ಮ್ಯಾನ್ಮಾರ್‌ನ ಯುದ್ಧಪೀಡಿತ ಪ್ರದೇಶಗಳ ಧರ್ಮಾಧ್ಯಕ್ಷರುಗಳು: 'ನಾವು ವಿಶ್ವಾಸವನ್ನು ಕಳೆದುಕೊಳ್ಳಬಾರದು'
ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಪ್ರಭುವಾದ ಯೇಸು ನಮಗೆ ಹೀಗೆ ಹೇಳಿದರು: 'ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ!' (ಯೋಹಾನ 14:1)": ತೀವ್ರ ದುಃಖದ ನಡುವೆಯೂ ಪ್ರಭುವಿನ ಸಾಂತ್ವನದ ಈ ಜ್ಞಾಪನೆಯನ್ನು ಯುದ್ಧಪೀಡಿತ ಮ್ಯಾನ್ಮಾರ್‌ನ ಮೂವರು ಧರ್ಮಾಧ್ಯಕ್ಷರುಗಳು ಜಂಟಿ ಪಾಲನಾ ಪತ್ರದಲ್ಲಿ ಭಕ್ತವಿಶ್ವಾಸಿಗಳಿಗೆ ನೀಡಿದರು. ಇದನ್ನು ವ್ಯಾಟಿಕನ್‌ನ ಫೈಡ್ಸ್ ಏಜೆನ್ಸಿಗೆ ಕಳುಹಿಸಿ ವರದಿ ಮಾಡಿದೆ.
ಈ ಪತ್ರಕ್ಕೆ ಸಹಿ ಹಾಕಿದವರು ಮೈಟ್ಕಿನಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಜಾನ್ ಮುಂಗ್-ನ್ಗಾನ್ ಲಾ ಸ್ಯಾಮ್, ಎಂ.ಎಫ್., ಬನ್ಮಾವ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ರೇಮಂಡ್ ಸುಮ್ಲುಟ್ ಗ್ಯಾಮ್; ಮತ್ತು ಲಾಶಿಯೊ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಲ್ಯೂಕಸ್ ಡೌ ಝೆ ಜೀಂಫಾಂಗ್, ಎಸ್‌ಡಿಬಿ, ಇವರುಗಳು, ಇವರೆಲ್ಲರೂ ತಮ್ಮ ಪ್ರದೇಶಗಳಲ್ಲಿನ ಹೋರಾಟದಿಂದಾಗಿ, ಅಭದ್ರತೆಯಿಂದಾಗಿ ತಮ್ಮ ಮನೆಗಳನ್ನು ತೊರೆದು ಬೇರೆಡೆ ಆಶ್ರಯ ಪಡೆಯುವಂತೆ ಒಗ್ಗಿಕೊಂಡಿದ್ದಾರೆ.
ಮುಂದುವರೆಯುತ್ತಿರುವ ಅಂತರ್ಯುದ್ಧದ ಮಧ್ಯೆ ಮತ್ತು 3,000ಕ್ಕೂ ಹೆಚ್ಚು ಜೀವಗಳನ್ನು ಬಲಿತೆಗೆದುಕೊಂಡ ಮಾರ್ಚ್ 2025 ರ ಭೀಕರ ಭೂಕಂಪದ ನಂತರ, ಮೂವರು ಧರ್ಮಾಧ್ಯಕ್ಷರುಗಳು ಕಳೆದ ನಾಲ್ಕು ವರ್ಷಗಳಲ್ಲಿ, ಹೋರಾಟವು ಜೀವಗಳು, ಕುಟುಂಬಗಳು, ಹೊಲಗಳು ಮತ್ತು ಭೂಮಿಯ ನಾಶಕ್ಕೆ ಕಾರಣವಾಗಿದೆ, ಜೊತೆಗೆ ಸಾವಿರಾರು ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಿದೆ ಎಂದು ಪ್ರತಿಬಿಂಬಿಸುತ್ತಾರೆ. ಜನರು ತಮ್ಮ ಸುರಕ್ಷತೆ ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿತರಾಗಿದ್ದಾರೆ.
ಇದಲ್ಲದೆ, ಮತ್ತೊಮ್ಮೆ ಮಧ್ಯ ಮ್ಯಾನ್ಮಾರ್ ನ್ನು ನಡುಗಿಸಿದ, ಮನೆಗಳು ಕುಸಿದುಬಿದ್ದ ಮತ್ತು ಅನೇಕ ಜನರನ್ನು ಗಾಯಗೊಳಿಸಿ ಬಲಿ ತೆಗೆದುಕೊಂಡ ಪ್ರಬಲ ಭೂಕಂಪದಿಂದ ಅವರ ನೋವು ಇನ್ನಷ್ಟು ಉಲ್ಬಣಗೊಂಡಿದೆ ಎಂದು ಅವರು ಗಮನಿಸುತ್ತಾರೆ.
