ಮಿಶನ್ ಸೊಸೈಟೀಸ್ ಸಂಸ್ಥೆ

ಅಕ್ಟೋಬರ್ ತಿಂಗಳು ವಿಶ್ವಧರ್ಮ ಸಭೆಗೆ ಸುವಾರ್ತಾ ಪ್ರಸಾರ ತಿಂಗಳಾಗಿರುವ ಕಾರಣ, ಈ ತಿಂಗಳಿನಲ್ಲಿ ವಿಶ್ವದಾದ್ಯಂತ ಪ್ರಭು ಯೇಸುಕ್ರಿಸ್ತರ ಸುವಾರ್ತೆಯನ್ನು ಸಾರಲು ತಮ್ಮ ತಾಯಿನಾಡನ್ನು ತೊರೆದು, ಬೇರೆ ಪ್ರದೇಶಗಳಿಗೆ ಹೋಗಿ ಸುವಾರ್ತೆಯನ್ನು ಸಾರುತ್ತಿರುವ ಗುರುಗಳನ್ನು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ನೆನಪಿಸಿಕೊಂಡು ಅವರಿಗಾಗಿ ಪ್ರಾರ್ಥಿಸುವ ಸಮಯವಾಗಿದೆ. ಅದೇ ತಿಂಗಳು ಸುವಾರ್ತಾ ಪ್ರಸಾರ ಭಾನುವಾರವನ್ನು ಸಹ ಆಚರಿಸಲಾಗುತ್ತದೆ.

ವರದಿ: ವ್ಯಾಟಿಕನ್ ನ್ಯೂಸ್

ಅಕ್ಟೋಬರ್ ತಿಂಗಳು ವಿಶ್ವಧರ್ಮ ಸಭೆಗೆ ಸುವಾರ್ತಾ ಪ್ರಸಾರ ತಿಂಗಳಾಗಿರುವ ಕಾರಣ, ಈ ತಿಂಗಳಿನಲ್ಲಿ ವಿಶ್ವದಾದ್ಯಂತ ಪ್ರಭು ಯೇಸುಕ್ರಿಸ್ತರ ಸುವಾರ್ತೆಯನ್ನು ಸಾರಲು ತಮ್ಮ ತಾಯಿನಾಡನ್ನು ತೊರೆದು, ಬೇರೆ ಪ್ರದೇಶಗಳಿಗೆ ಹೋಗಿ ಸುವಾರ್ತೆಯನ್ನು ಸಾರುತ್ತಿರುವ ಗುರುಗಳನ್ನು ಹಾಗೂ ಧಾರ್ಮಿಕ ಸಹೋದರ ಸಹೋದರಿಯರನ್ನು ನೆನಪಿಸಿಕೊಂಡು ಅವರಿಗಾಗಿ ಪ್ರಾರ್ಥಿಸುವ ಸಮಯವಾಗಿದೆ. ಅದೇ ತಿಂಗಳು ಸುವಾರ್ತಾ ಪ್ರಸಾರ ಭಾನುವಾರವನ್ನು ಸಹ ಆಚರಿಸಲಾಗುತ್ತದೆ. ಅಂದು ವಿವಿಧ ಧರ್ಮ ಕೇಂದ್ರಗಳಲ್ಲಿ ಸಂಗ್ರಹವಾಗುವ ಕಾಣಿಕೆಯನ್ನು ಸುವಾರ್ತ ಪ್ರಸಾರಕರಿಗೆ ಹಾಗೂ ಅವರ ವಿನಿಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ.

ಸುವಾರ್ತಾ ಪ್ರಸಾರ ಸೇವೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಪಾರ್ಟಿಫಿಕಲ್ ಮಿಷನ್ ಸೊಸೈಟೀಸ್ ಸಂಸ್ಥೆಯು ಈ ವರ್ಷ ಸುವಾರ್ತಾ ಪ್ರಸಾರ ಭಾನುವಾರದ ಅಂಗವಾಗಿ ವಿಶ್ವದ ಮೂಲೆ ಮೂಲೆಗಳಲ್ಲಿ ಏಸುವಿನ ಶುಭ ಸಂದೇಶವನ್ನು ಸಾರುತ್ತಿರುವ ಸುವಾರ್ತಾ ಪ್ರಸಾರಕರ ಜೀವನವನ್ನು ಹಾಗೂ ಅವರ ಸೇವೆಯನ್ನು ಪ್ರದರ್ಶಿಸಲಿದೆ ಎಂದು ವರದಿಯಾಗಿದೆ. ಅಕ್ಟೋಬರ್ 20ರಂದು 98ನೇ ವಿಶ್ವ ಸುವಾರ್ತಾ ಪ್ರಸಾರ ಭಾನುವಾರವನ್ನು ಆಚರಿಸಲಾಗುತ್ತದೆ. ಈ ವರ್ಷದ ಶೀರ್ಷಿಕೆಯು ಹೋಗಿ ಎಲ್ಲರನ್ನೂ ಔತಣಕ್ಕೆ ಕರೆಯಿರಿ ಎಂಬುದಾಗಿದೆ.

ಪಾಂಟಿಫಿಕಲ್ ಮಿಷನ್ ಸೊಸೈಟಿಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಆರ್ಚ್ ಬಿಷಪ್ ಎಮಿಲಿಯೋ ನಪ್ಪ ಅವರು ಸುವಾರ್ತೆಯನ್ನು ಸಾರುವುದು ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯವಾಗಿದೆ. ಶುಭ ಸಂದೇಶವನ್ನು ಸಾರುವ ಜವಾಬ್ದಾರಿಯನ್ನು ನಾವು ನಮ್ಮ ದೀಕ್ಷಾಸ್ನಾನದ ಮೂಲಕ ಪಡೆದುಕೊಂಡಿದ್ದೇವೆ. ಆದ್ದರಿಂದ ಶುಭ ಸಂದೇಶವನ್ನು ಸಾರುವುದು ಕೇವಲ ಗುರುಗಳ ಹಾಗೂ ಧಾರ್ಮಿಕ ಸಹೋದರ ಸಹೋದರಿಯರ ಕರ್ತವ್ಯವಲ್ಲ ಬದಲಿಗೆ ಪ್ರತಿಯೊಬ್ಬ ಕ್ರೈಸ್ತನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

19 ಅಕ್ಟೋಬರ್ 2024, 17:55