ಆದರೂ, ಉತ್ತರ-ಮಧ್ಯ ಮ್ಯಾನ್ಮಾರ್‌ನ ಮೈಟ್ಕಿನಾ, ಬನ್ಮಾವ್ ಮತ್ತು ಲಾಶಿಯೊದ ಬರ್ಮೀಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರುಗಳು ತಮ್ಮ ಭಕ್ತವಿಶ್ವಾಸಿಗಳಿಗೆ ವಿಶ್ವಾಸದಲ್ಲಿ ಸಾಂತ್ವನ ಪಡೆಯಲು ನೆನಪಿಸುತ್ತಾರೆ ಮತ್ತು ನಿರ್ದಿಷ್ಟವಾಗಿ, 'ನನ್ನನ್ನು ಹಿಂಬಾಲಿಸಲು ಬಯಸುವವನು ತನ್ನನ್ನು ತಾನು ನಿರಾಕರಿಸಬೇಕು, ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಬೇಕು' ಎಂಬ ಪ್ರಭುವಿನ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಅಶಾಂತಿ ಮತ್ತು ಸಂಕಟಗಳ ಹೊರತಾಗಿಯೂ, ಧರ್ಮಾಧ್ಯಕ್ಷರುಗಳು ತಮ್ಮ ಭಕ್ತವಿಶ್ವಾಸಿಗಳ ಭರವಸೆ ಮತ್ತು ಸಾಂತ್ವನವನ್ನು ನೀಡುತ್ತಾರೆ.
ನಮ್ಮ ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ, ನಾವು ಪ್ರತಿದಿನ ವಿಶ್ವಾಸ ಮತ್ತು ಪ್ರೀತಿಯಿಂದ ದೇವರಿಗೆ ಪ್ರಾರ್ಥಿಸಿದರೆ, ನಾವು ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳಲು ಮತ್ತು ಯೇಸುಕ್ರಿಸ್ತರೊಂದಿಗೆ ಶಿಲುಬೆಯನ್ನು ಹೊತ್ತವರಾಗಲು ಸಾಧ್ಯವಾಗುತ್ತದೆ. ಆತನ ಸಾಂತ್ವನ ಮತ್ತು ಪ್ರೋತ್ಸಾಹದ ಕೃಪೆಯನ್ನು ಪಡೆಯುತ್ತೇವೆ ಎಂದು ಅವರು ಬರೆಯುತ್ತಾರೆ.
ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ಅವರು ಭಕ್ತವಿಶ್ವಾಸಗಳು ನಿರುತ್ಸಾಹಗೊಳ್ಳದೆ, ಶಾಶ್ವತ ಶಾಂತಿಗಾಗಿ ಪ್ರಾರ್ಥಿಸಿ ಮತ್ತು ನಮ್ಮ ಪೂರ್ಣ ಹೃದಯ, ಮನಸ್ಸು ಮತ್ತು ಶಕ್ತಿಯಿಂದ ದೇವರಿಂದ ಶಾಂತಿಯನ್ನು ಬೇಡಿಕೊಳ್ಳಿ ಎಂದು ಒತ್ತಾಯಿಸುತ್ತಾರೆ.
ಅಂತಿಮವಾಗಿ, ಧರ್ಮಾಧ್ಯಕ್ಷರುಗಳು ಹೀಗೆ ತೀರ್ಮಾನಿಸುತ್ತಾರೆ, ಈ ಪವಿತ್ರ ವರ್ಷದಲ್ಲಿ ನಾವು ಪ್ರಾರ್ಥಿಸೋಣ, ಪ್ರೋತ್ಸಾಹಿಸೋಣ, ಸಾಂತ್ವನ ಹೇಳೋಣ ಮತ್ತು ಪರಸ್ಪರ ಸಹಾಯ ಮಾಡೋಣ, ಇದು ಎಲ್ಲದರ ಹೊರತಾಗಿಯೂ, ಭರವಸೆಯಿಂದ ತುಂಬಿದೆ. ದೇವರು ನಿಮಗೆ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ನೀಡಲಿ, ಆತನ ಅನುಗ್ರಹ ಮತ್ತು ಪವಿತ್ರಾತ್ಮದ ಶಕ್ತಿಯನ್ನು ನಿಮಗೆ ನೀಡಲಿ.